ಅತ್ಯಾಕರ್ಷದ ದರದಲ್ಲಿ Redmiಯ 200MP ಕ್ಯಾಮೆರಾ, 512GB ಸ್ಟೋರೇಜ್ ಇರೋ 5G ಸ್ಮಾರ್ಟ್‌ಫೋನ್ 

Redmi Note 13 Pro 5G ಸ್ಮಾರ್ಟ್‌ಫೋನ್ 200MP ಕ್ಯಾಮೆರಾ, 512GB ಸ್ಟೋರೇಜ್ ಮತ್ತು ಹಲವು ವಿಶೇಷತೆಗಳೊಂದಿಗೆ ಭಾರತದ ಮಾರುಕಟ್ಟೆ ಬರುತ್ತಿದೆ. ಈ ಲೇಖನದಲ್ಲಿ ಹೊಸ ಸ್ಮಾರ್ಟ್‌ಫೋನಿನ ವಿಶೇಷತೆಗಳನ್ನು ತಿಳಿದುಕೊಳ್ಳೋಣ. 

Redmi Note 13 Pro 5G Smartphone 200 MP Camera and Features Specification details mrq

ನವದೆಹಲಿ: ರೆಡ್‌ಮಿ ಕಂಪನಿ ಗ್ಲೋಬಲ್ ಮಾರುಕಟ್ಟಯಲ್ಲಿ 200 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಹೊಸ ವಿನ್ಯಾಸದೊಂದಿಗೆ ಅನೇಕ ವಿಶೇತೆಗಳನ್ನು ಒಳಗೊಂಡಿರುವ 5G ಸ್ಮಾರ್ಟ್‌ಫೋನ್ ಹೊರ ತಂದಿದೆ. Redmi Note 13 Pro 5G ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಇಷ್ಟವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಲ್ಲಾ ವರ್ಗದ ಗ್ರಾಹಕರನ್ನು ಗಮನದಲ್ಲಿರಿಸಿಕೊಂಡು ಹೊಸ Redmi Note 13 Pro 5G ಸ್ಮಾರ್ಟ್‌ಫೋನ್ ತರಲಾಗಿದೆಯಂತೆ. ಈ ವರ್ಷದ ಕೊನೆಗೆ ಅಂದ್ರೆ 2024-ಡಿಸೆಂಬರ್ ಅಂತ್ಯಕ್ಕೆ ಭಾರತ ಮಾರುಕಟ್ಟೆಗೆ ರೆಡ್‌ಮಿಯ ಹೊಸ 5ಜಿ ಸ್ಮಾರ್ಟ್‌ಫೋನ್ ಬರಲಿದೆ. 

ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಬಳಕೆ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ 12GB RAM ಹೊಂದಿದೆ. ಹಾಗೆಯೇ ಮಿಡಿಯಾಟೆಕ್ ಹಿಲಿಯೋ G99 ಅಲ್ಟ್ರಾ ಪ್ರೊಸೆಸರ್‌ ಒಳಗೊಂಡಿದೆ. ಇದೆಲ್ಲದರೊಂದಿಗೆ Redmi Note 13 Pro 5G ಸ್ಮಾರ್ಟ್‌ಫೋನ್ ಹಲವು ವಿಶೇಷ ಫೀಚರ್ಸ್ ಹೊಂದಿದೆ. ಈ ಲೇಖನದಲ್ಲಿ ರೆಡ್‌ಮಿ ಹೊಸ ಸ್ಮಾರ್ಟ್‌ಫೋನಿನ ವಿಶೇಷತೆಗಳನ್ನು ತಿಳಿದುಕೊಳ್ಳೋಣ. 

Redmi Note 13 Pro 5G Smartphone Features And Specification 

ಕ್ಯಾಮೆರಾ: ರೆಡ್‌ಮಿ ನೋಟ್ 13 ಪ್ರೋ 5ಜಿ ಸ್ಮಾರ್ಟ್‌ಫೋನ್ ಪ್ರೈಮರಿ ಕ್ಯಾಮೆರಾ 200MP ಆಗಿದ್ದು, 8MPಯ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 2MP ಮೆಕ್ರೋ ಕ್ಯಾಮೆರಾ ಒಳಗೊಂಡಿದೆ. ಇನ್ನು 16MP ಸೆಲ್ಫಿ ಕ್ಯಾಮೆರಾ ಇದೆ

ಡಿಸ್‌ಪ್ಲೇ: ಈ ಸ್ಮಾರ್ಟ್‌ಫೋನ್ 6.67 ಇಂಚಿನ AMOLED ಡಿಸ್‌ಪ್ಲೇ ಹೊಂದಿದೆ. ಫೋನ್ ಡಿಸ್‌ಪ್ಲೇಯ ಪೀಕ್ ಬ್ರೈಟ್‌ನೆಟ್ 1300 ನಿಟ್ಸ್ ಇದೆ. ಸನ್‌ಲೈಟ್ ಮತ್ತು ರೀಡಿಂಗ್ ಮೋಡ್, 5 ಪ್ರೊಟೆಕ್ಷನ್‌ವುಳ್ಳ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ನೀಡಲಾಗಿದೆ.

RAM And ROM: ರೆಡ್‌ಮಿ ನೋಟ್ 13 ಪ್ರೋ 5ಜಿ ಸ್ಮಾರ್ಟ್‌ಫೋನ್ ಎರಡು ವೇರಿಯಂಟ್‌ಗಳಲ್ಲಿ ಲಭ್ಯವಿದೆ. 8GB/12GB RAM ಜೊತೆ 256GB/512GB ಸ್ಟೋರೇಜ್ ಹೊಂದಿದೆ. ಮಿಡಿಯಾಟೆಕ್ ಹಿಲಿಯೋ G99 ಅಲ್ಟ್ರಾ ಪ್ರೊಸೆಸರ್‌ ಮತ್ತು MIUI 15 ಆಧಾರಿತ ಆಂಡ್ರಾಯ್ಡ್ v13 ಆಧರಿಸಿದೆ. 

ಬ್ಯಾಟರಿ ಮತ್ತು ಬಣ್ಣ: ರೆಡ್‌ಮಿ ಕಂಪನಿ 13 ಪ್ರೋ ಸ್ಮಾರ್ಟ್‌ಫೋನ್‌ನಲ್ಲಿ 67W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಜೊತೆ 5000mAh ಸಾಮಾರ್ಥ್ಯದ ಬ್ಯಾಟರಿ ನೀಡಲಾಗಿದೆ. ರೆಡ್‌ಮಿ ನೋಟ್ 13 ಪ್ರೋ 5ಜಿ ಸ್ಮಾರ್ಟ್‌ಫೋನ್ Midnight Black, Lavender Purple  ಮತ್ತು  Forest Green ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. 

ಇದನ್ನೂ ಓದಿ: 300MP ಫ್ಲೈಯಿಂಗ್ ಕ್ಯಾಮೆರಾ ಜೊತೆ 7200mAh ಬ್ಯಾಟರಿಯ 5G ಸ್ಮಾರ್ಟ್‌ಫೋನ್ ಮೇಲೆ ₹5000ಕ್ಕಿಂತಲೂ ಹೆಚ್ಚು ಡಿಸ್ಕೌಂಟ್ 

ಬೆಲೆ: ಈ ಹೊಸ ಫೋನಿನ ಬೆಲೆ ಭಾರತದ ಮಾರುಕಟ್ಟೆಯಲ್ಲಿ 23,900 ರೂ.ಯಿಂದ ಆರಂಭವಾಗುವ ಸಾಧ್ಯತೆಗಳಿವೆ. ಇದುವರೆಗೂ ಭಾರತದ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಪರಿಚಯಿಸಲಾಗಿಲ್ಲ. ಈ ಸ್ಮಾರ್ಟ್‌ಫೋನ್ ಖರೀದಿಸಲು ಭಾರತೀಯರು ಇನ್ನು ಕೆಲ ದಿನ ವೇಟ್ ಮಾಡಬೇಕಿದೆ.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಒಳಗೊಂಡಿದ್ದು, ಏಷ್ಯಾನೆಟ್ ನ್ಯೂಸ್ ದೃಢೀಕರಿಸುವದಿಲ್ಲ. ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಸಮೀಪದ ಶೋರೂಂಗೆ ವಿಚಾರಿಸಿಕೊಳ್ಳಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಲಹೆ ಪಡೆದುಕೊಳ್ಳಿ. 

ಇದನ್ನೂ ಓದಿ: ₹4300 ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾವುಳ್ಳ OnePlus ಕಂಪನಿಯ 5G ಸ್ಮಾರ್ಟ್‌ಫೋನ್‌ನಲ್ಲಿವೆ ಈ ಫೀಚರ್ಸ್

Latest Videos
Follow Us:
Download App:
  • android
  • ios