ಪ್ರೀಮಿಯಮ್ ಸ್ಮಾರ್ಟ್‌ಫೋನ್ ‌ಸೆಗ್ಮೆಂಟ್‌ನಲ್ಲಿ ಜನಪ್ರಿಯವಾಗಿರುವ ಒನ್‌ಪ್ಲಸ್ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಹೊಸ ಸ್ಮಾರ್ಟ್‌ಫೋನ್ ಮಿಡ್ ಸೆಗ್ಮೆಂಟ್‌ಗೆ ಸೇರಿದ್ದು, ಜೂನ್ 10ರಂದು ಲಾಂಚ್ ಆಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಮಿಡ್ ಸೆಗ್ಮೆಂಟ್‌ನ ಒನ್ ಪ್ಲಸ್ ಸ್ಮಾರ್ಟ್‌ಫೋನ್ ಯಾವುದು ಎಂದರೆ- ಒನ್‌ಪ್ಲಸ್ ನಾರ್ಡ್ ಸಿಇ 5ಜಿ. ವಿಶೇಷ ಏನೆಂದರೆ, ಕಂಪನಿ ಒನ್‌ಪ್ಲಸ್ ಟಿವಿ ಯು ವೆರಿಯೆಂಟ್ ಕೂಡ ಬಿಡುಗಡೆ ಮಾಡಲಿದ್ದು, ಅದೇ ವೇಳೆ, ಈ ಸ್ಮಾರ್ಟ್‌ಫೋನ್ ಅನ್ನು ಅನಾವರಣಗೊಳಿಸಲಿದೆ.

ಹೊಸ ಡಿಜಿಟಲ್ ನಿಯಮಗಳಿಂದ ನಿಮ್ಮ ಖಾಸಗಿ ಹಕ್ಕಿಗೆ ಭಂಗ ಬರುತ್ತಾ?

ವಿಶೇಷ ಎಂದರೆ, ಒನ್‌ಪ್ಲಸ್ ನಾರ್ಟ್ ಸಿಇ ಮತ್ತು ಹೊಸ ಒನ್ ಪ್ಲಸ್ ಟಿವಿಗಳೆರಡೂ ದರದ ದೃಷ್ಟಿಯಿಂದ ವಿಶೇಷವಾಗಿವೆ. ಕಂಪನಿಯೂ ಇರಡೂ ಪ್ರಾಡಕ್ಟ್‌ಗಳನ್ನು ತುಸು ಅಗ್ಗದ ದರದಲ್ಲಿ ಮಾರಾಟ ಮಾಡಬಹುದು. ಭಾರತೀಯ ಮಾರುಕಟ್ಟೆಯೂ ಸೇರಿದಂತೆ ಬೇರೆ ಮಾರುಕಟ್ಟೆಗಳಲ್ಲೂ ಈ ಉತ್ಪನ್ನಗಳು ದೊರೆಯಲಿವೆ. ಒನ್‌ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಬಹಳ ದಿನಗಳಿಂದಲೂ ಕೇಳಿ ಬರುತ್ತಿದ್ದು, ಅದೀಗ ನಿಜವಾಗುತ್ತಿದೆ.

ಭಾರತೀಯ ಮಾರುಕಟ್ಟೆಗೆ ಕಾಲಿಡುತ್ತಿರುವ ಒನ್‌ಪ್ಲಸ್ ನಾರ್ಡ್ ಸಿಇ ಬೆಲೆ ಎಷ್ಟಿರಬಹುದು ಎಂದು ಇದುವರೆಗೂ ಗೊತ್ತಾಗಿಲ್ಲ. ಬಹುಶಃ ಲಾಂಚ್ ದಿನವೇ ಈ ಸ್ಮಾರ್ಟ್‌ಫೋನ್ ಬೆಲೆ ತಿಳಿಯಲಿದೆ. ಆದರೆ, ಈ ಸ್ಮಾರ್ಟ್‌ಫೋನ್ ಲಭ್ಯತೆಯ ಬಗ್ಗೆ ಕಂಪನಿ ಒಂದಿಷ್ಟು ಮಾಹಿತಿಯನ್ನು ಬಿಟ್ಟುಕೊಟ್ಟಿದೆ.  ಜೂನ್ 11ರಿಂದ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದ ಪ್ರೀಆರ್ಡರ್ ಆರಂಭವಾಗಿಲಿದೆ. ಈ ಸೌಲಭ್ಯ ಸಂಪೂರ್ಣವಾಗಿ ರೆಡ್ ಕೇಬಲ್ ಕ್ಲಬ್ ಮೇಂಬರ್ಸ್‌ಗೆ ಮಾತ್ರವೇ ದೊರೆಯಲಿದೆ. ಜೂನ್ 16ರಿಂದ ಮುಕ್ತ ಮಾರಾಟ ಆರಂಭವಾಗಲಿದೆ. ಇಷ್ಟಾಗಿಯೂ ಈ ಸ್ಮಾರ್ಟ್‌ಫೋನ್ ಅಂದಾಜು 25,000 ರೂಪಾಯಿವರೆಗೂ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ನಿಜವಾದ ಬೆಲೆ ಎಷ್ಟು ಎಂಬುದು ಲಾಂಚ್ ದಿನವೇ ಗೊತ್ತಾಗಲಿದೆ.

 

 

ಒನ್‌ಪ್ಲಸ್ ನಾರ್ಡ್ ಸಿಇ ಹಲವು ವಿಶಿಷ್ಟವಾದ ಫೀಚರ್‌ಗಳನ್ನು ಒಳಗೊಂಡಿರಲಿದೆ. ಈ ಸ್ಮಾರ್ಟ್‌ಫೋನ್, 6.4 ಇಂಚ್ ಡಿಸ್‌ಪ್ಲೇ ಹೊಂದಿದೆ. ಅದು ಫುಲ್ ಎಚ್‌ಡಿ ಪ್ಲಸ್ ಇರಲಿದೆ. ಕ್ವಾಲಂಕಾಮ್ ಸ್ನ್ಯಾಪ್‌ಡ್ರಾಗನ್ 700 ಸೀರೀಸ್ ಚಿಪ್‌ಸೆಟ್ ಇರಲಿದ್ದು, ಕನಿಷ್ಠ 6 ಜಿಬಿ ರ್ಯಾಮ್ ಇರಲಿದೆ ಎಂದು ಹೇಳಲಾಗುತ್ತಿದೆ.

ಶೀಘ್ರವೇ ಭಾರತದಲ್ಲಿ ಪೋಕೋ ಎಂ3 ಪ್ರೋ 5ಜಿ ಸ್ಮಾರ್ಟ್‌ಫೋನ್ ಬಿಡುಗಡೆ?

ಇನ್ನು ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ  ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಇರಲಿದೆ. ಒನ್‌ಪ್ಲಸ್ ನಾರ್ಡ್ ಸ್ಮಾರ್ಟ್‌ಫೋನ್‌ನಲ್ಲಿದ್ದ ರೀತಿಯಲ್ಲೇ ಈ ಹೊಸ ಸ್ಮಾರ್ಟ್‌ಫೋನ್‌ ನಾರ್ಡ್ ಸಿಇನಲ್ಲೂ ಕ್ಯಾಮೆರಾಗಳು ಇರಲಿವೆ. ಬಹುಶಃ ಪ್ರಾಥಮಿಕ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ.  ಈ ಕ್ಯಾಮೆರಾ ಜತೆಗೆ ಅಲ್ಟ್ರಾವೈಡ್, ಡೆಪ್ತ್ ಸೆನ್ಸರ್ ಮತ್ತು ಮ್ಯಾಕ್ರೋ ಲೆನ್ಸ್ ಕ್ಯಾಮೆರಾಗಳು ಇರಬಹುದು.  ಜೊತೆಗೆ ಎಲ್ಇಡಿ ಫ್ಲ್ಯಾಶ್ ಲೈಟ್ ಕೂಡ ಇರಲಿದೆ.

ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಒನ್‌ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್‌ಫೋನ್ 4000 ಎಂಎಎಚ್ ಬ್ಯಾಟರಿಯೊಂದಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಈ ಬ್ಯಾಟರಿಯು ರ್ಯಾಪ್ ಚಾರ್ಜ್‌ ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುತ್ತದೆ.

AI ಆಧಾರಿತ ಫೀಚರ್‌ ಇರುವ ಒಪ್ಪೋ ರೆನೋ 5ಎ ಸ್ಮಾರ್ಟ್‌ಫೋನ್ ಲಾಂಚ್

ಸ್ಮಾರ್ಟ್‌ಫೋನ್ ಬಗ್ಗೆ ವರದಿಯಾಗಿರುವ ಎಲ್ಲ ಮಾಹಿತಿಯೂ ಅಧಿಕೃತ ಮಾಹಿತಿಯೇನಲ್ಲ. ಜೂನ್ 10ರಂದು ಈ ಸ್ಮಾರ್ಟ್‌ಫೋನ್  ಬಿಡುಗಡೆಯಾದ ಬಳಿಕವಷ್ಟೇ ಫೋನ್‌ನ ನಿಜವಾದ ಬೆಲೆ ಎಷ್ಟು, ಯಾವೆಲ್ಲ ಫೀಚರ್‌ಗಳನ್ನು ಒಳಗೊಂಡಿದೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಒನ್‌ಪ್ಲಸ್ ನಾರ್ಡ್ ಸಿಇ ಸ್ಮಾರ್ಟ್‌ಫೋನ್ ಜೂನ್ 16ರಂದು ಒನ್‌ಪ್ಲಸ್‌ ಇಂಡಿಯಾ ಅಧಿಕೃತ ವೆಬ್‌ಸೈಟ್ ಹಾಗೂ ಅಮೆಜಾನ್ ಇ ಕಾಮರ್ಸ್ ತಾಣದಲ್ಲಿ ಆಲ್‌ಲೈನ್ ಸೇಲ್‌ಗೆ ದೊರೆಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.