ಬೆಕ್ಕು ಅಪಶಕುನ ಅಲ್ಲ, ಅದು ಮನೆಗೆ ಲಕ್; ಎಷ್ಟೆಲ್ಲಾ ಸಮಸ್ಯೆ ದೂರವಾಗುತ್ತೆ ಗೊತ್ತಾ..?
ಬೆಕ್ಕು ಬಹಳ ಜನರಿಗೆ ಮುದ್ದಿನ ಪ್ರಾಣಿ, ಇದಕ್ಕೆ ಪ್ರತಿಮನೆಯಲ್ಲೂ ಪ್ರೀತಿಯ ಸ್ಥಾನವಿದೆ. ಮನೆಯ ಅಕ್ಕರೆ ಸದಸ್ಯರಾಗಿ ಬೆಕ್ಕುಗಳು ಮನೆ ತುಂಬಾ ಓಡಾಡಿ ಮನೆಯವರಿಗೂ ಖುಷಿ ನೀಡುತ್ತವೆ, ಅವುಗಳೂ ಖುಷಿಯಾಗಿರುತ್ತವೆ. ಇಂತಹ ಬೆಕ್ಕುಗಳು ತಮ್ಮ ಮನೆಯವರಿಗೆ ತೋರಿಸುವ ಪ್ರೀತಿ ನಿಜಕ್ಕೂ ಅನನ್ಯ. ಈ ಮುಗ್ಧ ಪ್ರೀತಿಗೆ ಮನಸೋಲದವರಿಲ್ಲ..
ಬೆಕ್ಕನ್ನು ಬಹಳ ಜನರು ಅಪಶಕುನ ಎಂದು ಪರಿಗಣಿಸುತ್ತಾರೆ. ಆದರೆ ಬೆಕ್ಕಗಳು ನಮಗೆ ಗೊತ್ತಿಲ್ಲದೇ ಅನೇಕ ರೀತಿಯಲ್ಲಿ ನಮಗೆ ನೆರವಾಗಿವೆ. ಇವು ನಮ್ಮಿಂದ ನಕರಾತ್ಮಕ ಶಕ್ತಿಗಳನ್ನು ದೂರ ಮಾಡುತ್ತವೆ. ಅದು ಹೇಗೆ ಅಂತೀರಾ?
ಜಪಾನ್ ಹಾಗೂ ಚೀನಾ ಸೇರಿದಂತೆ ವಿವಿಧ ದೇಶಗಳಲ್ಲಿ ಬೆಕ್ಕನ್ನು ದೇವರ ಸಂಕೇತ ಹಾಗೂ ಇದು ಸಂಪತ್ತು ತರುತ್ತದೆ ಎಂದು ನಂಬುತ್ತಾರೆ. ಮನೆಯಲ್ಲಿ ಬೆಕ್ಕು ಇದ್ದರೆ ಎಲ್ಲಾ ನಕರಾತ್ಮಕ ತೊಂದರೆಗಳು ದೂರವಾಗಲಿವೆ. ಹಾಗೂ ಇದು ಮಾಲೀಕರಿಗೆ ಮನಸ್ಸಿಗೆ ನೆಮ್ಮದಿ ನೀಡಲಿದೆ.
ಬೆಕ್ಕು ಸಾಕುವುದರಿಂದ ಮನೆಗೆ ಸಂಪತ್ತು ಹಾಗೂ ಹಣ ಬರುತ್ತದೆ ಎಂಬುದು ಕೆಲವರ ನಂಬಿಕೆ. ಇದು ಮನೆಯಲ್ಲಿ ಇದ್ದರೆ ಮಹಿಳೆಯರು ಉತ್ತಮ ಆರೋಗ್ಯದಿಂದ ಇರಲಿದ್ದಾರೆ ಎನ್ನಲಾಗಿದೆ.
ಮನೆಯಲ್ಲಿ ಬೆಕ್ಕನ್ನು ಇಟ್ಟುಕೊಳ್ಳುವುದು ಅಥವಾ ಸಾಕುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅದರಲ್ಲೂ ಬಿಳಿ ಬಣ್ಣದ ಬೆಕ್ಕನ್ನು ಮನೆಯಲ್ಲಿ ಸಾಕಿದರೆ ಆರ್ಥಿಕ ಪರಿಸ್ಥಿತಿ ಸಾಕಷ್ಟು ಸುಧಾರಿಸಬಹುದು. ನಮ್ಮ ಭಾರತದಲ್ಲಿಯೂ ಇದನ್ನು ನಂಬುತ್ತಾರೆ.
ಬೆಕ್ಕನ್ನು ಸಾಕುವುದು ಹಾಗೂ ಅವುಗಳಿಗೆ ಆಹಾರ ಹಾಕುವುದರಿಂದ ಅನೇಕ ವಾಸ್ತು ದೋಷಗಳು ನಿವಾರಣೆ ಆಗುತ್ತವೆ. ಬೆಕ್ಕು ಎಡದಿಂದ ಬಲಕ್ಕೆ ನಮ್ಮ ಮಾರ್ಗವನ್ನು ಹಾದು ಹೋದರೆ ಅದು ಅತ್ಯಂತ ಶುಭ ಸಂಕೇತವಾಗಿದೆ.
ಬೆಕ್ಕು ತನ್ನ ಮಕ್ಕಳೊಂದಿಗೆ ದಾರಿಯಲ್ಲಿ ಹೋಗುತ್ತಿರುವುದನ್ನು ಕಂಡರೆ, ಅದನ್ನು ಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶೀಘ್ರದಲ್ಲೇ ನಿಮ್ಮ ಸ್ಥಳಕ್ಕೆ ಸಂಬಂಧಿಯೊಬ್ಬರು ಬರಬಹುದು ಮತ್ತು ಅವರಿಂದ ಕೆಲವು ಒಳ್ಳೆಯ ಮಾಹಿತಿಯನ್ನು ಪಡೆಯಬಹುದು ಎಂದು ನಂಬಲಾಗಿದೆ. ಆದ್ದರಿಂದ ಬೆಕ್ಕು ಅಪಶಕುನ ಅಲ್ಲ, ಅವುಗಳನ್ನು ಸಾಕಿ ಹಾಗೂ ಪ್ರೀತಿಸಿ.