MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • 2026 ಚೀನೀ ಹೊಸ ವರ್ಷ ಶುರು, ಈ ಕೆಲಸ ಮಾಡಿದರೆ ಹಣ-ಅದೃಷ್ಟ ಓಡಿ ಬರುತ್ತೆ! ಆದ್ರೆ ಆ ತಪ್ಪುಗಳನ್ನು ಮಾಡ್ಬೇಡಿ

2026 ಚೀನೀ ಹೊಸ ವರ್ಷ ಶುರು, ಈ ಕೆಲಸ ಮಾಡಿದರೆ ಹಣ-ಅದೃಷ್ಟ ಓಡಿ ಬರುತ್ತೆ! ಆದ್ರೆ ಆ ತಪ್ಪುಗಳನ್ನು ಮಾಡ್ಬೇಡಿ

ಚೀನಾ ಜ್ಯೋತಿಷ್ಯ ಪದ್ಧತಿಯಲ್ಲಿ ಹೊಸ ವರ್ಷದ ಮೊದಲ ಕೆಲವು ದಿನಗಳು ಪೂರ್ತಿ ವರ್ಷದ ಭವಿಷ್ಯವನ್ನು ನಿರ್ಧರಿಸುತ್ತೆ ಎಂಬ ನಂಬಿಕೆ ಇದೆ. ಈ ಪದ್ಧತಿ ಪ್ರಕಾರ ವರ್ಷ ಪೂರ್ತಿ ಖುಷ್ ಖುಷಿಯಾಗಿ, ಕೈ ತುಂಬಾ ದುಡ್ಡಿರುವಂತೆ ಮಾಡಲು ಹೇಗಿರಬೇಕು?

2 Min read
Author : Naveen Kodase
Published : Feb 19 2026, 06:26 PM IST
Share this Photo Gallery
  • FB
  • TW
  • Linkdin
  • Whatsapp
16
ಫೆಬ್ರವರಿ 17ರಿಂದ ಲೂನಾರ್ ಹೊಸ ವರ್ಷ ಆರಂಭ
Image Credit : others

ಫೆಬ್ರವರಿ 17ರಿಂದ ಲೂನಾರ್ ಹೊಸ ವರ್ಷ ಆರಂಭ

ಕುದುರೆ ಶಕ್ತಿಯ ಪ್ರತೀಕ. ಫಾಸ್ಟ್ ಆಗಿ ಮೂವ್ ಆಗೋ, ಹೆಚ್ಚಿನ ಶಕ್ತಿ ಹಾಗೂ ಧೈರ್ಯಶಾಲಿ ನಡಿಗೆಗೆ ಕುದುರೆ ಖ್ಯಾತಿ. ಆದರೆ, ಈ ಪ್ರಾಣಿಯೂ ತಪ್ಪು ಮಾಡಬಹುದು. ಓಡುವಾಗ ಎಡವಿ ಬೀಳಬಹುದು. ಜೀವನದಲ್ಲಿ ಹುಷಾರಾಗಿ ಇರೋದು ಎಲ್ಲರಿಗೂ ಅನಿವಾರ್ಯ. ಫೆಬ್ರವರಿ 17ರಿಂದ ಲೂನಾರ್ ಹೊಸ ವರ್ಷ ಆರಂಭವಾಗಿದೆ. ಈ ವರ್ಷ ಎಲ್ಲರ ಕನಸುಗಳು ಈಡೇರುತ್ತಾ? ವರ್ಷ ಪೂರ್ತಿ ಪಾಸಿಟಿವ್ ಆಗಿರಬೇಕು ಅಂದ್ರೆ ಹೇಗಿದ್ದರೆ ಚಂದ?

ಲಕ್ ಲಾಜಿಕ್‌ನಿಂದ ಯಾವುದೇ ಹಬ್ಬ ಹರಿದಿನಗಳು ದೂರವಾಗದಂತೆ ಈ ಹೊಸ ವರ್ಷ ನೋಡಿಕೊಳ್ಳಲಿದೆ. ಚೀನಾದ ಜ್ಯೋತಿಷ್ಯ ಪ್ರಕಾರ ಕುದುರೆ ಅಗ್ನಿ ಹಾಗೂ ಸ್ವಾತಂತ್ರ್ಯವನ್ನು ಪ್ರತಿನಿಧಿಸುತ್ತದೆ. ವರ್ಷದ ಮೊದಲ ಕೆಲವು ದಿನಗಳು ಉಳಿದ ದಿನಗಳ ಭವಿಷ್ಯ ಬರೆಯಲಿದೆ ಎಂಬ ನಂಬಿಕೆ ನಮ್ಮ ನೆರೆ ರಾಷ್ಟ್ರದ ಜನತೆಯದ್ದು. ಆ ದೇಶದ ಜ್ಯೋತಿಷ್ಯದ ಪ್ರಕಾರ ಏನು ಮಾಡಬೇಕು, ಏನು ಮಾಡಬಾರದು, ಏನು ಮಾಡಿದರೆ ಲಕ್ ನಿಮ್ಮ ಕೈ ಹಿಡಿಯುತ್ತೆ. ಇಲ್ಲವೇ ಕೈ ಬಿಡುತ್ತೆ ನೋಡೋಣ ಬನ್ನಿ.

