Asianet Suvarna News Asianet Suvarna News

ಸೈಬರ್ ಸುರಕ್ಷತೆಯ ಸವಾಲಿನ ನಡುವೆ ಸಾಫ್ಟ್‌ವೇರ್ ಖರೀದಿಗೆ ಇಲ್ಲಿವೆ 10 ಸೂತ್ರ!

ಸೈಬರ್ ಸೆಕ್ಯೂರಿಟಿ ಸದ್ಯ ಅತ್ಯಂತ ಸವಾಲು. ಒಂದು ಕ್ಷಣ ಮೈಮರೆತರೂ ಎಲ್ಲವೂ ಮಂಗ ಮಾಯವಾಗಿ ಬಿಡುವ ಕಾಲವಿದು. ಪೂರಕವಾಗಿ ಮಾರುಕಟ್ಟೆಯಲ್ಲಿ ನಕಲಿ ಸಾಫ್ಟ್‌ವೇರ್ ಕೂಡ ಅಷ್ಟೇ ಅಪಾಯಕಾರಿ. ಹೀಗಾಗಿ ಈ ಎಲ್ಲಾ ಸವಾಲಿನ ನಡುವೆ ಅಸಲಿ ಸಾಫ್ಟ್‌ವೇರ್ ಖರೀದಿ ಹೇಗೆ ಸಾಧ್ಯ? ಈ ಕುರಿತ ಟಿಪ್ಸ್ ಇಲ್ಲಿವೆ.

Cyber security threat top 10 tips for buying accurate Windows 10 software ckm
Author
Bengaluru, First Published Apr 18, 2021, 4:01 PM IST

ಬೆಂಗಳೂರು(ಏ.18):  ಇಂದಿನ ಜಗತ್ತಿನಲ್ಲಿ ಸೈಬರ್ ಸುರಕ್ಷತೆಯ ಸವಾಲುಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ತಮ್ಮ ವ್ಯವಹಾರಗಳನ್ನು ತಮ್ಮದೇ ಆದ ರೀತಿಯಲ್ಲಿ ಹೇಗೆ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂಬುದರ ಬಗ್ಗೆ ವ್ಯವಹಾರಗಳು ಯೋಚಿಸಬೇಕಾಗಿದೆ. ಭಾರತೀಯ ವ್ಯವಹಾರಗಳು ಶೇ.180 ಕ್ಕೂ ಅಧಿಕ ಎಕ್ಸ್ ಪೋಸ್ ಆಗಿವೆ. ಶೇ.79 ರಷ್ಟು ಮಾಲ್ವೇರ್, ಶೇ.300 ಕ್ಕೂ ಹೆಚ್ಚು ಕ್ರಿಪ್ಟೋ ಕರೆನ್ಸಿ ಮೈನಿಂಗ್ ಮತ್ತು ಶೇ.11 ರಷ್ಟು ಡೌನ್ಲೋಡ್ ದಾಳಿಗಳು ಜಾಗತಿಕ ಸರಾಸರಿಗಿಂತ ಹೆಚ್ಚಾಗಿವೆ.

ಪಿಂಕ್ ವಾಟ್ಸಾಪ್ ಬಳಸೋ ಮುನ್ನ ವಹಿಸಿ ಎಚ್ಚರ!

ಸಾಮಾನ್ಯ ತಪ್ಪುಗಳ ಪೈಕಿ, ಪರವಾನಗಿ ಪಡೆಯದೇ ಇರುವ ಸಾಫ್ಟ್ ವೇರ್ ವ್ಯವಹಾರಗಳಿಗೆ ಗಂಭೀರ ಸ್ವರೂಪದ ಬದಲಾವಣೆಗಳನ್ನು ಉಂಟುಮಾಡಬಹುದಾಗಿದೆ. ಇದು ವೈರಸ್ ಗಳನ್ನು ಹೊಂದಿರಬಹುದು ಮತ್ತು ಸೈಬರ್ ಬೆದರಿಕೆಗಳಿಗೆ ಸಾಧನಗಳನ್ನು ಒಡ್ಡುವ ರೀತಿಯಲ್ಲಿ ಅಸಮರ್ಪಕವಾದ ಭದ್ರತಾ ಕ್ರಮಗಳನ್ನು ಹೊಂದಿರಲೂಬಹುದು. ಈ ಅಪಾಯಗಳು ಐಡಿ ಕಳ್ಳತನ, ಕದ್ದ ಕ್ರೆಡಿಟ್ ಕಾರ್ಡ್ ಅಥವಾ ಬ್ಯಾಂಕ್ ವಿವರಗಳು, ಡೇಟಾ ನಷ್ಟ, ವ್ಯವಹಾರ ಅಡ್ಡಿ ಮತ್ತು ವಸ್ತು ಅಥವಾ ಖ್ಯಾತಿಯ ಹಾನಿಯನ್ನು ಒಳಗೊಂಡಿರುತ್ತವೆ.

ಆನ್‌ಲೈನ್‌ನಲ್ಲಿ ಫೇಸ್‌ಬುಕ್ ಸ್ಥಾಪಕನ ಫೋನ್ ನಂಬರ್ ಲೀಕ್; ಈ ಆ್ಯಪ್ ಬಳಸಿದ್ದೇ ಕಾರಣ!.

ಸಣ್ಣ ವ್ಯವಹಾರಗಳಿಗೆ ನಿಖರವಾದ ಸಾಫ್ಟ್ ವೇರ್ ಅನ್ನು ಖರೀದಿ ಮಾಡುವುದು ಟ್ರಿಕ್ಕಿಯಾಗಿರುತ್ತದೆ. ಆದರೆ, ಈ ಕೆಳಗಿನ ಹಂತಗಳನ್ನು ಅನುಸರಿಸಿದರೆ ನಿಜವಾಗಿಯೂ ಸುರಕ್ಷಿತರಾಗಿರಬಹುದು:

ಸುರಕ್ಷತೆಯ 7 ಮಾರ್ಗಗಳು
ನಕಲಿ ಉತ್ಪನ್ನಗಳ ಹಾವಳಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನಿಖರವಾದ ಸಾಫ್ಟ್ ವೇರ್ ಅನ್ನು ಖರೀದಿಸುವಾಗ ಈ 7 ಅಂಶಗಳನ್ನು ಗಮನದಲ್ಲಿಡಿ:

1.     ವಿಶ್ವಾಸಾರ್ಹವಾದ ಮಾರಾಟಗಾರರಿಂದ ಮತ್ತು ಸಾಫ್ಟ್ ವೇರ್ ಮರುಮಾರಾಟಗಾರರಿಂದ ಖರೀದಿ ಮಾಡಿ: ಸಾಫ್ಟ್ ವೇರ್ ಅನ್ನು ಖರೀದಿ ಮಾಡುವ ಸಂದರ್ಭದಲ್ಲಿ ಬಲ್ಲ ಮೂಲದಿಂದ ಖರೀದಿಸಿ. ವಿಶ್ವಾಸಾರ್ಹವಾದ ಮೂಲವನ್ನು ಖಚಿತಪಡಿಸಿಕೊಳ್ಳಿ. ನಂಬಿಕಾರ್ಹ ಮರುಮಾರಾಟಗಾರರು ಅಥವಾ ನಿಮ್ಮ ಉತ್ತಮವಾದ  ಅಧಿಕೃತ ಆನ್ ಲೈನ್ ಸ್ಟೋರ್ ಅನ್ನು ಆಯ್ಕೆ ಮಾಡಿಕೊಳ್ಳಿ.
2.     ಕೇವಲ ಪರವಾನಗಿ ಹೊಂದಿದ ಸಾಫ್ಟ್ ವೇರ್ ಅನ್ನು ಬಳಸಿ: ಸಾಫ್ಟ್ ವೇರ್ ಸಮರ್ಪಕವಾಗಿ ಪರವಾನಗಿ ಹೊಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದು ಅಧಿಕೃತ ವಿಂಡೋಸ್ ಅಥವಾ ಆಫೀಸ್ ಆಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ.
3.     ಬೆಲೆಗಳ ಬಗ್ಗೆ ತುಂಬಾ ಎಚ್ಚರವಾಗಿರಿ: ರಿಯಾಯ್ತಿಗಳು ಮತ್ತು ಅಗ್ಗದ ಸಾಫ್ಟ್ ವೇರ್ ಪ್ಯಾಕೇಜ್ ಗಳ ಬಲೆಗೆ ಬೀಳಬೇಡಿ. ಕಳೆದುಹೋದ ಡೇಟಾವನ್ನು ಮರುಪಡೆಯಲು ಅಥವಾ ಕಾನೂನು ಹಾನಿಗಳಿಗೆ ನೀವು ಹೆಚ್ಚಿನ ಹಣವನ್ನು ಪಾವತಿ ಮಾಡುವುದನ್ನು ನಿಲ್ಲಿಸಬಹುದು.
4.     ಉತ್ಪನ್ನದ ಮೂಲವನ್ನು ಪರೀಕ್ಷಿಸಿ: ಡಿಜಿಟಲ್ ಡೌನ್ಲೋಡ್ ಗಳಿಗೆ ನೀವು ಉತ್ಪನ್ನವು ವಿಶ್ವಾಸಾರ್ಹವಾದ ವ್ಯಾಪಾರಿಯಿಂದ ಮತ್ತು ಸಾಫ್ಟ್ ವೇರ್ ಮರುಮಾರಾಟಗಾರರಿಂದ ಬಂದಿದೆಯೇ ಎಂಬುದನ್ನು ಪರಿಶೀಲಿಸಿ. ಯಾವುದೇ ಕಾರಣಕ್ಕೂ ಅಪರಿಚಿತ ಆನ್ ಲೈನ್ ಫೋರಂ ಅಥವಾ ಪರಿಚಯವಿಲ್ಲದ ಇಮೇಲ್ ನಿಂದ ಬರುವ ಸಾಫ್ಟ್ ವೇರ್ ಅನ್ನು ಹಾಕಿಕೊಳ್ಳಬೇಡಿ.
5.     ಭೌತಿಕ ಸ್ಟೋರ್ ನಲ್ಲಿ ಖರೀದಿಸಿದರೆ, ಪ್ಯಾಕೇಜಿಂಗ್ ಬಗ್ಗೆ ಎರಡೆರಡು ಬಾರಿ ಪರಿಶೀಲಿಸಿ:ನಿಖರವಾದ ಲೋಗೋ, ಹೋಲೋಗ್ರಾಂ ಮತ್ತು ಬ್ರ್ಯಾಂಡ್ ಹೆಸರನ್ನು ಖಚಿತಪಡಿಸಿಕೊಳ್ಳಿ. ಸಮರ್ಪಕವಾದ ಪ್ಯಾಕೇಜಿಂಗ್ ಇರುವ ಉತ್ಪನ್ನಗಳನ್ನು ಖರೀದಿಸಬೇಡಿ. ಅಂತಹ ಉತ್ಪನ್ನಗಳು ಸರಿಯಾದ ಮೈಕ್ರೋಸಾಫ್ಟ್ ಅನ್ನು ಅನುಮೋದಿಸುವುದಿಲ್ಲ.
6.     ಖರೀದಿ ಮುನ್ನವೇ ಉತ್ಪನ್ನದ ಪ್ಯಾಕೇಜ್ ಓಪನ್ ಆಗಿಲ್ಲದಿರುವುದನ್ನು ಗಮನಿಸಿ: ಪ್ಯಾಕೇಜಿನ ನಿಖರತೆಯನ್ನು ಗಮನಿಸಿ. ಹೊಸ ಉತ್ಪನ್ನಗಳು ಯಾವಾಗಲೂ ಸೀಲ್ ಆಗಿರುವುದನ್ನು ಖಾರತಿಪಡಿಸಿ.
7. ಅಪ್-ಟು-ಡೇಟ್ ಆಗಿರಿ: ನಿಮ್ಮ ಸಾಫ್ಟ್ ವೇರ್ ಅನ್ನು ಕಾಲಕಾಲಕ್ಕೆ ಅಪ್ಡೇಟ್ ಮಾಡುವುದರಿಂದ ಹ್ಯಾಕರ್ಸ್ ಮತ್ತು ವೈರಸ್ ಗಳಿಂದ ನಿಮ್ಮ  ಸಿಸ್ಟಂ ಅನ್ನು ರಕ್ಷಿಸಿಕೊಳ್ಳಬಹುದಾಗಿದೆ.

ನಕಲಿ ಉತ್ಪನ್ನಗಳನ್ನು ಗುರುತಿಸುವುದು ಹೇಗೆ?
ಇತ್ತೀಚಿನ ವರ್ಷಗಳಲ್ಲಿ ಪೈರೇಟೆಡ್ ಮತ್ತು ನಕಲಿ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸಿ ಮಾರಾಟ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಫ್ಟ್ ವೇರ್ ನ ನಿಖರತೆ ಮತ್ತು ಅಸಲಿಯತ್ತನ್ನು ಗುರುತಿಸಬೇಕಾದರೆ ನೀವು ಮೂರು `ಪಿ’ಗಳನ್ನು ಗಮನದಲ್ಲಿಡಬೇಕಾಗುತ್ತದೆ.
 
1. ಪ್ಯಾಕೇಜಿಂಗ್: ಉತ್ಪನ್ನದ ಪ್ಯಾಕೇಜನ್ನು ಗಂಭೀರವಾಗಿ ಪರಿಶೀಲಿಸಿ. ಉತ್ಪನ್ನದ ನಿಖರತೆ ಬ್ಲರ್ ಆಗಿರುವ ಅಕ್ಷರದಿಂದ ಕೂಡಿರಬಾರದು, ಸ್ಪೆಲ್ಲಿಂಗ್ ತಪ್ಪುಗಳು ಅಥವಾ ತಪ್ಪಾದ ಲೋಗೋಗಳು ಇರಬಾರದು.
2. ಉತ್ಪನ್ನದ ಸಾಚಾತನ: ಡೌನ್ಲೋಡ್ ಬಟನ್ ಅನ್ನು ಕ್ಲಿಕ್ ಮಾಡುವ ಮುನ್ನ ವೆಬ್ ಸೈಟ್ ನ ಸೋರ್ಸ್ ಅನ್ನು ಪರೀಕ್ಷಿಸಿ, ಆಕ್ಷನ್ ಸೈಟ್ ಗಳನ್ನು ಮತ್ತು ಪೀರ್-ಟು-ಪೀರ್ ಶೇರಿಂಗ್ ಸೈಟ್ ಗಳನ್ನು ನಿಯಂತ್ರಿಸಿ.
3. ಉತ್ಪನ್ನದ ಲೇಬಲ್: ನಿಖರವಾದ ಮೈಕ್ರೋಸಾಫ್ಟ್ ಯಾವಾಗಲೂ ನಿಖರವಾದ ಲೇಬಲ್ ನ ಪ್ರಮಾಣಪತ್ರವನ್ನು ಹೊಂದಿರುತ್ತದೆ. ಇದರ ಜತೆಗೆ ಎಂಬಡೀಡ್ ಹೋಲೋಗ್ರಾಂ ಮತ್ತು 25 ಅಂಶಗಳ ಯೂನಿಕ್ ಪ್ರಾಡಕ್ಟ್ ಕೀ ಇರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಮೈಕ್ರೋಸಾಫ್ಟ್ ಸಾಫ್ಟ್ ವೇರ್ ಅನ್ನು ಖರೀದಿಸುವಾಗ ಜಾಣತನದಿಂದ ಖರೀದಿಸಿ.

Follow Us:
Download App:
  • android
  • ios