MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Zodiac Signs: ಒಂದು ರೂಪಾಯಿಯನ್ನು ಕೋಟಿ ಮಾಡುವ ತಾಕತ್ತು ಈ ರಾಶಿಯವರಿಗಿದೆ! ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ

Zodiac Signs: ಒಂದು ರೂಪಾಯಿಯನ್ನು ಕೋಟಿ ಮಾಡುವ ತಾಕತ್ತು ಈ ರಾಶಿಯವರಿಗಿದೆ! ನಿಮ್ಮ ರಾಶಿ ಇದೆಯಾ ಚೆಕ್ ಮಾಡಿ

ದುಡ್ಡು ಎಲ್ಲರೂ ಸಂಪಾದನೆ ಮಾಡ್ತಾರೆ. ಆದ್ರೆ, ಕೆಲವರು ಮಾತ್ರ ಶ್ರೀಮಂತರಾಗ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು ಒಂದು ರೂಪಾಯಿಯನ್ನು ಕೋಟಿ ರೂಪಾಯಿಯಾಗಿ ಬದಲಾಯಿಸುವ ತಾಕತ್ತು ಹೊಂದಿರುತ್ತಾರೆ. ದುಡಿದ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋದು ಇವರಿಗೆ ಪಕ್ಕಾ ಗೊತ್ತಿರುತ್ತೆ.

2 Min read
Author : Naveen Kodase
Published : Sep 26 2026, 01:25 PM IST
Share this Photo Gallery
  • FB
  • TW
  • Linkdin
  • Whatsapp
16
ಹಣದ ವಿಚಾರದಲ್ಲಿ ತುಂಬಾ ಜಾಣರು
Image Credit : AI Generated

ಹಣದ ವಿಚಾರದಲ್ಲಿ ತುಂಬಾ ಜಾಣರು

ಜ್ಯೋತಿಷ್ಯ ಪ್ರಕಾರ ಕೆಲವು ರಾಶಿಯವರು ದುಡಿದ ಹಣವನ್ನು ವ್ಯರ್ಥ ಮಾಡದೇ, ಅದನ್ನು ಡಬಲ್ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವರಿಗೆ ಐಷಾರಾಮಿ ಜೀವನವೆಂದ್ರೆ ಇಷ್ಟ, ಹಾಗಂತ ಖರ್ಚಿನ ವಿಚಾರದಲ್ಲೂ ತುಂಬಾ ಬುದ್ದಿವಂತರಂತೆ. ಅಷ್ಟಕ್ಕೂ ಯಾವ ರಾಶಿಯವರು ಈ ವಿಚಾರದಲ್ಲಿ ಬುದ್ದಿವಂತರು. ಈ ಲಿಸ್ಟ್‌ನಲ್ಲಿ ನಿಮ್ಮ ರಾಶಿ ಇದೆಯೇ ಎನ್ನುವುದನ್ನು ಚೆಕ್ ಮಾಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ವೃಷಭ ರಾಶಿ..
Image Credit : others

ವೃಷಭ ರಾಶಿ..

ವೃಷಭ ರಾಶಿಯವರ ಮೇಲೆ ಶುಕ್ರನ ಪ್ರಭಾವ ಇರುತ್ತದೆ. ಇವರು ಐಷಾರಾಮಿ ಜೀವನವನ್ನು ತುಂಬಾ ಇಷ್ಟಪಡ್ತಾರೆ. ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಇವರು ಕಷ್ಟಪಟ್ಟು ದುಡಿಯುತ್ತಾರೆ. ಅಷ್ಟೇ ಅಲ್ಲ, ದುಡಿದ ಹಣವನ್ನು ಎಲ್ಲಿ ಉಳಿತಾಯ ಮಾಡಬೇಕು ಅನ್ನೋದು ಇವರಿಗೆ ಚೆನ್ನಾಗಿ ಗೊತ್ತಿದೆ. ಐಷಾರಾಮಿ ಜೀವನ ಇಷ್ಟವಿದ್ದರೂ, ಖರ್ಚಿನ ವಿಚಾರದಲ್ಲಿ ಇವರು ತುಂಬಾ ಹುಷಾರಾಗಿರುತ್ತಾರೆ. ಅಗತ್ಯವಿದ್ದರೆ ಮಾತ್ರ ವಸ್ತುಗಳನ್ನು ಖರೀದಿಸುತ್ತಾರೆ. ಖರ್ಚು ಅಥವಾ ಹೂಡಿಕೆ ಮಾಡುವ ಮುನ್ನ ಇವರು ನೂರು ಬಾರಿ ಯೋಚನೆ ಮಾಡ್ತಾರೆ.

