Asianet Suvarna News Asianet Suvarna News

ವಾಚ್ಒಎಸ್ 9.1 ಬಿಡುಗಡೆ ಮಾಡಿದ ಆಪಲ್, ಏನೆಲ್ಲ ವಿಶೇಷತೆಗಳು?

*ಆಪಲ್‌ ವಾಚ್‌ಒಎಸ್ 9.1 ಲಾಂಚ್ ಆಗಿದ್ದು, ಸಾಕಷ್ಟು ಹೊಸ ಫೀಚರ್ಸ್‌ ಕಾಣಬಹುದಾಗಿದೆ
*ಆಪಲ್ ಮ್ಯೂಸಿಕ್‌ನಿಂದ ಈಗ ಸುಲಭವಾಗಿ ಮ್ಯೂಸಿಕ್ ಡೌನ್‌ಲೋಡ್ ಮಾಡಿಕೊಳ್ಳಬಹುದು
* ಬಳಕೆದಾರರ ಸ್ನೇಹಿ ಸಾಕಷ್ಟು ಫೀಚರ್ಸ್ ಮತ್ತು ಸವಲತ್ತುಗಳನ್ನು ನೋಡಬಹುದು

WatchOS 9.1 released by Apple and check details
Author
First Published Oct 31, 2022, 4:19 PM IST

ಆಪಲ್ ಕಂಪನಿಯು ಆಪಲ್ ವಾಚ್‌ಗಾಗಿ ವಾಚ್ಒಎಸ್ 9.1 (watchOS 9.1) ಅಪ್‌ಡೇಟ್ ನೀಡಲು ಆರಂಭಿಸಿದೆ. ಆಪಲ್ ಮ್ಯೂಸಿಕ್‌ (Apple Music) ನಿಂದ ಸಂಗೀತವನ್ನು ಡೌನ್‌ಲೋಡ್‌ಗೆ ಸಪೋರ್ಟ್ ಮಾಡುವುದು ಮತ್ತು ಬ್ಯಾಟರಿ ದೀರ್ಘ ಅವಧಿ ಬಾಳಿಕೆಯೊಂದಿಗೆ ಇತ್ತೀಚಿನ ಆವೃತ್ತಿಯಲ್ಲಿ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರಿಸಲಾಗಿದೆ. ವಾಚ್ಓಎಸ್ 9.1 (WatchOS 9.1) ಗಾಗಿ ಬಿಡುಗಡೆ ಟಿಪ್ಪಣಿಗಳ ಪ್ರಕಾರ, ಜಾಗಿಂಗ್, ವಾಕಿಂಗ್ ಮತ್ತು ಟ್ರೆಕ್ಕಿಂಗ್ ಸೇರಿದಂತೆ ಹೊರಾಂಗಣ ಚಟುವಟಿಕೆಗಳಿಗೆ ಬ್ಯಾಟರಿ ಬಳಕೆಯನ್ನು ಆಪ್ಟಿಮೈಸ್ ಮಾಡಲಾಗಿದೆ. ಆಪಲ್ ವಾಚ್ ಸೀರೀಸ್ 8 (Apple Watch Series 8), ಆಪಲ್ ವಾಚ್ ವಾಚ್ ಎಸ್ಇ (Apple Watch SE) 2ನೇ ತಲೆಮಾರಿನ ಮತ್ತು Apple Watch Ultra ಬಳಕೆದಾರರಿಗೆ GPS ಮತ್ತು ಹೃದಯ ಬಡಿತದ (Heart Rate) ಟ್ರ್ಯಾಕಿಂಗ್‌ನ ಫ್ರಿಕ್ವೆನ್ಸಿ ಈಗ ಕಡಿಮೆ ಎನಿಸಬಹುದು. ಮತ್ತೊಂದು ಗಮನಾರ್ಹ ಎಂದರೆ, ನೀವು  ಚಾರ್ಜ್ ಮಾಡದಿದ್ದಾಗ, ಆಪಲ್ ವಾಚ್ ಧರಿಸುವವರು ವೈ-ಫೈ ಅಥವಾ ಸೆಲ್ಯುಲಾರ್ ಮೂಲಕ ಆಪಲ್ ಮ್ಯೂಸಿಕ್‌ನಿಂದ ಸಂಗೀತವನ್ನು ಡೌನ್‌ಲೋಡ್ ಮಾಡಬಹುದು.  ಬಳಕೆದಾರರು ಪ್ರಯಾಣ ಮಾಡುವಾಗಲೂ ಯಾವುದೇ ತೊಂದರೆ ಇಲ್ಲದೇ ಈಗ ತಮ್ಮ ಕೈಗಡಿಯಾರಕ್ಕೆ ಸಂಗೀತವನ್ನು ಡೌನ್‌ಲೋಡ್ ಮಾಡಬಹುದು. ಮೊದಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಇದೊಂದು ನಂಬಲಾರ್ಹ ಫೀಚರ್ ಎನಿಸಿಕೊಂಡಿದೆ.

RealMe 10 Launch: ನವೆಂಬರ್‌ನಲ್ಲಿ ರಿಯಲ್‌ಮಿ 10 ಸರಣಿ ಫೋನು ಬಿಡುಗಡೆ

ಈಗಾಗಲೇ ಅಸ್ತಿತ್ವದಲ್ಲಿರುವ ಫೀಚರ್ಸ್‌ಗಳೊಂದಿಗೆ ಹೊಸ ಫೀಚರ್ಸ್‌ಗಳಿಂದಾಗಿ ವಾಚ್‌ಒಎಸ್ 9.1 ಹೆಚ್ಚು ಬಳಕೆದಾರರ ಸ್ನೇಹಿಯಾಗಿದೆ. ಜೊತೆಗೆ, ವಾಚ್‌ಓಎಸ್ 9.1 ಹಲವಾರು ದೋಷಗಳನ್ನು ಸರಿಪಡಿಸಲಾಗಿದೆ.  ಹವಾಮಾನ ಅಪ್ಲಿಕೇಶನ್‌ನ ಮಳೆಯ ಸಾಧ್ಯತೆಯ ಅಂದಾಜು ಸೇರಿದಂತೆ ಐಫೋನ್‌ನ, ಪ್ರತಿ ಗಂಟೆಗೆ ನೀಡಲಾಗುವ ಹವಾಮಾನ ಮುನ್ಸೂಚನೆಗಳನ್ನು PMಗಿಂತ ಹೆಚ್ಚಾಗಿ AM ಎಂದು ಲೇಬಲ್ ಮಾಡುತ್ತವೆ. ತರಬೇತಿ ಮೋಡ್‌ನ ಸಮಯ ಪ್ರದರ್ಶನವು ಅಗತ್ಯವಾಗಿ ಹೆಚ್ಚಾಗುವುದಿಲ್ಲ ಮತ್ತು ಬಹು ಅಧಿಸೂಚನೆಗಳನ್ನು ಸ್ವೀಕರಿಸಿದಾಗ ಅಧಿಸೂಚನೆಯನ್ನು ಓದುವ ಮೊದಲು ವಾಯ್ಸ್‌ಓವರ್ ಹೆಸರನ್ನು ಪ್ರಕಟಿಸುವುದಿಲ್ಲ. ಈ ರೀತಿಯಾಗಿ ಹಲವಾರು ಬದಲಾವಣೆಗಳನ್ನು ಹೊಸ ವಾಚ್ಒಎಸ್ 9.1ರಲ್ಲಿ ಕಾಣಬಹುದಾಗಿದೆ.

ಆಪಲ್ ವಾಚ್ (Apple Watch 4) ಮತ್ತು ಅದರ ನಂತರದ ವಾಚ್‌ಗಳು ಮಾಲೀಕರು ಈ watchOS 9.1 ಅಪ್‌ಗ್ರೇಡ್ ಅನ್ನು ಪಡೆಯಬಹುದು. ಈ ವಾಚ್‌ಒಎಸ್ 9.1 ಅಪ್‌ಡೇಟ್ ಮಾಡಿಕೊಳ್ಳಲು, ನಿಮ್ಮ ಆಪಲ್ ವಾಚ್‌ನಲ್ಲಿ ಸೆಟ್ಟಿಂಗ್‌ಗಳ ಅಪ್ಲಿಕೇಶನ್ ತೆರೆಯಿರಿ, General ಆಯ್ಕೆಮಾಡಿ, ತದನಂತರ ನಿಮ್ಮ ವಾಚ್ ಅನ್ನು ನವೀಕರಿಸಲು ಸಾಫ್ಟ್‌ವೇರ್ ಅಪ್‌ಗ್ರೇಡ್ ಆಪ್ಷನ್ ಅನ್ನು ಆಯ್ಕೆ ಮಾಡಿಕೊಳ್ಳಿ.

ಕ್ಯಾನ್ಸರ್ ಪತ್ತೆ ಹಚ್ಚಿದ ವಾಚ್
ಆಪಲ್‌ನ ತಾಂತ್ರಿಕ ಆವಿಷ್ಕಾರಗಳು ಹಲವಾರು ಬಾರಿ ಜೀವಗಳನ್ನು ಉಳಿಸಿವೆ. ಈ ಸಾಲಿಗೆ 12 ವರ್ಷದ ಬಾಲಕಿಯೊಬ್ಬಳು ಸೇರಿದ್ದಾಳೆ. ಆಪಲ್ ವಾಚ್‌ನಿಂದಾಗಿ ಆಕೆ ದೊಡ್ಡ ಆನಾರೋಗ್ಯಕಾರಿ ಗಂಡಾಂತರದಿಂದ ಪಾರಾಗಿದ್ದಾಳೆ. ಹಾಗಾಗಿ, ಬಾಲಕಿಯ ಕುಟುಂಬವು ಆಪಲ್ ವಾಚ್‌ನ ಸಾಮರ್ಥ್ಯಕ್ಕೆ ಧನ್ಯವಾದ ತಿಳಿಸಿದ್ದಾರೆ. ಯುವಜನರಲ್ಲಿ ಅಸಾಮಾನ್ಯವಾದ ಕ್ಯಾನ್ಸರ್ ಅನ್ನು ಕಂಡುಹಿಡಿಯಲು ಸಾಧ್ಯವಾಗಿಸುವ ಮೂಲಕ ತನ್ನ ಜೀವವನ್ನು ಉಳಿಸಿದೆ ಎಂದು ಆ ಬಾಲಕಿಯು ಹೇಳಿದ್ದಾಳೆ. ಆಪಲ್ ವಾಚ್‌ನಲ್ಲಿನ ಹೃದಯ ಬಡಿತ (ಹಾರ್ಟ್ ಬೀಟ್ ಮಾನಿಟರಿಂಗ್) ಅಧಿಸೂಚನೆಗಳ ಕಾರ್ಯ ಫೀಚರ್, ವಾಚ್ ಎಸ್‌ಇ, ವಾಚ್ 7 ಮತ್ತು ಇತ್ತೀಚೆಗೆ ಬಿಡುಗಡೆಯಾದ ವಾಚ್ 8 ಮತ್ತು ವಾಚ್ ಅಲ್ಟ್ರಾದಲ್ಲಿ ಕಾಣಬಹುದಾಗಿದೆ.

ಫೇಕ್‌ ಪ್ರೊಫೈಲ್ ಗುರುತಿಸಲು ಹೊಸ ಫೀಚರ್ ಪರಿಚಯಿಸುತ್ತಿದೆ ಲಿಂಕ್ಡ್‌ಇನ್

12 ವರ್ಷ ವಯಸ್ಸಿನ ಇಮಾನಿ ಮೈಲ್ ಅವರ ಆಪಲ್ ವಾಚ್ ಒಂದು ಸಂಜೆ ಅಸಾಮಾನ್ಯವಾಗಿ ಹೆಚ್ಚಿನ ಹೃದಯ ಬಡಿತದ ಬಗ್ಗೆ ಎಚ್ಚರಿಸಲು ಪ್ರಾರಂಭಿಸಿತು. ಆಗ ಎಚ್ಚೆತ್ತುಕೊಂಡ ಮೈಲ್ ಅನ್ನು ಆಕೆಯ ತಾಯಿ ಜೆಸ್ಸಿಕಾ ಕಿಚನ್ ಆಸ್ಪತ್ರೆಗೆ ಕರೆದೊಯ್ದರು. ಬಾಲಕಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ  ಅಪೆಂಡಿಸೈಟಿಸ್  ಇರುವ ರೋಗನಿರ್ಣಯವನ್ನು ಮಾಡಲಾಯಿತು. ರೋಗನಿರ್ಣಯದ ಪ್ರಕ್ರಿಯೆಯಲ್ಲಿ  ಮತ್ತೊಂದು ಗೊತ್ತಾದ ಸಂಗತಿ ಬೆಚ್ಚಿಬೀಳುವಂತೆ ಮಾಡಿತು. ಬಾಲಕಿಯ ಅಪೆಂಡಿಕ್ಸ್‌ನಲ್ಲಿ ನ್ಯೂರೋಎಂಡೋಕ್ರೈನ್ ಗಡ್ಡೆ(ಕ್ಯಾನ್ಸರ್) ಇರುವುದನ್ನು ವೈದ್ಯರು ಪತ್ತೆ ಹಚ್ಚಿದರು.  ಚಿಕ್ಕ ವಯಸ್ಸಿನಲ್ಲಿ ಕಂಡು ಬರುವ ವಿರಳ ಗಡ್ಡೆ ಇದು ಎಂದು ವೈದ್ಯರು ತಿಳಿಸಿದರು. ಈ ಕ್ಯಾನ್ಸರ್ ಈಗಾಗಲೇ ಮೈಲ್ ದೇಹದ ಇತರ ಭಾಗಗಳಿಗೆ ಹರಡಿದೆ ಎಂಬುದನ್ನು ವೈದ್ಯರು ಪತ್ತೆ ಹಚ್ಚಿದರು. ತಕ್ಷಣವೇ ಕ್ಯಾನ್ಸರ್ ಅನ್ನು ತೊಡೆದು ಹಾಕಲು ವೈದ್ಯರು ಸಿಎಸ್ ಮೋಟ್ ಚಿಡ್ರೆನ್ಸ್  ಶಸ್ತ್ರಚಿಕಿತ್ಸೆ ಕೈಗೊಂಡರು.

Follow Us:
Download App:
  • android
  • ios