MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • ಗಂಟೆ ತೋರಿಸೋ ಗಡಿಯಾರ ಜೀವನದ ದಿಕ್ಕು ಬದಲಿಸ್ಬಹುದು, ಗೋಡೆಗೆ ನೇತು ಹಾಕುವಾಗ ಎಚ್ಚರ

ಗಂಟೆ ತೋರಿಸೋ ಗಡಿಯಾರ ಜೀವನದ ದಿಕ್ಕು ಬದಲಿಸ್ಬಹುದು, ಗೋಡೆಗೆ ನೇತು ಹಾಕುವಾಗ ಎಚ್ಚರ

ಗಡಿಯಾರ ಬರೀ ಗಂಟೆ ತೋರಿಸೋದಿಲ್ಲ. ಗೋಡೆ ಮೇಲಿರುವ ಗಡಿಯಾರ ನಮ್ಮ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸರಿಯಾದ ದಿಕ್ಕಿಗೆ ಗಡಿಯಾರ ಹಾಕ್ದೆ ಹೋದ್ರೆ ಸಮಸ್ಯೆ ಬೆನ್ನು ಹತ್ತೋದು ನಿಶ್ಚಿತ. 

2 Min read
Author : Roopa Hegde
Published : Apr 09 2026, 07:24 PM IST
Share this Photo Gallery
  • FB
  • TW
  • Linkdin
  • Whatsapp
17
ದಿಕ್ಕು ತೋರುವ ಗಡಿಯಾರ
Image Credit : Asianet News

ದಿಕ್ಕು ತೋರುವ ಗಡಿಯಾರ

ಗಡಿಯಾರ ಈಗ ಫ್ಯಾಷನ್ ಆಗಿದೆ. ಜನರು ಸಮಯ ನೋಡೋಕೆ ಮಾತ್ರವಲ್ಲ ಮನೆ ಸೌಂದರ್ಯ ಹೆಚ್ಚಿಸೋಕೆ ಇದನ್ನು ಗೋಡೆಗೆ ನೇತು ಹಾಕ್ತಾರೆ. ಇಂಟಿರಿಯರ್ ಡಿಸೈನ್ ಚೆನ್ನಾಗಿ ಕಾಣ್ಬೇಕು ಎನ್ನುವ ಕಾರಣಕ್ಕೆ ಸುಂದರವಾಗಿ ಕಾಣುವ ಜಾಗವನ್ನು ಗಡಿಯಾರ ಅಲಂಕರಿಸುತ್ತೇ ವಿನಃ ಸೂಕ್ತ ಜಾಗವನ್ನಲ್ಲ. ಗಡಿಯಾರ ಗಂಟೆ ತೋರಿಸುವ ಜೊತೆಗೆ ಜೀವನದ ದಾರಿ ತೋರಿಸುತ್ತೆ. ಯಾವ ದಿಕ್ಕಿನಲ್ಲಿ ಗಡಿಯಾರ ಇಟ್ರೆ ಸೂಕ್ತ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರಬೇಕು.

27
ಫೆಂಗ್ ಶೂಯಿ ಹೇಳೋದೇನು?
Image Credit : Asianet News

ಫೆಂಗ್ ಶೂಯಿ ಹೇಳೋದೇನು?

ಫೆಂಗ್ ಶೂಯಿ ಪ್ರಕಾರ ಗೋಡೆ ಗಡಿಯಾರವನ್ನು ಸರಿಯಾದ ದಿಕ್ಕಿನಲ್ಲಿ ಇಡೋದ್ರಿಂದ ಸಕಾರಾತ್ಮಕ ಪರಿಣಾಮಗಳನ್ನು ನೋಡಬಹುದು. ಜೀವನದಲ್ಲಿ ಯಶಸ್ಸನ್ನು ಕಾಣ್ಬಹುದು. ಕುಟುಂಬದಲ್ಲಿ ಶಾಂತಿ ನೆಲೆಸಲು, ಆರೋಗ್ಯ ವೃದ್ಧಿಗೆ ಗಡಿಯಾರದ ದಿಕ್ಕು ಮಹತ್ವದ ಪಾತ್ರವಹಿಸುತ್ತದೆ.

