MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಪೀಣ್ಯ ಫ್ಲೈಓವರ್‌ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್‌ನಲ್ಲಿ ಬಂದಿದ್ದೇನು?

ಪೀಣ್ಯ ಫ್ಲೈಓವರ್‌ಗೆ ಕಠಿಣ ಪರೀಕ್ಷೆ ನಡೆಸಿದ ಪರಿಣಿತರ ತಂಡ; ರಿಸಲ್ಟ್‌ನಲ್ಲಿ ಬಂದಿದ್ದೇನು?

ಕೇಬಲ್ ಸಮಸ್ಯೆಯಿಂದ ಸುದ್ದಿಯಾಗಿದ್ದ ಪೀಣ್ಯ ಫ್ಲೈಓವರ್ ಕುರಿತ ಮಾಹಿತಿ ಇಲ್ಲಿದೆ. ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್‌ ಟೆಸ್ಟಿಂಗ್‌ ನಡೆಸಿದೆ. ಈ ಪರೀಕ್ಷೆಯ ಫಲಿತಾಂಶ ಹೊರ ಬಂದಿದೆ.

2 Min read
Author : Kannadaprabha News
Published : May 10 2026, 08:31 AM IST
Share this Photo Gallery
  • FB
  • TW
  • Linkdin
  • Whatsapp
15
ಸಿದ್ದು ಚಿಕ್ಕಬಳ್ಳೇಕೆರೆ
Image Credit : Kannada Prabha

ಸಿದ್ದು ಚಿಕ್ಕಬಳ್ಳೇಕೆರೆ

ತುಮಕೂರು ರಸ್ತೆಯ ಪೀಣ್ಯ ಫ್ಲೈಓವರ್‌ ಸದೃಢವಾಗಿದ್ದು ಲೋಡ್‌ ಟೆಸ್ಟಿಂಗ್‌ನಲ್ಲಿ ಪಾಸ್‌ ಆಗಿದೆ. ಇದರಿಂದಾಗಿ ತಿಂಗಳೊಳಗೆ ಎಲ್ಲ ಬಗೆಯ ವಾಹನಗಳು ವಾರದ 7 ದಿನವೂ ಯಾವುದೇ ತಡೆ ಇಲ್ಲದಂತೆ ಮೇಲ್ಸೇತುವೆ ಮೇಲೆ ಸಂಚರಿಸಲು ಕಾಲ ಕೂಡಿಬರಲಿದೆ.

ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯದ ರಾಷ್ಟ್ರೀಯ ಹೆದ್ದಾರಿ- 4 ರಲ್ಲಿ ಬರುವ ಫ್ಲೈಓವರ್‌(ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಇದಾಗಿದ್ದು ಭಾರೀ ವಾಹನಗಳು ಅಧಿಕ ತೂಕದೊಂದಿಗೆ ಸಂಚರಿಸಿದ್ದರಿಂದ 8ನೇ ಮೈಲಿ ಜಂಕ್ಷನ್‌ ಸಮೀಪ 102 ಮತ್ತು 103 ನೇ ಪಿಲ್ಲರ್‌ ನಡುವೆ ಎರಡು ಕೇಬಲ್‌ಗಳು 2021 ಡಿಸೆಂಬರ್‌ ಕೊನೆಯ ವಾರದಲ್ಲಿ ಬಾಗಿದ್ದರಿಂದ ಸಮಸ್ಯೆ ಉಂಟಾಗಿತ್ತು.

Add Asianetnews Kannada as a Preferred SourcegooglePreferred
25
ಮುಂಬೈನ್ ಪ್ರೆಸಿನೇಟ್‌ ಕಂಪನಿ
Image Credit : Kannada Prabha

ಮುಂಬೈನ್ ಪ್ರೆಸಿನೇಟ್‌ ಕಂಪನಿ

ಮುಂಬೈನ್ ಪ್ರೆಸಿನೇಟ್‌ ಕಂಪನಿಯು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿದ್ದು ಮೊದಲಿಗೆ 120 ಪಿಲ್ಲರ್‌ ನಡುವೆ ತಲಾ ಎರಡರಂತೆ ಹೊಸದಾಗಿ 240 ಕೇಬಲ್‌ಗಳನ್ನು ಅಳವಡಿಸಲಾಗಿತ್ತು. ಬಳಿಕ ಪ್ರತಿ ಪಿಲ್ಲರ್‌ನ ತಲಾ 10 ಕೇಬಲ್‌ನಂತೆ 1200 ಕೇಬಲ್‌ಗಳನ್ನೂ ಬದಲಾಯಿಸಿ ಮೇಲ್ಸೇತುವೆಯನ್ನು ಸದೃಢಗೊಳಿಲಾಗಿತ್ತು. ಇದೀಗ ಮೇಲ್ಸೇತುವೆಯು ಭಾರ ತಡೆಯುವ ಸಾಮರ್ಥ್ಯ ಹೊಂದಿದೆಯೇ ಎಂದು ಮೇ 5 ರಿಂದ ಲೋಡ್‌ ಟೆಸ್ಟಿಂಗ್‌ ನಡೆಸಿದ್ದು ಇದರಲ್ಲಿ ಮೇಲ್ಸೇತುವೆ ಪಾಸ್‌ ಆಗಿದೆ.