Related Articles

Related image1
ಜ್ಯೋತಿಷ್ಯ ಪ್ರಕಾರ ಈ 5 ರಾಶಿಯ ಹುಡುಗರು ಹೆಂಡತಿಯನ್ನು ಅತಿಯಾಗಿ ಅನುಮಾನಿಸ್ತಾರಂತೆ..! ನಿಮ್ಮ ಹುಡುಗನ ರಾಶಿ ಯಾವುದು?
Related image2
Numerology ಪ್ರಕಾರ ಈ 4 Birth Dates ತುಂಬಾ ಸ್ಪೆಷಲ್‌; ಹಣದ ವಿಚಾರದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ..!
36
ವೃಶ್ಚಿಕ ರಾಶಿ
Image Credit : Getty

ವೃಶ್ಚಿಕ ರಾಶಿ

ಹಣವನ್ನು ಹೇಗೆ ಡಬಲ್ ಮಾಡಬೇಕು ಅನ್ನೋದು ಈ ರಾಶಿಯವರಿಗೆ ಪಕ್ಕಾ ಗೊತ್ತಿದೆ. ಎಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಬರುತ್ತೆ ಅಂತ ಇವರು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಇವರು ಎಲ್ಲಿಯೇ ಬಂಡವಾಳ ಹಾಕಿದರೂ ನಷ್ಟ ಮಾಡಿಕೊಳ್ಳುವುದಿಲ್ಲ. ಲಾಭ ಬರುವವರೆಗೂ ಇವರು ಸುಮ್ಮನೆ ಕೂರುವುದಿಲ್ಲ. ನಷ್ಟವನ್ನು ಎದುರಿಸುವ ಧೈರ್ಯ ಇವರಿಗಿದೆ. ಕಷ್ಟಕಾಲದಲ್ಲೂ ಇವರು ಪುಟಿದೆದ್ದು ಸಂಪತ್ತು ಗಳಿಸುತ್ತಾರೆ.

46
ಮಕರ ರಾಶಿ
Image Credit : Asianet News

ಮಕರ ರಾಶಿ

ಶನಿಯ ಪ್ರಭಾವವಿರುವ ಈ ರಾಶಿಯವರು ಶಿಸ್ತು ಮತ್ತು ಕಠಿಣ ಪರಿಶ್ರಮಕ್ಕೆ ಹೆಸರುವಾಸಿ. ಹಣ ಉಳಿತಾಯ ಮಾಡುವವರ ಪಟ್ಟಿಯಲ್ಲಿ ಇವರು ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತಾರೆ. ಇವರು ಪ್ರತಿಯೊಂದು ರೂಪಾಯಿಯನ್ನೂ ಲೆಕ್ಕ ಹಾಕ್ತಾರೆ. ಯಾವುದೇ ಅನಗತ್ಯ ಖರ್ಚುಗಳಿಲ್ಲದೆ ಎಚ್ಚರಿಕೆಯಿಂದ ಜೀವನ ನಡೆಸುವುದು ಇವರ ವಿಶೇಷತೆ. ಇವರು ಬರೀ ಹಣ ಕೂಡಿಡುವುದಿಲ್ಲ, ಅದನ್ನು ಎಲ್ಲಿ ಹೂಡಿಕೆ ಮಾಡಬೇಕು ಅನ್ನೋದನ್ನೂ ಚೆನ್ನಾಗಿ ಅರಿತಿರುತ್ತಾರೆ.

56
ಕನ್ಯಾ ರಾಶಿ...
Image Credit : Asianet News

ಕನ್ಯಾ ರಾಶಿ...

ಬುಧ ಗ್ರಹದ ಒಡೆತನ ಹೊಂದಿರುವ ಕನ್ಯಾ ರಾಶಿಯವರು ಬಜೆಟ್ ಮಾಡುವುದರಲ್ಲಿ ಮತ್ತು ಅದನ್ನು ನಿಭಾಯಿಸುವುದರಲ್ಲಿ ಎತ್ತಿದ ಕೈ. ಇವರು ಪ್ರತಿದಿನ ತಮ್ಮ ಖರ್ಚುಗಳ ಮೇಲೆ ಕಣ್ಣಿಟ್ಟಿರುತ್ತಾರೆ. ಅನಗತ್ಯ ಖರ್ಚುಗಳಿಗೆ ಬ್ರೇಕ್ ಹಾಕ್ತಾರೆ. ಮಾರುಕಟ್ಟೆಯಲ್ಲಿ ಬೆಲೆಗಳು ಬದಲಾದರೂ ಇವರು ತಮ್ಮ ಉಳಿತಾಯದ ಪ್ಲಾನ್ ಬದಲಾಯಿಸುವುದಿಲ್ಲ. ಲಾಭ ಗಳಿಸುವ ಬುದ್ಧಿವಂತಿಕೆಯಿಂದ ಇವರು ಯಾವಾಗಲೂ ಮುಂದೆ ಇರುತ್ತಾರೆ.

66
ಧನುಸ್ಸು ರಾಶಿ..
Image Credit : our own

ಧನುಸ್ಸು ರಾಶಿ..

ಸಂಪತ್ತಿನ ಅಧಿಪತಿಯಾದ ಗುರು ಗ್ರಹವೇ ಈ ರಾಶಿಗೂ ಅಧಿಪತಿಯಾಗಿರುವುದು ವಿಶೇಷ. ಇವರು ತಮ್ಮ ಕಷ್ಟದ ದುಡಿಮೆಗೆ ತುಂಬಾ ಗೌರವ ಕೊಡ್ತಾರೆ. ಹಣವನ್ನು ಎಂದಿಗೂ ಪೋಲು ಮಾಡುವುದಿಲ್ಲ. ಇವರು ಯಾವಾಗಲೂ ಜಾಣತನದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಪ್ರಯತ್ನಗಳಲ್ಲಿ ಸೋಲನ್ನು ಇವರು ಒಪ್ಪಿಕೊಳ್ಳುವುದಿಲ್ಲ. ನಿರಂತರವಾಗಿ ಶ್ರಮಿಸಿ ಇವರು ಯಶಸ್ಸು ಸಾಧಿಸುತ್ತಾರೆ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ರಾಶಿ
ಜ್ಯೋತಿಷ್ಯ
ಜೀವನಶೈಲಿ
ಹಣ (Hana)
 

Latest Videos
Recommended Stories
Recommended image1
ಆರೋಗ್ಯದ ಜೊತೆ ನಿಮ್ಮ ಅದೃಷ್ಟವೂ ಬದಲಾಗ್ಬೇಕಾ? ಮೂಲಾಂಕದ ಪ್ರಕಾರ ವಾಟರ್‌ ಬಾಟಲ್‌ ಆಯ್ಕೆ ಮಾಡ್ಕೊಳ್ಳಿ
Recommended image2
ಪಿತೃ ಪಕ್ಷದಲ್ಲಿ ಹುಟ್ಟುವ ಮಗುವಿಗೆ ಹೀಗಿರಲಿ ಹೆಸರು: ಪೂರ್ವಜರ ನೆನಪಿನ ಜೊತೆ ಅದೃಷ್ಟವೂ ತೆರೆಯುವುದು
Recommended image3
Manifestation: ನಾಳೆ ಭಾದ್ರಪದ ಹುಣ್ಣಿಮೆ- ರಾತ್ರಿ 10.19ಕ್ಕೆ ಹೀಗೆ ಮಾಡಿದ್ರೆ ನಿಮ್ಮ ಜೀವನವೇ ಬದಲಾಗ್ಬೋದು
Related Stories
Recommended image1
ಜ್ಯೋತಿಷ್ಯ ಪ್ರಕಾರ ಈ 5 ರಾಶಿಯ ಹುಡುಗರು ಹೆಂಡತಿಯನ್ನು ಅತಿಯಾಗಿ ಅನುಮಾನಿಸ್ತಾರಂತೆ..! ನಿಮ್ಮ ಹುಡುಗನ ರಾಶಿ ಯಾವುದು?
Recommended image2
Numerology ಪ್ರಕಾರ ಈ 4 Birth Dates ತುಂಬಾ ಸ್ಪೆಷಲ್‌; ಹಣದ ವಿಚಾರದಲ್ಲಿ ನೀವು ಮುಟ್ಟಿದ್ದೆಲ್ಲಾ ಚಿನ್ನ..!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved