Asianet Suvarna News Asianet Suvarna News

ಸೂಪರ್‌ ಕಪ್‌: ಬಿಎಫ್‌ಸಿಗೆ ಒಡಿಶಾ ಫೈನಲ್‌ ಎದುರಾಳಿ..!

ಸೂಪರ್ ಕಪ್‌ ಫೈನಲ್‌ ಪಂದ್ಯಕ್ಕೆ ವೇದಿಕೆ ಸಜ್ಜು
ಪ್ರಶಸ್ತಿಗಾಗಿ ಬೆಂಗಳೂರು ಎಫ್‌ಸಿ-ಒಡಿಶಾ ಎಫ್‌ಸಿ ಫೈಟ್
ಏಪ್ರಿಲ್ 25ರಂದು ನಡೆಯಲಿರುವ ಫೈನಲ್ ಪಂದ್ಯ

Super Cup 2023 Odisha FC Set Up Final Against Bengaluru FC kvn
Author
First Published Apr 23, 2023, 2:03 PM IST

ಮಂಜೇರಿ(ಏ.23): 3ನೇ ಆವೃತ್ತಿಯ ಸೂಪರ್‌ ಕಪ್‌ ಫುಟ್ಬಾಲ್‌ ಟೂರ್ನಿಯ 2ನೇ ಸೆಮಿಫೈನಲ್‌ನಲ್ಲಿ ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ಧ ಒಡಿಶಾ ಎಫ್‌ಸಿ 3-1 ಗೋಲುಗಳ ಗೆಲುವು ಸಾಧಿಸಿತು. ಏಪ್ರಿಲ್‌ 25ರಂದು ನಡೆಯಲಿರುವ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಬೆಂಗಳೂರು ಎಫ್‌ಸಿ(ಬಿಎಫ್‌ಸಿ) ಹಾಗೂ ಒಡಿಶಾ ಎಫ್‌ಸಿ ತಂಡಗಳು ಸೆಣಸಲಿವೆ. 

ಶನಿವಾರದ ಪಂದ್ಯದಲ್ಲಿ ಒಡಿಶಾ ಪರ 10, 63ನೇ ನಿಮಿಷಗಳಲ್ಲಿ ನಂದಕುಮಾರ್‌ ಶೇಖರ್‌, 86ನೇ ನಿಮಿಷದಲ್ಲಿ ಮಾರಿಸಿಯೋ ಗೋಲು ಬಾರಿಸಿದರು. 2ನೇ ನಿಮಿಷದಲ್ಲೇ ಜೋರ್ಡನ್‌ ಗೋಲು ಬಾರಿಸಿದ ಆರಂಭಿಕ ಮುನ್ನಡೆ ಒದಗಿಸಿದ ಹೊರತಾಗಿಯೂ ನಾಥ್‌ರ್‍ಈಸ್ಟ್‌ ತಂಡ ಮತ್ತೊಂದು ಗೋಲು ದಾಖಲಿಸಿ ಪೈಪೋಟಿ ನೀಡಲು ಸಾಧ್ಯವಾಗಲಿಲ್ಲ.

ಈ ಋತುವಿನಲ್ಲಿ ನಾರ್ಥ್‌ಈಸ್ಟ್‌ ಯುನೈಟೆಡ್ ಹಾಗೂ ಒಡಿಶಾ ಎಫ್‌ಸಿ ತಂಡಗಳು ಈ ಪಂದ್ಯಕ್ಕೂ ಮುನ್ನ ಎರಡು ಬಾರಿ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳಲ್ಲೂ ಒಡಿಶಾ ಗೆಲುವಿನ ನಗೆ ಬೀರಿತ್ತು. ಇದೀಗ ನಾರ್ಥ್‌ಈಸ್ಟ್‌ ತಂಡದ ಎದುರು ಒಡಿಶಾ ಈ ಸೀಸನ್‌ನಲ್ಲಿ ಹ್ಯಾಟ್ರಿಕ್ ಜಯಭೇರಿ ಸಾಧಿಸಿದೆ.

ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಈಗಾಗಲೇ ಈ ಸೀಸನ್‌ನಲ್ಲಿ ಮೂರನೇ ಬಾರಿಗೆ ಫೈನಲ್‌ಗೆ ಲಗ್ಗೆಯಿಟ್ಟಿದ್ದು, ಫೈನಲ್‌ನಲ್ಲಿ ಒಡಿಶಾ ಎಫ್‌ಸಿ ತಂಡವನ್ನು ಮಣಿಸಿ ಸೂಪರ್ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. 