Related Articles

Related image1
ಬೆಂಗಳೂರು: ಪೀಣ್ಯ ಫ್ಲೈಓವರ್ ಮತ್ತೆ ಬಂದ್, ಸಂಚಾರಕ್ಕೆ ಪರ್ಯಾಯ ಮಾರ್ಗಗಳ ಪಟ್ಟಿ ಇಲ್ಲಿದೆ
Related image2
ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ: ಅಂತಿಮ ಹಂತಕ್ಕೆ ತಲುಪಿದ ಈಜೀಪುರ ಮೇಲ್ಸೇತುವೆ ಕಾಮಗಾರಿ, ಅಕ್ಟೋಬರ್‌ಗೆ ಸಂಚಾರ ಆರಂಭ!
35
ಹೇಗಿತ್ತು ಲೋಡ್‌ ಟೆಸ್ಟಿಂಗ್‌?
Image Credit : Asianet News

ಹೇಗಿತ್ತು ಲೋಡ್‌ ಟೆಸ್ಟಿಂಗ್‌?

ತಲಾ 30 ಟನ್‌ ತೂಕದ 6 ಟ್ರಕ್‌ಗಳನ್ನು ಸಿದ್ಧಪಡಿಸಿಕೊಂಡು ಮೇಲ್ಸೇತುವೆಯ ಮೇಲೆ ಒಂದು ಟ್ರಕ್‌ ನಿಲ್ಲಿಸಿ ಪಿಲ್ಲರ್‌ ಮೇಲ್ಭಾಗದ ಡಯಲ್‌ ಗೇಜ್‌ ಎಷ್ಟು ಕೆಳಕ್ಕೆ ಬರುತ್ತದೆ ಎಂದು ಅಳತೆ ತೆಗೆದುಕೊಳ್ಳಲಾಗಿದೆ. 1 ಗಂಟೆಯ ಬಳಿಕ ಮತ್ತೊಂದು ಟ್ರಕ್‌ ಅನ್ನು ಮೇಲ್ಸೇತುವೆ ಮೇಲೆ ಕಳುಹಿಸಿ ಪುನಃ ಡಯಲ್‌ ಗೇಜ್‌ ಎಷ್ಟು ಕೆಳಕ್ಕೆ ಹೋಗಿದೆ ಎಂದು ಲೆಕ್ಕ ಹಾಕಲಾಗಿದೆ. ಹೀಗೆ ಒಂದೊಂದು ಗಂಟೆಗೆ ಒಂದೊಂದು ಟ್ರಕ್‌ ನಿಲ್ಲಿಸಿ ಅಳತೆ ತೆಗೆದುಕೊಳ್ಳಲಾಗಿದೆ.

45
ಮೇಲ್ಸೇತುವೆಯ ಧಾರಣಾ ಸಾಮರ್ಥ್ಯ
Image Credit : Asianet News

ಮೇಲ್ಸೇತುವೆಯ ಧಾರಣಾ ಸಾಮರ್ಥ್ಯ

ಮೇಲ್ಸೇತುವೆ ಮೇಲೆ ಎಲ್ಲಾ 6 ಟ್ರಕ್‌ಗಳು ನಿಂತ ಬಳಿಕ 24 ಗಂಟೆ ಎಲ್ಲಾ ಟ್ರಕ್‌ಗಳನ್ನು ಹಾಗೆಯೇ ಬಿಡಲಾಗಿದೆ. ಬಳಿಕ ಒಂದೊಂದು ಗಂಟೆಯ ನಂತರ ಒಂದೊಂದು ಟ್ರಕ್‌ಗಳನ್ನು ಕೆಳಗಿಳಿಸಲಾಗಿದೆ. ಪ್ರತಿ ಹಂತದಲ್ಲೂ ಪಿಲ್ಲರ್‌ ಮೇಲ್ಭಾಗದ ಡಯಲ್‌ ಗೇಜ್‌ ಎಷ್ಟು ಆಳಕ್ಕೆ ಹೋಗಿದೆ ಎಂಬುದನ್ನು ಲೆಕ್ಕಾಚಾರ ಮಾಡಲಾಗಿದೆ. ಇದರ ಆಧಾರದಲ್ಲಿ ಮೇಲ್ಸೇತುವೆಯ ಧಾರಣಾ ಸಾಮರ್ಥ್ಯವನ್ನು ಅಳೆಯಲಾಗಿದೆ. ಹೀಗಾಗಿ ಫ್ಲೈಓವರ್‌ ಸದೃಢವಾಗಿದೆ ಎಂದು ಮೂಲಗಳು ವಿವರಿಸಿವೆ.

