ಈ ರಾಶಿಯವರನ್ನ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ; ಮನಸ್ಥಿತಿ, ನಡವಳಿಕೆ ವಿಭಿನ್ನ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರ ಮನಸ್ಥಿತಿ ಮತ್ತು ನಡವಳಿಕೆಗಳನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ರಾಹು-ಕೇತು, ಚಂದ್ರನಂತಹ ಗ್ರಹಗಳ ಪ್ರಭಾವದಿಂದಾಗಿ, ತಮ್ಮ ನಿಜವಾದ ಯೋಚನೆಗಳನ್ನು ಮುಖವಾಡದ ಹಿಂದೆ ಬಚ್ಚಿಟ್ಟುಕೊಳ್ಳುವ ನಿಗೂಢ ರಾಶಿಯವರು ಯಾರು ಗೊತ್ತಾ?

ಅರ್ಥಮಾಡಿಕೊಳ್ಳಲಾಗದ ರಾಶಿಗಳು
ಮನುಷ್ಯರ ಸ್ವಭಾವ ಮತ್ತು ಅವರ ಭಾವನೆಗಳನ್ನು ಅರಿಯುವಲ್ಲಿ ಜ್ಯೋತಿಷ್ಯ ಶಾಸ್ತ್ರ ಪ್ರಮುಖ ಪಾತ್ರ ವಹಿಸುತ್ತೆ. ಕೆಲವು ರಾಶಿಯವರ ಮನಸ್ಥಿತಿಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಆದರೆ, ಕೆಲವು ರಾಶಿಯವರ ಆಲೋಚನೆ, ನಿರ್ಧಾರ ಮತ್ತು ನಡವಳಿಕೆಗಳು ಇತರರಿಗೆ ಯಾವಾಗಲೂ ಒಗಟಾಗಿ ಉಳಿಯುತ್ತವೆ. ಇವರು ಏನು ಯೋಚಿಸುತ್ತಾರೆ, ಯಾವಾಗ ಏನು ಮಾಡುತ್ತಾರೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ
ಮೀನ ರಾಶಿ
ಮೀನ ರಾಶಿಯವರು ನಿಜವಾದ ಜಗತ್ತು ಮತ್ತು ಕಾಲ್ಪನಿಕ ಜಗತ್ತಿನ ನಡುವೆ ಯಾವಾಗಲೂ ಓಲಾಡುತ್ತಿರುತ್ತಾರೆ. ಇವರು ಇತರರ ದುಃಖವನ್ನು ಬೇಗನೆ ಗ್ರಹಿಸುವುದರಿಂದ, ಇವರ ಮನಸ್ಥಿತಿ ಥಟ್ಟನೆ ಬದಲಾಗುತ್ತದೆ. ಒಂದು ನಿರ್ದಿಷ್ಟ ಸನ್ನಿವೇಶಕ್ಕೆ ಇವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಮೊದಲೇ ಊಹಿಸುವುದು ತುಂಬಾ ಕಷ್ಟ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ತಮ್ಮ ನಿಜವಾದ ಭಾವನೆಗಳನ್ನು ಹೊರ ಜಗತ್ತಿಗೆ ಸುಲಭವಾಗಿ ತೋರಿಸಿಕೊಳ್ಳುವುದಿಲ್ಲ. ಇವರ ಮನಸ್ಸಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಆಪ್ತ ಸ್ನೇಹಿತರಿಂದಲೂ ಊಹಿಸಲು ಸಾಧ್ಯವಿಲ್ಲ. ಹೊರಗಿನಿಂದ ಶಾಂತವಾಗಿ ಕಂಡರೂ, ಇವರ ಒಳಗೆ ತೀವ್ರವಾದ ಭಾವನೆಗಳು ಮತ್ತು ತೀಕ್ಷ್ಣವಾದ ಗ್ರಹಣಾ ಶಕ್ತಿ ಇರುತ್ತದೆ.
ಮಿಥುನ ರಾಶಿ
ಮಿಥುನ ರಾಶಿಯ ಅಧಿಪತಿ ಬುಧ ಆಗಿರುವುದರಿಂದ, ಇವರ ಆಲೋಚನಾ ವೇಗ ಇತರರಿಗಿಂತ ಹೆಚ್ಚಾಗಿರುತ್ತದೆ. ಇವರು ಒಂದೇ ಸಮಯದಲ್ಲಿ ಎರಡು ವಿಭಿನ್ನ ಅಭಿಪ್ರಾಯಗಳನ್ನು ಬೆಂಬಲಿಸಿ ಮಾತನಾಡುವ ಸಾಮರ್ಥ್ಯ ಹೊಂದಿದ್ದಾರೆ. ಇವರ ಈ ದ್ವಂದ್ವ ಮನಸ್ಥಿತಿಯು ಇತರರಿಗೆ ಆಗಾಗ ಗೊಂದಲವನ್ನು ಉಂಟುಮಾಡುತ್ತದೆ.
ಕುಂಭ ರಾಶಿ
ಕುಂಭ ರಾಶಿಯವರು ಸಮಾಜದೊಂದಿಗೆ ಬೆರೆಯುವಂತೆ ಕಂಡರೂ, ಮಾನಸಿಕವಾಗಿ ಯಾವಾಗಲೂ ಅಂತರ ಕಾಯ್ದುಕೊಳ್ಳುತ್ತಾರೆ. ಇವರು ಸಾಂಪ್ರದಾಯಿಕ ಯೋಚನೆಗಳ ಬದಲು, ಹೊಸ ಮತ್ತು ವಿಚಿತ್ರ ಕೋನಗಳಲ್ಲಿ ಯೋಚಿಸುತ್ತಾರೆ. ಒಂದು ಕ್ಷಣದಲ್ಲಿ ಅತಿಯಾದ ಪ್ರೀತಿ ತೋರಿಸುವ ಇವರು, ಮರುಕ್ಷಣವೇ ಸಂಪೂರ್ಣ ಅಪರಿಚಿತರಂತೆ ವರ್ತಿಸಿ ಅಚ್ಚರಿ ಮೂಡಿಸುತ್ತಾರೆ.

