Lenovo ThinkBook 14+, ThinkBook 16+ ಲ್ಯಾಪ್‌ಟ್ಯಾಪ್ ಲಾಂಚ್, ಏನೆಲ್ಲ ವಿಶೇಷಗಳಿವೆ?
*ಲೆನೋವೋ ಕಂಪನಿಯ ಎರಡು ಹೊಸ ಲ್ಯಾಪ್‌ಟ್ಯಾಪ್‌ಗಳು ಚೀನಾ ಮಾರುಕಟ್ಟೆಗೆ ಲಾಂಚ್.
*12ನೇ ತಲೆಮಾರಿನ ಇಂಟೆಲ್ ಸಿಪಿಯುಗಳು, Nvidia RTX 2050 GPU ಇದರಲ್ಲಿವೆ
*ವಿಂಡೋಸ್ 11 ಒಎಸ್ ಆಧರಿತವಾಗಿದ್ದು, ಸಾಕಷ್ಟು ಗಮನ ಸೆಳೆಯುವ ಫೀಚರ್‌ಗಳಿವೆ.
Tech Desk: ಲ್ಯಾಪ್‌ಟ್ಯಾಪ್ ಉತ್ಪಾದನೆ ಮತ್ತು ಮಾರಾಟದಲ್ಲಿ ಅಗ್ರಗಣ್ಯ ಎನಿಸಿರುವ ಚೀನಾ ಮೂಲದ ಲೆನೋವೋ ಮತ್ತೆ ಹೊಸ ಲ್ಯಾಪ್‌ಟ್ಯಾಪ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಹಾಕಿದೆ. ಕಂಪನಿಯು ಇದೀಗ ಲೆನೋವೋ ಥಿಂಕ್ ಬುಕ್ 14 + (Lenovo ThinkBook 14+ ) ಮತ್ತು ಲೆನೋವೋ ಥಿಂಕ್‌ಬುಕ್ 16 + (Lenovo ThinkBook 16+) ಲ್ಯಾಪ್‌ಟ್ಯಾಪ್‌ಗಳನ್ನು ಲಾಂಚ್ ಮಾಡಿದೆ. ಈ ಎರಡೂ ಸಾಧನಗಳು ತಮ್ಮ ವಿಶಿಷ್ಟ ಫೀಚರ್‌ಗಳಿಂದ ಗಮನ ಸೆಳೆಯುತ್ತಿವೆ. ಈ ಲ್ಯಾಪ್‌ಟ್ಯಾಪ್‌ಗಳ ಸದ್ಯ ಚೀನಾ ಮಾರುಕಟ್ಟೆಗೆ ಮಾತ್ರವೇ ಬಿಡುಗಡೆಯಾಗಿದ್ದು, ಭಾರತವು ಸೇರಿದೆಂತ ಇತರ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿವೆ ಎಂಬ ಕಂಪನಿಯು ಯಾವುದೇ ಮಾಹಿತಿಯನ್ನು ಇನ್ನೂ ಬಿಟ್ಟುಕೊಟ್ಟಿಲ್ಲ.
ಚೀನಾದಲ್ಲಿ ಮಾರ್ಚ್ 28ರಿಂದ ಮಾರಾಟಕ್ಕೆ ದೊರೆಯಲಿವೆ. ಈ ಎರಡೂ ಲ್ಯಾಪಿಗಳಲ್ಲಿ ಕಂಪನಿಯು ವಿಂಡೋಸ್ 11 ಒಎಸ್ ಇದ್ದು, ಇಂಟೆಲ್ ಕೋರ್ ಐ5 12ನೇ ತಲೆಮಾರು ಕೋರ್ ಐ7 ಅಲ್ಡೇರ್ ಲೇಕ್ ಪ್ರೊಸೆಸರ್‌ಗಳಿದ್ದು, ಇವು 16 ಜಿಬಿ RAM ಹಾಗೂ 512 ಜಿಬಿ ಆನ್‌ಬೋರ್ಡ್ ಸ್ಟೋರೇಜ್‌ನೊಂದಿಗೆ ಸಂಯೋಜಿತಗೊಂಡಿವೆ.
ಇದನ್ನೂ ಓದಿ: Samsung Galaxy A53 5G, A33 5G ಲಾಂಚ್: ಭಾರತದಲ್ಲಿ ಯಾವಾಗ ಬಿಡುಗಡೆ? ಬೆಲೆ ಎಷ್ಟು?
ಹೊಸ ಲೆನೋವೋ ಥಿಂಕ್‌ಬುಕ್ 14 ಪ್ಲಸ್ ಮತ್ತು ಥಿಂಕ್ ಬುಕ್ 16 ಪ್ಲಸ್ ಲ್ಯಾಪ್‌ಟ್ಯಾಪ್‌ಗಳು ಲ್ಯಾಪ್‌ಟಾಪ್‌ಗಳು Intel Iris Xe ಗ್ರಾಫಿಕ್ಸ್ ಅಥವಾ ಐಚ್ಛಿಕ Nvidia GeForce RTX 2050 ಡಿಸ್ಕ್ರೀಟ್ ಗ್ರಾಫಿಕ್ಸ್‌ನೊಂದಿಗೆ ಬರುತ್ತವೆ. Lenovo ThinkBook 14+ 90Hz ರಿಫ್ರೆಶ್ ದರದೊಂದಿಗೆ 14-ಇಂಚಿನ 2.8K ಪ್ರದರ್ಶಕ (2,880x1,800 ಪಿಕ್ಸೆಲ್‌ಗಳು)ದೊಂದಿಗೆ ಬಂದರೆ, Lenovo ThinkBook 16+ 16-ಇಂಚಿನ 2.5K (2,560x2,080 pixels) ಡಿಸ್‌ಪ್ಲೇಯೊಂದಿಗೆ ಬರುತ್ತದೆ.
ಈ ಲ್ಯಾಪ್‌ಟ್ಯಾಪ್‌ಗಳು 12 ನೇ ತಲೆಮಾರಿನ ಇಂಟೆಲ್ ಕೋರ್ i5-12500H ಮತ್ತು ಕೋರ್ i7-12700H ಪ್ರೊಸೆಸರ್‌ನಿಂದ ಚಾಲಿತವಾಗಿದ್ದು, 16GB LPDDR5 RAM ನೊಂದಿಗೆ ಜೋಡಿಸಲಾಗಿದ. ಹಾಗಾಗಿ, ಇವು ವೇಗದಾಯಕಾವಗಿದ್ದು, ಎಂಥದ್ದೇ ಕಠಿಣ ಕೆಲವನ್ನು ಸುಲಭವಾಗಿ ಮಾಡಲು ಸಾಧ್ಯವಾಗಲಿದೆ. Lenovo ThinkBook 14+ ಮತ್ತು ThinkBook 16+ ಎರಡೂ 512GB SSD ಸಂಗ್ರಹಣೆಯನ್ನು ನೀಡುತ್ತವೆ.
ಇದನ್ನೂ ಓದಿ: Redmi 10 ಫೋನ್ ಲಾಂಚ್, 50 ಎಂಪಿ ಕ್ಯಾಮೆರಾ, ಬೆಲೆ ಕೇವಲ 10,999 ರೂ.!
ಲ್ಯಾಪ್‌ಟಾಪ್‌ಗಳಲ್ಲಿನ ಕನೆಕ್ಟಿವಿಟಿ ಆಯ್ಕೆಗಳು ಕೂಡ ಗಮನ ಸೆಳೆಯುತ್ತವೆ. ವೈ-ಫೈ 6, ಬ್ಲೂಟೂತ್ v5.2, ಥಂಡರ್‌ಬೋಲ್ಟ್ 4 ಪೋರ್ಟ್, ಯುಎಸ್‌ಬಿ 3.2 ಜನ್ 1 ಟೈಪ್-ಎ ಪೋರ್ಟ್, ಯುಎಸ್‌ಬಿ 2.0 ಟೈಪ್-ಎ ಪೋರ್ಟ್, ಎರಡು ಯುಎಸ್‌ಬಿ 3.2 ಜನ್ 1 ಟೈಪ್-ಸಿ ಪೋರ್ಟ್‌ಗಳು ಸೇರಿವೆ. HDMI 2.1 ಪೋರ್ಟ್, ಎತರ್ನೆಟ್ ಪೋರ್ಟ್ ಮತ್ತು SD ಕಾರ್ಡ್ ರೀಡರ್‌ಗಳನ್ನು ಕಾಣಬಹುದು.
ಲೆನೋವೋ ಥಿಂಕ್‌ಬುಕ್ 14+ ಲ್ಯಾಪ್‌ಟ್ಯಾಪ್ 62Whr ಬ್ಯಾಟರಿಯಲ್ಲಿ ಕಾರ್ಯನಿರ್ವಹಿಸುತ್ತದೆ, ಆದರೆ ಥಿಂಕ್‌ಬುಕ್ 16+ 71Whr ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಎರಡೂ ಲ್ಯಾಪ್‌ಟಾಪ್‌ಗಳು USB ಟೈಪ್-ಸಿ ಮೂಲಕ 100W ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ ಎಂಬುದನ್ನು ಮರೆಯಬಾರದು.
ಲೆನೋವೋ ಥಿಂಕ್‌ಬುಕ್ 14 ಪ್ಲಸ್ ಬೆಲೆ, ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಅಂದಾಜು 59,700ರೂ.ನಿಂದ ಆರಂಭವಾಗಿ 83,000 ರೂ.ವರೆಗೂ ತಲಪುತ್ತದೆ. ಹಾಗೆಯೇ, ಥಿಂಕ್‌ಬುಕ್ 16 ಪ್ಲಸ್ ಲ್ಯಾಪ್‌ಟ್ಯಾಪ್ ಬೆಲೆಯು ಅಂದಾಜು ಗರಿಷ್ಠ 83,000 ರೂ.ವರೆಗೂ ಇರಲಿದೆ ಎಂದು ಹೇಳಲಾಗುತ್ತಿದೆ. ಚೀನಾ ಮೂಲದ ಲೆನೋವೋ ಲ್ಯಾಪ್‌ಟ್ಯಾಪ್ ಮತ್ತು ಪಿಸಿ ತಾಯರಿಕೆಯಲ್ಲಿ ಅಗ್ರಗಣ್ಯವಾಗಿದ್ದು, ತನ್ನ ಉತ್ಕೃಷ್ಟ ಉತ್ಪನ್ನಗಳ ಮೂಲಕ ಹೆಚ್ಚು ಮನ್ನಣೆಯನ್ನು ಗಳಿಸಿಕೊಂಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಲೆನೋವೋ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಕಾರಣಕ್ಕಾಗಿಯೇ ಕಂಪನಿಯು ಈ ಉತ್ಪನ್ನಗಳು ಭಾರತೀಯ ಮಾರುಕಟ್ಟೆಗೆ ಎಂಟ್ರೆ ಕೊಡಲಿವೆ ಎಂಬ ಕುತೂಹಲ ಇದ್ದೇ ಇರುತ್ತದೆ. ಆದರೆ, ಕಂಪನಿ ಈ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.