ಸೂಪರ್ ಕಪ್‌ ಫುಟ್ಬಾಲ್‌: ರನ್ನರ್‌-ಅಪ್‌ಗೆ ತೃಪ್ತಿಪಟ್ಟ ಬೆಂಗಳೂರು ಎಫ್‌ಸಿ

* ಸೂಪರ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಒಡಿಶಾ ಎಫ್‌ಸಿ ಚಾಂಪಿಯನ್
* ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಬೆಂಗಳೂರು ಎಫ್‌ಸಿ
* ಎರಡನೇ ಬಾರಿಗೆ ಸೂಪರ್ ಕಪ್ ಗೆಲ್ಲುವ ಬೆಂಗಳೂರು ಕನಸು ಭಗ್ನ

Super Cup Mauricio brace clinches title for Odisha FC Bengaluru FC Settle for runner up kvn

ಕಲ್ಲಿಕೋಟೆ(ಏ.26): ಸೂಪರ್ ಕಪ್ ಫುಟ್ಬಾಲ್‌ ಟೂರ್ನಿಯಲ್ಲಿ 2ನೇ ಬಾರಿ ಚಾಂಪಿಯನ್ ಎನಿಸಿಕೊಳ್ಳುವ ಬೆಂಗಳೂರು ಎಫ್‌ಸಿ ತಂಡದ ಕನಸು ನುಚ್ಚುನೂರಾಗಿದೆ. ಮಂಗಳವಾರ ನಡೆದ ಮೂರನೇ ಆವೃತ್ತಿಯ ಸೂಪರ್ ಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಒಡಿಶಾ ಎಫ್‌ಸಿ ಎದುರು 2018ರ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡವು 1-2 ಗೋಲುಗಳಿಂದ ಸೋಲುಂಡಿತು. ಇತ್ತೀಚೆಗಷ್ಟೇ ಇಂಡಿಯನ್‌ ಸೂಪರ್ ಲೀಗ್ ಫೈನಲ್‌ನಲ್ಲಿ ಮುಗ್ಗರಿಸಿದ್ದ ಬಿಎಫ್‌ಸಿ ತಂಡವು, ಇದೀಗ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಎಡವಿತು.

ಪಂದ್ಯದ ಆರಂಭದಿಂದಲೇ ಚೆಂಡಿನ ಮೇಲೆ ಹಿಡಿತ ಸಾಧಿಸಿದ್ದ ಒಡಿಶಾ ಪರ 23ನೇ ನಿಮಿಷದಲ್ಲಿ ಡಿಯಾಗೊ ಮಾರ್ಸಿಯೋ ಮೊದಲ ಗೋಲು ಬಾರಿಸಿದರು. 38ನೇ ನಿಮಿಷದಲ್ಲಿ ಮಾರ್ಸಿಯೋ ಹೊಡೆದ ಮತ್ತೊಂದು ಗೋಲು ತಂಡಕ್ಕೆ ಭರ್ಜರಿ ಮುನ್ನಡೆ ಒದಗಿಸಿಕೊಟ್ಟಿತು. ಇನ್ನು 85ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿಸಿದ ಸುನಿಲ್‌ ಚೆಟ್ರಿ, ಬಿಎಫ್‌ಸಿ ಸೋಲಿನ ಅಂತರವನ್ನು ಕಡಿಮೆಗೊಳಿಸಲಷ್ಟೇ ಶಕ್ತರಾದರು. ಕೆಲ ಫ್ರೀ ಕಿಕ್ ಹಾಗೂ ಗೋಲು ಗಳಿಸುವ ಅವಕಾಶಗಳನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದು, ಬಿಎಫ್‌ಸಿ ಪಾಲಿಗೆ ಮುಳುವಾಗಿ ಪರಿಣಮಿಸಿತು.

ಇಂದಿ​ನಿಂದ ಬ್ಯಾಡ್ಮಿಂಟ​ನ್‌ ಏಷ್ಯಾ ಚಾಂಪಿ​ಯ​ನ್‌​ಶಿ​ಪ್‌

ದುಬೈ: 40ನೇ ಆವೃ​ತ್ತಿಯ ಪ್ರತಿ​ಷ್ಠಿತ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿ​ಯ​ನ್‌​ಶಿಪ್‌ನ ಪ್ರಧಾನ ಸುತ್ತಿನ ಪಂದ್ಯ​ಗಳು ಬುಧ​ವಾರ ಆರಂಭ​ಗೊ​ಳ್ಳ​ಲಿದ್ದು, 2023ರಲ್ಲಿ ನಿರೀ​ಕ್ಷಿತ ಪ್ರದ​ರ್ಶನ ತೋರಲು ವಿಫ​ಲ​ವಾ​ಗಿ​ರುವ ಭಾರ​ತೀ​ಯರ ಶಟ್ಲ​ರ್‌​ಗಳು ಪದಕದ ಬರ ನೀಗಿ​ಸುವ ಕಾತ​ರ​ದ​ಲ್ಲಿ​ದ್ದಾ​ರೆ. ಟೂರ್ನಿ​ಯಲ್ಲಿ ಈವ​ರೆಗೆ ಭಾರತ 17 ಪದಕ ಜಯಿ​ಸಿದ್ದು, 1965ರಲ್ಲಿ ಏಕೈಕ ಚಿನ್ನದ ಪದಕವನ್ನು ದಿನೇಶ್‌ ಖನ್ನಾ ಗೆದ್ದಿ​ದ್ದರು. ಹೀಗಾಗಿ ಸುಮಾರು 6 ದಶ​ಕಗಳ ಬಳಿಕ ಮತ್ತೊಮ್ಮೆ ಬಂಗಾರದ ಸಾಧನೆ ಮಾಡ​ಲು ಭಾರತ ಕಾಯು​ತ್ತಿದೆ. 