Related Articles

Related image1
ಹೇಳಿದಂತೆ ಬೂಮ್ರಾಗೆ ಸೆಡ್ಡು ಹೊಡೆದ Vaibhav Suryavanshi; 15 ವರ್ಷದ ಪೋರನ ಜನ್ಮ ಜಾತಕದ ರಹಸ್ಯ ಬಯಲು!
Related image2
ಈ 5 ರಾಶಿ ಸೂರ್ಯ ಮತ್ತು ಅರುಣನ ಶುಭ ಯೋಗದಿಂದಾಗಿ ಯಶಸ್ಸು, ಆದಾಯ ಡಬಲ್
37
ಯಾವ ದಿಕ್ಕು ಸೂಕ್ತ
Image Credit : Asianet News

ಯಾವ ದಿಕ್ಕು ಸೂಕ್ತ

ಫೆಂಗ್ ಶೂಯಿ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಗಡಿಯಾರವನ್ನು ಇಡಬಹುದು. ಹಾಗೆ ಮಾಡುವುದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಫೆಂಗ್ ಶೂಯಿಯಲ್ಲಿ, ಈ ದಿಕ್ಕುಗಳು ಸಮೃದ್ಧಿ, ಬೆಳವಣಿಗೆ ಮತ್ತು ಸಕಾರಾತ್ಮಕ ಶಕ್ತಿ ಜೊತೆ ಸಂಬಂಧ ಹೊಂದಿವೆ. ಈ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಯಶಸ್ಸಿಗೆ ಕಾರಣವಾಗುತ್ತದೆ.

47
ಈ ದಿಕ್ಕಿನಲ್ಲಿ ಇಡಬೇಡಿ
Image Credit : Asianet News

ಈ ದಿಕ್ಕಿನಲ್ಲಿ ಇಡಬೇಡಿ

ಫೆಂಗ್ ಶೂಯಿ ಪ್ರಕಾರ, ಗಡಿಯಾರವನ್ನು ಎಂದಿಗೂ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬಾರದು. ಈ ದಿಕ್ಕಿನಲ್ಲಿ ಗಡಿಯಾರ ಇಟ್ರೆ ನಿಮ್ಮ ಕೆಲ್ಸ ವಿಳಂಬವಾಗುತ್ತದೆ. ಪದೇ ಪದೇ ನಿಮ್ಮ ಕೆಲ್ಸದಲ್ಲಿ ಅಡೆತಡೆ ಬರಲು ಇದು ಕಾರಣವಾಗುತ್ತದೆ. ಇದು ಮನೆಯ ವಾತಾವರಣವನ್ನು ಹದಗೆಡಿಸುತ್ತದೆ. ಮನೆ, ಮನಸ್ಸು ಎರಡೂ ಭಾರವಾಗಿರುತ್ತದೆ. ಈ ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಗಡಿಯಾರ ಇಡಬೇಡಿ. ಈಗಾಗಲೇ ಈ ದಿಕ್ಕಿನಲ್ಲಿ ಗಡಿಯಾರ ಇದ್ದಲ್ಲಿ ಅದನ್ನು ಇಂದೇ ಬದಲಿಸಿ. ಗಡಿಯಾರವನ್ನು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ಇಡುವುದು ಉತ್ತಮ.

57
ಯಾವ ಗಡಿಯಾರ ಎಲ್ಲಿಡಬೇಕು?
Image Credit : Asianet News

ಯಾವ ಗಡಿಯಾರ ಎಲ್ಲಿಡಬೇಕು?

ಫೆಂಗ್ ಶೂಯಿ ಪ್ರಕಾರ, ನೀವು ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಅಥವಾ ಬಿಳಿ ಗೋಲಾಕಾರದ ಗಡಿಯಾರವನ್ನು ಇಡಬೇಕು. ಪೂರ್ವ ದಿಕ್ಕಿನಲ್ಲಿ ರೌಂಡ್ ಗಡಿಯಾರ ಇಡುವುದರಿಂದ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚಿರುತ್ತದೆ. ನೀವು ಮನೆಯಲ್ಲಿ ಅಷ್ಟಭುಜಾಕೃತಿಯ, ಅಂಡಾಕಾರದ ಅಥವಾ ಲೋಲಕದ ಗಡಿಯಾರವನ್ನು ಸಹ ಇಡಬಹುದು. ಇದು ಶುಭ ಫಲಿತಾಂಶಗಳನ್ನು ನೀಡುತ್ತದೆ.

