ಫೇಸ್ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್, ವ್ಯಾಟ್ಸ್ಆ್ಯಪ್ ರೀತಿಯಲ್ಲೇ ಬ್ರಾಡ್‌ಕಾಸ್ಟ್ ಚಾನೆಲ್!
ವ್ಯಾಟ್ಸ್ಆ್ಯಪ್ ಈಗಾಗಲೇ ಬ್ರಾಡ್‌ಕಾಸ್ಟ್ ಚಾನೆಲ್ ಪೀಚರ್ ನೀಡಿದೆ. ಈಗಾಗಲೇ ನರೇಂದ್ರ ಮೋದಿ ಸೇರಿದಂತೆ ಹಲವು ಸೆಲೆಬ್ರೆಟಿಗಳು, ಸಂಸ್ಥೆಗಳು ಬ್ರಾಡ್‌ಕಾಸ್ಟ್ ಚಾನೆಲ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಇದೀಗ ಇದೇ ಫೀಚರ್ ಫೇಸ್‌ಬುಕ್ ಹಾಗೂ ಮೆಸೆಂಜರ್‌ನಲ್ಲೂ ನೀಡಲು ಮಾರ್ಕ್ ಜುಕರ್‌ಬರ್ಗ್ ಸಜ್ಜಾಗಿದ್ದಾರೆ.
ವ್ಯಾಟ್ಸ್ಆಪ್ ಬ್ರಾಡ್‌ಕಾಸ್ಟ್ ಚಾನೆಲ್ ಫೀಚರ್ ಅತ್ಯಂತ ಯಶಸ್ವಿಯಾಗಿದೆ. ಇದೀಗ ಬ್ರಾಡ್‌ಕಾಸ್ಟ್ ಚಾನೆಲ್ ಮೂಲಕ ಸೆಲೆಬ್ರೆಟಿಗಳು, ಗಣ್ಯರು, ಸಂಘ ಸಂಸ್ಥೆಗಳು ತಮ್ಮ ಅಭಿಮಾನಿಗಳು, ಸಾಮಾನ್ಯ ಜರನ್ನು ಸುಲಭವಾಗಿ ಸಂಪರ್ಕಿಸುತ್ತಿದ್ದಾರೆ. ನರೇಂದ್ರ ಮೋದಿ ಸೇರಿದಂತೆ ಹಲವರು ವ್ಯಾಟ್ಸ್ಆ್ಯಪ್ ಚಾನೆಲ್ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಇದೇ ವ್ಯಾಟ್ಸ್ಆ್ಯಪ್ ಬ್ರಾಡ್‌ಕಾಸ್ಟ್ ಚಾನೆಲ್ ಫೀಚರ್ ಇದೀಗ ಫೇಸ್‌ಬುಕ್‌ನಲ್ಲಿ ಪರಿಚಯಿಸಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಬ್ರಾಡ್‌ಕಾಸ್ಟ್ ಚಾನೆಲ್ ಕ್ರಿಯೆಟ್ ಮಾಡಿ ಸುಲಭವಾಗಿ ತಮ್ಮ ಅನುಯಾಯಿಗಳು, ಬೆಂಬಲಿಗರು, ಜನಸಾಮಾನ್ಯರನ್ನು ತಲುಪಬಹುದು.
ಸುಲಭವಾಗಿ ಫೇಸ್‌ಬುಕ್ ಬ್ರಾಡ್‌ಕಾಸ್ಟ್ ಚಾನೆಲ್ ಕ್ರಿಯೆಟ್ ಮಾಡಲು ಸಾಧ್ಯವಿದೆ. ಬಳಿಕ ಪೇಜ್ ಅಡ್ಮಿನ್ ಸಂದೇಶಗಳನ್ನು, ವಿಡಿಯೋ, ಫೋಟೋಗಳನ್ನು ಕಳಹಿಸಬಹುದು. ಇಷ್ಟೇ ಅಲ್ಲ ಮತಗಣನೆ ಮೂಲಕ ತಕ್ಷಣವೇ ಪ್ರತಿಕ್ರಿಯೆ ತಿಳಿಯಲು ಸಾಧ್ಯವಿದೆ.
ಪೋಲ್ ಮೂಲಕ ತಕ್ಷಣವೇ ಜನಸಾಮಾನ್ಯರ ಪ್ರತಿಕ್ರಿಯೆ, ಆಸಕ್ತಿ ತಿಳಿಯಲು ಸಾಧ್ಯವಿದೆ. ಇನ್ನು ವಾಯ್ಸ್ ಮೆಸೇಜ್ ಮೂಲಕವೂ ಜನಸಾಮಾನ್ಯರ ಜೊತೆ ನಿಕಟ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಿದೆ.
ಫೇಸ್‌ಬುಕ್ ಬಳಕೆದಾರರು ಬ್ರಾಡ್‌ಕಾಸ್ಟ್ ಚಾನೆಲ್ ಸೇರಿಕೊಂಡು ಸೆಲೆಬ್ರೆಟಿಗಳ, ಗಣ್ಯವ್ಯಕ್ತಿಗಳ ಸಂದೇಶಗಳನ್ನು, ಸಂಘ ಸಂಸ್ಥೆಗಳ ಚಟುವಟಿಕೆಗಳ ಮಾಹಿತಿ ಪಡೆಯಬಹುದು.
ಯಾವುದೇ ಫೇಸ್‌ಬುಕ್ ಬ್ರಾಡ್‌ಕಾಸ್ಟ್ ಚಾನೆಲ್ ಸೇರಿಕೊಂಡರೆ ನೋಟಿಫಿಕೇಶನ್ ಬರಲಿದೆ. ಪ್ರತಿ ಪೋಸ್ಟ್‌ಗೂ ನೋಟಿಫಿಕೇಶ್ ನೀಡಲಿದೆ. ಇದನ್ನು ಮ್ಯೂಟ್ ಆಯ್ಕೆ ಮಾಡಿಕೊಂಡು ಸೈಲೆಂಟ್ ಮಾಡಲು ಸಾಧ್ಯವಿದೆ.
ಶೀಘ್ರದಲ್ಲೇ ಮಾರ್ಕ್ ಜುಕರ್‌ಬರ್ಗ್ ಹೊಸ ಫೇಸ್‌ಬುಕ್ ಬ್ರಾಡ್‌ಕಾಸ್ಟ್ ಚಾನೆಲ್ ಫೀಚರ್ ಪರಿಚಯಿಸುತ್ತಿದ್ದಾರೆ. ಟೆಸ್ಟಿಂಗ್ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.