ಆರ್ಚರಿ ವಿಶ್ವಕಪ್‌: 2 ಚಿನ್ನ ಗೆದ್ದ ಭಾರತ

ಅಂತಾಲ್ಯ(ಟರ್ಕಿ): ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ ಮೊದಲ ಹಂತದಲ್ಲಿ ಭಾರತ ಶನಿವಾರ ಎರಡು ಚಿನ್ನದ ಪದಕಗಳನ್ನು ಜಯಿಸಿತು. ಮಿಶ್ರ ಕಾಂಪೌಂಡ್‌ ವಿಭಾಗದ ಫೈನಲ್‌ನಲ್ಲಿ ಜ್ಯೋತಿ ಸುರೇಖಾ ಹಾಗೂ ಓಜಸ್‌ ದಿಯೋತಲೆ ಚೈನೀಸ್‌ ತೈಪೆ ಜೋಡಿ ವಿರುದ್ಧ 159-154 ಅಂತರದಲ್ಲಿ ಜಯಿಸಿ ಚಿನ್ನದ ಪದಕ ಹೆಕ್ಕಿತು.

IPL 2023 ವಾಂಖೇಡೆಯಲ್ಲಿ ಸಚಿನ್‌ ತೆಂಡುಲ್ಕರ್ ಭರ್ಜರಿ ಹುಟ್ಟುಹಬ್ಬ ಆಚರಣೆ!

ಕೇವಲ 1 ಅಂಕದಿಂದ ವಿಶ್ವ ದಾಖಲೆ ತಪ್ಪಿಸಿಕೊಂಡ ಈ ಜೋಡಿ ಭಾರತಕ್ಕೆ ಮೊದಲ ಚಿನ್ನ ತಂದುಕೊಟ್ಟಿತು. ಬಳಿಕ ಮಹಿಳೆಯರ ಕಾಂಪೌಂಡ್‌ ವೈಯಕ್ತಿಕ ವಿಭಾಗದಲ್ಲಿ ಜ್ಯೋತಿ ಚಿನ್ನ ಗೆದ್ದರು. ಫೈನಲ್‌ನಲ್ಲಿ ಹಾಲಿ ವಿಶ್ವ ನಂ.1 ಬ್ರಿಟನ್‌ನ ಎಲ್ಲಾ ಗಿಬ್ಸನ್‌ ವಿರುದ್ಧ 148-146 ಅಂತರದಲ್ಲಿ ಗೆದ್ದರು. ಇದು ಜ್ಯೋತಿಗೆ ವಿಶ್ವಕಪ್‌ನಲ್ಲಿ ಮೊದಲ ಚಿನ್ನದ ಪದಕ.

ಭಾರ​ತ​ದಲ್ಲಿ ಮೊದ​ಲ ಬಾರಿ ಅಂತಾರಾಷ್ಟ್ರೀಯ ಸರ್ಫ್‌ ಕೂಟ

ಚೆನ್ನೈ: ಇದೇ ಮೊದಲ ಬಾರಿಗೆ ವಿಶ್ವ ಸರ್ಫ್‌ ಲೀಗ್‌​(​ಡ​ಬ್ಲ್ಯು​ಎ​ಸ್‌​ಎ​ಲ್‌) ಭಾಗ​ವಾದ ಅಂತಾ​ರಾ​ಷ್ಟ್ರೀಯ ಮುಕ್ತ ಸರ್ಫ್ ಚಾಂಪಿ​ಯ​ನ್‌​ಶಿಪ್‌ ಆತಿಥ್ಯ ಹಕ್ಕು ಭಾರ​ತಕ್ಕೆ ಲಭಿ​ಸಿದ್ದು, ತಮಿ​ಳು​ನಾ​ಡಿ​ದ ಮಹಾ​ಬ​ಲಿ​ಪು​ರಂನಲ್ಲಿ ಆಗಸ್ಟ್‌ 14ರಿಂದ 20ರ ವರೆಗೆ ಕೂಟ ನಡೆ​ಯ​ಲಿದೆ. ಇದನ್ನು ತಮಿ​ಳು​ನಾಡು ಕ್ರೀಡಾ ಸಚಿವ ಉಧ​ಯ​ನಿಧಿ ಸ್ಟಾಲಿನ್‌ ಖಚಿ​ತ​ಪ​ಡಿ​ಸಿದ್ದಾರೆ. 

ಕೂಟ​ದಲ್ಲಿ 12ರಿಂದ 14 ದೇಶ​ಗಳ ಸುಮಾರು 100ರಷ್ಟುಸರ್ಫ​ರ್‌​ಗಳು ಪಾಲ್ಗೊ​ಳ್ಳ​ಲಿ​ದ್ದಾರೆ. ಭಾರ​ತದ 10 ಮಂದಿ ಸರ್ಫ​ರ್‌​ಗಳು ಕೂಟಕ್ಕೆ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆ​ಯ​ಲಿ​ದ್ದಾರೆ ಎಂದು ಅವರು ತಿಳಿ​ಸಿ​ದರು.

Follow Us:
Download App:
  • android
  • ios