ವಿದ್ಯಾರ್ಥಿಗಳಿಗೆ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್; 21,999 ರೂ.ನಿಂದ ಬೆಲೆ ಆರಂಭ
ಲ್ಯಾಪ್‌ಟ್ಯಾಪ್ ಉತ್ಪಾದನೆಯ ಪ್ರಮುಖ ಕಂಪನಿಯಾಗಿರುವ ಎಚ್‌ಪಿ, ವಿದ್ಯಾರ್ಥಿಗಳಿಗೆ ನೆರವಾಗುವ ಅಗ್ಗದ ಬೆಲೆಯ ಕ್ರೋಮ್‌ಬುಕ್ 11ಎ ಎಂಬ ಲ್ಯಾಪ್‌ಟ್ಯಾಪ್ ಅನ್ನು ಬಿಡುಗಡೆ ಮಾಡಿದೆ. ಈ ಲ್ಯಾಪ್ ಟ್ಯಾಪ್ ಹಲವು ವಿಶೇಷತೆಗಳನ್ನು ಹೊಂದಿದ್ದು, ಕಡಿಮೆ ಬೆಲೆಗೆ ಅತ್ಯುತ್ತಮ ಸೇವೆಯನ್ನು ಒದಗಿಸಲಿದೆ.
ಲ್ಯಾಪ್‌ಟ್ಯಾಪ್, ಪ್ರಿಂಟರ್ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ಎಚ್‌ಪಿ ಕಂಪನಿ ಇದೀಗ ಮತ್ತೊಂದು ಕಡಿಮೆಗೆ ಬೆಲೆಗೆ ಲ್ಯಾಪ್‌ಟ್ಯಾಪ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಎಚ್‌ಪಿ ಕಂಪನಿಯು ಈ ಲ್ಯಾಪ್‌ಟ್ಯಾಪ್‌ಗೆ ಎಚ್‌ಪಿ ಕ್ರೋಮ್ ಬುಕ್ 11ಎ ಲ್ಯಾಪ್‌ಟ್ಯಾಪ್ ಎಂದು ಹೆಸರಿಟ್ಟಿದೆ. ಈ ಲ್ಯಾಪ್‌ಟ್ಯಾಪ್ ಟಚ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಎಚ್‌ಪಿ ಕ್ರೋಮ್ ಬುಕ್ ಲ್ಯಾಪ್ ನಿಮಗೆ 21,999 ರೂಪಾಯಿಯಿಂದ ಸಿಗಲಿದೆ.
ಮಾರುಕಟ್ಟೆಗೆ ಲಗ್ಗೆ ಇಟ್ಟ ರೆಡ್‌ಮಿ ಸ್ಮಾರ್ಟ್ ಟಿವಿಗಳು
ಈ ಹೊಸ ಎಚ್‌ಪ್ರಿ ಕ್ರೋಮ್ ಬುಕ್ 11ಎ ಲ್ಯಾಪ್ ಟ್ಯಾಪ್, 11.6 ಇಂಚ್ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಮೀಡಿಯಾಟೆಕ್ ಎಂಟಿ8183 ಅಕ್ಟಾಕೋರ್ ಪ್ರೊಸೆಸರ್ ಆಧರಿತವಾಗಿರುವ ಈ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್‌ವನ್ನು ವಿದ್ಯಾರ್ಥಿಗಳಿಗಾಗಿಯೇ ವಿನ್ಯಾಸ ಮಾಡಲಾಗಿದೆ. ವಿಶೇಷವಾಗಿ 2ತರಗತಿಯಿಂದ 7ನೇ ತರಗತಿ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕಂಪನಿ ರೂಪಿಸಿದೆ.
ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲೂ ಕಂಪನಿ ಇದೇ ಮಾತನ್ನು ಹೇಳಿದ್ದು, ಮನೆಯಲ್ಲಿ, ತರಗತಿಯಲ್ಲಿ ಮತ್ತು ಸಂಯೋಜಿತ ಕಲಿಕೆಯ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಸಂಪರ್ಕ, ಪ್ರೇರಣೆ ಮತ್ತು ಸೃಜನಶೀಲವಾಗಿರುವಂತೆ ಸಹಾಯ ಮಾಡಲು ಈ ಎಚ್‌ಪಿ ಕ್ರೋಮ್‌ಬುಕ್ ವಿನ್ಯಾಸ ಮಾಡಲಾಗಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳಿಗಾಗಿಯೇ ಬಿಡುಗಡೆ ಮಾಡಿರುವ ಈ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್ ಟ್ಯಾಪ್ 11ಎ ಎಕ್ಸ್‌ಕ್ಲೂಸಿವ್ ಆಗಿ ಇ-ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟಕ್ಕೆ ಸಿಗಲಿದೆ. ಈ ಲ್ಯಾಪ್‌ಟ್ಯಾಬ್ 21,999 ರೂಪಾಯಿಂದ ಆರಂಭವಾಗಲಿದೆ. ಇಂಡಿಗೋ ಬ್ಲೂ ಬಣ್ಣದ ಆಯ್ಕೆಯಲ್ಲಿ ದೊರೆಯಲಿರುವ ಈ ಲ್ಯಾಪ್ ಟ್ಯಾಪ್ ಮುಚ್ಚಳ ಹೊದಿಕೆಯೊಂದಿಗೆ ಹೊಂದಿಕೆಯಾಗುವ ಬಣ್ಣ-ಸಂಯೋಜಿತ ಕೀಬೋರ್ಡ್ ಇದೆ. ಇದರ ಟೆಕ್ಸ್ಚರ್ಡ್ ಫಿನಿಶ್ ಬಳಕೆದಾರರಿಗೆ ಸುಲಭವಾದ ಹಿಡಿತವನ್ನು ನೀಡುತ್ತದೆ.
ಈ ಹೊಸ ಕ್ರೋಮ್ ಬುಕ್ ಲ್ಯಾಪ್‌ಟ್ಯಾಪ್ 1.05 ಕೆ.ಜಿ. ತೂಕ ಹೊಂದಿದ್ದು, ಇದು 100 ಜಿಬಿ ಗೂಗಲ್ ಒನ್ ಕ್ಲೌಡ್ ಸ್ಟೋರೇಜ್ ಅನ್ನು ಹೊಂದಿದೆ ಮತ್ತು ಬಳಕೆದಾರರಿಗೆ ಒಂದು ವರ್ಷದವರೆಗೆ ಗೂಗಲ್ ಪ್ರವೇಶವನ್ನು ನೀಡುತ್ತದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವು ಒದಗಿಸುವುದರಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಲಾವಾದಿಂದ ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಯ ಟ್ಯಾಬ್ ಬಿಡುಗಡೆ
ಈ ಎಚ್‌ಪಿ ಕ್ರೋಮ್ ಬುಕ್ ಲ್ಯಾಪ್‌ಟ್ಯಾಪ್‌ನ ತಾಂತ್ರಿಕ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು 11.6 ಇಂಚ್ ಎಚ್‌ಡಿ ಆಂಟಿ ಗ್ಲೇರ್ ಮತ್ತು ಟಚ್ ಸ್ಕ್ರೀನ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. 4 ಜಿಬಿ ರ್ಯಾಮ್ ಮತ್ತು 64 ಜಿಬಿ ಸ್ಟೋರೇಜ್ ಸಾಮರ್ಥ್ಯದೊಂದಿಗೆ ಮೀಡಿಯಾ ಟೆಕ್ ಎಂಟಿ8183 ಪ್ರೊಸೆಸರ್ ಆಧರಿತವಾಗಿದೆ ಈ ಲ್ಯಾಪ್‌ಟ್ಯಾಪ್. ಜೊತೆಗೆ, ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಬಳಕೆದಾರರು ಮೆಮೋರಿಯನ್ನು 256 ಜಿಬಿವರೆಗೂ ಹೆಚ್ಚಿಸಿಕೊಳ್ಳಬಹುದಾಗಿದೆ.
ಗೂಗಲ್ ಪ್ಲೇ ಸ್ಟೋರ್ ಆಪ್‌ಗಳ ಅಕ್ಸೆಸ್ ಹೊಂದಿರುವ ಕ್ರೋಮ್ ಆಪರೇಟಿಂಗ್ ಸಾಫ್ಟ್‌ವೇರ್ ಮೂಲಕ ಈ ಎಚ್‌ಪಿ ಕ್ರೋಮ್ ಬುಕ್ ಲ್ಯಾಪ್ ಟ್ಯಾಪ್ ರನ್ ಆಗುತ್ತದೆ. ಜೊತೆಗೆ, ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಕಂಪನಿ ಈ ಲ್ಯಾಪ್‌ಟ್ಯಾಪ್ ಮೂಲಕ ಗೂಗಲ್ ಅಸಿಸ್ಟೆಂಟ್ ಕೂಡ ಒದಗಿಸುತ್ತದೆ.
ಕನೆಕ್ಟಿವಿಟಿ ಬಗ್ಗೆ ಹೇಳುವುದಾರೆ, ಈ ಎಚ್‌ಪಿ ಕ್ರೋಮ್‌ಬುಕ್ 11ಎ ಲ್ಯಾಪ್ ಟ್ಯಾಪ್ ಬ್ಲೂಟೂಥ್ 5.0, ವೈ ಫೈ 5, ಯುಎಸ್‌ಬಿ ಟೈಪ್ ಎ ಪೋರ್ಟ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಆಡಿಯೋ ಜಾಕ್ ಹೊಂದದೆ. ಈ ಲ್ಯಾಪ್‌ಟ್ಯಾಪ್‌ನಲ್ಲಿ ಕಂಪನಿ ಎಚ್‌ಪಿ ಟ್ರೂ ವಿಷನ್ ಎಚ್‌ಡಿ ವೆಬ್ ಕ್ಯಾಮೆರಾವನ್ನು ಅಳವಡಿಸಿದೆ.
ಈ ಎಚ್‌ಪಿ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್ ಅನ್ನು ಒಮ್ಮೆ ನೀವು ಚಾರ್ಜ್ ಮಾಡಿದರೆ 16 ಗಂಟೆಯವರೆಗೂ ಬಳಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಫಾಸ್ಟ್ ಚಾರ್ಜಿಂಗ್‌ಗೆ ಸಪೋರ್ಟ್ ಮಾಡುವ 37 ಡಬ್ಲೂಎಚ್ಆರ್ ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ.
ಎಚ್ ಪಿ ಕಂಪನಿಯ ಹೊಸ ಕ್ರೋಮ್‌ಬುಕ್ ಲ್ಯಾಪ್‌ಟ್ಯಾಪ್‌ನ ತಾಂತ್ರಿಕ ವಿಶೇಷತೆಗಳನ್ನು ಗಮನಿಸಿದರೆ ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿದೆ. ಕೊರೊನಾ ಹಿನ್ನೆಲೆಯಲ್ಲಿ ಬಹುತೇಕ ಮಕ್ಕಳು ಮನೆಯಲ್ಲೇ ತಮ್ಮ ಆನ್‌ಕ್ಲಾಸ್‌ಗಲಿಗೆ ಹಾಜರಾಗುತ್ತಿದ್ದಾರೆ. ಹಾಗಾಗಿ, ಈ ಕ್ರೋಮ್‌ಬುಕ್ ಅಂಥ ವಿದ್ಯಾರ್ಥಿಗಳಿಗೆ ಹೆಚ್ಚು ನೆರವು ನೀಡಲಿದೆ. ಜೊತೆಗೆ ಬೆಲೆಯೂ ತುಂಬ ಕಮ್ಮಿಯಾಗಿದೆ.
ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡಿದವರು ಮತ್ತೆ ಮಾಡಬೇಕಾ?