ನೋಕಿಯಾದಿಂದ 300MP ಕ್ಯಾಮೆರಾ ಜೊತೆ 7200mAh ಪವರ್‌ಫುಲ್ ಬ್ಯಾಟರಿಯ ವಾಟರ್‌ಪ್ರೂಫ್ ಸ್ಮಾರ್ಟ್‌ಫೋನ್
ನೋಕಿಯಾ ತನ್ನ ಹೊಸ Oxygen Ultra 5G ಸ್ಮಾರ್ಟ್‌ಫೋನ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ. ಈ ಫೋನ್ ಉನ್ನತ ಮಟ್ಟದ ವೈಶಿಷ್ಟ್ಯಗಳಾದ 300MP ಕ್ಯಾಮೆರಾ, 7200mAh ಬ್ಯಾಟರಿ ಮತ್ತು ಮಿಡಿಯಾಟೆಕ್ Dimensity 7200 ಪ್ರೊಸೆಸರ್ ಅನ್ನು ಹೊಂದಿರಲಿದೆ.
ನವದೆಹಲಿ: 5G ಸ್ಮಾರ್ಟ್‌ಫೋನ್ ಲೋಕದಲ್ಲಿ ಧೂಳೆಬ್ಬಿಸಲು ಅತ್ಯಂತ ಹಳೆ ಮತ್ತು ದೈತ್ಯ ಕಂಪನಿ ನೋಕಿಯಾ ತನ್ನ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಶೀಘ್ರದಲ್ಲಿಯೇ ನೋಕಿಯಾ ಕಂಪನಿಯ Oxygen Ultra 5G ಲಾಂಚ್ ಆಗಲಿದೆ ಎಂದು ವರದಿಯಾಗಿದೆ. ಈ ಪವರ್‌ಫುಲ್ ಡಿವೈಸ್ ಹಲವು ವಿಶೇಷತೆಯೊಂದಿಗೆ ಬರುತ್ತಿದ್ದು, ಬಳಕೆದಾರರಿಗೆ ರಾಯಲ್ ಫೀಲ್ ನೀಡಲಿದೆಯಂತೆ. ಹೊಸ ಫೀಚರ್ ಗಳಿಗಾಗಿ ಕಾಯುತ್ತಿರುವ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ನೋಕಿಯಾ ಹೊಸ ಸ್ಮಾರ್ಟ್‌ಫೋನ್‌ನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ವಿಭಿನ್ನ ಮತ್ತು ಆಕರ್ಷಕವಾಗಿರಲಿದೆ ಎನ್ನಲಾಗಿದೆ.
ನೋಕಿಯಾ ಆಕ್ಸಿಜನ್ ಅಲ್ಟ್ರಾ 5G ಸ್ಮಾರ್ಟ್‌ಫೋನ್ ಅಸಾಧಾರಣ ಕಾರ್ಯಕ್ಷಮತೆ, ವಿಶೇಷವಾಗಿ ಗೇಮಿಂಗ್ ಉತ್ಸಾಹಿಗಳಿಗೆ ಇಷ್ಟವಾಗಲಿದೆ ಎಂಬ ಭರವಸೆಯನ್ನು ನೀಡಲಾಗಿದೆ. ಮಿಡಿಯಾಟೆಕ್ Dimensity 7200 ಪ್ರೊಸೆಸೆರ್, ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವ ಸಾಮರ್ಥ್ಯವನನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ. ಇದುವರೆಗಿನ ಗ್ರಾಹಕರ ಬೇಡಿಕೆಯನ್ನು ಗಮನಿಸಿ ಹೊಸ ಸ್ಮಾರ್ಟ್‌ಫೋನ್ ಸಿದ್ಧವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
Display: ನೋಕಿಯಾ ಆಕ್ಸಿಜನ್ ಅಲ್ಟ್ರಾ 5G ಸ್ಮಾರ್ಟ್‌ಫೋನ್ 6.9 ಇಂಚಿನ ಪಂಚ್ ಹೋಲ್ ಡಿಸ್‌ಪ್ಲೇಯನ್ನು ಹೊಂದಿದೆ. 1400 x 3200 pixels ರೆಸೆಲ್ಯೂಷನ್, ಹೈ ಪಿಕ್ಸೆಲ್ density ಹೊಂದರಲಿದೆ ಎಂದು ಭರವಸೆಯನ್ನು ನೀಡಲಾಗಿದೆ. 120Hz ರಿಫ್ರೆಶ್ ರೇಟ್ ಒಳಗೊಂಡಿದ್ದು, scrolling, animations ಮತ್ತು ಹೆಚ್‌ಡಿ ಗುಣಮಟ್ಟದ ವಿಡಿಯೋ ಅನುಭವವನ್ನು ನೀಡಲಿದೆ.
