Asianet Suvarna News Asianet Suvarna News

ನೋಡಿದ್ರಾ ಇದರ ಠೀವಿ? ಬಂದಿದೆ ಹೊಸ ಅವತಾರದಲ್ಲಿ ಒನಿಡಾ ಟಿವಿ!

  • ಟಿವಿ ಆರಂಭ ಕಾಲದಲ್ಲಿ ಬಹಳ ಸುದ್ದಿ ಮಾಡಿದ್ದ ಒನಿಡಾ 
  • ಟಿವಿಗಳಿಗೆ ಮನೆಮಾತಾಗಿದ್ದ ಒನಿಡಾ ಈಗ ಹೊಸ ಅವತಾರದಲ್ಲಿ
  • ಫೈರ್ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಬಿಡುಗಡೆಮಾಡಿದ ಕಂಪನಿ
Onida Electronics Launches New Model Smart TVs in India
Author
Bengaluru, First Published Dec 28, 2019, 6:38 PM IST

90ರ ದಶಕ ಅಥವಾ ಅದಕ್ಕಿಂತ ಮುಂಚೆ ಹುಟ್ಟಿದವರ ಪೈಕಿ ಒನಿಡಾ ಟಿವಿ ಯಾರಿಗೆ ನೆನಪಿಲ್ಲ? ಕೋರೆ ಹಲ್ಲುಗಳು, ಎರಡು ಕೊಂಬುಗಳನ್ನು ಹೊಂದಿದ್ದ ದೆವ್ವದ ಆ ಟಿವಿ ಜಾಹೀರಾತು ಸ್ಮೃತಿಪಟಲದಿಂದ ಸುಲಭವಾಗಿ ಅಳಿಸಿಹೋಗುವಂಥದ್ದಲ್ಲ. 

ಟಿವಿ ಆರಂಭ ಕಾಲದಲ್ಲಿ ಬಹಳ ಸುದ್ದಿ ಮಾಡಿದ್ದ ಒನಿಡಾ ಈಗ ಹೊಸ ಬಗೆಯ ಟಿವಿಯನ್ನು ಪರಿಚಯಿಸಲು ಹೊರಟಿದೆ. ಟಿವಿಯಲ್ಲಿ ಸಿನಿಮಾ ಸ್ಕ್ರೀನ್ ಅನುಭವ ನೀಡಲು ಹೊರಟಿದೆ ಒನಿಡಾ.

ಇದನ್ನೂ ಓದಿ | ಜನವರಿಯಿಂದ ಈ ಫೋನ್‌ಗಳಲ್ಲಿ ವಾಟ್ಸಪ್ ಸಿಗಲ್ಲ!

ಇನ್‌ಬಿಲ್ಟ್ ಅಲೆಕ್ಸಾ ವಾಯ್ಸ್ ಅಸಿಸ್ಟೆನ್ಸ್, ಡಾಲ್ಬಿ ಆಡಿಯೋ ಹಾಗೂ ಡಿಟಿಎಸ್ ಟ್ರೂ ಸೌಂಡ್ ಹೊಂದಿರುವ ಒನಿಡಾದ ಹೊಸ ಟಿವಿ 32 ಹಾಗೂ 43 ಇಂಚುಗಳಲ್ಲಿ ಲಭ್ಯವಿದೆ. 

ಟಿವಿ ಎದುರು ಕೂತಲ್ಲಿಂದಲೇ ಈ ಚಾನೆಲ್ ಬೇಕು ಅಂದರೆ ಸಾಕು, ರಿಮೋಟ್ ಸಹಾಯವಿಲ್ಲದೇ ಆ ಚಾನೆಲ್ ಪ್ಲೇ ಆಗುತ್ತೆ. ಸೌಂಡ್ ಕ್ವಾಲಿಟಿ ಬಹಳ ಚೆನ್ನಾಗಿರುತ್ತೆ ಅಂತ ಕಂಪೆನಿ ಹೇಳಿಕೊಂಡಿದೆ. ಈ ಟಿವಿಗಳು ಅಮೆಜಾನ್ ಪೇನಲ್ಲಿ ಲಭ್ಯ. 

ಅಮೆಜಾನ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಈ ಟಿವಿಯನ್ನು ಒನಿಡಾ ಮಾರುಕಟ್ಟೆಗೆ ಬಿಟ್ಟಿದೆ. 32 ಇಂಚಿನ ಬೆಲೆ12999 ಆಗಿದ್ದರೆ, 43 ಇಂಚು ಟಿವಿ ಬೆಲೆ 21999 ರು. ಆಗಿದೆ.

Follow Us:
Download App:
  • android
  • ios