6550mAh ಬ್ಯಾಟರಿ, 512GB ಸ್ಟೋರೇಜ್ ಸ್ಮಾರ್ಟ್‌ಫೋನ್; ಬಿಡುಗಡೆ ಯಾವಾಗ? ಫೀಚರ್ಸ್ ಮಾಹಿತಿ
Redmi Turbo 4 ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾಗಲಿದೆ. 6550mAh ಬ್ಯಾಟರಿ, 512GB ಸ್ಟೋರೇಜ್, ಮತ್ತು IP69 ರೇಟಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿರಲಿದೆ.
Redmi Turbo 4: ಅತ್ಯಧಿಕ ಫೀಚರ್ ಹೊಂದಿರುವ ರೆಡ್‌ಮಿ ಟರ್ಬೊ 4 ಸ್ಮಾರ್ಟ್‌ಫೋನ್ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. ರಿಲೀಸ್ ಆಗುವ ಮೊದಲೇ ಸ್ಮಾರ್ಟ್‌ಫೋನಿನ ಸ್ಪೆಸಿಕೇಷನ್ ಮಾಹಿತಿ ಹೊರಬಂದಿದೆ. ಒಂದು ವರದಿಯ ಪ್ರಕಾರ, ಈ ಸ್ಮಾರ್ಟ್‌ಫೋನ್ ಮಿಡಿಯಾಟೆಕ್ ಕೆ ಆಕ್ಟಾ -ಕೋರ್ ಡೈಮ್ನಿಸಿಟಿ 8400 ಅಲ್ಟ್ರಾ ಚಿಪ್‌ಸೆಟ್ ಜೊತೆ ರೆಡ್‌ಮಿ ಟರ್ಬೊ ಲಾಂಚ್ ಆಗಲಿದೆ. ಇಷ್ಟು ಮಾತ್ರವಲ್ಲ ಈ ಸ್ಮಾರ್ಟ್‌ಫೋನಿನ ಕಲರ್ ಆಯ್ಕೆಗಳು ಸಹ ಬಹಿರಂಗಗೊಂಡಿವೆ. ಕಂಪನಿ ಸ್ಮಾರ್ಟ್‌ಫೋನಿನ ಬ್ಯಾಟರಿ ಮತ್ತು ಡಿಸ್‌ಪ್ಲೇ ವಿಶೇಷತೆ ರಿವೀಲ್ ಆಗಿದೆ. Redmi Turbo 4 ಸ್ಮಾರ್ಟ್‌ಫೋನ್ IP69 ರೇಟಿಂಗ್ ನೊಂದಿಗೆ ಬರಲಿದೆ. ಐಫೋನ್ 16 ಫೋನ್ ಜೊತೆ ರೆಡ್‌ಮಿ ಟರ್ಬೊ ಬಹುತೇಕ ಹೋಲಿಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಸ್ಮಾರ್ಟ್‌ಫೋನ್‌ನನ್ನು POCO X 7 Pro ರೂಪದಲ್ಲಿ ಜಾಗತಿಕ ಮಾರುಕಟ್ಟೆಗೆ (Global Market) ತರಲು ಸಿದ್ಧತೆ ಮಾಡಿಕೊಂಡಿದೆ ಎಂದು ವರದಿಯಾಗಿದೆ.
ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಪನಿ, ರೆಡ್‌ಮಿ ಟರ್ಬೊ 4 ಸ್ಮಾರ್ಟ್‌ಫೋನ್ 6550mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಹೊಂದಿರಲಿ ಎಂದು ಹೇಳಿದೆ. ಇದರ ಜೊತೆಗೆ ಫೋನ್ ವಾಟರ್‌ಪ್ರೂಫ್ ಹೊಂದಿರಲಿದ್ದು, IP66, IP67 ಮತ್ತು IP69 ರೇಟಿಂಗ್‌ನೊಂದಿಗೆ ಬಿಡುಗಡೆಯಾಗಲಿದೆ. ಲಕಿ ಕ್ಲೌಡ್ ವೈಟ್ ಕಲರ್‌ನೊಂದಿಗೆ ಹೊಸ ಸ್ಮಾರ್ಟ್‌ಫೋನ್ ಹೊರ ಬರಲಿದೆ. OIS ಸಪೋರ್ಟ್‌ನೊಂದಿಗೆ 1/1.5 ಇಂಚಿನ 50 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರೈಮರಿ ಸೆನ್ಸಾರ್ ವಿಶೇಷ ಫೀಚರ್ ಹೊಂದಿದೆ.
ಸ್ಮಾರ್ಟ್‌ಫೋನಿನ ಇತರೆ ಸಂಭಾವ್ಯ ವೈಶಿಷ್ಟ್ಯತೆಗಳು
ಗ್ಲೋಬಲ್ ಲಿಸ್ಟಿಂಗ್ ಮಾಹಿತಿ ಪ್ರಕಾರ, ರೆಡ್‌ಮಿ ಟರ್ಬೊ 4 ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಆಧಾರಿತವಾಗಿದ್ದ, ಹೈಪರ್ ಓಎಸ್ 2.0 ಜೊತೆ 16GB RAM ಸಪೋರ್ಟ್ ಮಾಡುತ್ತದೆ. ಹ್ಯಾಂಡ್‌ಸೆಟ್ 512GB ಆನ್‌ಬೋರ್ಡ್ ಸ್ಟೋರೇಜ್ ಸಪೋರ್ಟ್ ಮಾಡುವ ಸಾಧ್ಯತೆಗಳಿರುತ್ತವೆ. ಲೀಕ್ ಆಗಿರುವ ಫೋಟೋಗಳ ಪ್ರಕಾರ, ಕಪ್ಪು, ಬಿಳಿ ಮತ್ತು ನೀಲಿ ಬಣ್ಣದ ಮೂರು ಆಯ್ಕೆಗಳಿವೆ.
ಇದನ್ನೂ ಓದಿ: 12GB RAM, 5500mAh ಬ್ಯಾಟರಿ 50MP ಸೆಲ್ಫಿ ಕ್ಯಾಮೆರಾದ Vivo V40 5G ಸ್ಮಾರ್ಟ್‌ಫೋನ್; ಕಡಿಮೆ ಬೆಲೆಗೆ ಇಲ್ಲಿ ಸಿಗುತ್ತೆ
ಈ ಹೊಸ ರೆಡ್‌ಮಿ ಟರ್ಬೊ 4 ಸ್ಮಾರ್ಟ್‌ಫೋನ್ 120 ಹರ್ಟ್ಸ್ ರಿಫ್ರೆಶ್ ರೇಟ್, 3200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಲೆವಲ್, HDR10+ ಸಪೋರ್ಟ್ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ಪ್ರೊಟೆಕ್ಷನ್ ನೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. 6.67 ಇಂಚು, 1.5K OLED ಡಿಸ್ ಪ್ಲೇ ಇರಲಿದ್ದು, ರಿಯರ್ ಕ್ಯಾಮೆರಾ ಸೆಟಪ್, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಸೆನ್ಸಾರ್ ಹೊಂದಿರಲಿದೆಯಂತೆ. ಇನ್ನು ಸೆಲ್ಫಿಗಾಗಿ 20 ಮೆಗಾಪಿಕ್ಸೆಲ್ ಮತ್ತು 90W ಫಾಸ್ಟ್ ಚಾರ್ಜಿಂಗ್, ಫಿಂಗರ್ ಪ್ರಿಂಟ್ ಸೆನ್ಸಾರ್ ಹೊಂದಿರಲಿದೆ ಎಂದು ಹೇಳಲಾಗಿದೆ. ಈ ಸ್ಮಾರ್ಟ್‌ಫೋನ್ ಜನವರಿ 2ರಂದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಯಾವಾಗ ಬಿಡುಗಡೆ ಎಂಬುದರ ಮಾಹಿತಿ ಲಭ್ಯವಾಗಿಲ್ಲ.
Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ. ಸ್ಮಾರ್ಟ್‌ಫೋನ್ ಬಿಡುಗಡೆ ವೇಳೆ ಫೀಚರ್ ಸೇರಿದಂತೆ ವಿನ್ಯಾಸದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಸಂಭಾವ್ಯ ಖರೀದಿದಾರರು ಬೆಲೆ, ವೈಶಿಷ್ಟ್ಯಗಳು ಮತ್ತು ಲಭ್ಯತೆಯ ಬಗ್ಗೆ ದೃಢಪಡಿಸಿದ ವಿವರಗಳಿಗಾಗಿ Vivo ನಿಂದ ಅಧಿಕೃತ ಪ್ರಕಟಣೆಗಳಿಗಾಗಿ ಕಾಯಬೇಕಾಗುತ್ತದೆ.
ಇದನ್ನೂ ಓದಿ: 5160mAh ಸಾಮರ್ಥ್ಯದ 64GB ಸ್ಟೋರೇಜ್ 5G ಸ್ಮಾರ್ಟ್‌ಫೋನ್ ಮೇಲೆ 23% ಡಿಸ್ಕೌಂಟ್