26
ಲಕ್ಕಿ ರೆಡ್ ವಸ್ತ್ರ ಧರಿಸಿ
Image Credit : Getty

ಲಕ್ಕಿ ರೆಡ್ ವಸ್ತ್ರ ಧರಿಸಿ

ನಿಮ್ಮ ವಾರ್ಡ್‌ಡ್ರೋಬ್‌ಗೆ ಬಂದ್ರೆ ಸ್ವಲ್ಪ ಬ್ರೈಟ್, ಬೋಲ್ಡ್ ಆಗಿರೋ, ಅದರಲ್ಲಿಯೂ ವಿಶೇಷವಾಗಿ ರೆಡ್ ಆಗಿರೋ ಬಟ್ಟೆಯನ್ನೇ ಆರಿಸಿ ಧರಿಸಿ ಕೊಳ್ಳಬೇಕು. ಲೂನಾರ್ ಹೊಸ ವರ್ಷಕ್ಕೆ ರೆಡ್ ಅತ್ಯಂತ ಪ್ರಶಸ್ತ ಬಣ್ಣ. ಈ ಬಣ್ಣದ ಬಟ್ಟೆ ಧರಿಸಿದರೆ ಲಕ್ ನಿಮ್ಮನ್ನು ಫಾಲೋ ಮಾಡುತ್ತೆ. ಅಲ್ಲದೇ ಕೆಟ್ಟ ದೃಷ್ಟಿಯಿಂದ ನಿಮ್ಮನ್ನು ಕಾಪಾಡಲಿದೆ. ಕೆಂಪು ಕವರ್‌ನಲ್ಲಿ ದುಡ್ಡಿಟ್ಟರೆ ದುಷ್ಟ ದೃಷ್ಟಿಯಿಂದ ದೂರವಾಗುತ್ತೀರಿ. ಬ್ಲ್ಯಾಕ್ ಆ್ಯಂಡ್ ವೈಟ್ ಆವೈಡ್ ಮಾಡಿದರೆ ಒಳ್ಳೇದು.

ಉಳಿತಾಯ ಖಾಲಿ ಆಗದಿರಲಿ:

ಮೊದಲು ಮಾಡಬೇಕಾಗಿರುವುದು ಕಸವನ್ನು ಡಸ್ಟ್‌ಬಿನ್‌ನಲ್ಲಿಯೇ ಉಳಿಸಿಕೊಳ್ಳಬೇಕು. ಭಾರತದಲ್ಲಿ ರಾತ್ರಿ ಕಸ ಗುಡಿಸಬಾರದು, ಎಸೆಯಬಾರದೆಂಬ ನಂಬಿಕೆ ಇದೆ. ಅದರಂತೆ ನೆಲ ಸ್ವಚ್ಛಗೊಳಿಸಿ, ಕಸವನ್ನು ಎಸೆಯಬಾರದು. ಮೊದಲ 15 ದಿನಗಳು ಕಸವನ್ನು ಹೊರ ತೆಗೆದುಕೊಂಡು ಹೋಗುವುದೂ ಸಂಪತ್ತು, ಅದೃಷ್ಟವನ್ನು ಹೊರಗೆ ಎಸೆದಂತೆ ಎಂಬ ನಂಬಿಕೆ ಇದೆ.

Related Articles

Related image1
AI Summit Row: ಚೀನಾ ರೋಬೋಟ್ ತೋರಿಸಿ 'ನಮ್ಮದೇ' ಅಂದ Galgotias University! ಕೇಂದ್ರದಿಂದ ಹಿಗ್ಗಾಮುಗ್ಗಾ ಕ್ಲಾಸ್
Related image2
Mole Astrology: ಮಹಿಳೆಯರ ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ರೆ, ಅವರು ಮುಟ್ಟಿದ್ದೆಲ್ಲಾ ಚಿನ್ನ!
36
ಕೂದಲ್ ಕಟ್ ಮಾಡಬೇಡಿ
Image Credit : social media

