ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮನಸೂರೆಗೊಳ್ಳುವ ವಿನ್ಯಾಸ ಸ್ಮಾರ್ಟ್ ವಾಚ್ ಕ್ರಾಸ್‌ಬೀಟ್ಸ್‌ ಇಗ್ನೈಟ್‌ ಹಸ್ಲ್‌ ಸಂಚಲನ ಸೃಷ್ಟಿಸಿದೆ. ಫಿಟ್ನೆಸ್‌ ಬಗ್ಗೆ ಕಾಳಜಿವುಳ್ಳವರಿಗೆ ಸೂಕ್ತವಾದ ಸ್ಮಾರ್ಟ್‌ವಾಚ್ ಇದಾಗಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ.    

ಬೆಂಗಳೂರು(ಜೂ.02): ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಮನಸೂರೆಗೊಳ್ಳುವ ವಿನ್ಯಾಸವುಳ್ಳ ಇಗ್ನೈಟ್‌ ಹಸ್ಲ್‌ ಸ್ಮಾರ್ಟ್‌ವಾಚನ್ನು ಕ್ರಾಸ್‌ಬೀಟ್ಸ್‌ ಕಂಪನಿಯು ಬಿಡುಗಡೆ ಮಾಡಿದೆ. ಬಳಕೆದಾರರ ಅನುಕೂಲಕ್ಕಾಗಿ 2.01 ಇಂಚಿನ ದೊಡ್ಡದಾದ ಎಚ್‌ಡಿ ಡಿಸ್ಪ್ಲೇ ಹೊಂದಿರುವ ಇಗ್ನೈಟ್‌ ಹಸ್ಲ್‌ ಸ್ಮಾರ್ಟ್‌ವಾಚ್ ವಿಶ್ಯುವಲ್ ಕ್ಲಾರಿಟಿ ಉತ್ತಮವಾಗಿದೆ. 500 ನಿಟ್ಸ್‌ನಷ್ಟು ಬ್ರೈಟ್‌ನೆಸ್‌ ಹೊಂದಿರುವುದರಿಂದ, ವಾತಾವರಣದ ಬೆಳಕಿನ ತೀವ್ರತೆ ಹೆಚ್ಚಿದ್ದರೂ ವೀಕ್ಷಣೆ ಮೇಲೆ ಪರಿಣಾಮ ಬೀರದು. ClearComm ತಂತ್ರಜ್ಞಾನದೊಂದಿಗೆ ಸಿಂಗಲ್‌ ಚಿಪ್‌ ಬ್ಲೂಟೂತ್‌ ಕರೆ ಸೌಲಭ್ಯ, ಸಿರಿ ಹಾಗೂ ಓಕೆ ಗೂಗಲ್‌ ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌ ಕೂಡಾ ಈ ಸ್ಮಾರ್ಟ್‌ವಾಚಲ್ಲಿ ಇವೆ.

ಆರೋಗ್ಯದಾಯಕ ಜೀವನಶೈಲಿಯನ್ನು ಗಮನದಲ್ಲಿಟ್ಟು, ಸುಮಾರು 125 ಚಟುವಟಿಕೆ ಹಾಗೂ AI ಟ್ರ್ಯಾಕರ್‌ಗಳನ್ನು ಇಗ್ನೈಟ್‌ ಹಸ್ಲ್‌ ಹೊಂದಿದೆ. ಸುಮಾರು 8 ದಿನಗಳ ಬಳಕೆಗೆ ಸಾಕಾಗುವಷ್ಟು 230mAh ಬ್ಯಾಟರಿ ಸಾಮರ್ಥ್ಯ ಹಾಗೂ 15 ದಿನಗಳ ಸ್ಟ್ಯಾಂಡ್‌ಬೈ ಸಾಮರ್ಥ್ಯವನ್ನು ಈ ಸ್ಮಾರ್ಟ್‌ವಾಚ್ ಹೊಂದಿದೆ. ವ್ಯತಿರಿಕ್ತ ಹವಾಮಾನ ಪರಿಸ್ಥಿತಿಯಲ್ಲೂ ಬಳಸಬಹುದಾದಂತಹ IP67 ವಾಟರ್‌ ರೆಸಿಸ್ಟೆನ್ಸ್‌ ತಂತ್ರಜ್ಞಾನವನ್ನು ಹೊಂದಿದೆ.

ವಾಚ್ಒಎಸ್ 9.1 ಬಿಡುಗಡೆ ಮಾಡಿದ ಆಪಲ್, ಏನೆಲ್ಲ ವಿಶೇಷತೆಗಳು?

ನಿರಂತರ, ಕ್ಷಿಪ್ರ ಹಾಗೂ ಅಡೆತಡೆಯಿಲ್ಲದ ಕರೆ ಸೌಲಭ್ಯಕ್ಕಾಗಿ ಬ್ಲೂಟೂತ್‌ 5.3 ಸಂಪರ್ಕವ್ಯವಸ್ಥೆಯಿದೆ. ಇದರ ಬೆಲೆ 1799 ರೂ. ಆಗಿದ್ದು ಕಪ್ಪು, ಸಿಲ್ವರ್ ಹಾಗೂ ನೀಲಿ ಬಣ್ಣಗಳಲ್ಲಿ ಲಭ್ಯವಿದೆ. 2015ರಲ್ಲಿ ಆರಂಭವಾದ ಬೆಂಗಳೂರು ಕೇಂದ್ರಿತ ಕ್ರಾಸ್‌ಬೀಟ್ಸ್‌ ಕಂಪನಿಯು ಯುವಸಮೂಹದ ಆಶಯ ಹಾಗೂ ಅಗತ್ಯಕ್ಕನುಗುಣವಾದ ಸ್ಮಾರ್ಟ್‌ ಗ್ಯಾಜೆಟ್‌ಗಳನ್ನು ಹೊಂದಿದೆ.

ಸದ್ಯ ಮಾರುಕಟ್ಟೆಯಲ್ಲಿ ಹಲವು ಸ್ಮಾರ್ಟ್‌ವಾಚ್ ಲಭ್ಯವಿದೆ. ಆದರೆ ಇಗ್ನೈಟ್‌ ಹಸ್ಲ್‌ ಸ್ಮಾರ್ಟ್‌ವಾಚ್ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೆಚ್ಚುವರಿ ಫೀಚರ್ಸ್ ಹೊಂದಿದೆ. ನೂತನ ಸ್ಮಾರ್ಟ್‌ವಾಚ್ ಇಗ್ನೈಟ್‌ ಹಸ್ಲ್‌ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ.