Asianet Suvarna News Asianet Suvarna News

BSNL Rs 797 Recharge Plan: 395 ದಿನ ವ್ಯಾಲಿಡಿಟಿ, 2GB ಹೈಸ್ಪೀಡ್ ಇಂಟರ್ನೆಟ್!

*ಬಿಎಸ್ಸೆನ್ನೆಲ್ ಹೊಸ ಪ್ರೀಪೇಡ್ ಪ್ಲ್ಯಾನ್ ಪರಿಚಯಿಸಿದ್ದು, 395 ದಿನಗಳ ವ್ಯಾಲಿಡಿಟಿ ಹೊಂದಿದೆ
*ಈ ಪ್ಲ್ಯಾನ್‌ನಲ್ಲಿ ಬಳಕೆದಾರಿಗೆ 2ಜಿಬಿ ಹೈಸ್ಪೀಡ್ ಇಂಟರ್ನೆಟ್ ದೊರೆಯಲಿದೆ
*ಅನಿಯಂತ್ರಿತ ವಾಯ್ಸ್ ಕಾಲ್ ಸೇರಿದಂತೆ ಇನ್ನಿತರ ಅನೇಕ ಲಾಭಗಳು ಇದರಲ್ಲಿವೆ

BSNL has introduced Rs797 Prepaid Recharge Plan With Up to 395 Days Validity
Author
Bengaluru, First Published Mar 21, 2022, 12:05 PM IST

Tech Desk: ಬಿಎಸ್ಎನ್ಎಲ್ (BSNL) ಎಂದೇ ಖ್ಯಾತವಾಗಿರುವ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ ಲಿ. (Bharat Sanchar Nigam Limited) ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಯು ಇದೀಗ ಮತ್ತೊಂದು ಹೊಸ ಪ್ಲ್ಯಾನ್‌ನೊಂದಿಗೆ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ಕಂಪನಿಯು 797 ರೂ. ಮೌಲ್ಯದ ಹೊಸ ಪ್ರಿಪೇಡ್ ಪ್ಲ್ಯಾನ್ (Prepaid Plan) ಪರಿಚಯಿಸಿದ್ದು, ಈ ಯೋಜನೆಯಲ್ಲಿ ಬಳಕೆದಾರರಿಗೆ 395 ದಿನಗಳವರೆಗೂ ವ್ಯಾಲಿಡಿಟಿ ಮತ್ತು 2 ಜಿಬಿ ಹೈಸ್ಪೀಡ್ ಇಂಟರ್ನೆಟ್ (Internet) ಸಿಗಲಿದೆ!

ಬಿಎಸ್‌ಎನ್ಎಲ್‌ನ ಈ ಹೊಸ ಪ್ರಿಪೇಡ್ ಪ್ಲ್ಯಾನ್ ಲಾಭ ಇಷ್ಟಕ್ಕೆ ನಿಲ್ಲುವುದಿಲ್ಲ, ಬದದಲಿಗೆ ವಾಯ್ಸ್ ಕಾಲ್ಸ್, 2ಜಿಬಿ ಹೈಸ್ಪೀಡ್ ಡೇಟಾ, ನಿತ್ಯ 100 ಎಸ್ಸೆಮ್ಮೆಸ್ (SMS) ಉಚಿತ ಇರಲಿದೆ. ಜತೆಗೆ ಹೆಚ್ಚುವರಿಯಾಗಿ 30 ದಿನಗಳ ವ್ಯಾಲಿಡಿಟಿ ಕೂಡ ಸಿಗಲಿದೆ. ಹಾಗೆಯೇ, ಈ 797 ರೂ. ಮೌಲ್ಯದ ಪ್ರಿಪೇಡ್ ಪ್ಲ್ಯಾನ್ ದೇಶದ ಯಾವುದೇ ಸೀಮಿತ ಸರ್ಕಲ್‌ಗಳಿಗೆ ರಿಸ್ಟ್ರಿಕ್ಟ್ ಆಗಿಲ್ಲ. ಬದಲಿಗೆ ಪ್ಯಾನ್ ಇಂಡಿಯಾ ಬಳಕೆದಾರರಿಗೆ ದೊರೆಯಲಿದೆ. ಪ್ರಿಪೇಡ್ ಬಳಕೆದಾರರಿಗೆ ಇದು ಬಂಪರ್ ಆಫರ್ ಎಂದು ಹೇಳಬಹುದು. 

ಇದನ್ನೂ ಓದಿBSNL New Plan: 329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್, ಇಂಟರ್ನೆಟ್ ವೇಗ ಎಷ್ಟು, ಏನೆಲ್ಲ ಸಿಗುತ್ತೆ?

ಇಡೀ ದೇಶಾದ್ಯಂತ ವ್ಯಾಪ್ತಿಯ ವ್ಯಾಲಿಡಿಟಿ ಹೊಂದಿರುವ ಈ 797 ರೂ. ಮೌಲ್ಯದ ಬಿಎಸ್ಸೆನ್ನೆಲ್ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ಅನಿಯಂತ್ರಿತ ಲೋಕಲ್ ಮತ್ತು ಎಸ್‌ಟಿಡಿ ಕರೆಗಳು, ರೋಮಿಂಗ್ ಕಾಲ್ಸ್ ಸೌಲಭ್ಯಗಳು ಮೊದಲ 60 ದಿನಗಳವರೆಗೆ ಸಿಗಲಿವೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಇದರರ್ಥ ಯೋಜನೆಯು ಒಟ್ಟಾರೆ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದರೂ, ಪ್ರಯೋಜನಗಳು ಮೊದಲ ಎರಡು ತಿಂಗಳವರೆಗೆ ಮಾತ್ರ ಲಭ್ಯವಿರುತ್ತವೆ. ಇದಲ್ಲದೆ, ನೀಡಲಾದ ಡೇಟಾ ವೇಗವು ನ್ಯಾಯೋಚಿತ-ಬಳಕೆಯ ನೀತಿ (FUP) ಅಡಿಯಲ್ಲಿ ಲಭ್ಯವಿರುತ್ತದೆ ಮತ್ತು ನೀಡಿರುವ ಹಂಚಿಕೆಯು ಮುಗಿದ ನಂತರ 80Kbps ಗೆ ಕಡಿಮೆಯಾಗುತ್ತದೆ.

 

 

ಹೆಚ್ಚುವರಿ 30 ದಿನಗಳ ವ್ಯಾಲಿಡಿಟಿಯು ಜೂನ್ 12 ರವರೆಗೆ ಮಾನ್ಯವಾಗಿರುತ್ತದೆ ಎಂದು ಬಿಎಸ್ಸೆನ್ನೆಲ್‌ನ ಕರ್ನಾಟಕ ವಿಭಾಗವು ಟ್ವೀಟ್ ಮೂಲಕ ತಿಳಿಸಿದೆ. BSNL ಆನ್‌ಲೈನ್ ಪೋರ್ಟಲ್ ಅನ್ನು ಬಳಸಿಕೊಂಡು ಬಳಕೆದಾರರು ಹೊಸ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು. ಇದು BSNL ಸೆಲ್ಫ್‌ಕೇರ್ ಅಪ್ಲಿಕೇಶನ್ ಮೂಲಕ ನಾಲ್ಕು ಶೇಕಡಾ ರಿಯಾಯಿತಿಯೊಂದಿಗೆ ಲಭ್ಯವಿದೆ. ಇದಲ್ಲದೆ, ರೀಚಾರ್ಜ್ ಯೋಜನೆಯು Google Pay ಮತ್ತು Paytm ಸೇರಿದಂತೆ ಥರ್ಡ್ ಪಾರ್ಟಿ ಆಪ್‌ಗಳ ಮೂಲಗಳ ಮೂಲಕ ಲಭ್ಯವಿದೆ.

ಇದನ್ನೂ ಓದಿ:  Samsung Galaxy A53 5G, A33 5G ಲಾಂಚ್: ಭಾರತದಲ್ಲಿ ಯಾವಾಗ ಬಿಡುಗಡೆ? ಬೆಲೆ ಎಷ್ಟು?

329 ರೂ. ಭಾರತ ಫೈಬರ್ ಎಂಟ್ರಿ ಮಂತ್ಲಿ ಪ್ಲ್ಯಾನ್: ಬಿಎಸ್ಸೆನ್ನೆಲ್ ಕಂಪನಿಯು 329 ರೂಪಾಯಿ ಮೌಲ್ಯದ ಫೈಬರ್ ಎಂಟ್ರಿ ಮಂತ್ಲಿ ಬ್ರಾಡ್ ಬಾಂಡ್ ಪ್ಲ್ಯಾನ್ ಅನುಷ್ಠಾನ ಮಾಡಿದ್ದು, ಇದು ಬ್ರಾಡ್ ಬಾಂಡ್ ಬಳಕೆದಾರರಿಗೆ ಹೆಚ್ಚು ಲಾಭವನ್ನು ತಂದುಕೊಡಲಿದೆ.  ಬಿಎಸ್ಸೆನ್ನೆಲ್‌ ಭಾರತ್ ಫೈಬರ್‌ನ ಅತಿ ಅಗ್ಗದ ಪ್ಲ್ಯಾನ್ ಆಗಿದ್ದು, ಈ ಹೊಸ ಬ್ರಾಡ್ ಬಾಂಡ್ ಇಂಟರ್ನೆಟ್ ಪ್ಲ್ಯಾನ್ ಬಳಕೆದಾರರಿಗೆ 20 ಎಂಬಿಪಿಎಸ್ ಸ್ಪೀಡ್ ಅವರಿಗೆ ಇಂಟರ್ನೆಟ್ ನೀಡಲಿದೆ. ಆದರೆ, ಇಲ್ಲೊಂದು ಟ್ವಿಸ್ಟ್ ಇದೆ.

ಈ ಹೊಸ ಪ್ಲ್ಯಾನ್ ದೇಶದ ಎಲ್ಲ ರಾಜ್ಯಗಳಲ್ಲಿ ಲಭ್ಯವಿಲ್ಲ. ಬದಲಿಗೆ ಆಯ್ದ ರಾಜ್ಯಗಳಲ್ಲಿ ಮಾತ್ರವೇ ಇದು ಗ್ರಾಹಕರಿಗೆ ಸಿಗಲಿದೆ. ಈ ಪ್ಲ್ಯಾನ್ 1,000GB (1TB) ನ ಫೇರ್ ಯೂಸೇಜ್ ಪಾಲಿಸಿ (FUP) ಮಿತಿಯನ್ನು ಹೊಂದಿದೆ, ಅದರ ನಂತರ ಚಂದಾದಾರರು ಸೇವಾ ಪೂರೈಕೆದಾರರ ಪ್ರಕಾರ ಕಡಿಮೆ ವೇಗದಲ್ಲಿ ಬ್ರೌಸ್ ಮಾಡಲು ಸಾಧ್ಯವಾಗುತ್ತದೆ.

ಬಳಕೆದಾರರು ಭಾರತದಲ್ಲಿನ ಯಾವುದೇ ನೆಟ್‌ವರ್ಕ್‌ಗೆ ಸ್ಥಳೀಯ ಮತ್ತು STD ಕರೆಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ. ಖಾಸಗಿ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳಿಂದ ಭಾರೀ ಸ್ಪರ್ಧೆಯನ್ನು ಎದುರಿಸುತ್ತಿರುವ ಭಾರತ ಸಂಚಾರ ನಿಗಮ ಗ್ರಾಹಕರನ್ನು ಆಕರ್ಷಿಸುವುದಕ್ಕೆ ಸಾಕಷ್ಟು ಆಕರ್ಷಕಾರಿ ಪ್ಲ್ಯಾನ್‌ಗಳನ್ನು ಪ್ರಕಟಿಸುತ್ತಲೇ ಇರುತ್ತದೆ. ಈ ಪ್ಲ್ಯಾನ್ ಕೂಡ ಅದೇ ರೀತಿಯಲ್ಲಿ ಗ್ರಾಹಕರನ್ನು ಸೆಳೆಯುವ ಸಾಧ್ಯತೆ ಇದೆ.

Follow Us:
Download App:
  • android
  • ios