MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ರಾತ್ರಿ ಆಗ್ತಿದ್ದಂತೆ ಇಂದಿರಾನಗರ ಲೇಡಿಸ್‌ ಪಿಜಿಯಲ್ಲಿ ಒಳಉಡುಪುಗಳ ಕಳ್ಳತನ, ಯುವತಿಯರ ಕ್ಯಾಮೆರಾ ಕಾರ್ಯಾಚರಣೆಗೆ ಸಿಕ್ಕ ವಿಕೃತ ಕಾಮಿ!

ರಾತ್ರಿ ಆಗ್ತಿದ್ದಂತೆ ಇಂದಿರಾನಗರ ಲೇಡಿಸ್‌ ಪಿಜಿಯಲ್ಲಿ ಒಳಉಡುಪುಗಳ ಕಳ್ಳತನ, ಯುವತಿಯರ ಕ್ಯಾಮೆರಾ ಕಾರ್ಯಾಚರಣೆಗೆ ಸಿಕ್ಕ ವಿಕೃತ ಕಾಮಿ!

ಇಂದಿರಾನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಯುವತಿಯರ ಒಳ ಉಡುಪುಗಳನ್ನು ಕದ್ದು ವಿಕೃತಿ ಮೆರೆಯುತ್ತಿದ್ದ ಡೆಲಿವರಿ ಬಾಯ್‌ನನ್ನು ಇಬ್ಬರು ಯುವತಿಯರು ರಹಸ್ಯ ಕ್ಯಾಮೆರಾ ಅಳವಡಿಸಿ ಪತ್ತೆಹಚ್ಚಿದ್ದಾರೆ. ಆರೋಪಿ ಅಬ್ದುಲ್ ಹುಸೇನ್‌ನನ್ನು ಪೊಲೀಸರು ಬಂಧಿಸಿದ್ದು, ಈತ ಜಾಮೀನಿನ ಮೇಲೆ ಹೊರಬಂದಿದ್ದಾನೆ.

2 Min read
Author : Santosh Naik
Published : Jul 15 2026, 04:19 PM IST
Share this Photo Gallery
  • FB
  • TW
  • Linkdin
  • Whatsapp
16
ಬೆಂಗಳೂರಿನ ಇಂದಿರಾನಗರದ ವಿಕೃತಕಾಮಿ
Image Credit : X

ಬೆಂಗಳೂರಿನ ಇಂದಿರಾನಗರದ ವಿಕೃತಕಾಮಿ

ಸಿಲಿಕಾನ್ ಸಿಟಿಯ ಇಂದಿರಾನಗರದ ಅಪಾರ್ಟ್‌ಮೆಂಟ್‌ ಒಂದರಲ್ಲಿ ಕಳೆದ ಕೆಲವು ತಿಂಗಳುಗಳಿಂದ ಯುವತಿಯರ ಒಳ ಉಡುಪುಗಳು ನಿಗೂಢವಾಗಿ ನಾಪತ್ತೆಯಾಗುತ್ತಿದ್ದ ಪ್ರಕರಣವನ್ನು ಇಬ್ಬರು ಯುವತಿಯರೇ ಸ್ವತಃ ಡಿಟೆಕ್ಟಿವ್‌ಗಳಾಗಿ ಭೇದಿಸಿದ್ದಾರೆ. ರಾತ್ರೋರಾತ್ರಿ ಬಟ್ಟೆಗಳು ಮಾಯವಾಗಿ ಮರುದಿನ ವಾಪಸ್ ಬರುತ್ತಿದ್ದ ಈ ವಿಲಕ್ಷಣ ಘಟನೆಯಿಂದ ಬೇಸತ್ತ ಯುವತಿಯರು ರಹಸ್ಯ ಕ್ಯಾಮೆರಾ ಅಳವಡಿಸುವ ಮೂಲಕ ವಿಕೃತಕಾಮಿಯ ಕೃತ್ಯವನ್ನು ಬಯಲಿಗೆಳೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಇ-ಕಾಮರ್ಸ್ ಡೆಲಿವರಿ ಬಾಯ್ ವಿಕೃತ ಕೃತ್ಯ ಮತ್ತು ಬಂಧನ
Image Credit : X

