ವಿಶ್ವಕಪ್ ವಿಜೇತ ತಂಡದ ಆಟಗಾರರಿಗೆ 35 ಚಿನ್ನದ ಐಫೋನ್ ನೀಡಿದ ಮೆಸ್ಸಿ, ಫೋಟೋ ವೈರಲ್!
ಕಳೆದ ಡಿಸೆಂಬರ್‌ನಲ್ಲಿ ಕತಾರ್‌ನಲ್ಲಿ ಮುಕ್ತಾಯಗೊಂಡ 2022ರ ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಅರ್ಜೆಂಟೀನಾ ಚಾಂಪಿಯನ್ ಆಗಿತ್ತು. ಇದರ ನೆನಪಿಗಾಗಿ ತಂಡದ ಆಟಗಾರರು ಹಾಗೂ ಸಿಬ್ಬಂದಿ ಸೇರಿ 35 ಮಂದಿಗೆ ಚಿನ್ನ ಲೇಪಿತ ಐಫೋನ್ 14 ಅನ್ನು ಉಡುಗೊರೆಯಾಗಿ ನೀಡಿದ್ದಾರೆ. 24 ಕ್ಯಾರಟ್‌ನ ಪ್ರತಿ ಐಫೋನ್‌ನ ಮೇಲೆ ಆಟಗಾರನ ಹೆಸರು, ಜರ್ಸಿ ಸಂಖ್ಯೆ ಹಾಗೂ ಅರ್ಜೆಂಟೀನಾ ಫುಟ್‌ಬಾಲ್ ಅಸೋಸಿಯೇಷನ್‌ನ ಲಾಂಛನವನ್ನು ಮುದ್ರಿಸಲಾಗಿದೆ.
ಬ್ಯೂನಸ್ ಐರೀಸ್ (ಮಾ.2): ಕತಾರ್ ದೇಶದ ಆತಿಥ್ಯದಲ್ಲಿ ನಡೆದ 2022ರ ಫಿಫಾ ವಿಶ್ವಕಪ್‌ನಲ್ಲಿ ದಕ್ಷಿಣ ಅಮೆರಿಕದ ದೈತ್ಯ ತಂಡ ಅರ್ಜೆಂಟೀನಾ, 36 ವರ್ಷಗಳ ಬಳಿಕ ಟ್ರೋಫಿ ಗೆಲ್ಲುವಲ್ಲಿ ಯಶಸ್ವುಯಾಗಿತ್ತು. 1986ರಲ್ಲಿ ಮರಡೋನಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ದೇಶದ ಪಾಲಿಗೆ ಹೀರೋ ಆಗಿದ್ದರೆ, ಈ ಬಾರಿ ಲಿಯೋನೆಲ್ ಮೆಸ್ಸಿ ಇಡೀ ದೇಶವಾಸಿಗಳ ಹೆಮ್ಮೆಯ ಕ್ಯಾಪ್ಟನ್ ಎನಿಸಿದರು. ತಂಡ ವಿಶ್ವಕಪ್ ಟ್ರೋಫಿ ಗೆಲ್ಲಲು ಸಹಾಯ ಮಾಡಿದ ತಂಡದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿಗೆ ನಾಯಕ ಲಿಯೋನೆಲ್ ಮೆಸ್ಸಿ ವಿಶೇಷ ಗಿಫ್ಟ್ ನೀಡಿದ್ದಾರೆ. ತಂಡದ 35 ಮಂದಿ ಆಟಗಾರರು ಮತ್ತು ಸಿಬ್ಬಂದಿಗೆ 24 ಕ್ಯಾರಟ್ ಚಿನ್ನ ಲೇಪಿತ ಐಫೋನ್-14ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತಾಗಿ ದಿ ಸನ್ ಪತ್ರಿಕೆ ವರದಿ ಮಾಡಿದೆ. ಇದಕ್ಕಾಗಿ 175000 ಯುರೋ ಅಂದರೆ, 1.73 ಕೋಟಿ ರೂಪಾಯಿ ಮೊತ್ತವನ್ನು ಖರ್ಚಿ ಮಾಡಿದ್ದಾರೆ. ಸ್ವತಃ ಮೆಸ್ಸಿಯಿಂದಲೇ 24 ಕ್ಯಾರಟ್‌ನ ವಿಶೇಷ 35 ಚಿನ್ನ ಲೇಪಿತ ಐಫೋನ್‌ಗಾಗಿ ಆರ್ಡರ್ ಹೋಗಿತ್ತು. ಕಳೆದ ಶನಿವಾರ ಈ ಆರ್ಡರ್ ಅವರ ಪ್ಯಾರಿಸ್ ಅಪಾರ್ಟ್‌ಮೆಂಟ್‌ಗೆ ಹೋಗಿ ತಲುಪಿದೆ ಎನ್ನಲಾಗಿದೆ. ಇದರಲ್ಲಿ ಆಟಗಾರರ ಹೆಸರು, ಜರ್ಸಿ ನಂಬರ್ ಹಾಗೂ ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆಯ ಲಾಂಛನವನ್ನು ಮುದ್ರಿಸಲಾಗಿದೆ.
ಎರಡು ಬಾರಿ ಗೋಲ್ಡನ್ ಬಾಲ್ ವಿಜೇತ ಮೆಸ್ಸಿ, 2022 ರ ಕತಾರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ತಮ್ಮ ತಂಡದ ಐತಿಹಾಸಿಕ ಸಾಧನೆಯನ್ನು ವಿಶೇಷವಾಗಿ ಸ್ಮರಿಸಲು ಬಯಸಿದ್ದರು ಎಂದು ಮೂಲವೊಂದು ಬ್ರಿಟಿಷ್ ಟ್ಯಾಬ್ಲಾಯ್ಡ್‌ಗೆ ತಿಳಿಸಿದೆ. ಆದ್ದರಿಂದ, ಅವರು ಸ್ಮಾರ್ಟ್‌ಫೋನ್ ಗ್ರಾಹಕೀಕರಣ ಸೇವೆ ಐಡೆಸೈನ್ ಗೋಲ್ಡ್‌ನ CEO ಬೆನ್ ಲಿಯಾನ್ಸ್ ಅವರ ಸಂಪರ್ಕ ಮಾಡಿದ್ದರು. "ಲಿಯೋನೆಲ್ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಮಾತ್ರವಲ್ಲ, ಅವರು ಐಡೆಸಿಗ್ನ್ ಗೋಲ್ಡ್‌ನ ಅತ್ಯಂತ ಶ್ರೇಷ್ಠ ಗ್ರಾಹಕರಲ್ಲಿ ಒಬ್ಬರು ಮತ್ತು ವಿಶ್ವಕಪ್ ಫೈನಲ್‌ನ ಒಂದೆರಡು ತಿಂಗಳ ನಂತರ ನಮ್ಮೊಂದಿಗೆ ಸಂಪರ್ಕದಲ್ಲಿದ್ದರು" ಎಂದು ಲಿಯಾನ್ಸ್ ಹೇಳಿದರು. ಆ ಮೂಲಕ ಚಿನ್ನದ ಐಫೋನ್‌ನ ಆರ್ಡರ್‌ಅನ್ನು ಹೇಗೆ ಅಂತಿಮಗೊಳಿಸಿದೆವು ಎನ್ನುವ ಬಗ್ಗೆ ವಿವರಣೆ ನೀಡಿದರು.
FIFA Awards: ಕ್ರಿಸ್ಟಿಯಾನೋ ರೊನಾಲ್ಡೋ ಮತ ಚಲಾಯಿಸಿದಿದ್ದರೂ ಪ್ರಶಸ್ತಿ ಗೆದ್ದ ಲಿಯೋನೆಲ್ ಮೆಸ್ಸಿ..!
"ಅದ್ಭುತ ಗೆಲುವನ್ನು ಆಚರಿಸಲು ಎಲ್ಲಾ ಆಟಗಾರರು ಮತ್ತು ಸಿಬ್ಬಂದಿಗೆ ವಿಶೇಷ ಉಡುಗೊರೆಯನ್ನು ನೀಡಲು ಬಯಸಿರುವುದಾಗಿ ಅವರಿ ತಿಳಿಸಿದ್ದರು. ಆದರೆ, ವಾಚ್‌ಗಳು ಬಹಳ ಸಾಮಾನ್ಯ ಉಡುಗೊರೆಯಾಗಿತ್ತು. ಇಂಥ ಉಡುಗೊರೆ ಬೇಡ ಎಂದು ಅವರು ಹೇಳಿದ್ದರು. ಆದ್ದರಿಂದ ನಾನು ಆಯಾ ಆಟಗಾರರ ಹೆಸರಿನೊಂದಿಗೆ ಕೆತ್ತಲಾದ ಚಿನ್ನದ ಐಫೋನ್‌ಗಳ ಉಡುಗೊರೆ ಸೂಚಿಸಿದೆ. ಅವರು ಈ ಕಲ್ಪನೆಯನ್ನು ಇಷ್ಟಪಟ್ಟರು' ಎಂದರು. ಮೆಸ್ಸಿಯ ಉಡುಗೊರೆಯ ಫೋಟೋಗಳು ಇಂಟರ್‌ನೆಟ್‌ನಲ್ಲಿ ಪ್ರಕಟವಾಗಿದ್ದು, ಫುಟ್‌ಬಾಲ್ ತಾರೆಯ ಅನೇಕ ಅಭಿಮಾನಿಗಳ ಇದನ್ನು ಮೆಚ್ಚಿದ್ದಾರೆ.
ಅರ್ಜೆಂಟೀನಾ: ಪ್ರತಿ 70ರಲ್ಲಿ 1 ಮಗುವಿಗೆ ಲಿಯೋನೆಲ್ ಮೆಸ್ಸಿ ಹೆಸರು!
ಲಿಯೋನೆಲ್ ಮೆಸ್ಸಿ ಒಬ್ಬ ವಿಶ್ವ ಚಾಂಪಿಯನ್ ಅನ್ನೋದಕ್ಕೆ ಸಾಕ್ಷಿ ಇದು' ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.