ವಿರಾಟ್ ಕೊಹ್ಲಿ ಜತೆ ಬ್ಯಾಡ್ಮಿಂಟನ್ ಆಡಿದ ಅನುಷ್ಕಾ ಶರ್ಮಾ; ಫಿಟ್ನೆಸ್ ಪಾಠ ಮಾಡಿದ ವಿರುಷ್ಕಾ ಜೋಡಿ

ಪುರು​ಷರ ಸಿಂಗ​ಲ್ಸ್‌​ನಲ್ಲಿ ಕಿದಂಬಿ ಶ್ರೀಕಾಂತ್‌, ಎಚ್‌.​ಎ​ಸ್‌.​ಪ್ರ​ಣಯ್‌, ಲಕ್ಷ್ಯ ಸೇನ್‌ ಕಣ​ದ​ಲ್ಲಿದ್ದು, ಪಿ.ವಿ.ಸಿಂಧು, ಮಾಳ​ವಿಕಾ, ಆಕರ್ಷಿ ಕಶ್ಯಪ್‌ ಮಹಿಳಾ ಸಿಂಗ​ಲ್ಸ್‌​ನಲ್ಲಿ ಆಡ​ಲಿ​ದ್ದಾರೆ. ಅಗ್ರ ಶ್ರೇಯಾಂಕಿತ ಸಾತ್ವಿ​ಕ್‌-ಚಿರಾಗ್‌ ಶೆಟ್ಟಿಪುರು​ಷರ ಡಬ​ಲ್ಸ್‌​ನಲ್ಲಿ ಪದಕ ಗೆಲ್ಲುವ ಫೇವ​ರಿಟ್‌ ಎನಿ​ಸಿ​ಕೊಂಡಿದ್ದು, ಮಹಿಳಾ ಡಬ​ಲ್ಸ್‌​ನಲ್ಲಿ ತ್ರೀಸಾ-ಗಾಯತ್ರಿ ಮೇಲೆ ಭಾರೀ ನಿರೀ​ಕ್ಷೆ ಇದೆ. ಅಶ್ವಿನಿ ಭಟ್‌-ಶಿಖಾ ಗೌತಮ್‌ ಕೂಡಾ ಕಣ​ಕ್ಕಿ​ಳಿ​ಯ​ಲಿ​ದ್ದಾ​ರೆ.

ಬೆಂಗ​ಳೂರು 10ಕೆ ಓಟ​ಕ್ಕೆ ಸಾನ್ಯಾ ರಾಸ್‌ ರಾಯ​ಭಾ​ರಿ

ಬೆಂಗ​ಳೂ​ರು: ಸತತ 3 ಒಲಿಂಪಿಕ್ಸ್‌ಗ​ಳಲ್ಲಿ 4*400 ಮೀ. ರಿಲೇ ಓಟ​ದಲ್ಲಿ ಚಿನ್ನ ಗೆದ್ದಿ​ರುವ ಏಕೈಕ ಮಹಿಳೆ ಎನಿ​ಸಿ​ಕೊಂಡಿ​ರುವ ಜಮೈ​ಕಾದ ಸಾನ್ಯಾ ರಿಚ​ರ್ಡ್ಸ್-ರಾಸ್‌ ಮೇ 21ರಂದು ನಡೆ​ಯ​ಲಿ​ರುವ 15ನೇ ಆವೃ​ತ್ತಿಯ ವಿಶ್ವ 10ಕೆ ಬೆಂಗ​ಳೂರು ಮ್ಯಾರ​ಥಾ​ನ್‌ನ ಅಂತಾ​ರಾ​ಷ್ಟ್ರೀಯ ರಾಯ​ಭಾ​ರಿ​ಯಾಗಿ ನೇಮ​ಕ​ಗೊಂಡಿ​ದ್ದಾರೆ. 

ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿ​ಯ​ನ್‌​ಶಿ​ಪ್‌​ಗ​ಳಲ್ಲಿ ಒಟ್ಟು 14 ಪದಕ ಗೆದ್ದಿ​ರುವ ಸಾನ್ಯಾ ವಿಶ್ವ ರಿಲೇ​, ಐಎ​ಎ​ಎಫ್‌ ಡೈಮಂಡ್‌ ಮತ್ತು ಗೋಲ್ಡನ್‌ ಲೀಗ್‌​ಗ​ಳಲ್ಲೂ ಹಲವು ಚಿನ್ನ​ದ ಪದ​ಕ​ಗ​ಳ​ನ್ನು ಜಯಿಸಿದ್ದಾರೆ.

Latest Videos
Follow Us:
Download App:
  • android
  • ios