12GB RAM, 5500mAh ಬ್ಯಾಟರಿ 50MP ಸೆಲ್ಫಿ ಕ್ಯಾಮೆರಾದ Vivo V40 5G ಸ್ಮಾರ್ಟ್‌ಫೋನ್; ಕಡಿಮೆ ಬೆಲೆಗೆ ಇಲ್ಲಿ ಸಿಗುತ್ತೆ
ವಿವೋ V40 5G ಸ್ಮಾರ್ಟ್‌ಫೋನ್ ಅಮೆಜಾನ್‌ನಲ್ಲಿ ಡಿಸ್ಕೌಂಟ್‌ನೊಂದಿಗೆ ಲಭ್ಯವಿದೆ. 5500mAh ಬ್ಯಾಟರಿ, 50MP ಸೆಲ್ಫಿ ಕ್ಯಾಮೆರಾ ಮತ್ತು ಇತರ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.
Vivo V40 5G Smartphone: ವಿವೋ ಕಂಪನಿಯ V40 5G ಸ್ಮಾರ್ಟ್‌ಫೋನ್ ಆಕರ್ಷಕ ಬೆಲೆಯಲ್ಲಿಸಿಗುತ್ತಿದೆ. ಅಮೆಜಾನ್ ಪ್ಲಾಟ್‌ಫಾರಂನಲ್ಲಿ ಈ ಫೋನ್ ಮೇಲೆ ಭಾರೀ ಡಿಸ್ಕೌಂಟ್ ಅನೌನ್ಸ್ ಆಗಿದೆ. ಈ ಕುರಿತ ಮಾಹಿತಿ ಹೆಚ್ಚಿನ ಮಾಹಿತಿ ಇಲ್ಲಿದೆ. ಈ ಸ್ಮಾರ್ಟ್‌ಫೋನ್ ಮೂರು ವೇರಿಯಂಟ್ ಮತ್ತು ಮೂರು ಬಣ್ಣಗಳಲ್ಲಿ ಲಭ್ಯವಿದೆ. 5500mAh ಬ್ಯಾಟರಿ 50MP ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನಿನ ಇನ್ನಿತರ ವೈಶಿಷ್ಟ್ಯಗಳು ಇಲ್ಲಿವೆ.
Display
ವಿವೋದ ಈ ಸ್ಮಾರ್ಟ್‌ಫೋನ್ 6.7 ಇಂಚಿನ Full HD+ AMOLED ಡಿಸ್‌ಪ್ಲೇ ಹೊಂದಿದೆ. ಇದರ ಪಿಕ್ಸೆಲ್ ರೆಸ್ಯೂಲೆಷನ್ 2800 x 1260, ಪೀಕ್ಸ್ ಬ್ರೈಟ್‌ನೆಸ್ 4500 nits, ರಿಫ್ರೆಶ್ ರೇಟ್ 120Hz ಮತ್ತು ಸ್ಕ್ರೀನ್ ರೇಶಿಯೋ 93 ಪರ್ಸೆಂಟ್, 190 ಗ್ರಾಂ ತೂಕವನ್ನು ಹೊಂದಿದೆ.
RAM And ROM
ಈ ಸ್ಮಾರ್ಟ್‌ಫೋನಿನ ಬೇಸ್ ವೇರಿಯಂಟ್ 8GB RAM ಜೊತೆ 128GB ಇಂಟರ್‌ನಲ್ ಸ್ಟೋರೇಜ್‌ನಲ್ಲಿ ಲಭ್ಯವಿದೆ. ಇನ್ನೊಂದು ವೇರಿಯಂಟ್ 8GB RAM ಮತ್ತು 256GB ಸ್ಟೋರೇಜ್ ಸಿಗುತ್ತದೆ. ಈ ಸ್ಮಾರ್ಟ್‌ಫೋನಿನ ಟಾಪ್ ವೇರಿಯಂಟ್ 12GB RAM ಜೊತೆ 512GBನಲ್ಲಿ ಲಭ್ಯವಿದೆ. ವಿವೋ ಕಂಪನಿಯ V40 5G ಸ್ಮಾರ್ಟ್‌ಫೋನ್ ಒಟ್ಟು ಮೂರು ವೇರಿಯಂಟ್‌ಗಳಲ್ಲಿ ಗ್ರಾಹಕರಿಗೆ ಸಿಗುತ್ತದೆ.
Camera
ಈ ಸ್ಮಾರ್ಟ್‌ಫೋನ್ ಬ್ಯಾಕ್ ಸೈಡ್ ಡ್ಯೂಯಲ್ ಕ್ಯಾಮೆರಾ ಸೆಟ್‌ಅಪ್ ನಲ್ಲಿ ಸಿಗುತ್ತದೆ. 50MP ಮೇನ್ ಕ್ಯಾಮೆರಾ ಮತ್ತು 50MP ಸೆನ್ಸಾರ್‌ನಲ್ಲಿ ಸಿಗುತ್ತದೆ. ಫೋನ್ ಹಿಂದೆ ನಿಮಗೆ ಫ್ಲ್ಯಾಶ್ ಸಿಗುತ್ತದೆ. ಸೆಲ್ಫಿ ಮತ್ತು ವಿಡಿಯೋ ಕಾಲಿಂಗ್‌ಗಾಗಿ ಫ್ರಂಟ್ ಕ್ಯಾಮೆರಾ 50MP ಹೊಂದಿದೆ. ಈ ಸ್ಮಾರ್ಟ್‌ಫೋನ್ ಧೂಳಿನಿಂದ ರಕ್ಷಿಸಲು IP68 ಸೆಟಿಂಗ್‌ನಲ್ಲಿ ಸಿಗುತ್ತದೆ. ಡಿಸ್‌ಪ್ಲೇಯಲ್ಲಿಯೇ ಫಿಂಗರ್ ಪ್ರಿಂಟ್ ಸೆನ್ಸಾರ್ ಫೀಚರ್ ಒದಗಿಸಲಾಗಿದೆ.
ಇದನ್ನೂ ಓದಿ: ಸ್ಯಾಮ್‌ಸಂಗ್ ಶಾಕ್ ಕೊಟ್ಟ ನೋಕಿಯಾ; ₹4999ಯಲ್ಲಿ 75Hz ಡಿಸ್‌ಪ್ಲೇ, 5000mah ಬ್ಯಾಟರಿ 5G ಸ್ಮಾರ್ಟ್‌ಫೋನ್
Battery And Processor
ಇನ್ನು ಈ 5ಜಿ ಸ್ಮಾರ್ಟ್‌ಫೋನ್ 5500mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಜೊತೆ 80W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ಚಾರ್ಜಿಂಗ್‌ಗಾಗಿ ಪೋನ್‌ನಲ್ಲಿ USB Type-C ಪೋರ್ಟ್ ಸಿಗುತ್ತದೆ. Snapdragon 7 Gen 3 ಪ್ರೊಸೆಸರ್, Android 14 ಬೇಸಡ್ Funtouch OS 14ನಲ್ಲಿ ಫೋನ್ ರನ್ ಆಗುತ್ತದೆ.
Price and Other Details
ವಿವೋ ಕಂಪನಿಯ V40 5G ಸ್ಮಾರ್ಟ್‌ಫೋನ್ Ganges Blue, Lotus Purple ಮತ್ತು Titanium Grey ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಇದರ ಬೆಲೆ 34,999 ರೂಪಾಯಿ ಆಗಿದೆ. ಟಾಪ್ ವೇರಿಯಂಟ್ ಬೆಲೆ 41,999 ರೂಪಾಯಿ ಆಗಿದೆ. ಅಮೆಜಾನ್‌ನಲ್ಲಿ V40 5G ಖರೀದಿದಾರರಿಗೆ 1000 ರೂ.ವರೆಗೆ ಡಿಸ್ಕೌಂಟ್ ಸಿಗುತ್ತದೆ. ಈ ಆಫರ್ ಎಸ್‌ಬಿಐ ಕಾರ್ಡ್ ಪೇಮೆಂಟ್ ಮಾಡಿದ್ರೆ ಮಾತ್ರ ಲಭ್ಯವಾಗುತ್ತದೆ. ಗ್ರಾಹಕರು EMI ಮೂಲಕವೂ ಸಹ ಖರೀದಿಸಬಹುದಾಗಿದೆ.
ಇದನ್ನೂ ಓದಿ: ಬಿಡುಗಡೆಯಾಯ್ತು ಕಡಿಮೆ ಬೆಲೆಯಲ್ಲಿ ಭಾರತದ ಮೊದಲ IP69 Realme 14x 5G ಸ್ಮಾರ್ಟ್‌ಫೋನ್; ದರ, ಬ್ಯಾಟರಿ, ಫೀಚರ್ಸ್ ಮಾಹಿತಿ