50 ಜನ್ಮದಿನದ ಹೊಸ್ತಿಲಲ್ಲಿ ಮಾಸ್ಟರ್ ಬ್ಲಾಸ್ಟರ್ ತೆಂಡುಲ್ಕರ್ಪಂದ್ಯದ ಮಧ್ಯಯೇ ಕೇಕ್ ಕಟ್ ಮಾಡಿದ ಸಚಿನ್33,000 ಸಚಿನ್ ಚಿತ್ರವಿರುವ ಮುಖವಾದ ಹಂಚಿಕೆ
ಮುಂಬೈ(ಏ.23): ‘ಕ್ರಿಕೆಟ್ ದೇವರು’ ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡುಲ್ಕರ್‌ರ 50ನೇ ಹುಟ್ಟುಹಬ್ಬವನ್ನು 2 ದಿನ ಮೊದಲೇ ಮುಂಬೈ ಇಂಡಿಯನ್ಸ್ ತಂಡ ವಾಂಖೇಡೆ ಕ್ರೀಡಾಂಗಣದಲ್ಲಿ ವಿಶೇಷವಾಗಿ ಆಚರಿಸಿತು. ಪಂಜಾಬ್ ಕಿಂಗ್‌್ಸ ವಿರುದ್ಧದ ಪಂದ್ಯದ ನಡುವೆಯೇ 2ನೇ ಟೈಮ್ ಔಟ್ ವೇಳೆ ಮುಂಬೈ ತಂಡದ ಡಗೌಟ್ ಬಳಿ ಸಚಿನ್ ಕೇಕ್ ಕತ್ತರಿಸಿದರು.
ಈ ಬಳಿಕ ಮಾತನಾಡಿದ ಅವರು, ‘ಇದು ನನ್ನ ಅತಿ ನಿಧಾನವಾದ ಅರ್ಧಶತಕ’ ಎಂದು ತಮಾಷೆ ಮಾಡಿದರು. ಇನ್ನು ಕ್ರೀಡಾಂಗಣಕ್ಕೆ ಆಗಮಿಸಿದ್ದ ಸುಮಾರು 33000 ಪ್ರೇಕ್ಷಕರಿಗೂ ಸಚಿನ್‌ರ ಚಿತ್ರವಿರುವ ಮುಖವಾಡ ಹಂಚಲಾಗಿತ್ತು. ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಚಿತ್ರವಿರುವ ಮುಖವಾಡ ಧರಿಸಿ ಖುಷಿ ಪಟ್ಟರು.
ಕ್ರೀಡಾಂಗಣದ ಆವರಣದಲ್ಲಿ ಸಚಿನ್‌ರ 10ನೇ ಸಂಖ್ಯೆಯುಳ್ಳ ಬೃಹತ್ ಜೆರ್ಸಿಯನ್ನು ನಿಲ್ಲಿಸಲಾಗಿತ್ತು. ಅಭಿಮಾನಿಗಳು ಈ ಜೆರ್ಸಿ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 2008ರಿಂದ 2013ರ ವರೆಗೂ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದ ಸಚಿನ್ ಆ ಬಳಿಕ ತಂಡದ ಐಕಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಚಿನ್‌ರ ಪುತ್ರ ಅರ್ಜುನ್ ತೆಂಡುಲ್ಕರ್ ಈ ವರ್ಷ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು.
ಮುಂಬೈ ಜಯದಾಸೆ ಮುರಿದ ಸಿಂಗ್!
ಮುಂಬೈ: ರೋಹಿತ್, ಗ್ರೀನ್, ಸೂರ್ಯ, ಡೇವಿಡ್ ಎಲ್ಲರೂ ಸಿಡಿದರೂ ಮುಂಬೈ ಇಂಡಿಯನ್ಸ್ ಗೆಲ್ಲಲಿಲ್ಲ. ಇದಕ್ಕೆ ಕಾರಣ ಅಶ್‌ರ್‍ದೀಪ್ ಸಿಂಗ್‌ರ ಅತಿರೋಚಕ ಕೊನೆಯ ಓವರ್. ಹ್ಯಾಟ್ರಿಕ್ ಜಯ ಸಾಧಿಸಿ ಮುನ್ನುಗ್ಗುತ್ತಿದ್ದ ಮುಂಬೈಗೆ 13 ರನ್ ಸೋಲುಣಿಸಿದ ಪಂಜಾಬ್, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದರೆ ಮುಂಬೈ 7ನೇ ಸ್ಥಾನಕ್ಕೆ ಕುಸಿಯಿತು.
ವಾಂಖೇಡೆ ಕ್ರೀಡಾಂಗಣದಲ್ಲಿ ಎಷ್ಟೇ ದೊಡ್ಡ ಮೊತ್ತವೂ ಸುರಕ್ಷಿತವಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗುವುದರಲ್ಲಿತ್ತು. ಆದರೆ ಅಶ್‌ರ್‍ದೀಪ್ ಪಂಜಾಬ್‌ಗೆ ಅನಿರೀಕ್ಷಿತ ಜಯ ತಂದುಕೊಟ್ಟರು. ಪಂದ್ಯದಲ್ಲಿ ಬರೋಬ್ಬರಿ 415 ರನ್ ಹರಿದು ಬಂತು. ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳಿಗೆ ಮೋಸವಾಗಲಿಲ್ಲ.
IPL 2023: ಕೊನೇ ಓವರ್‌ನಲ್ಲಿ 16 ರನ್ ರಕ್ಷಿಸಿಕೊಂಡ ಆರ್ಶ್‌ದೀಪ್, ಪಂಜಾಜ್‌ಗೆ ವಿಜಯದೀಪ!
ಮೊದಲು ಬ್ಯಾಟ್ ಮಾಡಿದ ಪಂಜಾಬ್ 10 ಓವರ್ ಮುಕ್ತಾಯಕ್ಕೆ 4 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿತ್ತು. ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ನಾಯಕ ಸ್ಯಾಮ್ ಕರ್ರನ್‌ರ ಸ್ಫೋಟಕ ಆಟ ಭರವಸೆ ಮೂಡಿಸಿತು. ಕರ್ರನ್ ಹಾಗೂ ಹಪ್ರೀರ್‍ತ್ ಭಾಟಿಯಾ 5ನೇ ವಿಕೆಟ್‌ಗೆ 8 ಓವರಲ್ಲಿ 92 ರನ್ ಜೊತೆಯಾಟವಾಡಿದರು. ಕರ್ರನ್ 55, ಭಾಟಿಯಾ 41 ರನ್ ಗಳಿಸಿದರೆ, ಜಿತೇಶ್ ಶರ್ಮಾ 7 ಎಸೆತದಲ್ಲಿ 4 ಸಿಕ್ಸರ್‌ನೊಂದಿಗೆ 25 ರನ್ ಸಿಡಿಸಿ ತಂಡದ ಮೊತ್ತವನ್ನು 8 ವಿಕೆಟ್‌ಗೆ 214 ರನ್‌ಗೆ ಹೆಚ್ಚಿಸಿದರು. ಕೊನೆ 5 ಓವರಲ್ಲಿ ಪಂಜಾಬ್ 96 ರನ್ ಕಲೆಹಾಕಿತು.
ಮುಂಬೈ ಗೆಲುವಿನತ್ತ ದಾಪುಗಾಲಿಡುತ್ತಿತ್ತು. ರೋಹಿತ್ 44, ಗ್ರೀನ್ 67, ಸೂರ್ಯ 57 ಹಾಗೂ ಡೇವಿಡ್ 25 ರನ್ ಚಚ್ಚಿದರೂ ಗೆಲ್ಲಲು ಸಾಧ್ಯವಾಗಲಿಲ್ಲ. ಅಶ್‌ರ್‍ದೀಪ್ 4 ಓವರಲ್ಲಿ 29 ರನ್‌ಗೆ 4 ವಿಕೆಟ್ ಕಿತ್ತರು.
