ನಂ.1 ಸ್ಮಾರ್ಟ್‌ವಾಚ್ ಪಟ್ಟ ಕಳೆದುಕೊಂಡ ಆ್ಯಪಲ್, ಸ್ಥಾನ ಆಕ್ರಮಿಸಿದ ಬ್ರ್ಯಾಂಡ್ ಯಾವುದು?
ಸ್ಮಾರ್ಟ್‌ವಾಚ್‌ನಲ್ಲಿ ಆ್ಯಪಲ್ ಕಳೆದ ಹಲವು ವರ್ಷಗಳಿಂದ ನಂಬರ್ 1 ಆಗಿತ್ತು. ಆದರೆ ಇದೀಗ ಈ ಪಟ್ಟ ಕಳೆದುಕೊಂಡಿದೆ. ಈ ಸ್ಥಾನವನ್ನು ಮತ್ತೊಂದು ಬ್ರ್ಯಾಂಡ್ ಆಕ್ರಮಿಸಿಕೊಂಡಿದೆ.ಈ ಬ್ರ್ಯಾಂಡ್ ಯಾವುದು?
ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ಸ್‌ನಲ್ಲಿ ಆ್ಯಪಲ್ ದೈತ್ಯ ಬ್ರ್ಯಾಂಡ್. ಐಫೋನ್, ಮ್ಯಾಕ್, ಲ್ಯಾಪ್‌ಟಾಪ್, ಸ್ಮಾರ್ಟ್‌ವಾಚ್ ಯಾವುದೇ ಇರಲಿ ಆ್ಯಪಲ್ ಬ್ರ್ಯಾಂಡ್ ಜನ ಬಯಸುತ್ತಾರೆ. ಹೀಗಾಗಿ ಹಲವು ಉತ್ಪನ್ನಗಳಲ್ಲಿ ಆ್ಯಪಲ್ ನಂಬರ್ 1 ಬ್ರ್ಯಾಂಡ್. ಕಳೆದ ಹಲವು ವರ್ಷಗಳಿಂದ ಆ್ಯಪಲ್ ಸ್ಮಾರ್ಟ್‌ವಾಚ್ ಮೊದಲ ಸ್ಥಾನದಲ್ಲಿದೆ. ಆ್ಯಪಲ್ ಸ್ಮಾರ್ಟ್‌ವಾಚ್ ವಿಶ್ವದ ನಂಬರ್ ಬ್ರ್ಯಾಂಡ್ ಎಂದೇ ಗುರುತಿಸಿಕೊಂಡಿತ್ತು. ಆದರೆ 2014ರಲ್ಲಿ ಆ್ಯಪಲ್ ಸ್ಮಾರ್ಟ್‌ವಾಚ್ ನಂ.1 ಬ್ರ್ಯಾಂಡ್ ಪಟ್ಟ ಕಳೆದುಕೊಂಡಿದೆ. ಐಡಿಸಿ ವರದಿ ಬಹಿರಂಗವಾಗಿದ್ದು, ಹೊಸ ಬ್ರ್ಯಾಂಡ್ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ.
2024ರ ಆರಂಭಿಕ 9 ತಿಂಗಳಲ್ಲಿ ಆ್ಯಪಲ್ ಸ್ಮಾರ್ಟ್‌ವಾಚ್ ಹಾಗೂ ಫಿಟ್ನೆಸ್ ಬ್ರ್ಯಾಂಡ್ ನಂ.1 ಸ್ತಾನ ಕಳೆದುಕೊಂಡಿದೆ. ಐಡಿಸಿ ರಿಪೋರ್ಟ್ ಪ್ರಕಾರ ನಂ.1 ಸ್ಮಾರ್ಟ್‌ವಾಚ್ ಬ್ರ್ಯಾಂಡ್ ಪಟ್ಟ ಇದೀಗ ಚೀನಾದ ಹುವೈ ಪಾಲಾಗಿದೆ. ಕೆಲವೇ ತಿಂಗಳಲ್ಲಿ ಹುವೈ ಇದೀಗ ಜಗತ್ತಿನ ನಂಬರ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಜನ ಇದೀಗ ಮೊದಲ ಆಯ್ಕೆಯಾಗಿ ಹುವೈ ಬಯಸುತ್ತಿದ್ದಾರೆ ಎಂದು ಐಡಿಸಿ ವರದಿ ಮಾಡಿದೆ.
