Asianet Suvarna News Asianet Suvarna News

AIFF ಆಡಳಿತ ಸಮಿತಿ ರದ್ದು, ಎಲೆಕ್ಷನ್‌ ಮುಂದೂಡಿದ ಸುಪ್ರೀಂ ಕೋರ್ಟ್‌..!

ತಾನೇ ನೇಮಿಸಿದ್ದ ಆಡಳಿತ ಸಮಿತಿ ರದ್ದುಪಡಿಸಿದ ಸುಪ್ರೀಂ ಕೋರ್ಟ್
ಹಂಗಾಮಿ ಪ್ರಧಾನ ಕಾರ‍್ಯದರ್ಶಿ ಸುನಂದೊ ಧಾರ್‌ಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಆದೇಶ
ಆಗಸ್ಟ್ 28ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನೂ ಒಂದು ವಾರ ಮುಂದೂಡಿಕೆ

Supreme Court Terminates CoA For AIFF Postpones Election By One Week kvn
Author
Bengaluru, First Published Aug 23, 2022, 10:06 AM IST

ನವದೆಹಲಿ(ಆ.23): ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌)ಗೆ ತಾನು ನೇಮಿಸಿದ್ದ ಆಡಳಿತ ಸಮಿತಿ(ಸಿಒಎ)ಯನ್ನು ಸುಪ್ರೀಂ ಕೋರ್ಚ್‌ ಸೋಮವಾರ ರದ್ದುಗೊಳಿಸಿದ್ದು, ಹಂಗಾಮಿ ಪ್ರಧಾನ ಕಾರ‍್ಯದರ್ಶಿ ಸುನಂದೊ ಧಾರ್‌ಗೆ ಹೆಚ್ಚುವರಿ ಜವಾಬ್ದಾರಿ ನೀಡಿ ಆದೇಶ ಹೊರಡಿಸಿತು. ಅಲ್ಲದೇ ಅಂತಾರಾಷ್ಟ್ರೀಯ ಫುಟ್ಬಾಲ್‌ ಆಡಳಿತ ಸಮಿತಿ(ಫಿಫಾ)ಯಿಂದ ನಿಷೇಧಕ್ಕೊಳಗಾಗಿರುವ ಎಐಎಫ್‌ಎಫ್‌ಗೆ ಆ.28ಕ್ಕೆ ನಡೆಯಬೇಕಿದ್ದ ಚುನಾವಣೆಯನ್ನೂ ಒಂದು ವಾರ ಮುಂದೂಡಿದ್ದು, ಮತದಾನ ಪಟ್ಟಿಯಲ್ಲಿ ಎಲ್ಲಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ 36 ಸದಸ್ಯರನ್ನು ಸೇರಿಸುವಂತೆ ನಿರ್ದೇಶಿಸಿತು. 

ನ್ಯಾಯಾಧೀಶರಾದ ಡಿ.ವೈ.ಚಂದ್ರಚೂಡ್‌ ಹಾಗೂ ಎ.ಎಸ್‌.ಬೋಪಣ್ಣ ಅವರಿದ್ದ ಪೀಠ, ಎಐಎಫ್‌ಎಫ್‌ ಮೇಲಿನ ಫಿಫಾ ಅಮಾನತನ್ನು ಹಿಂಪಡೆಯಲು ಮತ್ತು ಅಂಡರ್‌-17 ವಿಶ್ವಕಪ್‌ ಭಾರತದಲ್ಲೇ ನಡೆಸುವ ಉದ್ದೇಶದಿಂದ ತನ್ನ ಆದೇಶದಲ್ಲಿ ಬದಲಾವಣೆ ತಂದಿದ್ದಾಗಿ ತಿಳಿಸಿದೆ.

ವಿಶ್ವ ಬ್ಯಾಡ್ಮಿಂಟನ್‌: ಸೇನ್‌, ಕಿದಂಬಿ, ಪ್ರಣಯ್‌ಗೆ ಜಯ

ಟೋಕಿಯೋ: ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್‌, ಎಚ್‌.ಎಸ್‌.ಪ್ರಣಯ್‌ ಹಾಗೂ ಕಿದಂಬಿ ಶ್ರೀಕಾಂತ್‌ ಶುಭಾರಂಭ ಮಾಡಿದ್ದಾರೆ. ಸೋಮವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸೇನ್‌ ಡೆನ್ಮಾರ್ಕ್ನ ಹ್ಯಾನ್ಸ್‌ ಕ್ರಿಸ್ಟಿಯನ್‌ ವಿರುದ್ಧ 21-12, 21-11 ಅಂತರದಲ್ಲಿ ಗೆದ್ದರೆ, ಪ್ರಣಯ್‌ ಆಸ್ಟ್ರಿಯಾದ ಲ್ಯುಕಾ ವ್ರಾಬರ್‌ರನ್ನು 21-12, 21-11 ನೇರ ಗೇಮ್‌ಗಳಿಂದ ಮಣಿಸಿದರು.

ಭಾರತೀಯ ಫುಟ್ಬಾಲ್‌ ಅಧ್ಯಕ್ಷ ಸ್ಥಾನಕ್ಕೆ ಬೈಚುಂಗ್‌ ಭುಟಿಯಾ ಸ್ಪರ್ಧೆ

ಮಾಜಿ ವಿಶ್ವ ನಂ.1 ಶ್ರೀಕಾಂತ್‌ ವಿಯೆಟ್ನಾಂನ ನುಯೇನ್‌ ವಿರುದ್ಧ 22-20, 21-19 ಗೇಮ್‌ಗಳಲ್ಲಿ ಜಯಗಳಿಸಿದರು. ಆದರೆ ಸಾಯಿ ಪ್ರಣೀತ್‌ ಹಾಗೂ ಮಹಿಳಾ ಸಿಂಗಲ್ಸ್‌ನಲ್ಲಿ ಮಾಳವಿಕಾ ಬನ್ಸೋದ್‌ ಮೊದಲ ಸುತ್ತಲ್ಲೇ ಸೋತು ಹೊರಬಿದ್ದರು. ಪುರುಷರ ಡಬಲ್ಸ್‌ನಲ್ಲಿ ಅರ್ಜುನ್‌-ಧೃವ್‌ ಕಪಿಲಾ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ, ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ-ಇಶಾನ್‌ ಭಾಟ್ನಾಗರ್‌ 2ನೇ ಸುತ್ತಿಗೆ ಲಗ್ಗೆ ಇಟ್ಟರು.

ಕಿರಿಯರ ವಾಲಿಬಾಲ್‌: ಕಂಚು ಗೆದ್ದ ಭಾರತ

ತೆಹ್ರಾನ್‌(ಇರಾನ್‌): ಭಾರತ ಪುರುಷರ ವಾಲಿಬಾಲ್‌ ತಂಡ ಅಂಡರ್‌-18 ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದೆ. ಸೋಮವಾರ ನಡೆದ 3ನೇ ಸ್ಥಾನಕ್ಕಾಗಿನ ಪಂದ್ಯದಲ್ಲಿ ಕೊರಿಯಾ ವಿರುದ್ಧ ಭಾರತ 25-20, 25-21, 26-28, 19-25, 15-12ರಲ್ಲಿ ಜಯಿಸಿತು. 2023ರಲ್ಲಿ ನಡೆಯಲಿರುವ ಅಂಡರ್‌-19 ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದೆ. ಭಾರತಕ್ಕಿದು ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ 5ನೇ ಪದಕ. 2003ರಲ್ಲಿ ಚಿನ್ನ ಗೆದ್ದಿದ್ದ ಭಾರತ, 2005-08ರ ಅವಧಿಯಲ್ಲಿ 2 ಕಂಚು, 1 ಬೆಳ್ಳಿ ಗೆದ್ದಿತ್ತು.

Follow Us:
Download App:
  • android
  • ios