MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಈ ಭಾಗದಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣ

ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ಈ ಭಾಗದಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು,  ಬಫರ್‌ ಜೋನ್‌ನಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಬಿ-ಸ್ಮೈಲ್ ಮುಂದಾಗಿದೆ. ಈ ಯೋಜನೆಯಲ್ಲಿ ಸೌಂದರ್ಯೀಕರಣದ ಜೊತೆಗೆ, 200ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುವುದು ಮತ್ತು ಆಸ್ತಿ ಕಳೆದುಕೊಳ್ಳುವವರಿಗೆ ಪರಿಹಾರ ನೀಡಲಾಗುವುದು.

1 Min read
Author : Kannadaprabha News
Published : May 10 2026, 09:20 AM IST
Share this Photo Gallery
  • FB
  • TW
  • Linkdin
  • Whatsapp
14
10.20 ಕಿ.ಮೀ ಉದ್ದದ ಹೊಸ ರಸ್ತೆ
Image Credit : Gemini

10.20 ಕಿ.ಮೀ ಉದ್ದದ ಹೊಸ ರಸ್ತೆ

ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರದ ಮೈಸೂರು ರಸ್ತೆಯ ಹೊಸಕೆರೆಹಳ್ಳಿಯ ವಿ-ಲೆಗಸಿ ರಸ್ತೆಯಿಂದ ರಾಜರಾಜೇಶ್ವರಿ ನಗರ ಆರ್ಚ್‌ವರೆಗೆ ರಾಜಕಾಲುವೆಯ ಬಫರ್‌ ಜೋನ್‌ನಲ್ಲಿ 10.20 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಮುಂದಾಗಿದೆ.

Add Asianetnews Kannada as a Preferred SourcegooglePreferred
24
ಸೌಂದರ್ಯೀಕರಣ
Image Credit : Gemini

ಸೌಂದರ್ಯೀಕರಣ

ಈ ಯೋಜನೆಯಡಿ ರಸ್ತೆ ನಿರ್ಮಾಣದ ಜತೆ ಪಾದಚಾರಿ ಮಾರ್ಗ ಮತ್ತು ವ್ಯವಸ್ಥಿತ ಚರಂಡಿ, ರಾಜಕಾಲುವೆ ಮತ್ತು ಕೆರೆಗಳ ಆಸುಪಾಸಿನಲ್ಲಿ ಅಲಂಕಾರಿಕ ಗಿಡ ಬೆಳೆಸುವುದು ಸೇರಿದಂತೆ ಸೌಂದರ್ಯೀಕರಣವನ್ನು ಮಾಡಲಾಗುತ್ತದೆ. ಬಫರ್ ವಲಯದಲ್ಲಿ ರಸ್ತೆ ನಿರ್ಮಾಣದಿಂದ ಹಾಲಿ ಇರುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಣವಾಗುವ ಜೊತೆಗೆ ರಾಜಕಾಲುವೆ ನಿರ್ವಹಣೆಯನ್ನು ಉತ್ತಮವಾಗಿ ಮಾಡಲು ಉದ್ದೇಶಿಸಲಾಗಿದೆ.

Related Articles

Related image1
'ಬೆಂಗಳೂರು ಟ್ರಾಫಿಕ್‌ಗೆ ಪಾದಚಾರಿಗಳೇ ಕಾರಣ'; ಸ್ಕೈವಾಕ್ ಬಳಸದ ಜನರ ಬಗ್ಗೆ ಉದ್ಯಮಿ ಆಕ್ರೋಶಭರಿತ ಪೋಸ್ಟ್!
Related image2
ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ: ಅಂತಿಮ ಹಂತಕ್ಕೆ ತಲುಪಿದ ಈಜೀಪುರ ಮೇಲ್ಸೇತುವೆ ಕಾಮಗಾರಿ, ಅಕ್ಟೋಬರ್‌ಗೆ ಸಂಚಾರ ಆರಂಭ!
34
ಸುಮಾರು 200ಕ್ಕೂ ಹೆಚ್ಚು ಮರ ತೆರವು
Image Credit : Gemini

ಸುಮಾರು 200ಕ್ಕೂ ಹೆಚ್ಚು ಮರ ತೆರವು

10.20 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಯೋಜನೆಗೆ ಸುಮಾರು 200ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಲಾಗುತ್ತದೆ. ಯೋಜನೆ ಅನುಷ್ಠಾನಗೊಳಿಸುವ ಜಾಗದಲ್ಲಿ ಯಾವುದಾದರೂ ಆಸ್ತಿಗಳು, ಕಟ್ಟಡಗಳು ಇದ್ದಲ್ಲಿ ವಶಪಡಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಪೀಣ್ಯ ಫ್ಲೈಓವರ್‌ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್‌ನಲ್ಲಿ ಬಂದಿದ್ದೇನು?

44
ಪರಿಹಾರ ವಿತರಣೆ
Image Credit : Gemini

ಪರಿಹಾರ ವಿತರಣೆ

ಸಾರ್ವಜನಿಕರು ಕಳೆದುಕೊಳ್ಳುವ ಜಾಗಕ್ಕೆ ಮಾರುಕಟ್ಟೆ ದರದಲ್ಲಿ ಪರಿಹಾರದ ಹಣವನ್ನು ಪಾವತಿಸಲಾಗುತ್ತದೆ ಎಂದು ಬಿ ಸ್ಮೈಲ್‌ ತಿಳಿಸಿದೆ. ಈಗಾಗಲೇ ಎಂ.ಜಿ. ರಸ್ತೆಯಿಂದ ಬೆಳ್ಳಂದೂರುವರೆಗೆ ರಾಜಕಾಲುವೆಯ ಬಫರ್‌ ಜೋನ್‌ನಲ್ಲಿ ಸುಮಾರು 10 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಬಿ ಸ್ಮೈಲ್‌ನಿಂದ ಕೈಗೆತ್ತಿಕೊಳ್ಳಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ಬಸ್; ಒಂದು ದಿನದ ಟ್ರಿಪ್‌ಗೆ ಬೆಸ್ಟ್ ಆಯ್ಕೆ

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಬೆಂಗಳೂರು
ಬೆಂಗಳೂರು ಸಂಚಾರ

Latest Videos
Recommended Stories
Recommended image1
Mavu Mela: ಬೆಂಗಳೂರಿನ ಕಬ್ಬನ್ ಪಾರ್ಕ್‌ ಮೇಳ; 2 ದಿನದಲ್ಲಿಯೇ 7 ಟನ್‌+ ಮಾವು ಮಾರಾಟ
Recommended image2
ಪಂಚರಾಜ್ಯ ಚುನಾವಣಾ ಫಲಿತಾಂಶ ಬಳಿಕ ಕರ್ನಾಟಕ ಪ್ರಧಾನಿ ಮೋದಿ, ಆರು ತಿಂಗಳಲ್ಲಿ ಮೂರನೇ ಭೇಟಿ!
Recommended image3
ಪೀಣ್ಯ ಫ್ಲೈಓವರ್‌ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್‌ನಲ್ಲಿ ಬಂದಿದ್ದೇನು?
Related Stories
Recommended image1
'ಬೆಂಗಳೂರು ಟ್ರಾಫಿಕ್‌ಗೆ ಪಾದಚಾರಿಗಳೇ ಕಾರಣ'; ಸ್ಕೈವಾಕ್ ಬಳಸದ ಜನರ ಬಗ್ಗೆ ಉದ್ಯಮಿ ಆಕ್ರೋಶಭರಿತ ಪೋಸ್ಟ್!
Recommended image2
ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ: ಅಂತಿಮ ಹಂತಕ್ಕೆ ತಲುಪಿದ ಈಜೀಪುರ ಮೇಲ್ಸೇತುವೆ ಕಾಮಗಾರಿ, ಅಕ್ಟೋಬರ್‌ಗೆ ಸಂಚಾರ ಆರಂಭ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved