ಓಶೋನಿಂದ ದಲೈ ಲಾಮಾವರೆಗೆ, ಈ ಮಹಾನ್ ವ್ಯಕ್ತಿಗಳ ನಿಜವಾದ ಹೆಸರುಗಳೇನು? ತಿಳಿಯಿರಿ
ಜಗತ್ತಿನಾದ್ಯಂತ ಕೋಟ್ಯಂತರ ಅನುಯಾಯಿಗಳನ್ನು ಹೊಂದಿರುವ ಆಧ್ಯಾತ್ಮಿಕ ಗುರುಗಳು ಇಂದು ನಮಗೆ ಅವರ ಗೌರವಾನ್ವಿತ ಬಿರುದುಗಳಿಂದಲೇ ಪರಿಚಿತರು. ಈ ಬಿರುದುಗಳು ಅವರ ತ್ಯಾಗ, ಜ್ಞಾನ ಮತ್ತು ಆತ್ಮಸಾಕ್ಷಾತ್ಕಾರದ ಸಂಕೇತಗಳಾಗಿವೆ. ಮಹಾನ್ ಚೇತನಗಳ ಮೂಲ ಹೆಸರಿನ ಮಾಹಿತಿ ಇಲ್ಲಿದೆ

ನಾನಕ್: ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್
ಸಿಖ್ ಧರ್ಮದ ಮೊದಲ ಗುರುವಾಗಿರುವ ಇವರು 1469 ರಲ್ಲಿ ನಾನಕ್ ಆಗಿ ಜನಿಸಿದರು. ನಂತರದ ದಿನಗಳಲ್ಲಿ ಇವರ ಜ್ಞಾನ ಮತ್ತು ಮಾರ್ಗದರ್ಶನದಿಂದಾಗಿ ಜನ ಇವರನ್ನು 'ಗುರು' (ಮಾರ್ಗದರ್ಶಕ) ಎಂದು ಗೌರವಿಸಲಾರಂಭಿಸಿದರು.
ವಿಶ್ವಂಭರ ಮಿಶ್ರಾ: ಭಕ್ತಿ ಚಳವಳಿಯ ಹರಿಕಾರ ಚೈತನ್ಯ ಮಹಾಪ್ರಭು
ಭಕ್ತಿ ಮಾರ್ಗದ ಮೂಲಕ ಸಮಾಜ ಸುಧಾರಣೆ ಮಾಡಿದ ಮಹಾನ್ ಸಂತ ಚೈತನ್ಯ ಮಹಾಪ್ರಭುಗಳ ಮೂಲ ಹೆಸರು ವಿಶ್ವಂಭರ ಮಿಶ್ರಾ. ಶ್ರೀಕೃಷ್ಣನ ಪರಮ ಭಕ್ತರಾದ ಇವರು ಭಾರತದ ಭಕ್ತಿ ಪರಂಪರೆಗೆ ಹೊಸ ಆಯಾಮ ನೀಡಿದವರು.
ಲಕ್ಷ್ಮಣ್ ದಾಸ್ ಮಹಾರಾಜ್: ಪವಾಡ ಪುರುಷ ನೀಮ್ ಕರೋಲಿ ಬಾಬಾ
ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಅಸಂಖ್ಯಾತ ಭಕ್ತರನ್ನು ಹೊಂದಿರುವ ನೀಮ್ ಕರೋಲಿ ಬಾಬಾ ಅವರ ನಿಜವಾದ ಹೆಸರು ಲಕ್ಷ್ಮಣ್ ದಾಸ್ ಮಹಾರಾಜ್. ಉತ್ತರ ಪ್ರದೇಶದ ನೀಮ್ ಕರೋಲಿ ಗ್ರಾಮಕ್ಕೆ ಸಂಬಂಧಿಸಿದಂತೆ ಅವರಿಗೆ ಈ ಹೆಸರು ಬಂದಿದ್ದು, ಅವರನ್ನು ಹನುಮಂತನ ಅವತಾರವೆಂದೇ ಪೂಜಿಸಲಾಗುತ್ತದೆ.
ಗದಾಧರ ಚಟ್ಟೋಪಾಧ್ಯಾಯ: ಆಧ್ಯಾತ್ಮದ ಪವಿತ್ರ ಚೇತನ ಶ್ರೀ ರಾಮಕೃಷ್ಣ
19ನೇ ಶತಮಾನದ ಅಪ್ರತಿಮ ಸಂತ ಶ್ರೀ ರಾಮಕೃಷ್ಣ ಪರಮಹಂಸರ ಜನ್ಮನಾಮ ಗದಾಧರ ಚಟ್ಟೋಪಾಧ್ಯಾಯ. ರಾಮ ಮತ್ತು ಕೃಷ್ಣ ಇಬ್ಬರ ಹೆಸರನ್ನು ಒಳಗೊಂಡಿದ್ದ ಈ ಬಾಲಕ ಮುಂದೆ ವಿಶ್ವವಿಖ್ಯಾತ ದಾರ್ಶನಿಕನಾಗಿ ಹೊರಹೊಮ್ಮಿದರು.
ಲಾಮೋ ಥೊಂಡುಪ್: ವಿಶ್ವವಿಖ್ಯಾತ ದಲೈ ಲಾಮಾ
ಟಿಬೆಟಿಯನ್ ಬೌದ್ಧಧರ್ಮದ ಅತ್ಯುನ್ನತ ನಾಯಕ ಮತ್ತು ಶಾಂತಿಯ ಹರಿಕಾರ ದಲೈ ಲಾಮಾ ಅವರ ಬಾಲ್ಯದ ಹೆಸರು ಲಾಮೋ ಥೊಂಡುಪ್. 'ದಲೈ ಲಾಮಾ' ಎನ್ನುವುದು ಟಿಬೆಟಿಯನ್ ಭಾಷೆಯ ಬಿರುದಾಗಿದ್ದು, ಇದರ ಅರ್ಥ "ಬುದ್ಧಿವಂತಿಕೆಯ ಸಾಗರ" ಎಂದಾಗುತ್ತದೆ.
ಜನೀಶ್ ಚಂದ್ರ ಮೋಹನ್ ಜೈನ್: ಓಶೋ ಎಂಬ ತತ್ವಜ್ಞಾನಿ
ಜಗತ್ತಿನಾದ್ಯಂತ 'ಓಶೋ' ಎಂದೇ ಖ್ಯಾತರಾಗಿರುವ ಈ ಆಧ್ಯಾತ್ಮಿಕ ಗುರುವಿನ ಮೂಲ ಹೆಸರು ರಜನೀಶ್ ಚಂದ್ರ ಮೋಹನ್ ಜೈನ್. ಅವರ ಕ್ರಾಂತಿಕಾರಿ ವಿಚಾರಗಳು ಮತ್ತು ತಾತ್ವಿಕ ಒಳನೋಟಗಳು ಇಂದಿಗೂ ಆಧುನಿಕ ಜಗತ್ತನ್ನು ಪ್ರಭಾವಿಸುತ್ತಿವೆ. ಓಶೋ ಎಂಬುದು ಅವರ ಜ್ಞಾನಕ್ಕೆ ಸಂದ ಗೌರವಸೂಚಕ ಹೆಸರಾಗಿದೆ.
ಸಿದ್ಧಾರ್ಥ ಗೌತಮ: ಶಾಂತಿದೂತ ಗೌತಮ ಬುದ್ಧ
ಬೌದ್ಧಧರ್ಮದ ಸ್ಥಾಪಕರಾದ ಗೌತಮ ಬುದ್ಧರು 6ನೇ ಶತಮಾನದಲ್ಲಿ ರಾಜಕುಮಾರ ಸಿದ್ಧಾರ್ಥ ಗೌತಮನಾಗಿ ಜನಿಸಿದರು. ಸಿದ್ಧಾರ್ಥ ಎಂದರೆ "ಯಾರು ತನ್ನ ಗುರಿಯನ್ನು ಸಾಧಿಸಿದ್ದಾನೋ ಅವನು" ಎಂದರ್ಥ. ಜ್ಞಾನೋದಯದ ನಂತರ ಅವರು 'ಬುದ್ಧ' (ಜಾಗೃತಗೊಂಡವನು) ಎಂದು ಕರೆಯಲ್ಪಟ್ಟರು.
ನರೇಂದ್ರನಾಥ ದತ್ತ: ಆಧುನಿಕ ಭಾರತದ ರೂವಾರಿ ಸ್ವಾಮಿ ವಿವೇಕಾನಂದ
1863ರಲ್ಲಿ ಜನಿಸಿದ ನರೇಂದ್ರನಾಥ ದತ್ತ, ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ನಂತರ 'ಸ್ವಾಮಿ ವಿವೇಕಾನಂದ' ಎಂಬ ಹೆಸರನ್ನು ಪಡೆದರು. ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿದ ಶ್ರೇಯಸ್ಸು ಈ ನರೇಂದ್ರನದ್ದಾಗಿದೆ.

