ಜೂನ್ 7ರಂದು ಆ್ಯಪಲ್‌ನ 14 ಮತ್ತು 16 ಇಂಚಿನ ಮ್ಯಾಕ್‌ಬುಕ್ ಪ್ರೋ ಲಾಂಚ್?
ಉತ್ಕೃಷ್ಟ ಸಾಧನಗಳಿಂದಲೇ ಹೆಸರುವಾಸಿಯಾಗಿರುವ ಆಪಲ್ ಕಂಪನಿ ತನ್ನ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲಿದೆ. ವಿಶೇಷವಾಗಿ ಐಒಎಸ್ 15, ಐಪ್ಯಾಡ್ಒಎಸ್ 15, ಮ್ಯಾಕ್ಒಎಸ್ 12 ಮತ್ತಿತರ ಪ್ರಾಡಕ್ಟ್‌ಗಳ ಜತೆಗೆ ಮ್ಯಾಕ್‌ಬುಕ್ ಪ್ರೊ ಕೂಡ ಪರಿಚಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಜೂನ್ 7ರಂದು ಆಪಲ್ ವರ್ಲ್ಡ್‌ವೈಲ್ಡ್ ಡೆವಲಪರ್ ಕಾನ್ಫರೆನ್ಸ್(ಡಬ್ಲೂಡಬ್ಲೂಡಿಸಿ) 7 ರಂದು ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಆಪಲ್‌ನ ಹಲವು ಪ್ರಾಡಕ್ಟ್‌ಗಳು ಜಗತ್ತಿಗೆ ತೆರೆದುಕೊಳ್ಳಲಿವೆ. ಇದರ ಮಧ್ಯೆಯೇ ಮ್ಯಾಕ್‌ಬುಕ್ ಪ್ರೋ ಕೂಡ ಇದೇ ಸಮಾವೇಶದಲ್ಲಿ ಅನಾವರಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಮ್ಯಾಕ್‌ಬುಕ್ ಪ್ರೋ ಬಗ್ಗೆ ಸಾಕಷ್ಟು ದಿನಗಳಿಂದಲೂ ಕುತೂಹಲವಿದೆ. ಬಹುಶಃ ಜೂನ್ 7ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಎಲ್ಲ ಉತ್ತರ ಸಿಗುವ ನಿರೀಕ್ಷೆ ಇದೆ.
ಜೂನ್ 10ಕ್ಕೆ 1+ ನಾರ್ಡ್ ಸಿಇ 5G ಸ್ಮಾರ್ಟ್‌ಫೋನ್ ಬಿಡುಗಡೆ, ಏನೆಲ್ಲ ವಿಶೇಷತೆಗಳಿವೆ?
ಮ್ಯಾಕ್‌ಬುಕ್ ಪ್ರೋ 14 ಇಂಚ್ ಮತ್ತು 16 ಇಂಚ್ ಆಯ್ಕೆಗಳಲ್ಲಿ ದೊರೆಯಬಹುದು ಎನ್ನಲಾಗುತ್ತಿದೆ. ವೆಡ್‌ಬುಷ್ ಅನಲಿಸ್ಟ್ ಡೇನಿಯಲ್ ಇವ್ಸ್ ಅವರನ್ನು ಉಲ್ಲೇಖಿಸಿ ವರದಿ ಮಾಡಿರುವ ಮ್ಯಾಕ್‌ರೂಮರ್ಸ್ ಪ್ರಕಾರ, ಆಪಲ್ ಕೆಲವು ಆಶ್ಚರ್ಯಗಳನ್ನು ಈ ಬಾರಿ ಹೊರಗೆಡವಲಿದೆ. ಅವರ ಪ್ರಕಾರ, ಡಬ್ಲೂಡಬ್ಲ್ಯೂಡಿಸಿ 2021ರ ಕಾನ್ಫರೆನ್ಸ್‌ನಲ್ಲಿ ಆಪಲ್ ಮ್ಯಾಕ್‌ಬುಕ್ ಪ್ರೋ ಕೂಡ ಲಾಂಚ್ ಮಾಡಲಿದೆ.
ವರದಿಯ ಪ್ರಕಾರ ಆಪಲ್‌ನ ಮ್ಯಾಕ್‌ಬುಕ್ ಪ್ರೋ ಎರಡು ಮಾದರಿಯಲ್ಲಿ ಬರಲಿದೆ. ಮೊದಲನೆಯ 14 ಇಂಚಿನ ಮ್ಯಾಕ್‌ಬುಕ್, ಎರಡನೆಯದು 16 ಇಂಚಿನ ಮ್ಯಾಕ್‌ಬುಕ್ ಆಗಿರಲಿದೆ. ಈ ಎರಡೂ ಮಾದರಿಗಳಲ್ಲಿ ಶಕ್ತಿಶಾಲಿ ಎಂ1 ಚಿಪ್ ಅಥವಾ ಎಂ 2 ಚಿಪ್ ಕೂಡ ಇರುವ ಸಾಧ್ಯತೆ ಇದೆ. ಕೆಲವು ವರದಿಗಳ ಪ್ರಕಾರ, ಆಪಲ್ ಜೇಡ್ ಸಿ ಚಾಪ್ ಮತ್ತು ಜೇಡ್ ಸಿ ಡೈ ಎಂಬ ಕೋಡ್‌ನೇಮ್ ಚಿಪ್‌ಗಳನ್ನು ಎರಡು ಮಾದರಿಯ ಮ್ಯಾಕ್‌ಬುಕ್‌ನಲ್ಲಿ ಬಳಸಲಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಜೂನ್ 7ರಂದು ಗೊತ್ತಾಗಲಿದೆ.
8 ಹೈ ಪರ್ಫಾರ್ಮೆನ್ಸ್ ಕೋರ್ಸ್ ಮತ್ತು 2 ಎನರ್ಜಿ ಎಫಿಷಿಯೆಂಟ್ ಕೋರ್ಸ್ ಫೀಚರ್‌ಗಳನ್ನು ಈ ಎರಡೂ ಚಿಪ್‌ಗಳು ಹೊಂದಿರುವ ಸಾಧ್ಯತೆಗಳಿವೆ. ಜಿಪಿಯುವಿನಲ್ಲಿ ಮಾತ್ರ ವ್ಯತ್ಯಾಸವಿರಲಿದೆ ಎಂದು ಹೇಳಲಾಗುತ್ತಿದೆ. ಎರಡೂ ಮಾಡೆಲ್‌ಗಳು 16 ಅಥವಾ 32 ಜಿಪಿಯು ಕೋರ್ಸ್ ಹೊಂದಿರುವ ಸಾಧ್ಯತೆಯೂ ಇದೆ. ಫೋರ್ ಪರ್ಫಾರ್ಮೆನ್ಸ್ ಕೋರ್ಸ್ ಮತ್ತು ಫೋರ್ ಎಫಿಷಿಯೆನ್ಸ್ ಕೋರ್ಸ್‌ನೊಂದಿಗೆ ಎಂ1 ಚಿಪ್ ಬರಲಿದೆ. ಮುಂಬರುವ ಈ ಮಾಡೆಲ್ 64 ಜಿಬಿ ರ್ಯಾಮ್‌ಗೆ ಸಪೋರ್ಟ್ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಮ್ಯಾಕ್‌ಬುಕ್ ಪ್ರೋ 2021 ವಿನ್ಯಾಸದ ದೃಷ್ಟಿಯಿಂದಲೂ ಗಮನ ಸೆಳೆಯುತ್ತದೆ. ಕಡಿಮೆ ಫೀಚರ್ ಇರುವ ಮ್ಯಾಕ್‌ಬುಕ್ ಪ್ರೋಗೆ ಕಂಪನಿ ಜೆ314 ಎಂಬ ಕೋಡ್‌ನೇಮ್ ಇಟ್ಟಿದ್ದರೆ, 16 ಇಂಚಿನ ಮ್ಯಾಕ್‌ಬುಕ್‌ಪ್ರೋಗೆ ಕಂಪನಿ ಜೆ316 ಎಂದು ಹೆಸರಿಟ್ಟಿದೆ. ಎರಡೂ ಮಾಡೆಲ್‌ಗಳು ಮರುವಿನ್ಯಾಸಗೊಳಸಲ್ಪಟ್ಟ ಚಾಸೀಸ್ ಮತ್ತು ಮ್ಯಾಗ್ನೆಟಿಕ್ ಚಾರ್ಜಿಂಗ್‌ನೊಂದಿಗೆ ಬರಲಿವೆ.
ಕೆಲವು ವರದಿಗಳ ಪ್ರಕಾರ ಈ ಮ್ಯಾಕ್‌ಬುಕ್ ಪ್ರೋ ಫೀಚರ್‌ಗಳ ದೃಷ್ಟಿಯಿಂದಲೂ ವಿಶೇಷ ಗಮನ ಸೆಳೆಯುತ್ತವೆ. ಮ್ಯಾಕ್‌ಬುಕ್ ಬಲ ಬದಿಯಲ್ಲಿ ಎಚ್‌ಡಿಎಂಐ ಪೋರ್ಟ್, ಎಸ್‌ಡಿ ಕಾರ್ಡ್ ರೀಡರ್ ಸ್ಲಾಟ್ ಇರಲಿದೆ. ಈಗಾಗಲೇ ಚಾಲ್ತಿಯಲ್ಲಿರುವ ಮ್ಯಾಕ್‌ಬುಕ್ ಪ್ರೋನಲ್ಲಿ ಮೂರು ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳಿದ್ದವು. ಆದರೆ, ಈ ಹೊಸ ಮ್ಯಾಕ್‌ಬುಕ್ ಪ್ರೋನ್‌ನಲ್ಲಿ ನಾಲ್ಕು ಯುಎಸ್‌ಬಿ ಟೈಪ್ ಸಿ ಪೋರ್ಟ್‌ಗಳು ಇರಲಿವೆ ಎನ್ನಲಾಗುತ್ತಿದೆ.
ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!
ವಿಶೇಷ ಎಂದರೆ, ಈ ಹೊಸ 2021ರ ಮ್ಯಾಕ್‌ಬುಕ್ ಪ್ರೋನಲ್ಲಿ ಮ್ಯಾಗ್‌ಸೇಫ್ ಕಮ್‌ಬ್ಯಾಕ್ ಮಾಡಲಿದೆ. ಇದಕ್ಕಾಗಿ ಮ್ಯಾಕ್‌ಬುಕ್ ಪ್ರೋನ್ ಎಡಬದಿಯಲ್ಲಿ ಸ್ಲಾಟ್ ನಿಗದಿಪಡಿಸಲಾಗಿದೆ. ಚಾಲ್ತಿಯಲ್ಲಿರುವ ಮಾಡೆಲ್‌ಗಿಂತಲೂ ಅನೇಕ ರೀತಿಯಲ್ಲಿ ಹೊಸ ಮ್ಯಾಕ್‌ಬುಕ್ ಪ್ರೋ ವಿಭಿನ್ನವಾಗಿದೆ ಎಂದು ಹೇಳಬಹುದು.
ಇದೇ ವೇಳೆ, ಆಪಲ್ ಕಂಪನಿಯು ಸ್ಟೆಲೆನ್ ಎಂಬ ಕೋಡ್‌ನೇಮ್‍ನಡಿ ಹೊಸ 2021ರ ಮ್ಯಾಕ್‌ಬುಕ್ ಏರ್ ಪ್ರಾಡಕ್ಟ್ ಉತ್ಪಾದನೆಗೂ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಐಮ್ಯಾಕ್ ರೀತಿಯ ಬಣ್ಣಗಳು ಆಯ್ಕೆಯು ಮ್ಯಾಕ್‌ಬುಕ್ ಏರ್‌ನಲ್ಲಿ ದೊರೆಯಬಹುದು ಎನ್ನಲಾಗುತ್ತಿದೆ.
ಮ್ಯಾಕ್‌ಬುಕ್ ಪ್ರೋ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು, ರೂಮರ್‌ಗಳು ಹರಿದಾಡಿವೆ, ಹರಿದಾಡುತ್ತಿವೆ. ಆದರೆ, ಈ ಯಾವುದರ ಬಗ್ಗೆ ಆಪಲ್ ಕಂಪನಿಯ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಜೂನ್ 7ರಂದು ನಡೆಯಲಿರುವ ಡಬ್ಲೂಡಬ್ಲೂಡಿಸಿಯಲ್ಲಿ ಎಲ್ಲದಕ್ಕೂ ಉತ್ತರ ಸಿಗುವ ನಿರೀಕ್ಷೆ ಇದೆ.
ಬೊಂಬಾಟ್ ಸ್ಮಾರ್ಟ್ ಟಿವಿ ಬಿಡುಗಡೆ ಮಾಡಿದ ರಿಯಲ್‌ಮೀ