55
ಐಐಎಸ್‌ಸಿಯ ಪರಿಣತರ ತಂಡ
Image Credit : our own

ಐಐಎಸ್‌ಸಿಯ ಪರಿಣತರ ತಂಡ

ರಾಜ್ಯದ 20 ಕ್ಕೂ ಅಧಿಕ ಜಿಲ್ಲೆಗಳು, ಗೋವಾ, ಮಹಾರಾಷ್ಟ್ರಕ್ಕೂ ಸಂಪರ್ಕ ಕಲ್ಪಿಸುವ 4.2 ಕಿ.ಮೀ. ಉದ್ದದ ಈ ಮೇಲ್ಸೇತುವೆಯು 2021 ರಲ್ಲಿ ಎರಡು ಕೇಬಲ್‌ ಭಾಗಿದ್ದರಿಂದ ಭಾರೀ ಸುದ್ದಿಯಾಗಿತ್ತು. ಸೇತುವೆ ಸದೃಢತೆಯ ಬಗ್ಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ)ವು ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯನ್ನು ಕೋರಿತ್ತು. ಐಐಎಸ್‌ಸಿಯ ಪರಿಣತರ ತಂಡವು ಪರಿಶೀಲನೆ ನಡೆಸಿ ಭಾರೀ ವಾಹನಗಳ ಸಂಚಾರದಿಂದ ಕೇಬಲ್‌ ಬಾಗಿವೆ ಎಂದು ವರದಿ ನೀಡಿತ್ತು.

About the Author

KN
Kannadaprabha News
1967ರ ನವೆಂಬರ್ 4ರಂದು ಆರಂಭವಾದ ಕನ್ನಡಪ್ರಭ ಕನ್ನಡ ಪತ್ರಿಕೋದ್ಯಮದಲ್ಲಿಯೇ ವಿಶೇಷ ಛಾಪು ಮೂಡಿಸಿದ ಕನ್ನಡ ದಿನ ಪತ್ರಿಕೆ. ದೇಶ, ವಿದೇಶ, ವಾಣಿಜ್ಯ, ಕ್ರೀಡೆ, ಮನೋರಂಜನೆ ಸೇರಿ ವೈವಿಧ್ಯಮಯ ಸುದ್ದಿಗಳ ಹೂರಣ ಹೊತ್ತು ತರುವ ಕನ್ನಡಪ್ರಭ, ಕನ್ನಡಿಗರ ಅಸ್ಮಿತೆಯ ಸಂಕೇತ. ಸದಾ ಕರುನಾಡು, ನುಡಿ, ಸಂಸ್ಕೃತಿ ಪರ ಧ್ವನಿ ಎತ್ತುವ ಕನ್ನಡಪ್ರಭ ದಿನ ಪತ್ರಿಕೆಯಲ್ಲಿ ಪ್ರಕಟಗೊಳ್ಳುವ ಸುದ್ದಿಗಳು ಸುವರ್ಣ ನ್ಯೂಸ್ ವೆಬ್‌ಸೈಟಲ್ಲೂ ಲಭ್ಯ.
ಬೆಂಗಳೂರು
ಬೆಂಗಳೂರು ಸಂಚಾರ

Latest Videos
Recommended Stories
Recommended image1
ಸಚಿವ ಡಿ. ಸುಧಾಕರ್ ನಿಧನ; ಡಿಸಿಎಂ ಡಿಕೆ ಶಿವಕುಮಾರ ರಾಯಚೂರು ಪ್ರವಾಸ ದಿಢೀರ್ ರದ್ದು?
Recommended image2
Nikhil Kumaraswamy: ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಶತಸಿದ್ದ: ನಿಖಿಲ್
Recommended image3
Sri Sri Ravi Shankar Birthday: ಧ್ಯಾನದಿಂದ ಸಾಮಾಜಿಕ ಪರಿವರ್ತನೆಗೈದ ಗುರುದೇವ್
Related Stories
Recommended image1
ಬೆಂಗಳೂರು: ಪೀಣ್ಯ ಫ್ಲೈಓವರ್ ಮತ್ತೆ ಬಂದ್, ಸಂಚಾರಕ್ಕೆ ಪರ್ಯಾಯ ಮಾರ್ಗಗಳ ಪಟ್ಟಿ ಇಲ್ಲಿದೆ
Recommended image2
ಬೆಂಗಳೂರು ಟ್ರಾಫಿಕ್‌ಗೆ ಮುಕ್ತಿ: ಅಂತಿಮ ಹಂತಕ್ಕೆ ತಲುಪಿದ ಈಜೀಪುರ ಮೇಲ್ಸೇತುವೆ ಕಾಮಗಾರಿ, ಅಕ್ಟೋಬರ್‌ಗೆ ಸಂಚಾರ ಆರಂಭ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved