- Home
- Karnataka Districts
- Bengaluru Urban
- CJ Roy Case: ಸಾಲ, ಬೆದರಿಕೆ, ಒತ್ತಡ: ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?
CJ Roy Case: ಸಾಲ, ಬೆದರಿಕೆ, ಒತ್ತಡ: ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?
ಉದ್ಯಮಿ ಸಿ.ಜೆ.ರಾಯ್ ಅವರ ಸಾವಿನ ತನಿಖೆ ಚುರುಕುಗೊಂಡಿದ್ದು, ಪೊಲೀಸರು ಅವರ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಆದಾಯ ತೆರಿಗೆ ಇಲಾಖೆಯ ಒತ್ತಡವೇ ಸಾವಿಗೆ ಕಾರಣ ಎಂದು ಸಹೋದರ ಬಾಬು ರಾಯ್ ಆರೋಪಿಸಿದ್ದು, ಸರ್ಕಾರ ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ.

ಉದ್ಯಮಿ ಸಿ.ಜೆ.ರಾಯ್ ಕುಟುಂಬ
ಉದ್ಯಮಿ ಸಿ.ಜೆ.ರಾಯ್ ಕುಟುಂಬಸ್ಥರೆಲ್ಲರೂ ಬೆಂಗಳೂರಿಗೆ ಆಗಮಿಸಿದ್ದು, ಘಟನೆ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಹಾಗೆಯೇ ಪೊಲೀಸರು ಸಿ.ಜೆ.ರಾಯ್ ಕುರಿತು ಕುಟುಂಬಸ್ಥರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸಿ.ಜೆ.ರಾಯ್ ಬಳಕೆ ಮಾಡ್ತಿದ್ದ ಎರಡು ಮೊಬೈಲ್‌ಗಳನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.
ಎರಡು ಬಾರಿ ಕರೆ ಮಾಡಿದ್ದರು
ಸಿ.ಜೆ.ರಾಯ್ ಸೋದರ ಬಾಬು ರಾಯ್ ಸುದ್ದಿ ಸಂಸ್ಥೆ ಜೊತೆ ಮಾತನಾಡಿದ್ದಾರೆ. ಶುಕ್ರವಾರ ಬೆಳಗ್ಗೆ 10.40ಕ್ಕೆ ಎರಡು ಬಾರಿ ಕರೆ ಮಾಡಿದ್ದರು. ಎಲ್ಲಿದ್ದೀಯಾ? ನಿನ್ನೊಂದಿಗೆ ಮಾತನಾಡಬೇಕು ಎಂದು ಹೇಳಿದ್ದರು. ನಾನು ಇಂದು ಸಂಜೆ 7 ಗಂಟೆಗೆ ಇಲ್ಲಿಗೆ ಬರ್ತೀನಿ ಎಂದು ಹೇಳಿದ್ದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದರು.
ಅದಾಯ ತೆರಿಗೆ ಅಧಿಕಾರಿಗಳ ಒತ್ತಡ
ನನಗೆ ಗೊತ್ತಿರುವ ಮಾಹಿತಿ ಪ್ರಕಾರ, ಸೋದರ ಸಿ.ಜೆ.ರಾಯ್ ಅವರಿಗೆ ಯಾವುದೇ ಒತ್ತಡಗಳು ಇರಲಿಲ್ಲ. ಆತನಿಗೆ ಯಾವುದೇ ಬೆದರಿಕೆ, ಸಾಲದ ಒತ್ತಡಗಳು ಇರಲಿಲ್ಲ. ಅದಾಯ ತೆರಿಗೆ ಒತ್ತಡ ಬಿಟ್ರೆ ಆತನಿಗೆ ಯಾವುದೇ ಒತ್ತಡ ಇರಲಿಲ್ಲ. ವಿಷಯ ಕೇಳಿ ಬಂದಿದ್ದು, ಮನೆಯವರು ಜೊತೆ ಮಾತನಾಡಿ ಅಂತ್ಯಕ್ರಿಯೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.
ಐಟಿ ದಾಳಿ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಒಂದು ತಿಂಗಳಿನಿಂದ ತನಿಖೆ ನಡೆಸುತ್ತಿದ್ದರು. ಐಟಿ ಆಫೀಸರ್ ಕೃಷ್ಣ ಪ್ರಸಾದ್ ಎಂಬವರಿದ್ದರು. ಹಾಗಾಗಿ ಅವರನ್ನೇ ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕೇಳಬೇಕಾಗುತ್ತದೆ. ಐಟಿ ದಾಳಿ ಮುಂಚೆಯೂ ನಡೆದಿತ್ತು. ಪ್ರತ್ಯೇಕವಾಗಿ ದೂರು ಸಲ್ಲಿಸಬೇಕಾ ಎಂಬುದನ್ನು ಸಿಬ್ಬಂದಿ ಜೊತೆ ಮಾತನಾಡಿ ನಿರ್ಧರಿಸುತ್ತೇವೆ ಎಂದರು.
ಇದನ್ನೂ ಓದಿ: ಖ್ಯಾತ ನಟಿ, ಮಾಡೆಲ್ & ರೆಸಾರ್ಟ್: ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ
ಸತ್ಯ ಹೊರಗೆ ಬರಬೇಕು
ಇದೇ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಬು ರಾಯ್, ಸತ್ಯ ಹೊರಗೆ ಬರಬೇಕು ಅಷ್ಟೇ ಎಂದರು. ಈ ಬಗ್ಗೆ ಶುಕ್ರವಾರ ಮಾತನಾಡಿದ್ದ ಡಿಕೆ ಶಿವಕುಮಾರ್, ಉನ್ನತ ಮಟ್ಟದ ತನಿಖೆ ಮಾಡಿ, ಜನರಿಗೆ ಸತ್ಯಾಂಶ ತಿಳಿಸುವ ಕೆಲಸವನ್ನ ನಮ್ಮ ಸರ್ಕಾರ ಮಾಡುತ್ತದೆ. ಐಟಿ ಬಗ್ಗೆ ನಾನು ಮಾತನಾಡಿದರೆ ರಾಜಕೀಯ ಆಗುತ್ತದೆ. ಈ ಕಿರುಕುಳವನ್ನ ನಾನು ಖಂಡಿಸುತ್ತೇನೆ. ಇದು ಸರಿಯಲ್ಲ ಎಂದಿದ್ದರು.
ಇದನ್ನೂ ಓದಿ: ಕೇರಳ ಟು ದುಬೈವರೆಗೆ ರಾಯ್ ಕಟ್ಟಿದ್ದ ಕಾನ್ಫಿಡೆಂಟ್ ಸಾಮ್ರಾಜ್ಯ! ಸೇಲ್ಸ್ ಮ್ಯಾನ್ ಬೈದಿಕ್ಕೆ ಶಪಥ ಮಾಡಿದ್ದ ರಾಯ್

