ಭಾರತದಲ್ಲಿ ಬಿಡುಗಡೆಯಾದ Samsung Galaxy Tab S8: ಏನೆಲ್ಲ ವಿಶೇಷತೆ ಇದೆ?

*ಈ ಹಿಂದೆ ಬಿಡುಗಡೆಯಾಗಿದ್ದ ಎಸ್ 7ನ ಸುಧಾರಿತ ಆವೃತ್ತಿಯಾಗಿ ಎಸ್ 8 ಟ್ಯಾಬ್ಲೆಟ್ ಲಾಂಚ್
* ಬಳಕೆದಾರರಿಗೆ ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಹೊಂದಿರುವ ಟ್ಯಾಬ್ಲೆಟ್
* ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8 ಜತಂಗೆ ಇನ್ನೂ ಎರಡು ಟ್ಯಾಬ್ ರೀಲಿಸ್ ಮಾಡಿದೆ.

Samsung Galaxy Tab S8 launched to Indian market check specifications details

Tech Desk: ನಿರೀಕ್ಷೆಯಂತೆ ಸ್ಯಾಮ್ಸಂಗ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8(Samsung Galaxy Tab S8), ಗ್ಯಾಲಕ್ಸಿ ಟ್ಯಾಬ್ ಎಸ್8ಪ್ಲಸ್ Samsung Galaxy Tab S8+) ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8 ಅಲ್ಟ್ರಾ (Samsung Galaxy Tab S8 ultra) ಟ್ಯಾಬ್ಲೆಟ್‌ಗಳನ್ನುಸೋಮವಾರ ರೀಲಿಸ್ ಮಾಡಿದೆ. ಈ ಮೂರು ಟ್ಯಾಬ್ಲೆಟ್ 5ಜಿ ತಂತ್ರಜ್ಞಾನಕ್ಕೆ ಸಪೋರ್ಟ್ ಮಾಡಲಿವೆ. ಈ ಮೂರು ಟ್ಯಾಬ್ಲೆಟ್‌ಗಳು ಪೈಕಿ ವಿಶೇಷವಾಗಿ ಬೇಸಿಕ್ ಎನಿಸಿಕೊಂಡಿರುವ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8 ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳೋಣ.

2020ರಲ್ಲಿ ಭಾರತದಲ್ಲಿ ಬಿಡುಗಡೆಯಾಗಿದ್ದ ಗ್ಯಾಲಕ್ಸಿ ಟ್ಯಾಬ್ ಎಸ್ 7 ಟ್ಯಾಬ್ಲೆಟ್‌ನ ಸುಧಾರಿತ ಆವೃತಿಗಳಾಗಿ ಗ್ಯಾಲಕ್ಸಿ ಟ್ಯಾಬ್ ಎಸ್ 8 ಮತ್ತು ಗ್ಯಾಲಕ್ಸಿ ಟ್ಯಾಬ್ ಎಸ್ 8+ ಲಾಂಚ್ ಮಾಡಲಾಗಿದೆ. ಈ ಟ್ಯಾಬ್‌ಗಳು ಸಾಕಷ್ಟು ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿವೆ ಮತ್ತು ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗಾಗಿ, ಈ ಹೊಸ ಟ್ಯಾಬ್ಲೆಟ್‌ಗಳಿಗೆ ಹೆಚ್ಚಿನ ನಿರೀಕ್ಷೆಯನ್ನು ಬಳಕೆದಾರರು ಹೊಂದಿದ್ದರು.

ಇದನ್ನೂ ಓದಿ:  Micromax In 2: ಸ್ವದೇಶಿ ಕಂಪನಿ ಮೈಕ್ರೋಮ್ಯಾಕ್ಸ್ ಮತ್ತೊಂದು ಫೋನ್? ಏನೆಲ್ಲ ವಿಶೇಷತೆ?

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಈ ಟ್ಯಾಬ್‌ಗಳ ಬೆಲೆ ಎಷ್ಟು ಎಂಬ ಮಾಹಿತಿಯು ಬಹಿರಂಗಗೊಂಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8 (Samsung Galaxy Tab S8) ಬೆಲೆ Wi-Fi ಮಾದರಿಗೆ 58,999 ಮತ್ತು 5G ರೂಪಾಂತರಕ್ಕಾಗಿ 70,999 ರೂಪಾಯಿಯಾಗಿದೆ. ಅದೇ ರೀತಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್8 ಪ್ಲಸ್ (Samsung Galaxy Tab S8+) Wi-Fi ಮಾದರಿಗೆ 74,999, ಆದರೆ 5G ವೆರಿಯೆಂಟ್ ಬೆಲೆ ರೂ. 87,999. ಅದೇ ರೀತಿ ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8 ಅಲ್ಟ್ರಾ ಟ್ಯಾಬ್ಲೆಟ್ ಬೆಲೆ (Samsung Galaxy Tab S8 Ultra ) W-Fi ಮಾದರಿಗೆ 1,08,999 ಮತ್ತು ರೂ. 5G ವೆರಿಯೆಂಟ್ 1,22,999 ರೂ. ಇದೆ. 

ವೆನಿಲ್ಲಾ Samsung Galaxy ಟ್ಯಾಬ್ಲೆಟ್ ಮತ್ತು Galaxy Tab S8+ ಅನ್ನು 8GB RAM + 128GB ಸಂಗ್ರಹಣೆ ಮತ್ತು 12GB RAM + 256GB ಸ್ಟೋರೇಜ್ ರೂಪಾಂತರಗಳಲ್ಲಿ ದೊರೆಯಲಿದೆ. ಮತ್ತೊಂದೆಡೆ, Galaxy Tab S8 Ultra ಅನ್ನು 8GB RAM + 128GB ಸ್ಟೋರೇಜ್ , 12GB RAM + 256GB ಸ್ಟೋರೇಜ್ ಮತ್ತು 16GB RAM + 512GB ಸ್ಟೋರೇಜ್ ವೆರಿಯೆಂಟ್ ಗಳಲ್ಲಿ ಮಾರಾಟಕ್ಕೆ ಸಿಗಲಿದೆ. 

ಇದನ್ನೂ ಓದಿ: Poco M4 Pro 5G ಕೈಗೆಟುಕುವ ದರದ ಪೋಕೋ ಎಂ4 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ, ಇದರಲ್ಲಿದೆ ಹಲವು ವಿಶೇಷತೆ!

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8 ವಿಶೇಷತೆಗಳೇನು?: ಮಾರುಕಟ್ಟೆಗೆ ರಿಲೀಸ್ ಆಗುವ ಮುನ್ನವೇ ಈ ಟ್ಯಾಬ್ ಬಗ್ಗೆ ಒಂದಿಷ್ಟು ಮಾಹಿತಿಗಳು ಸೋರಿಕೆಯಾಗಿದ್ದವು. ಈ ಟ್ಯಾಬ್ ಆಂಡ್ರಾಯ್ಡ್ 12 ಆಧರಿತ ಒನ್ ಯುಐ 4 ಒಎಸ್ ಮೂಲಕ ಕರ್ಯಾಚರಣೆ ಮಾಡುತ್ತದೆ. ಇದು 11 ಇಂಚ್ ಡಿಸ್‌ಪ್ಲೇ ಹೊಂದಿದ್ದು, 120 Hzವರೆಗೂ ರಿಫ್ರೇಶ್ ರೇಟ್ ಒಳಗೊಂಡಿದೆ. ಅದೇ ರೀತಿ, 4 ಎನ್ ಎಂ ಅಕ್ಟಾಕೋರ್ ಎಸ್ಒಎಸ್ ಇದ್ದು, ಬಹುತೇಕ ಸ್ನ್ಯಾಪ್‌ಡ್ರಾಗನ್ 8 ಜೆನ್ 1 ಇರಲಿದೆ. ಜೊತೆಗೆ ಈ ಪ್ರೊಸೆಸರ್ 12 ಜಿಬಿ RAMನೊಂದಿಗೆ ಸಂಯೋಜಿತವಾಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಟ್ಯಾಬ್ ಎಸ್ 8 ಡುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಮೊದಲನೇ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದ್ದರೆ, ಎರಡನೆಯದು 6 ಮೆಗಾ ಪಿಕ್ಸೆಲ್ ಕ್ಯಾಮೆರಾ ಆಗಿದೆ. ಇದನ್ನು ಅಲ್ಟ್ರಾ ವೈಡ್ ಆಂಗಲ್ ಚಿತ್ರಗಳನ್ನು ಸೆರೆ ಹಿಡಿಯಲು ಬಳಸಬಹುದು. ಎಲ್ಇಡಿ ಫ್ಲ್ಯಾಶ್ ಇದೆ. ಟ್ಯಾಬ್ ಫ್ರಂಟ್‌ನಲ್ಲಿ ನೀವು 12 ಮೆಗಾ ಪಿಕ್ಸೆಲ್ ಕ್ಯಾಮೆರಾ ಕಾಣಬಹುದು. ಇದರಿಂದ ಸೆಲ್ಫಿ ಹಾಗೂ ವಿಡಿಯೋ ಕಾಲಿಂಗ್, ಚಾಟಿಂಗ್‌ಗೆ ನೆರವು ದೊರೆಯಲಿದೆ. ಎಸ್ ಸೀರೀಸ್‌ನಲ್ಲಿ ಈ ಟ್ಯಾಬ್‌ಗಳಲ್ಲಿ ಎಸ್ 8 ಸಾಕಷ್ಟು ಸುಧಾರಿತ ಆವೃತ್ತಿಯಾಗಿದೆ ಎಂದು ಹೇಳಬಹುದು.

Latest Videos
Follow Us:
Download App:
  • android
  • ios