- Home
- Karnataka Districts
- Bengaluru Urban
- Bengaluru: ನೈಸ್ ರೋಡ್ನಲ್ಲಿ ಹೊತ್ತಿ ಉರಿದ ಟ್ಯಾಂಕರ್, 5KM ಟ್ರಾಫಿಕ್ ಜಾಮ್
Bengaluru: ನೈಸ್ ರೋಡ್ನಲ್ಲಿ ಹೊತ್ತಿ ಉರಿದ ಟ್ಯಾಂಕರ್, 5KM ಟ್ರಾಫಿಕ್ ಜಾಮ್
ಬೆಂಗಳೂರಿನ ನೈಸ್ ರಸ್ತೆಯಲ್ಲಿ ಕೆಮಿಕಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಶ್ರಮಿಸುತ್ತಿದ್ದು, ಉಳಿದ ಟ್ಯಾಂಕ್ಗಳನ್ನು ಕಂಟ್ರೋಲ್ ಬ್ಲಾಸ್ಟ್ ಮಾಡಲು ಸಿದ್ಧತೆ ನಡೆಸಿದ್ದಾರೆ.

ಟೈರ್ ಬ್ಲಾಸ್ಟ್ ಆಗಿ ಕ್ಯಾಂಟರ್ ಪಲ್ಟಿ
ಬೆಂಗಳೂರು: ನಗರ ನೈಸ್ ರಸ್ತೆಯಲ್ಲಿ ಕೆಮಿಕಲ್ ತುಂಬಿದ ಟ್ಯಾಂಕರ್ ಹೊತ್ತಿ ಉರಿದ ಪರಿಣಾಮ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಕನಕಪುರ ಟೋಲ್ ಬಳಿ ಘಟನೆ ನಡೆದಿದ್ದು, ಅಂಜನಾಪುರದಿಂದ ನಗರದ ಕಡೆಗೆ ಬರುವಾಗ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ.
ಒಂದು ಗಂಟೆಗೂ ಹೆಚ್ಚು ಸಮಯದಿಂದ ಉರಿಯುತ್ತಿರುವ ಟ್ಯಾಂಕರ್
ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕದ ದಳ ಸಿಬ್ಬಂದಿ, ತಲಘಟ್ಟಪುರ ಸಂಚಾರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಟ್ಯಾಂಕರ್ ಒಂದು ಗಂಟೆಗೂ ಹೆಚ್ಚು ಸಮಯದಿಂದ ಹೊತ್ತಿ ಉರಿಯುತ್ತಿರುವ ಕಾರಣ ನೈಸ್ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ.
ಕಿಲೋ ಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್
ನೈಸ್ ರಸ್ತೆಯ ಅಂಜನಾಪುರ ಭಾಗದಿಂದ ಬೆಂಗಳೂರು ಸಿಟಿ ಕಡೆ ಬರುವ ರಸ್ತೆಯಲ್ಲಿ ಸುಮಾರು 5 ಕಿಲೋ ಮೀಟರ್ ಟ್ರಾಫಿಕ್ ಜಾಮ್ ಆಗಿದ್ದು, ಸಿಟಿಯಿಂದ ಹೊರ ಹೋಗುವ ರಸ್ತೆಯಲ್ಲಿ ಸುಮಾರು 3 ಕಿಲೋ ಮೋಟರ್ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಬೆಂಕಿ ನಂದಿಸುವ ಕಾರ್ಯ
ಸ್ಥಳಕ್ಕೆ ಭೇಟಿ ನೀಡಿರುವ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಚೆನ್ನೈನಿಂದ ಕೆಮಿಕಲ್ ತುಂಬಿಕೊಂಡು ಮುಂಬೈಗೆ ಬರುತ್ತಿದ್ದ ಲಾರಿಯ ಟೈರ್ ಬಸ್ಟ್ ಆಗಿ ಟ್ಯಾಂಕರ್ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಕಾರಿಗೆ ಟಚ್ ಆಗಿದೆ.
ಯಾವುದೇ ಕ್ಷಣದಲ್ಲಿ ಬ್ಲಾಸ್ಟ್ ನಿರೀಕ್ಷೆ
ಟ್ಯಾಂಕರ್ ಒಳಗೆ ನಾಲ್ಕು ಟ್ಯಾಂಕ್ ಇದ್ದು, ಕಳೆದ ಒಂದೂವರೆ ಗಂಟೆಯಿಂದ ನೈಸ್ ರಸ್ತೆಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಟ್ಯಾಂಕರ್ ಒಳಗೆ ಇರುವ ನಾಲ್ಕು ಟ್ಯಾಂಕ್ಗಳಲ್ಲಿ, ಎರಡು ಟ್ಯಾಂಕ್ಗಳಲ್ಲಿ ಕೆಮಿಕಲ್ ಇದ್ದು, ಅದು ಯಾವುದೇ ಕ್ಷಣದಲ್ಲಿ ಬ್ಲಾಸ್ಟ್ ಆಗುವ ನಿರೀಕ್ಷೆ ಇದೆ.
ಕಂಟ್ರೋಲ್ ಬ್ಲಾಸ್ಟ್ ಮಾಡಲು ತಯಾರಿ
ಈ ಎರಡು ಟ್ಯಾಂಕರ್ ಬ್ಲಾಸ್ಟ್ ಆಗುವ ತನಕ ಬೆಂಕಿ ಹತೊಟಿಗೆ ಬರುವುದು ಕಷ್ಟ ಸಾಧ್ಯ ಎನ್ನಲಾಗಿದ್ದು, ಹೀಗಾಗಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಕಂಟ್ರೋಲ್ ಬ್ಲಾಸ್ಟ್ (controlled Environment)ನಲ್ಲಿ ಬ್ಲಾಸ್ಟ್ ಮಾಡಲು ಅಗ್ನಿಶಾಮಕ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