ಇ-ಕಾಮರ್ಸ್ ಡೆಲಿವರಿ ಬಾಯ್ ವಿಕೃತ ಕೃತ್ಯ ಮತ್ತು ಬಂಧನ

ಈ ವಿಲಕ್ಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರದ ನಿವಾಸಿಯಾಗಿದ್ದು, ಮೂಲತಃ ಅಸ್ಸಾಂ ಮೂಲದವನಾದ ಅಬ್ದುಲ್ ಹುಸೇನ್ ಅಲಿಯಾಸ್ ಸದ್ದಾಂ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ನಗರದ ಪ್ರಮುಖ ಇ-ಕಾಮರ್ಸ್ ಕಂಪನಿಯೊಂದರಲ್ಲಿ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯದ ವೀಡಿಯೋ ಸಾಕ್ಷ್ಯವನ್ನು ಆಧರಿಸಿ ಪೊಲೀಸರು ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು, ಆದರೆ ಇತ್ತೀಚೆಗಷ್ಟೇ ಈತನಿಗೆ ಜಾಮೀನು (Bail) ದೊರೆತಿದೆ.

Related Articles

Related image1
ವಿಕೃತಕಾಮಿ ಕಾರ್ತಿಕ, ಮಹಿಳೆಯರಿಗೆ ಖಾಸಗಿ ಅಂಗ ತೋರಿಸೋದೇ ಈತನ ಕಾಯಕ!
Related image2
ಎಲ್ಲಾದ್ರೂ ಹೋದ್ರೆ ವಿಕೃತಕಾಮಿ ಮುನಿರತ್ನ ಏಡ್ಸ್ ಪಿನ್ನು ಚುಚ್ಚಿಬಿಡ್ತಾನೋ ಅಂತಾ ಭಯ ಆಗ್ತಿದೆ: ಮೊಹಮ್ಮದ್ ನಲಪಾಡ್
36
ಮೇ ತಿಂಗಳಿನಿಂದ ನಿಗೂಢವಾಗಿ ಸಾಗಿದ್ದ ಬಟ್ಟೆಗಳ ಅದಲು-ಬದಲು
Image Credit : X

ಮೇ ತಿಂಗಳಿನಿಂದ ನಿಗೂಢವಾಗಿ ಸಾಗಿದ್ದ ಬಟ್ಟೆಗಳ ಅದಲು-ಬದಲು

ಇಂದಿರಾನಗರದ ಹೊಯ್ಸಳನಗರದ ಕಟ್ಟಡವೊಂದರ ನೆಲ ಮಹಡಿಯಲ್ಲಿ ಫ್ಲಾಟ್ ಹಂಚಿಕೊಂಡಿರುವ 29 ವರ್ಷದ ಖಾಸಗಿ ಕಂಪನಿ ಉದ್ಯೋಗಿ ಯುವತಿ ಹಾಗೂ ಆಕೆಯ ರೂಮ್‌ಮೇಟ್ ಈ ದೂರು ನೀಡಿದ್ದಾರೆ. ಪ್ರಸಕ್ತ 2026ರ ಮೇ ತಿಂಗಳಿನಿಂದ ಇವರ ಮನೆಯ ಕಾಂಪೌಂಡ್‌ನಲ್ಲಿ ಒಣಗಲು ಹಾಕಿದ್ದ ಬಟ್ಟೆಗಳು, ಅದರಲ್ಲೂ ಮುಖ್ಯವಾಗಿ ಒಳ ಉಡುಪುಗಳು ನಿಗೂಢವಾಗಿ ನಾಪತ್ತೆಯಾಗುತ್ತಿರುವುದನ್ನು ಯುವತಿಯರು ಗಮನಿಸಿದ್ದರು. ಅತ್ಯಂತ ವಿಚಿತ್ರವೆಂದರೆ, ವಿಕೃತಕಾಮಿ ಕದ್ದ ಬಟ್ಟೆಗಳನ್ನು ಮರುದಿನ ತಂದು ಅದೇ ಜಾಗದಲ್ಲಿ ಇಡುತ್ತಿದ್ದ ಮತ್ತು ಒಣಗಲು ಹಾಕಿದ್ದ ಹೊಸ ಬಟ್ಟೆಗಳನ್ನು ಕದ್ದು ಕೊಂಡೊಯ್ಯುತ್ತಿದ್ದ.

46
ಆನ್‌ಲೈನ್‌ನಲ್ಲಿ ರಹಸ್ಯ ಕ್ಯಾಮೆರಾ ತಂದು ಯುವತಿಯರ ಕಾರ್ಯಾಚರಣೆ
Image Credit : X

ಆನ್‌ಲೈನ್‌ನಲ್ಲಿ ರಹಸ್ಯ ಕ್ಯಾಮೆರಾ ತಂದು ಯುವತಿಯರ ಕಾರ್ಯಾಚರಣೆ

ವಿಚಿತ್ರ ಘಟನೆಗಳಿಂದ ಯುವತಿಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕಳ್ಳನನ್ನು ಹಿಡಿಯಲೇಬೇಕೆಂದು ನಿರ್ಧರಿಸಿದ ಇಬ್ಬರು ಯುವತಿಯರು ಆನ್‌ಲೈನ್‌ನಲ್ಲಿ ಹುಡುಕಾಟ ನಡೆಸಿ ಸುಮಾರು 1,300 ರೂಪಾಯಿ ವೆಚ್ಚದಲ್ಲಿ ಒಂದು ಸಣ್ಣ ರಹಸ್ಯ ಕ್ಯಾಮೆರಾವನ್ನು (Hidden Camera) ಖರೀದಿಸಿದರು. ಕಳ್ಳನ ಚಲನವಲನಗಳನ್ನು ಸೆರೆಹಿಡಿಯಲು ಜುಲೈ 1 ರ ರಾತ್ರಿ ಬಟ್ಟೆಗಳನ್ನು ಒಣಗಿಸುವ ಜಾಗಕ್ಕೆ ಮುಖ ಮಾಡಿ ಈ ಕ್ಯಾಮೆರಾವನ್ನು ರಹಸ್ಯವಾಗಿ ಅಳವಡಿಸಿ ಇಡೀ ರಾತ್ರಿ ರೆಕಾರ್ಡಿಂಗ್ ಆನ್ ಮಾಡಿದ್ದರು.

56
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವಿಕೃತಿಯ ಪರಾಕಾಷ್ಠೆ
Image Credit : X

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ವಿಕೃತಿಯ ಪರಾಕಾಷ್ಠೆ

ಮರುದಿನ ಬೆಳಗ್ಗೆ ಯುವತಿಯರು ಕ್ಯಾಮೆರಾದ ಫೂಟೇಜ್ (Footage) ಪರಿಶೀಲಿಸಿದಾಗ ಅವರ ಯೋಜನೆಯು ಯಶಸ್ವಿಯಾಗಿತ್ತು. ಸೆರೆಯಾಗಿದ್ದ ದೃಶ್ಯಗಳು ಅಸಹ್ಯಕರವಾಗಿದ್ದವು. ಜುಲೈ 2 ರ ಮುಂಜಾನೆ 3 ಗಂಟೆಯ ಸುಮಾರಿಗೆ ಕಾಂಪೌಂಡ್‌ಗೆ ಅಕ್ರಮವಾಗಿ ನುಗ್ಗಿದ್ದ ಅಬ್ದುಲ್ ಹುಸೇನ್, ತಾನು ಈ ಹಿಂದೆ ಕದ್ದಿದ್ದ ಒಳ ಉಡುಪುಗಳನ್ನು ತಂದು ವಾಪಸ್ ಇಡುತ್ತಿದ್ದ. ಅಷ್ಟೇ ಅಲ್ಲದೆ, ಅಲ್ಲಿ ಒಣಗಲು ಹಾಕಿದ್ದ ಹೊಸ ಬಟ್ಟೆಗಳನ್ನು ಕದ್ದು, ಅವುಗಳನ್ನು ತಾನೇ ಧರಿಸಿ ಕ್ಯಾಮೆರಾದ ಮುಂದೆಯೇ ವಿಕೃತ ಲೈಂಗಿಕ ಚೇಷ್ಟೆಗಳನ್ನು ನಡೆಸಿ ಅಲ್ಲಿಂದ ಪರಾರಿಯಾಗಿದ್ದ ದೃಶ್ಯ ಸ್ಪಷ್ಟವಾಗಿ ದಾಖಲಾಗಿತ್ತು.

66
ಪೊಲೀಸ್ ದೂರು
Image Credit : X

ಪೊಲೀಸ್ ದೂರು

ತಮ್ಮ ಖಾಸಗಿತನಕ್ಕೆ ಧಕ್ಕೆ ತಂದ ಹಾಗೂ ತೀವ್ರ ಮಾನಸಿಕ ಕಿರುಕುಳ ನೀಡಿದ ಈ ವೀಡಿಯೋ ಸಾಕ್ಷ್ಯವನ್ನು ತೆಗೆದುಕೊಂಡು ಯುವತಿಯರು ತಕ್ಷಣವೇ ಇಂದಿರಾನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದರು. ದೂರಿನ ಗಾಂಭೀರ್ಯತೆಯನ್ನು ಅರಿತ ಪೊಲೀಸರು ತಕ್ಷಣವೇ ವಿಶೇಷ ತಂಡವನ್ನು ರಚಿಸಿ, ತಾಂತ್ರಿಕ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ವಿಕೃತಕಾಮಿ ಅಬ್ದುಲ್ ಹುಸೇನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಬೆಂಗಳೂರು
ಮಹಿಳೆಯರು
ಕ್ರೈಮ್ ನ್ಯೂಸ್
ಸುದ್ದಿ
ಬೆಂಗಳೂರು ನಗರ

Latest Videos
Recommended Stories
Recommended image1
ಬಿಡದಿ ಟೌನ್‌ಶಿಪ್ ತಾತ್ಕಾಲಿಕ ಸ್ಥಗಿತ, 3 ತಿಂಗಳಲ್ಲಿ ಸಮಿತಿ ರಚನೆ: ಸಿಎಂ ಡಿಕೆಶಿ ಸುದೀರ್ಘ ಸುದ್ದಿಗೋಷ್ಠಿ ಸಾರಾಂಶ
Recommended image2
BMTC ಕಂಡಕ್ಟರ್​ ಬ್ಯಾಗನ್ನೇ ಎಗರಿಸಿದ ಮಹಿಳೆ- ಇನ್ನೇನು ಇಳಿಯುವಾಗ ಸಿಕ್ಕಿಬಿದ್ಲು: ಶಾಕಿಂಗ್​ ವಿಡಿಯೋ ವೈರಲ್​
Recommended image3
Bengaluru ಬೀದಿ ಬದಿ ವ್ಯಾಪಾರಕ್ಕೆ ಸರ್ಕಾರದ ಮಾಸ್ಟರ್ ಪ್ಲಾನ್, ಕನ್ನಡಿಗರು ಓಕೆ! ಹಿಂದಿಗರು ಯಾಕೆ?
Related Stories
Recommended image1
ವಿಕೃತಕಾಮಿ ಕಾರ್ತಿಕ, ಮಹಿಳೆಯರಿಗೆ ಖಾಸಗಿ ಅಂಗ ತೋರಿಸೋದೇ ಈತನ ಕಾಯಕ!
Recommended image2
ಎಲ್ಲಾದ್ರೂ ಹೋದ್ರೆ ವಿಕೃತಕಾಮಿ ಮುನಿರತ್ನ ಏಡ್ಸ್ ಪಿನ್ನು ಚುಚ್ಚಿಬಿಡ್ತಾನೋ ಅಂತಾ ಭಯ ಆಗ್ತಿದೆ: ಮೊಹಮ್ಮದ್ ನಲಪಾಡ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved