Online Education: ಯಾವ ಟ್ಯಾಬ್ ಕೊಡಬೇಕು?ಈ ಟ್ಯಾಬ್ ಟ್ರೈ ಮಾಡಿ
ಕೊರೋನಾದಿಂದಾಗಿ ಭೌತಿಕ ಶಾಲೆಗಳು ನಡೆಯುತ್ತಿಲ್ಲ. ಮನೆಯಲ್ಲಿ ಉಳಿದಿರುವ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ ಅನಿವಾರ್ಯವಾಗಿದೆ. ಹಾಗಾಗಿ, ಐದನೇ ಕ್ಲಾಸ್‌ವರೆಗಿನ ಮಕ್ಕಳಿಗೆ ಸ್ಮಾರ್ಟ್‌ಫೋನ್‌ಗಿಂತ ಟ್ಯಾಬ್‌ಗಳನ್ನು ಬಳಸಲು ಪೋಷಕರು ಹೆಚ್ಚು ಇಷ್ಟಪಡುತ್ತಾರೆ. ಆದರೆ, ಯಾವ ರೀತಿಯ ಟ್ಯಾಬ್‌ಗಳನ್ನು ಖರೀದಿಸಬೇಕೆಂಬ ಮಾಹಿತಿ ಇರುವುದಿಲ್ಲ. 15 ಸಾವಿರ ರೂ.ಒಳಗಿನ ಟ್ಯಾಬ್ಲೆಟ್ ಖರೀದಿಸುವುದು ಸೂಕ್ತ.
ಕೊರೋನಾ ಹಿನ್ನೆಲೆಯಲ್ಲಿ ಕಳೆದ ವರ್ಷದಿಂದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಆದರೆ, ಅವರ ಶಿಕ್ಷಣ ಹಾಳಾಗದಂತೆ ನೋಡಿಕೊಳ್ಳಲು ಸರಕಾರ ಮತ್ತು ಶೈಕ್ಷಣಿಕ ಸಂಸ್ಥೆಗಳ ಮೂಲಕ ಆನ್‌ಲೈನ್ ಮೂಲಕ ಶಿಕ್ಷಣವನ್ನು ನೀಡುತ್ತಿವೆ. ಆನ್‌ಲೈನ್ ಶಿಕ್ಷಣಕ್ಕೆ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ ಇಲ್ಲವೇ ಲ್ಯಾಪ್‌ಟ್ಯಾಪ್ ಅಗತ್ಯವಾಗಿ ಬೇಕು.
Redmi Note 10T 5G ಜು.20ಕ್ಕೆ ಬಿಡುಗಡೆ, ಫಾಸ್ಟ್ ಚಾರ್ಜಿಂಗ್ ಸೇರಿ ಹಲವು ಫೀಚರ್ಸ್
ಆದರೆ, ಚಿಕ್ಕಮಕ್ಕಳು ಅಂದರೆ ಎಲ್‌ಕೆಜಿಯಿಂದ ಐದನೇ ಕ್ಲಾಸಿನವರೆಗಿನ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ, ಆನ್‌ಲೈನ್ ಶಿಕ್ಷಣಕ್ಕಾಗಿ ಸ್ಮಾರ್ಟ್‌ಫೋನ್‌ಗಿಂತಲೂ ಟ್ಯಾಬ್ ಕೊಡಿಸುವುದು ಉತ್ತಮ. ಸ್ಮಾರ್ಟ್‌ಫೋನ್‌ಗಳು ಗಾತ್ರದಲ್ಲಿ ಚಿಕ್ಕವು. ಮತ್ತೊಂದೆಡೆ ಲ್ಯಾಪ್‌ಟ್ಯಾಪ್ ತುಂಬಾ ದೊಡ್ಡವು ಮತ್ತು ತುಟ್ಟಿಯೂ ಹೌದು. ಲ್ಯಾಪ್‌ಟ್ಯಾಪ್ ಭರಿಸಲು ಎಲ್ಲ ಪೋಷಕರಿಗೆ ಸಾಧ್ಯವಾಗಲಿಕ್ಕಿಲ್ಲ. ಹಾಗಾಗಿ, ಟ್ಯಾಬ್ಲೆಟ್ ಚಿಕ್ಕಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಅತ್ಯಂತ ಸೂಕ್ತವಾಗುತ್ತದೆ. ಆದರೆ, ಈ ಟ್ಯಾಬ್‌ಗಳು ಕೂಡ ತುಂಬಾ ದುಬಾರಿಯಾಗಿರುತ್ತವೆ. ಹೀಗಿದ್ದೂ 15 ಸಾವಿರ ರೂಪಾಯಿಯೊಳಗೆ ಅತ್ಯುತ್ತಮ ಎನ್ನಬಹುದಾದ ಟ್ಯಾಬ್‌ಗಳನ್ನು ಖರೀದಿಸಬಹುದು.
ಈ ಟ್ಯಾಬ್‌ಗಳು ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಅತ್ಯಂತ ಸೂಕ್ತವಾಗಿವೆ. ಹಾಗೆಯೇ ನಿಮ್ಮ ಜೇಬಿಗೆ ಹೊರೆಯಾಗುವುದಿಲ್ಲ. ಅಂಥ ಟ್ಯಾಬ್‌ಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಬನ್ನಿ ನೋಡೋಣ.
ಐಬಾಲ್ ಸೈಡ್ ಇಲಾನ್ 4ಜಿ2
ಈ ಟ್ಯಾಬ್ ಬೆಲೆ 11,999 ರೂಪಾಯಿ. ಈ ಸೆಗ್ಮೆಂಟ್‌ನಲ್ಲಿ ಐಬಾಲ್ ಟ್ಯಾಬ್ ಅತ್ಯುತ್ತಮವಾಗಿದೆ. ಇದು 10.1 ಇಂಚ್ ಡಿಸ್‌ಪ್ಲೇ ಹೊಂದಿದೆ. 7000 ಎಂಎಎಚ್ ಬ್ಯಾಟರಿಯನ್ನು ನೀಡಲಾಗಿದೆ. ಹಾಗಾಗಿ, ಒಮ್ಮೆ ಚಾರ್ಜ್ ಮಾಡಿದರೆ ದೀರ್ಘ ಸಮಯದವರೆಗೂ ಬಳಸಬಹುದು. 6.9 ಮಾರ್ಷ್ ಮೆಲ್ಲೋ ಆಂಡ್ರಾಯ್ಡ್ ಒಎಸ್ ಮೇಲೆ ರನ್ ಆಗುವ ಈ ಟ್ಯಾಬ್, ಅಕ್ಟಾ ಕೋರ್ ಪ್ರೊಸೆಸರ್ ಹೊಂದಿದೆ. ಇದು ನಿಮಗೆ 2ಜಿಬಿ ರ್ಯಾಮ್ ಮತ್ತು 16ಜಿಬಿ ಹಾಗೂ 32 ಜಿಬಿ ಸ್ಟೋರೇಜ್ ವೆರಿಯೆಂಟ್‌ಗಳಲ್ಲಿ ದೊರೆಯುತ್ತದೆ.
ಜುಲೈ 22ಕ್ಕೆ ಒನ್‌ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್ ಲಾಂಚ್ ಫಿಕ್ಸ್
ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ ಮ್ಯಾಕ್ಸ್.
ಈ ಟ್ಯಾಬ್ಲೆಟ್ ಬೆಲೆ 11,999 ರೂಪಾಯಿ. 2 ಜಿಬಿ ರ್ಯಾಮ್ ಮತ್ತು 16 ಜಿಬಿ ಸ್ಟೋರೇಜ್ ಹೊಂದಿರುವ ಈ ಟ್ಯಾಬ್‌ನಲ್ಲಿ ನಿಮಗೆ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಇದೆ. 7 ಇಂಚ್ ಡಿಸ್‌ಪ್ಲೇ ಹೊಂದಿರುವ ಈ ಟ್ಯಾಬ್ 4ಜಿ ವೋಎಲ್‌ಟಿಇಗೆ ಸಪೋರ್ಟ್ ಮಾಡುತ್ತದೆ. ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದ್ದು, 4000 ಎಂಎಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದೆ.
ಲೆನೋವೋ ಟ್ಯಾಬ್ 4 8
ಈ ಟ್ಯಾಬ್ ಬೆಲೆ 11,990 ರೂಪಾಯಿ. ಇದು ಅತ್ಯುತ್ತಮ ಆಯ್ಕೆ ಎನಿಸಿಕೊಳ್ಳಲಿದೆ. 4850 ಎಂಎಚ್ ಸಾಮರ್ಥ್ಯದ ಬ್ಯಾಟರಿಯನ್ನು ಕಂಪನಿಯು ಒದಗಿಸಿದ್ದು, ಆಂಡ್ರಾಯ್ಡ್ 7.0 ನೌಗಾಟ್ ಆಪರೇಟಿಂಗ್ ಸಾಫ್ಟ್‌ವೇರ್ ಮೇಲೆ ರನ್ ಆಗುತ್ತದೆ. 1.5 ಗಿಗಾ ಹರ್ಡ್ಸ್ ಕ್ವಾಲಕಾಂ ಕ್ವಾಡ್ ಪ್ರೊಸೆಸರ್ ನೀಡಲಾಗಿದೆ. 2ಜಿಬಿ ರ್ಯಾಮ್ ಮತ್ತು 16 ಜಿಬಿ ಇಂಟರ್ನಲ್ ಮೆಮೊರಿ ಇದೆ. ನೀವು ಟ್ಯಾಬ್‌ಗೆ ಡುಯಲ್ ಸಿಮ್‌ಗಳನ್ನೂ ಬಳಸಬಹುದು. 5 ಮೆಗಾ ಪಿಕ್ಸೆಲ್ ಕ್ಯಾಮೆರಾ ಕೂಡ ಇದೆ.
1,299 ಮತ್ತು 1,799 ರೂಪಾಯಿಗೆ ಡಿಝೋ ಫೋನ್ ಲಾಂಚ್ ಮಾಡಿದ ರಿಯಲ್‌ಮಿ
ಲೆನೋವೋ ಟ್ಯಾಬ್ ಎಂ8
ಈ ಟ್ಯಾಬ್ ಅತ್ಯುತ್ತಮ ಆಯ್ಕೆಯಾಗಬಲ್ಲದು ನಿಮ್ಮ ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ. ವೈ ಫೈ ಮತ್ತು ಸಿಮ್ ಎರಡಕ್ಕೂ ಇದು ಸಪೋರ್ಟ್ ಮಾಡುತ್ತದೆ. ಬೆಲೆ ಕೂಡ ಕಮ್ಮಿ ಇದೆ. 11,499 ರೂಪಾಯಿ ಬೆಲೆ ಇದೆ. ಇನ್ನು ಫೀಚರ್‌ಗಳ ಬಗ್ಗೆ ಹೇಳುವುದಾದರೆ 2 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಹೊಂದಿದೆ. 8 ಇಂಚ್ ಡಿಸ್‌ಪ್ಲೇ ಹೊಂದಿದ್ದು, ಫ್ರಂಟ್‌ನಲ್ಲಿ 2 ಮೆಗಾ ಪಿಕ್ಸೆಲ್ ಮತ್ತು ಹಿಂಬದಿಯಲ್ಲಿ 8 ಮೆಗಾ ಪಿಕ್ಸೆಲ್ ಕ್ಯಾಮೆರಾ ಒಳಗೊಂಡಿದೆ. ಮೀಡಿಯಾ ಟೆಕ್ ಹೆಲಿಯೋ ಎ22 ಕ್ವಾಡ್ ಕೋರ್ ಪ್ರೊಸೆಸರ್ ನೀಡಲಾಗಿದೆ. ಸಿಮ್ ಬಳಸಿಕೊಂಡು ವಾಯ್ಸ್ ಕಾಲ್ ಮಾಡಬಹುದು. ಆಂಡ್ರಾಯ್ಡ್ 9.0 ಒಎಸ್ ಹೊಂದಿರುವ ಈ ಫೋನ್‌ನಲ್ಲಿ 5000 ಎಂಎಎಚ್ ಬ್ಯಾಟರಿ ನೀಡಲಾಗಿದೆ.