ಬೆಂಗಳೂರು ಆಟೋ ಚಾಲಕನ ಸ್ಮಾರ್ಟ್‌ವಾಚ್‌ಲ್ಲಿ UPI QR ಕೋಡ್, ಕಾಂಗ್ರೆಸ್‌ಗೆ ಬಿಜೆಪಿ ಟಾಂಗ್!
ಆ್ಯಪಲ್ ಸ್ಮಾರ್ಟ್‌ವಾಚ್ ನೀಡುವ ಎಲ್ಲಾ ಸುರಕ್ಷತಾ ಫೀಚರ್ಸ್, ಆರೋಗ್ಯ ಟ್ರ್ಯಾಕ್ ಫೀಚರ್ ಸೇರಿದಂತೆ ಅತ್ಯಾಧುನಿಕ ಫೀಚರ್ಸ್ ನೀಡುತ್ತಿದೆ. ಇವೆಲ್ಲವೂ ಕಡಿಮೆ ಬೆಲೆ ಹಾಗೂ ವಾರೆಂಟಿಯೊಂದಿಗೆ ಹುವೈ ನೀಡುತ್ತಿದೆ. ಹುವೈ ಬ್ರ್ಯಾಂಡ್ ಈಗಾಗಲೇ ಮಧ್ಯ ಪ್ರಾಚ್ಯ, ಏಷ್ಯಾ ಪೆಸಿಫಿಕ್, ಲ್ಯಾಟಿನ್ ಅಮೆರಿಕಾ ಸೇರಿದಂತೆ ಹಲವು ಭಾಗದಲ್ಲಿ ಭಾರಿ ಬೇಡಿಕೆ ಪಡೆದುಕೊಂಡಿದೆ. ಆದರೆ ಭಾರತ ಹಾಗೂ ಅಮೆರಿಕದಲ್ಲಿ ಹುವೈ ಬ್ರ್ಯಾಂಡ್ ಬೇಡಿಕೆ ಕಡಿಮೆ.
ಹುವೈ 2024ರಲ್ಲಿ ಶೇಕಡಾ 20 ರಷ್ಟು ಮಾರಾಟದಲ್ಲಿ ಪ್ರಗತಿ ಕಂಡಿದೆ. ಅತ್ಯಾಧುನಿಕ ಫೀಚರ್ಸ್ ನೀಡುತ್ತಿದೆ. ಜೊತೆಗೆ ಆ್ಯಪಲ್ ಬ್ರ್ಯಾಂಡ್‌ಗೆ ಹೋಲಿಸಿದರೆ ಬೆಲೆ ಕಡಿಮೆ. ಇಷ್ಟೇ ಅಲ್ಲ ವಾರೆಂಟಿಯೂ ಲಭ್ಯವಿದೆ. ಹೀಗಾಗಿ ಬಳಕೆದಾರರು ಇದೀಗ ಹುವೈನತ್ತ ವಾಲುತ್ತಿದ್ದಾರೆ. ಇತ್ತೀಚೆಗೆ ಆ್ಯಪಲ್ GT5 ಹಾಗೂ GT5 ಪ್ರೋ ಸ್ಮಾರ್ಟ್‌ವಾಚ್ ಪರಿಚಯಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಆದರೆ ವಿನ್ಯಾಸದಲ್ಲಿ ಹಚ್ಚಿನ ಬದಲಾವಣೆ ಇಲ್ಲ. ಆದರೆ ಹುವೈ ತನ್ನ ವಿನ್ಯಾಸದಲ್ಲೂ ಭಾರಿ ಬದಲಾವಣೆ, ಹೊಸತನ ತಂದಿದೆ. ಇದು ಜನರನ್ನು ಆಕರ್ಷಿಸುತ್ತಿದೆ. ಹುವೈ ಹಲವು ದೇಶಗಳಿಗೆ ವಿಸ್ತರಣೆಗೊಳ್ಳುತ್ತಿದೆ. ನಿಧಾನವಾಗಿ ಹುವೈ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ. ಈ ಮೂಲಕ ಆ್ಯಪಲ್‌ಗೆ ಎಲ್ಲಾ ದಿಕ್ಕಿನಿಂದಲೂ ಪೈಪೋಟಿ ನೀಡಲು ಸಜ್ಜಾಗಿದೆ.
ಸ್ಮಾರ್ಟ್‌ವಾಚ್ ಮಾರುಕಟ್ಟೆಗೆ ಕ್ರಾಸ್‌ಬೀಟ್ಸ್ ಇಗ್ನೈಟ್ ಹಸ್ಲ್ ಎಂಟ್ರಿ, ಬೆಲೆ ಕೇವಲ 1,799 ರೂ!