DSLR Quality ಕ್ಯಾಮೆರಾ ಸಿಸ್ಟಮ್
ಫೋಟೋಗ್ರಾಫಿಗಾಗಿ ಡಿಎಸ್‌ಎಲ್ಆರ್ ಗುಣಮಟ್ಟದ ಕ್ಯಾಮೆರಾ ನೀಡಲಾಗಿದೆ. Nokia Oxygen Ultra 5G ಡಿವೈಸ್ 300MP ಸೆನ್ಸಾರ್ ಹೊಂದಿರುವ ಕ್ಯಾಮೆರಾ ಒಳಗೊಂಡಿದೆ. 50MP ಅಲ್ಟ್ರಾ ವೈಡ್ ಲೆನ್ಸ್ ಹೊಂದಿದ್ದು, ಲ್ಯಾಂಡ್‌ಸ್ಕೇಪ್ ಅಥವಾ ಲಾರ್ಜ್ ಗ್ರುಪ್ ಶಾಟ್ಸ್ ಸೆರೆ ಹಿಡಿಯಬಹುದು. 32MP ಟೆಲಿಫೋಟೋ ಲೆನ್ಸ್ ಹೊಂದಿದ್ದು, ಗುಣಮಟ್ಟದ ಝೂಮ್ ಕ್ವಾಲಿಟಿಯನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ 50MP ಕ್ಯಾಮೆರಾ, 10x ಝೂಮ್ ಫೀಚರ್ ಹೊಂದಿದೆ.
Battery
ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷತೆ ಏನಂದ್ರೆ ಬ್ಯಾಟರಿ. Nokia Oxygen Ultra 5G ಸ್ಮಾರ್ಟ್‌ಫೋನ್ 7200mAh ಸಾಮರ್ಥ್ಯದ ಪವರ್‌ಫುಲ್ ಬ್ಯಾಟರಿ ಜೊತೆ 80-ವ್ಯಾಟ್ ಚಾರ್ಜರ್ ಹೊಂದಿದೆ. ಕೇವಲ 60 ನಿಮಿಷದಲ್ಲಿ ಬ್ಯಾಟರಿ ಚಾರ್ಜಿಂಗ್ ಫುಲ್ ಆಗುತ್ತದೆ.
Storage ಮತ್ತು Memory
ಬಳಕೆದಾರ ಅಥವಾ ಗ್ರಾಹಕರ ಬಜೆಟ್ ಹಿತಕ್ಕಾಗಿ ನೋಕಿಯಾ ಕಂಪನಿ Oxygen Ultra 5G ಸ್ಮಾರ್ಟ್‌ಫೋನ್ ಮೂರು ವೇರಿಯಂಟ್‌ಗಳಲ್ಲಿ ನೀಡಲಾಗಿದೆ. ಆ ಮೂರು ವೇರಿಯಂಟ್‌ಗಳನ್ನು ಯಾವವು ಎಂಬುದರ ಮಾಹಿತಿ ಇಲ್ಲಿದೆ.
1.8GB RAM ಜೊತೆ 128GB ಇಂಟರ್‌ನಲ್ ಸ್ಟೋರೇಜ್
2.8GB RAM ಜೊತೆ 256GB ಇಂಟರ್‌ನಲ್ ಸ್ಟೋರೇಜ್
3.12GB RAM ಜೊತೆ 512GB ಇಂಟರ್‌ನಲ್ ಸ್ಟೋರೇಜ್
ಇದನ್ನೂ ಓದಿ: TATA-BSNL ಜೊತೆಯಾಗಿ ಲಾಂಚ್ ಮಾಡ್ತಿದೆ 108MP, 256GB ಸ್ಟೋರೇಜ್‌ವುಳ್ಳ 5G ಸ್ಮಾರ್ಟ್‌ಫೋನ್: ಬೆಲೆ ಎಷ್ಟು?
ಬಿಡುಗಡೆ ದಿನಾಂಕ ಮತ್ತು ಬೆಲೆ
ನೋಕಿಯಾ ಇನ್ನೂ ಅಧಿಕೃತವಾಗಿ Oxygen Ultra 5G ಗಾಗಿ ಬಿಡುಗಡೆ ದಿನಾಂಕ ಅಥವಾ ಬೆಲೆಯನ್ನು ಘೋಷಿಸಿಲ್ಲ. ಆದರೂ ಮಾರುಕಟ್ಟೆಯಲ್ಲಿ ಕೆಲ ಬೆಲೆಗಳು ಹರಿದಾಡುತ್ತಿವೆ. ಮುಂದಿನ ವರ್ಷ ಮಾರ್ಚ್-ಏಪ್ರಿಲ್‌ನಲ್ಲಿ ಆಕ್ಸಿಜನ್ ಅಲ್ಟ್ರಾ ಬಿಡುಗಡೆಯಾಗುವ ಸಾಧ್ಯತೆಗಳಿವೆ. ₹45,999 ರಿಂದ ₹49,999 ನಡುವೆ ಮೂರು ವೇರಿಯಂಟ್‌ಗಳ ಬೆಲೆ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಿನ ವಿವಿಧ ಡಿಸ್ಕೌಂಟ್ ಸೇರಿದರೆ ಒಟ್ಟಾರೆ ಬೆಲೆಯಲ್ಲಿ ₹1,000 ರಿಂದ ₹3,000 ಕ್ಕೆ ಇಳಿಕೆಯಾಗಹುದು ಎಂದು ಅಂದಾಜಿಸಲಾಗಿದೆ. ಬೆಲೆ ಇಳಿಕೆ ನಂತರ Oxygen Ultra 5G ಸ್ಮಾರ್ಟ್‌ಫೋನ್ ₹43,999 ರಿಂದ ₹46,999 ವರೆಗೆ ಲಭ್ಯವಾಗಬಹುದು. ಕೆಲ ಸ್ಟೋರ್, ಆನ್‌ಲೈನ್ ವೇದಿಕೆಗಳು ಇಎಂಐ ಆಯ್ಕೆಯನ್ನು ಗ್ರಾಹಕರಿಗೆ ನೀಡಬಹುದಾಗಿದೆ.
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್ ಖರೀದಿಸುವ ಮುನ್ನ ಸಮೀಪದ ಶೋರೂಂಗೆ ಹೋಗಿ ವಿಚಾರಿಸಿಕೊಳ್ಳಿ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಲಹೆ ಪಡೆದುಕೊಳ್ಳಿ.
ಇದನ್ನೂ ಓದಿ: 6499 ರೂಪಾಯಿಯಲ್ಲಿ ಒಮ್ಮೆ ಚಾರ್ಜ್ ಮಾಡಿದ್ರೆ 840 ಗಂಟೆ ಬರೋ ಸ್ಮಾರ್ಟ್‌ಫೋನ್