ಕೂದಲ್ ಕಟ್ ಮಾಡಬೇಡಿ

ಕೂದಲ್ ಕಟ್ ಮಾಡಿಸಿಕೊಳ್ಳಬೇಡಿ. ವರ್ಷದ ಆರಂಭದಲ್ಲಿ ಸಲೂನ್‌ನಿಂದ ದೂರವಿರಿ. ಕೂದಲು ಇರಲಿ, ಒಂದು ದಾರವನ್ನು ಕತ್ತರಿಸುವುದೂ ನಿಮ್ಮ ಅದೃಷ್ಟವನ್ನು ಕಿತ್ತು ಕೊಳ್ಳಬಹುದು. ಅದಕ್ಕೆ ವರ್ಷದ ಮೊದಲ ದಿನ ತಲೆ ಸ್ನಾನ ಮಾಡುವುದನ್ನೂ ಹಲವರು ಅವೈಡ್ ಮಾಡುತ್ತಾರೆ. ಹಾಗೆ ಮಾಡೋದ್ರಿಂದ ಅದೃಷ್ಟವೇ ತೊಳೆದು ಕೊಂಡು ಹೋಗಲಿದೆ ಎಂಬ ನಂಬಿಕೆ ಇದೆ.

46
ಇಡೀ ಮೀನನ್ನು ದಾನ ಮಾಡಿ
Image Credit : Getty

ಇಡೀ ಮೀನನ್ನು ದಾನ ಮಾಡಿ

ಹಬ್ಬದ ಸಂಭ್ರಮ ನೀವು ತೊಡುವ ಬಟ್ಟೆಯಲ್ಲಿ ಪ್ರತಿಫಲಿಸಲಿದೆ. ಅಲ್ಲದೇ ಪೂರ್ತಿ ಮೀನಿನ ಖಾದ್ಯ ಮಾಡಿ ಬಡಿಸುವುದು ಕೇವಲ ಪದ್ಧತಿಯಲ್ಲ. ಬದಲಾಗಿ ಸಂಪತ್ತು ಹಾಗೂ ಯಶಸ್ಸಿನ ಸಂಕೇತವೂ ಹೌದು. ತಲೆ ಹಾಗೂ ಬಾಲ ಹೊಸ ವರ್ಷ ಯಶಸ್ಸಿನೊಂದಿಗೆ ಆರಂಭವಾಗಿದೆ ಎನ್ನೋದರ ಸಂಕೇತ.

ಕಿತ್ತಳೆ ದಾನ ಮಾಡಿ

ಸಾಮಾಜಿಕವಾಗಿ ಕನೆಕ್ಟ್ ಆಗಲು ಕುದುರೆಯನ್ನು ಬಳಸಲಾಗುತ್ತದೆ. ಒಂದು ಕಡೆಯಿಂದ ಮತ್ತೊಂದೆಡೆಗೆ ತೆರಳಲು, ಅಗತ್ಯ ವಸ್ತುಗಳನ್ನು ಸಾಗಿಸಲು ಕುದುರೆಯನ್ನು ಬಳಸಲಾಗುತ್ತದೆ. ಹಿರಿಯರನ್ನು ಭೇಟಿ ಮಾಡಿ, ಕಿತ್ತಳೆ ಹಣ್ಣಿನ ಗಿಫ್ಟ್ ಮಾಡಿ. ಈ ಹಣ್ಣಿನ ಬಂಗಾರದಂಥ ಬಣ್ಣ ಹಾಗೂ ಶೇಪ್ ಸಂಪತ್ತು ಹಾಗೂ ಸಮೃದ್ಧಿಯನ್ನು ಸಂಕೇತಿಸುತ್ತದೆ.

56
ದುಃಖದ ಕಥೆಯೊಂದಿಗೆ ವರ್ಷವನ್ನು ಆರಂಭಿಸಬೇಡಿ
Image Credit : social media

ದುಃಖದ ಕಥೆಯೊಂದಿಗೆ ವರ್ಷವನ್ನು ಆರಂಭಿಸಬೇಡಿ

ಹೊಸ ಲೂನಾರ್ ವರ್ಷವನ್ನು ಆರಂಭಿಸೋರಿಗೆ ಈ ನಿಯಮವೇನೂ ಕಡ್ಡಾಯವಲ್ಲ. ಆದರೆ, ಪಾಸಿಟಿವ್ ವೈಬ್ಸ್ ಉಳಿಸಿಕೊಳ್ಳಲು ಮನಸ್ಸನ್ನು ಪಾಸಿಟಿವ್ ಆಗಿಯೇ ಇಡುವುದು ಅನಿವಾರ್ಯ. ಅದಕ್ಕೆ ಬೇಜಾರು ಅಥವಾ ದುಃಖ ತರುವಂಥ ಎಲ್ಲ ಚಟುವಟಿಕೆಗಳಿಂದಲೂ ದೂರ ಇರಿ. ಯಾರ ಜೊತೆಯೂ ವಾದ ಬೇಡ, ಕೆಟ್ಟ ಪದಗಳನ್ನು ಬಳಸಬೇಡಿ, ಅಳು ಬರುವಂಥ ಸಂದರ್ಭವನ್ನು ತಂದು ಕೊಡಬೇಡಿ. ನೀವು ವರ್ಷದ ಮೊದಲ ದಿನಗಳಲ್ಲಿ ಅನುಭವಿಸುವ ಮನಸ್ಥಿತಿ ವರ್ಷ ಪೂರ್ತಿ ಇರಲಿದೆ ಎಂಬ ನಂಬಿಕೆ ಇದೆ. Positive Energyಯೊಂದಿಗೆ ವರ್ಷವನ್ನು ಆರಂಭಿಸಿದರೆ ವರ್ಷ ಪೂರ್ತಿ ಅದೇ ಭಾವ ತುಂಬಲಿದೆ.

66
ಪಟಾಕಿಯಿಂದ ಬೆಳಕು ಹೊತ್ತಿಸಿ
Image Credit : our own

ಪಟಾಕಿಯಿಂದ ಬೆಳಕು ಹೊತ್ತಿಸಿ

ಕಳೆದ ವರ್ಷದ ನೆಗಟಿವಿಟಿಯನ್ನು ಹೋಗಲಾಡಿಸಲು ಪಟಾಕಿಯನ್ನು ಸಿಡಿಸಲಾಗುತ್ತದೆ. ಕೇವಲ ಶಬ್ಧ ಸುಖಕ್ಕಾಗಿ ಪಟಾಕಿ ಸಿಡಿಸುವುದಲ್ಲ. ಕುದುರೆ ಶಕ್ತಿಯನ್ನು ಖುಷಿ ಪಡಿಸಲು ಮನೆಯನ್ನು ಸುಂದರವಾಗಿ ಅಲಂಕರಿಸಿ. ನಗೆಯ ಸಂಭ್ರಮ ಇರಲಿ. ಕುದುರೆ ನಿಮ್ಮ ಜೀವನದಲ್ಲಿ ಯಶಸ್ಸು ತರಲಿದೆ. ಸುಖ, ಸಮೃದ್ಧಿ ತಾನಾಗೇ ಬರಲಿದೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಜ್ಯೋತಿಷ್ಯ
ಚೀನಾ
ಅದೃಷ್ಟ
ಜೀವನಶೈಲಿ

Latest Videos
Recommended Stories
Recommended image1
ನಾಳೆ ಫೆಬ್ರವರಿ 20 ರಂದು ಗಜಕೇಸರಿ ಮತ್ತು ಸರ್ವಾರ್ಥ ಸಿದ್ಧಿ ಯೋಗ, 4 ರಾಶಿಗೆ ಲಾಭ ಮತ್ತು ಅದೃಷ್ಟ
Recommended image2
ಆರ್ಥಿಕ ಯೋಗದಿಂದಾಗಿ ಈ 6 ರಾಶಿ ಜನರ ಸಂಬಳ ಹೆಚ್ಚಾಗುತ್ತಂತೆ, ಆದಾಯ ಡಬಲ್
Recommended image3
ಲವ್ ಬ್ರೇಕಪ್/ ಲವ್ ಮ್ಯಾರೇಜ್ ಬಳಿಕ ವಿಜಯ್‌ಗೆ ಸಿಗುತ್ತೆ ಸಕ್ಸಸ್.. ಹೀಗಂದ್ರು ಆ ಜ್ಯೋತಿಷಿ; ರಶ್ಮಿಕಾ-ವಿಜಯ್ ಬಗ್ಗೆ ಯಾಕಿಷ್ಟು ಕುಹಕ?!
Related Stories
Recommended image1
AI Summit Row: ಚೀನಾ ರೋಬೋಟ್ ತೋರಿಸಿ 'ನಮ್ಮದೇ' ಅಂದ Galgotias University! ಕೇಂದ್ರದಿಂದ ಹಿಗ್ಗಾಮುಗ್ಗಾ ಕ್ಲಾಸ್
Recommended image2
Mole Astrology: ಮಹಿಳೆಯರ ದೇಹದ ಈ ಭಾಗಗಳಲ್ಲಿ ಮಚ್ಚೆ ಇದ್ರೆ, ಅವರು ಮುಟ್ಟಿದ್ದೆಲ್ಲಾ ಚಿನ್ನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved