Asianet Suvarna News Asianet Suvarna News

ASUS ZenBook 14 Flip OLED ಲ್ಯಾಪ್‌ಟ್ಯಾಪ್ ಲಾಂಚ್, ಬೆಲೆ ಎಷ್ಟು, ವಿಶೇಷತೆಗಳೇನು?

*ಪ್ರೀಮಿಯಂ ಎನ್ನಬಹುದಾದ ಲ್ಯಾಪ್‌ಟ್ಯಾಪ್ ಅನ್ನು ಆಸುಸ್ ಕಂಪನಿಯು ಲಾಂಚ್ ಮಾಡಿದೆ.
*ಆಸುಸ್ ಜೆನ್‌ಬುಕ್ 14 ಫ್ಲಿಪ್ ಒಎಲ್ಇಡಿಯು ಕಂಪನಿಯ ಜೆನ್‌ಬುಕ್ ಸೀರೀಸ್‌ನಲ್ಲಿ ಹೊಸ ಲ್ಯಾಪ್‌ಟ್ಯಾಪ್ ಆಗಿದೆ.
* ಈ ಹೊಸ ಲ್ಯಾಪ್ ಟ್ಯಾಪ್ 14 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ.

ASUS ZenBook 14 Flip OLED launched in India Price Specifications
Author
Bengaluru, First Published Mar 22, 2022, 12:04 PM IST

Tech Desk: ಸ್ಮಾರ್ಟ್‌ಫೋನುಗಳ ಮೂಲಕವೂ ತನ್ನ ಮಾರುಕಟ್ಟೆಯನ್ನು ಭಾರತದಲ್ಲಿ ವಿಸ್ತರಿಸಿಕೊಂಡಿರುವ ಆಸುಸ್ ಇಂಡಿಯಾ (Asus India), ಮುಖ್ಯವಾಗಿ ಲ್ಯಾಪ್‌ಟ್ಯಾಪ್ ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಗಣ್ಯ ಕಂಪನಿ ಎನಿಸಿಕೊಂಡಿದೆ. ಇದೀಗ ಆಸುಸ್ ಭಾರತೀಯ ಮಾರುಕಟ್ಟೆಗೆ ಪ್ರೀಮಿಯಂ ಲ್ಯಾಪ್‌ಟ್ಯಾಪ್ ಲಾಂಚ್ ಮಾಡಿದೆ. ಜೆನ್‌ಬುಕ್ (ZenBook) ಸೀರೀಸ್‌ನಲ್ಲಿ ಈಗಾಗಲೇ ಕಂಪನಿಯು ಅನೇಕ ಲ್ಯಾಪಿಗಳನ್ನು ಲಾಂಚ್ ಮಾಡಿದೆ. ಈ ಸಾಲಿಗೆ ಈಗ ಆಸುಸ್ ಜೆನ್‌ಬುಕ್ 14 ಫ್ಲಿಪ್ ಒಎಲ್ಇಡಿ ಲ್ಯಾಪ್‌ಟ್ಯಾಪ್ (Asus Zenbook 14 Flip OLED) ಸೇರ್ಪಡೆಯಾಗಿದೆ.

ಭಾರತದಲ್ಲಿ ಬಿಡುಗಡೆಯಾಗಿರುವ ಈ ಲ್ಯಾಪಿ, ಎಎಂಡಿ ರಾಯ್ಜೆನ್ 9 5900ಎಚ್ಎಕ್ಸ್ ( AMD Ryzen™ 9 5900HX) ಪ್ರೊಸೆಸರ್‌ಗಳನ್ನು ಒಳಗೊಂಡಿದೆ. ಈ ಆಸುಸ್ ಜೆನ್‌ಬುಕ್ 14 ಫ್ಲಿಪ್ ಒಎಲ್ಇಡಿ ಹಗುರ, ಸ್ಲಿಮ್ ಆಗಿದ್ದ, 16:10 2.8K OLED HDR NanoEdge ಟಚ್‌ಸ್ಕ್ರೀನ್‌ನೊಂದಿಗೆ ಈ ಲ್ಯಾಪ್‌ಟ್ಯಾಪ್ ಮಾರಾಟಕ್ಕೆ ಸಿಗಲಿದೆ. ಬೆಲೆಯ ದೃಷ್ಟಿಯಿಂದ ನೋಡಿದರೆ ಈ ಆಸುಸ್ ಲ್ಯಾಪ್‌ಟ್ಯಾಪ್ ಪ್ರೀಮಿಯಂ ಸಾಧನ ಎಂಬುದು ಖಚಿತವಾಗುತ್ತದೆ.

ಹಾಗೆಯೇ, ಬೆಲೆಗೆ ತಕ್ಕಂತೆ ನೀವು ಫೀಚರ್‌ಗಳು, ಬಳಕೆಯ ಅನುಭವವನ್ನು ಕೂಡ ಪಡೆಯಬಹುದು. ಭಾರತೀಯ ಮಾರುಕಟ್ಟೆಗೆ ಸೋಮವಾರ ಬಿಡುಗಡೆಯಾಗಿರುವ ಈ ಲ್ಯಾಪ್‌ಟ್ಯಾಪ್ ಗ್ರಾಹಕರಿಗೆ ASUS e-shop, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಆನ್‌ಲೈನ್ ತಾಣಗಳಲ್ಲಿ ಸಿಗಲಿದೆ. ಜತೆ ಆಫ್‌ಲೈನ್ ಆಗಿ ಅಂಗಡಿಗಳಲ್ಲೂ ದೊರೆಯಲಿದೆ.

ಇದನ್ನೂ ಓದಿ:  BSNL Rs 797 Recharge Plan: 395 ದಿನ ವ್ಯಾಲಿಡಿಟಿ, 2GB ಹೈಸ್ಪೀಡ್ ಇಂಟರ್ನೆಟ್!

ಆಸುಸ್ ಜೆನ್‌ಬುಕ್ 14 ಫ್ಲಿಪ್ ಒಎಲ್ಇಡಿ (ASUS Zenbook 14 Flip OLED) ಲ್ಯಾಪ್ ಟ್ಯಾಪ್ 14 ಇಂಚಿನ ಲ್ಯಾಪ್‌ಟ್ಯಾಪ್ ಆಗಿದೆ. ಹಾಗೆಯೇ  ಇದು 2.8K OLED HDR 16:10 ಡಿಸ್‌ಪ್ಲೇ ಜೊತೆಗೆ 4-ಸೈಡೆಡ್ ನ್ಯಾನೋ ಎಡ್ಜ್ (NanoEdge) ವಿನ್ಯಾಸವನ್ನು ಹೊಂದಿದೆ, ಸ್ಲಿಮ್ 2.9 mm ಸೈಡ್ ಬೆಜೆಲ್‌ಗಳನ್ನು ಹೊಂದಿದೆ. ಈ ಲ್ಯಾಪ್‌ಟ್ಯಾಪ್ ಶೇ.88 ಸ್ಕ್ರೀನ್ ಟು ಬಾಡಿ ಅನುಪಾತವನ್ನು ಒದಗಿಸುತ್ತದೆ. ಪ್ರದರ್ಶನವು 2880 x 1800 ರೆಸಲ್ಯೂಶನ್, 1,000,000:1 ಕಾಂಟ್ರಾಸ್ಟ್ ಅನುಪಾತ, 0.2 ms ರೆಸ್ಪಾನ್ಸ್ ಟೈಮ್ ಒಳಗೊಂಡಿದೆ. ಜತೆಗೆ ಈ ಲ್ಯಾಪ್ ಟ್ಯಾಪ್ ನಯವಾದ 90Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ.

 

 

ಎಡ್ಜ್ ಟು ಎಡ್ಜ್ ಪೂರ್ಣ ಗಾತ್ರದ ಮತ್ತು ಬ್ಯಾಕ್‌ಲಿಟ್ ಕೀಬೋರ್ಡ್ ಕಾಣಬಹುದು. ಈ ಕೀಬೋರ್ಡ್ 19.05 ಎಂಎಂ ಪಿಚ್ ಅನ್ನು ಸಾಧಿಸುತ್ತದೆ (ಪಕ್ಕದ ಕೀಗಳ ಮಧ್ಯದ ಬಿಂದುಗಳ ನಡುವಿನ ಅಂತರ) ಸಾಮಾನ್ಯವಾಗಿ ಬಳಸುವ ಅನೇಕ ಫಂಕ್ಷನ್ ಕೀಗಳನ್ನು ಉಳಿಸಿಕೊಂಡು, ಬಳಕೆದಾರರು ನಿಖರತೆಯೊಂದಿಗೆ ಆರಾಮವಾಗಿ ಟೈಪ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ಕೂಡ ತುಂಬ ಚೆನ್ನಾಗಿದೆ.

ಇದನ್ನೂ ಓದಿ:  Lenovo ThinkBook 14+, ThinkBook 16+ ಲ್ಯಾಪ್‌ಟ್ಯಾಪ್ ಲಾಂಚ್, ಏನೆಲ್ಲ ವಿಶೇಷಗಳಿವೆ?

ಆಸುಸ್ ಜೆನ್‌ಬುಕ್ 14 ಫ್ಲಿಪ್ ಒಎಲ್ಇಡಿ ಲ್ಯಾಪ್‌ಟ್ಯಾಪ್ ಆಡಿಯೋ ಸಿಸ್ಟಮ್ ಕೂಡ ತುಂಬ ಚೆನ್ನಾಗಿದೆ. ASUS ಗೋಲ್ಡನ್ ಇಯರ್ ತಂಡದ ತಜ್ಞರು ಎಚ್ಚರಿಕೆಯಿಂದ ಟ್ಯೂನ್ ಮಾಡಿದ್ದಾರೆ ಮತ್ತು ಎಲ್ಲಾ ರೀತಿಯ ವಿಷಯಗಳಿಗೆ ಅತ್ಯುತ್ತಮವಾದ ಧ್ವನಿಯನ್ನು ಖಚಿತಪಡಿಸಿಕೊಳ್ಳಲು ಆಡಿಯೊ ತಜ್ಞರು ಹರ್ಮನ್ ಕಾರ್ಡನ್ ಅವರು ಪ್ರಮಾಣೀಕರಿಸಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ. Noise-Canceling ಸೌಲಭ್ಯ ಕೂಡ ಇದೆ.

Zenbook 14 Flip OLED ಸರಣಿಯು 63 Whr ಬ್ಯಾಟರಿಯನ್ನು ಹೊಂದಿದೆ 100W ಟೈಪ್-C ಫಾಸ್ಟ್-ಚಾರ್ಜರ್‌ನಿಂದ ಕಡಿಮೆ ಅವಧಿಯಲ್ಲಿ ಚಾರ್ಜಿಂಗ್ ಆಗಲು ಸಾಧ್ಯವಾಗುತ್ತದೆ. ಈ ಲ್ಯಾಪ್‌ಟ್ಯಾಪ್ ಪ್ರೀಮಿಯಂ ಲ್ಯಾಪ್‌ಟ್ಯಾಪ್ ಆಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ 91,990 ರೂ.ನಿಂದ ಆರಂಭವಾಗಿ 1,34,990 ರೂ.ವರೆಗೂ ಬೆಲೆ ನಿಗದಿಪಡಿಸಲಾಗಿದೆ. ವೇಗವಾಗಿ ಕೆಲಸ ಮಾಡುಲು ಮತ್ತು ಅತ್ಯಾಧುನಿಕ ಫೀಚರ್‌ಗಳನ್ನು ನಿರೀಕ್ಷಿಸುವವರಿಗೆ ಈ ಲ್ಯಾಪ್‌ಟ್ಯಾಪ್ ಉತ್ತಮ ಆಯ್ಕೆಯಾಗಿದೆ ಎನ್ನಬಹುದು.

Follow Us:
Download App:
  • android
  • ios