67
ಬಾಗಿಲಿಗೆ ಬೇಡ
Image Credit : Asianet News

ಬಾಗಿಲಿಗೆ ಬೇಡ

ಗಡಿಯಾರವನ್ನು ಮುಖ್ಯ ಬಾಗಿಲಿನ ಮೇಲೆ ಅಥವಾ ಯಾವುದೇ ರೂಮಿನ ಬಾಗಿಲಿಗೆ ಎಂದಿಗೂ ನೇತುಹಾಕಬಾರದು. ಗಡಿಯಾರವನ್ನು ನೇರವಾಗಿ ಹಾಸಿಗೆಯ ಮುಂದೆ ಅಥವಾ ಮೇಲೆ ಇಡುವುದನ್ನು ತಪ್ಪಿಸಿ. ಹಾಗೆ ಮಾಡುವುದರಿಂದ ಕುಟುಂಬ ಸದಸ್ಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

77
ಈ ತಪ್ಪು ಮಾಡ್ಬೇಡಿ
Image Credit : Asianet News

ಈ ತಪ್ಪು ಮಾಡ್ಬೇಡಿ

ಅನೇಕ ಬಾರಿ ಗಡಿಯಾರ ನಿಂತ್ರೂ ಅದು ಗೋಡೆ ಮೇಲೆ ನೇತಾಡುತ್ತಿರುತ್ತದೆ. ನಿಂತ ಗಡಿಯಾರವನ್ನು ಎಂದಿಗೂ ಮನೆಯಲ್ಲಿ ಇಡಬೇಡಿ. ಇದು ಪ್ರಗತಿಯನ್ನು ಕುಂಠಿತಗೊಳಿಸುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಹಾಳಾದ, ನಿಂತ ಗಡಿಯಾರವಿದ್ರೆ ಮೊದಲು ಅದನ್ನು ದುರಸ್ತಿಗೊಳಿಸಿ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ವಾಸ್ತು ಸಲಹೆಗಳು
ಜ್ಯೋತಿಷ್ಯ

Latest Videos
Recommended Stories
Recommended image1
ಹೇಳಿದಂತೆ ಬೂಮ್ರಾಗೆ ಸೆಡ್ಡು ಹೊಡೆದ Vaibhav Suryavanshi; 15 ವರ್ಷದ ಪೋರನ ಜನ್ಮ ಜಾತಕದ ರಹಸ್ಯ ಬಯಲು!
Recommended image2
ಈ 5 ರಾಶಿ ಸೂರ್ಯ ಮತ್ತು ಅರುಣನ ಶುಭ ಯೋಗದಿಂದಾಗಿ ಯಶಸ್ಸು, ಆದಾಯ ಡಬಲ್
Recommended image3
ಸೂರ್ಯ-ಚಂದ್ರರ ಭೀಕರ ಯೋಗ, 3 ರಾಶಿಗೆ 30 ದಿನ ಅಪಾಯಕಾರಿ, ಕಾಲಕಾಲಕ್ಕೆ ಬಿಕ್ಕಟ್ಟಿನ ಸಾಧ್ಯತೆ
Related Stories
Recommended image1
ಹೇಳಿದಂತೆ ಬೂಮ್ರಾಗೆ ಸೆಡ್ಡು ಹೊಡೆದ Vaibhav Suryavanshi; 15 ವರ್ಷದ ಪೋರನ ಜನ್ಮ ಜಾತಕದ ರಹಸ್ಯ ಬಯಲು!
Recommended image2
ಈ 5 ರಾಶಿ ಸೂರ್ಯ ಮತ್ತು ಅರುಣನ ಶುಭ ಯೋಗದಿಂದಾಗಿ ಯಶಸ್ಸು, ಆದಾಯ ಡಬಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved