ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಕತಾರ್, ಈಕ್ವೆಡಾರ್‌ ತಂಡಗಳಿಗೆ ನಿರಾಸೆನೆದರ್‌ಲೆಂಡ್ಸ್‌ ಹಾಗೂ ಸೆನೆಗಲ್‌ ತಂಡಗಳು ನಾಕೌಟ್‌ ಹಂತಕ್ಕೆ ಲಗ್ಗೆ‘ಎ’ ಗುಂಪಿನ ಅಂತಿಮ ಪಂದ್ಯದ ಬಳಿಕ ಅಗ್ರಸ್ಥಾನಿಯಾಗಿ ನೆದರ್‌ಲೆಂಡ್ಸ್‌ ತಂಡ ಅಂತಿಮ 16ರ ಘಟ್ಟಕ್ಕೆ ಲಗ್ಗೆ

ದೋಹಾ(ನ.30): 2022ರ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಸೆಣಸಿದ್ದ ಕತಾರ್‌ ಹಾಗೂ ಈಕ್ವೆಡಾರ್‌ ನಿರಾಸೆಯೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಿವೆ. ಅಂತಿಮ ಪಂದ್ಯಕ್ಕೂ ಮೊದಲೇ ನಾಕೌಟ್‌ ರೇಸ್‌ನಿಂದ ಹೊರಬಿದ್ದಿದ್ದ ಕತಾರ್‌, ‘ಎ’ ಗುಂಪಿನ ಅಂತಿಮ ಪಂದ್ಯದಲ್ಲಿ ನೆದರ್‌ಲೆಂಡ್‌್ಸಗೆ ಶರಣಾಯಿತು. 2-0 ಗೋಲುಗಳಲ್ಲಿ ಗೆದ್ದ ನೆದರ್‌ಲೆಂಡ್‌್ಸ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

ನಿರೀಕ್ಷೆಯಂತೆ ನೆದರ್‌ಲೆಂಡ್‌್ಸ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು. 26ನೇ ನಿಮಿಷದಲ್ಲೇ ಕೊಡಿ ಗಾಕ್ಪೋ ಗೋಲು ಬಾರಿಸಿ ಡಚ್‌ ಪಡೆಗೆ ಆರಂಭಿಕ ಮುನ್ನಡೆ ಒದಗಿಸಿದರು. ದ್ವಿತೀಯಾರ್ಧದಲ್ಲೂ ಕತಾರ್‌ನ ಅದೃಷ್ಟಬದಲಾಗಲಿಲ್ಲ. 49ನೇ ನಿಮಿಷದಲ್ಲಿ ನೆದರ್‌ಲೆಂಡ್‌್ಸನ ಫ್ರೆನ್ಕಿ ಡೆ ಜಾಂಗ್‌ ಬಾರಿಸಿದ ಗೋಲು ಆತಿಥೇಯ ತಂಡದ ಮೇಲೆ ಇನ್ನಷ್ಟುಒತ್ತಡ ಹೇರಿತು. 69ನೇ ನಿಮಿಷದಲ್ಲಿ ಚೆಂಡು ಗೋಲು ಪೆಟ್ಟಿಗೆ ಸೇರುವ ಮೊದಲು ಗಾಕ್ಪೋ ಕೈಗೆ ತಗುಲಿದ್ದ ಕಾರಣ, ನೆದರ್‌ಲೆಂಡ್‌್ಸಗೆ ಗೋಲು ನಿರಾಕರಿಸಲಾಯಿತು. ಆದರೆ ಇದರಿಂದ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಸೆನೆಗಲ್‌ಗೆ 2-1 ಜಯ

ಅಲ್‌ ರಯ್ಯನ್‌: ಕತಾರ್‌ ವಿರುದ್ಧ ಗೆದ್ದು, ನೆದರ್‌ಲೆಂಡ್‌್ಸ ವಿರುದ್ಧ ಡ್ರಾ ಸಾಧಿಸಿದ್ದ ಈಕ್ವೆಡಾರ್‌ ಅಂತಿಮ ಪಂದ್ಯದಲ್ಲಿ ಸೆನೆಗಲ್‌ಗೆ ಶರಣಾಯಿತು. 2-1 ಗೋಲುಗಳಲ್ಲಿ ಜಯಿಸಿದ ಸೆನೆಗಲ್‌, 2002ರ ಬಳಿಕ ಮೊದಲ ಬಾರಿಗೆ ನಾಕೌಟ್‌ ಹಂತಕ್ಕೇರಿತು. 2002ರಲ್ಲಿ ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಸ್ಪರ್ಧಿಸಿ ಕ್ವಾರ್ಟರ್‌ ಫೈನಲ್‌ ತಲುಪಿದ್ದ ತಂಡ, ಮತ್ತೆ ವಿಶ್ವಕಪ್‌ನಲ್ಲಿ ಆಡಿದ್ದು 2018ರಲ್ಲಿ. ಆ ಆವೃತ್ತಿಯಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು.

‘ಮೆಸ್ಸಿ ನನ್ನ ಕಣ್ಣಿಗೆ ಕಾಣದಂತೆ ಓಡಾಡಲಿ’ ಫುಟ್ಬಾಲ್ ದಿಗ್ಗಜನಿಗೆ ಮೆಕ್ಸಿಕೋ ಬಾಕ್ಸರ್‌ನಿಂದ ಬೆದರಿಕೆ!

ಮಂಗಳವಾರದ ಪಂದ್ಯದ 44ನೇ ನಿಮಿಷದಲ್ಲಿ ಪೆನಾಲ್ಟಿಅವಕಾಶವನ್ನು ಗೋಲಾಗಿಸಿದ ಇಸ್ಮಾಲಿಯಾ ಸಾರ್‌್ರ ಹಾಗೂ 70ನೇ ನಿಮಿಷದಲ್ಲಿ ಗೋಲು ಬಾರಿಸಿದ ಕಲಿಡೌ ಕೌಲಿಬಲಿ ಸೆನೆಗಲ್‌ ತಂಡವನ್ನು ನಾಕೌಟ್‌ಗೇರಿಸಿದರು. ಈಕ್ವೆಡಾರ್‌ ಪರ 67ನೇ ನಿಮಿಷದಲ್ಲಿ ಮೋಸೆಸ್‌ ಕೈಸಿಡೊ ಏಕೈಕ ಗೋಲು ಬಾರಿಸಿದರು.

ಪ್ರಿ ಕ್ವಾರ್ಟರ್‌ಗೆ ಪೋರ್ಚುಗಲ್‌

ಲುಸೈಲ್‌: ಕ್ರಿಸ್ಟಿಯಾನೋ ರೊನಾಲ್ಡೋ ಗೋಲು ಬಾರಿಸದೆ ಇದ್ದರೂ, ಸೋಮವಾರ ಅವರ ಸಂಭ್ರಮಾಚರಣೆಗೆ ಪಾರವೇ ಇರಲಿಲ್ಲ. ಕಾರಣ, ಪೋರ್ಚುಗಲ್‌ ವಿಶ್ವಕಪ್‌ ನಾಕೌಟ್‌ ಹಂತಕ್ಕೆ ಪ್ರವೇಶಿಸಿತು. ಉರುಗ್ವೆ ವಿರುದ್ಧದ ‘ಎಚ್‌’ ಗುಂಪಿನ ಪಂದ್ಯದಲ್ಲಿ ಬ್ರುನೊ ಫರ್ನಾಂಡೆಸ್‌ ಬಾರಿಸಿದ ಎರಡು ಗೋಲುಗಳ ನೆರವಿನಿಂದ ಪೋರ್ಚುಗಲ್‌ 2-0 ಅಂತರದಲ್ಲಿ ಜಯಿಸಿ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು.

54ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ಫರ್ನಾಂಡೆಸ್‌, 90+3ನೇ ನಿಮಿಷದಲ್ಲಿ 2ನೇ ಗೋಲು ಗಳಿಸಿದರು. ಈ ಪಂದ್ಯದಲ್ಲಿ ಉರುಗ್ವೆಗೆ ಅದೃಷ್ಟಕೈಹಿಡಿಯಲಿಲ್ಲ. ತಂಡದ ಹಲವು ಗೋಲು ಬಾರಿಸುವ ಪ್ರಯತ್ನಗಳು ಕೂದಲೆಳೆಯ ಅಂತರದಲ್ಲಿ ತಪ್ಪಿದವು. ಜೊತೆಗೆ ಪೋರ್ಚುಗಲ್‌ನ ಗೋಲ್‌ ಕೀಪರ್‌ ಡೀಗೋ ಕೋಸ್ಟಾತೋರಿದ ಆಕರ್ಷಕ ಪ್ರದರ್ಶನವೂ ಉರುಗ್ವೆಗೆ ಅಡ್ಡಿಯಾಯಿತು. 2 ಪಂದ್ಯಗಳಿಂದ ಕೇವಲ 1 ಅಂಕ ಗಳಿಸಿರುವ ಉರುಗ್ವೆ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದ್ದು, ಅಂತಿಮ ಪಂದ್ಯದಲ್ಲಿ ಘಾನಾವನ್ನು ಸೋಲಿಸಿದರೆ ಮಾತ್ರ ನಾಕೌಟ್‌ಗೇರಬಹುದು.

ರೊನಾಲ್ಡೋ ಬಾರಿಸಿದ ಗೋಲು ಫರ್ನಾಂಡೆಸ್‌ ಹೆಸರಿಗೆ?

54ನೇ ನಿಮಿಷದಲ್ಲಿ ಫರ್ನಾಂಡೆಸ್‌ ಕಾರ್ನರ್‌ನಿಂದ ಒದ್ದ ಚೆಂಡನ್ನು ಆಕರ್ಷಕ ಹೆಡ್ಡರ್‌ ಮೂಲಕ ಗೋಲುಪೆಟ್ಟಿಗೆಗೆ ಸೇರಿಸುವ ಪ್ರಯತ್ನವನ್ನು ರೊನಾಲ್ಡೋ ಮಾಡಿದರು. ಆದರೆ ಹಲವು ರೀಪ್ಲೇಗಳ ಬಳಿಕ ಗೋಲನ್ನು ಫರ್ನಾಂಡೆಸ್‌ ಹೆಸರಿನಲ್ಲಿ ದಾಖಲಿಸಲಾಯಿತು. ರೊನಾಲ್ಡೋ ಇದನ್ನು ಆರಂಭದಲ್ಲಿ ಪ್ರಶ್ನಿಸಿದರೂ ಬಳಿಕ ತಮ್ಮ ಸಹ ಆಟಗಾರರೊಂದಿಗೆ ಸಂಭ್ರಮಾಚರಣೆಯಲ್ಲಿ ತಲ್ಲೀನರಾದರು. ಈ ಗೋಲು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು. ಚೆಂಡಿನೊಳಗೆ ಅಳವಡಿಸಿರುವ ಚಿಪ್‌ ರವಾನಿಸಿದ ದತ್ತಾಂಶದ ಪ್ರಕಾರ ರೊನಾಲ್ಡೋ ತಲೆಗೆ ಚೆಂಡು ತಾಗಲಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಫಿಫಾ ತಿಳಿಸಿದೆ.