Dream Meaning: ಕನಸಲ್ಲಿ ಮಾಜಿ ಲವರ್ ಕಂಡರೆ ಅರ್ಥವೇನು? ಹಳೆಯ ಪ್ರೀತಿ ಮತ್ತೆ ಚಿಗುರುತ್ತಾ?
Hidden meanings behind dreams of an ex: ಹಿಂದೆ ಪ್ರೀತಿಸಿದ ವ್ಯಕ್ತಿ ಕನಸಲ್ಲಿ ಬಂದರೆ, ಈ ಕನಸು ಯಾಕೆ ಬಿತ್ತು ಅಂತ ಹಲವರು ಯೋಚಿಸುತ್ತಾರೆ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಲ್ಲಿ ಮಾಜಿ ಪ್ರೇಮಿ ಕಾಣಿಸಿಕೊಳ್ಳುವುದರ ಅರ್ಥವೇನು?

ಕನಸಲ್ಲಿ ಮಾಜಿ ಲವರ್ ಕಾಣಿಸಿಕೊಂಡರೆ ಅರ್ಥವೇನು?
ಕನಸಲ್ಲಿ ಮಾಜಿ ಲವರ್ ಕಾಣಿಸಿಕೊಂಡರೆ ಅರ್ಥವೇನು?
ಮನುಷ್ಯನ ಜೀವನದಲ್ಲಿ ಕನಸುಗಳಿಗೆ ವಿಶೇಷ ಸ್ಥಾನವಿದೆ. ಕೆಲವು ಕನಸುಗಳು ಖುಷಿ ಕೊಟ್ಟರೆ, ಇನ್ನು ಕೆಲವು ಅಚ್ಚರಿ ಮೂಡಿಸುತ್ತವೆ. ಅದರಲ್ಲೂ ಹಿಂದೆ ನಾವು ಪ್ರೀತಿಸಿದ ವ್ಯಕ್ತಿ ಕನಸಲ್ಲಿ ಬಂದರೆ ಗೊಂದಲವಾಗುವುದು ಸಹಜ. ನಾನು ಇನ್ನೂ ಆ ವ್ಯಕ್ತಿಯನ್ನು ಮರೆತಿಲ್ವಾ? ಈ ಕನಸು ಯಾಕೆ ಬಿತ್ತು? ಇದರ ಅರ್ಥವೇನು ಎಂದು ತಲೆಕೆಡಿಸಿಕೊಳ್ಳುತ್ತಾರೆ. ಸ್ವಪ್ನ ಶಾಸ್ತ್ರ ಮತ್ತು ಜ್ಯೋತಿಷ್ಯ ಪಂಡಿತರ ಪ್ರಕಾರ ಈ ಕನಸಿನ ಅರ್ಥವೇನು ಎಂದು ಇಲ್ಲಿ ವಿವರವಾಗಿ ತಿಳಿಯೋಣ.
ಸ್ವಪ್ನ ಶಾಸ್ತ್ರದ ಪ್ರಕಾರ
ಸ್ವಪ್ನ ಶಾಸ್ತ್ರದ ಪ್ರಕಾರ..
ಸ್ವಪ್ನ ಶಾಸ್ತ್ರದ ಪ್ರಕಾರ, ಕನಸುಗಳು ನಮ್ಮ ಮನಸ್ಸಿನಲ್ಲಿ ಅಡಗಿರುವ ಭಾವನೆಗಳ ಪ್ರತಿಬಿಂಬ. ಒಂದು ಕಾಲದಲ್ಲಿ ನಮ್ಮ ಜೀವನದಲ್ಲಿ ಮುಖ್ಯ ಪಾತ್ರ ವಹಿಸಿದ್ದ ವ್ಯಕ್ತಿಯ ಬಗ್ಗೆ ಮನಸ್ಸಲ್ಲಿ ಉಳಿದಿರುವ ನೆನಪುಗಳು, ಅನುಭವಗಳು ಮತ್ತು ಭಾವನೆಗಳು ಕನಸಿನ ರೂಪದಲ್ಲಿ ಹೊರಬರಬಹುದು. ಹಾಗಾಗಿ, ಮಾಜಿ ಪ್ರೇಮಿ ಕನಸಲ್ಲಿ ಕಾಣಿಸಿಕೊಂಡರೆ ಮತ್ತೆ ಸಂಬಂಧ ಶುರುವಾಗುತ್ತೆ ಎಂದರ್ಥವಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಇದು ಗತಕಾಲವನ್ನು ನೆನಪಿಸುವ ಮಾನಸಿಕ ಪ್ರಕ್ರಿಯೆ ಅಷ್ಟೇ.
ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಸಿಹಿ ನೆನಪುಗಳಿವೆ
ಪಂಡಿತರ ಪ್ರಕಾರ, ನಿಮ್ಮ ಮಾಜಿ ಪ್ರೇಮಿ ಕನಸಿನಲ್ಲಿ ಸಂತೋಷವಾಗಿ ಕಾಣಿಸಿಕೊಂಡರೆ, ಅದು ನಿಮ್ಮ ಜೀವನದಲ್ಲಿ ಒಂದು ಹಂತ ಮುಗಿದು ಹೊಸ ಆರಂಭಕ್ಕೆ ನೀವು ಸಿದ್ಧರಾಗಿದ್ದೀರಿ ಎಂಬುದರ ಸೂಚನೆ. ಹಿಂದೆ ನಡೆದ ಘಟನೆಗಳನ್ನು ನೀವು ಒಪ್ಪಿಕೊಂಡು ಮುಂದೆ ಸಾಗುತ್ತಿದ್ದೀರಿ ಎಂದು ಈ ಕನಸು ಸಂಕೇತಿಸುತ್ತದೆ. ಹಾಗೆಯೇ, ಆ ವ್ಯಕ್ತಿಯೊಂದಿಗೆ ನಗುತ್ತಾ ಮಾತನಾಡುತ್ತಿರುವಂತೆ ಕನಸು ಬಿದ್ದರೆ, ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಸಿಹಿ ನೆನಪುಗಳು ಉಳಿದಿವೆ ಎಂದರ್ಥ.
ಕೋಪ ಸಂಪೂರ್ಣವಾಗಿ ದೂರವಾಗಿಲ್ಲ ಎಂದರ್ಥ
ಆ ಸಂಬಂಧದ ಮೂಲಕ ಕಲಿತ ಪಾಠಗಳು
ಕನಸಿನಲ್ಲಿ ಮಾಜಿ ಪ್ರೇಮಿ ನಿಮ್ಮನ್ನು ಕರೆಯುತ್ತಿರುವಂತೆ ಅಥವಾ ಹಿಂತಿರುಗಿ ಬರಲು ಕೇಳಿಕೊಳ್ಳುತ್ತಿರುವಂತೆ ಕಂಡರೆ, ಅದು ನಿಮ್ಮ ಜೀವನದಲ್ಲಿ ಯಾವುದೋ ಒಂದು ವಿಷಯದ ಬಗ್ಗೆ ನೀವು ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದರ ಸಂಕೇತವಾಗಿರಬಹುದು. ಕೆಲವು ಬಾರಿ ಪ್ರೇಮ ಸಂಬಂಧವಷ್ಟೇ ಅಲ್ಲ, ಆ ಸಂಬಂಧದ ಮೂಲಕ ಕಲಿತ ಪಾಠಗಳು ಅಥವಾ ಅನುಭವಗಳು ನಿಮಗೆ ನೆನಪಾಗುತ್ತಿವೆ ಎಂದೂ ಅರ್ಥೈಸಿಕೊಳ್ಳಬಹುದು.
ಭಾವನೆಗಳಿಗೆ ಸಂಬಂಧಿಸಿದ ಕನಸುಗಳು
ಮರಣ ಹೊಂದಿದ ಮಾಜಿ ಪ್ರೇಮಿ ಕನಸಲ್ಲಿ ಕಾಣಿಸಿಕೊಂಡರೆ ಅಥವಾ ಆ ವ್ಯಕ್ತಿ ಅಳುತ್ತಿರುವಂತೆ ಕಂಡರೆ, ಅನೇಕರು ಭಯಪಡುತ್ತಾರೆ. ಆದರೆ ಇವು ಸಾಮಾನ್ಯವಾಗಿ ಮನಸ್ಸಿನಲ್ಲಿರುವ ಭಾವನಾತ್ಮಕ ಒತ್ತಡ ಅಥವಾ ಹಳೆಯ ನೆನಪುಗಳ ಪ್ರಭಾವದಿಂದ ಬರುವ ಕನಸುಗಳಾಗಿವೆ. ಜ್ಯೋತಿಷ್ಯ ತಜ್ಞರ ಪ್ರಕಾರ, ಚಂದ್ರನ ಪ್ರಭಾವ ಹೆಚ್ಚಿರುವಾಗಲೂ ಹಳೆಯ ನೆನಪುಗಳು ಕನಸಿನ ರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಲ್ಲೂ ಹುಣ್ಣಿಮೆ ಅಥವಾ ಅಮಾವಾಸ್ಯೆಯ ಸಮಯದಲ್ಲಿ ಭಾವನೆಗಳಿಗೆ ಸಂಬಂಧಿಸಿದ ಕನಸುಗಳು ಹೆಚ್ಚಾಗಿ ಬರುತ್ತವೆ ಎಂದು ಪಂಡಿತರು ಹೇಳುತ್ತಾರೆ.