ಆಟಗಾರ್ತಿಗೆ ಚುಂಬಿಸಿದ ಸ್ಪೇನ್ ಫುಟ್ಬಾಲ್ ಅಧ್ಯಕ್ಷ..! ವಿಡಿಯೋ ವೈರಲ್
ಸ್ಪೇನ್‌ನ ಜೆನ್ನಿಫರ್ ಹೆರ್ಮೊಸೊ ಅವರಿಗೆ ವೇದಿಕೆಯಲ್ಲೇ ಚುಂಬಿಸಿದ್ದಕ್ಕೆ ಸ್ಪೇನ್ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಸಿಡ್ನಿ(ಆ.23): ಇಂಗ್ಲೆಂಡ್ ವಿರುದ್ಧ ಮಹಿಳಾ ಫುಟ್ಬಾಲ್ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ತಂಡ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಆಟಗಾರ್ತಿಗೆ ಸ್ಪೇನ್ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಚುಂಬಿಸಿದ್ದು, ವಿವಾದಕ್ಕೆ ಕಾರಣವಾಗಿದೆ. ಟ್ರೋಫಿ ವಿತರಣೆ ಸಂದರ್ಭ ಸ್ಪೇನ್‌ನ ಜೆನ್ನಿಫರ್ ಹೆರ್ಮೊಸೊ ಅವರಿಗೆ ವೇದಿಕೆಯಲ್ಲೇ ಲೂಯಿಸ್ ತುಟಿಗೆ ಚುಂಬಿಸಿದ್ದು, ಆ ಸನ್ನಿವೇಶದ ವಿಡಿಯೋ ವೈರಲ್ ಆಗಿದೆ.
ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆನ್ನಿಫರ್, ಲೂಯಿಸ್ ನಡೆ ತಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ. ಅಲ್ಲದೆ ಸಾಮಾಜಿಕ ತಾಣಗಳಲ್ಲಿಯೂ ಲೂಯಿಸ್ ಟೀಕೆಗೆ ಗುರಿಯಾಗಿದ್ದಾರೆ.
ಕ್ಷಮೆಯಾಚಿಸಿದ ಲೂಯಿಸ್: ಸ್ಪೇನ್‌ನ ಜೆನ್ನಿಫರ್ ಹೆರ್ಮೊಸೊ ಅವರಿಗೆ ವೇದಿಕೆಯಲ್ಲೇ ಚುಂಬಿಸಿದ್ದಕ್ಕೆ ಸ್ಪೇನ್ ಫುಟ್ಬಾಲ್ ಸಂಸ್ಥೆ ಅಧ್ಯಕ್ಷ ಲೂಯಿಸ್ ರುಬಿಯಾಲೆಸ್ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ತಂದೆಯ ಸಾವಿನ ವಿಷಯ ತಿಳಿಯದೆ ಫಿಫಾ ವಿಶ್ವಕಪ್ ಫೈನಲ್ ಆಡಿದ ಒಲ್ಗಾ!
ಸಿಡ್ನಿ: ಫೈನಲ್‌ನಲ್ಲಿ ಏಕೈಕ ಗೋಲು ಬಾರಿಸಿ, ಚೊಚ್ಚಲ ಬಾರಿ ಸ್ಪೇನ್‌ಗೆ ಫಿಫಾ ಮಹಿಳಾ ಫುಟ್ಬಾಲ್ ವಿಶ್ವಕಪ್ ಗೆಲ್ಲಿಸಿಕೊಟ್ಟ ಒಲ್ಗಾ ಕಾರ್ಮೊನಾ ತಮ್ಮ ತಂದೆಯ ಸಾವಿನ ವಿಷಯ ತಿಳಿಯದೆ ಫೈನಲ್ ಆಡಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಾರ್ಮೊನಾ ತಂದೆ ಶುಕ್ರವಾರ ನಿಧನರಾಗಿದ್ದರು. ಆದರೆ ಈ ವಿಷಯವನ್ನು ಕುಟಂಬಸ್ಥರು, ಸ್ನೇಹಿತರು ಕಾರ್ಮೊನಾಗೆ ತಿಳಿಸಿರಲಿಲ್ಲ.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಪ್ರಿ ಕ್ವಾರ್ಟರ್‌ಗೆ ಸೇನ್, ಸೋತ ಸಿಂಧು ಔಟ್!
ಭಾನುವಾರ ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯ ಮುಗಿದ ಬಳಿಕವೇ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿರುವ ಕಾರ್ಮೊನಾ, ‘ನೀವು(ತಂದೆ) ಎಲ್ಲಿದ್ದೀರೋ ಅಲ್ಲಿಂದಲೇ ಪಂದ್ಯ ವೀಕ್ಷಿಸಿದ್ದೀರಿ ಮತ್ತು ನನ್ನ ಬಗ್ಗೆ ಹೆಮ್ಮೆ ಪಡುತ್ತೀರಿ ಎಂದು ನನಗೆ ಗೊತ್ತು’ ಎಂದು ಬರೆದಿದ್ದಾರೆ.
ರಾಂಚಿಯಲ್ಲಿ ಹಾಕಿ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿ
ರಾಂಚಿ: ಇತ್ತೀಚೆಗಷ್ಟೇ ಪುರುಷರ ಏಷ್ಯನ್ ಹಾಕಿ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಿದ್ದ ಭಾರತ ಮತ್ತೊಂದು ಪ್ರತಿಷ್ಠಿತ ಟೂರ್ನಿ ಆಯೋಜಿಸಲಿದ್ದು, ಅ.27ರಿಂದ ನ.5ರ ವರೆಗೆ ಜಾರ್ಖಂಡ್‌ನ ರಾಂಚಿಯಲ್ಲಿ ಮಹಿಳೆಯರ ಏಷ್ಯನ್ ಹಾಕಿ ಕೂಟಕ್ಕೆ ಆತಿಥ್ಯ ವಹಿಸಲಿದೆ. ಮಂಗಳವಾರ ಹಾಕಿ ಇಂಡಿಯಾ ಮತ್ತು ಜಾರ್ಖಂಡ್ ಸರ್ಕಾರ ಈ ಮಾಹಿತಿ ಪ್ರಕಟಿಸಿತು. ಭಾರತ ಇದೇ ಮೊದಲ ಬಾರಿ ಮಹಿಳೆಯರ ಏಷ್ಯನ್ ಕೂಟಕ್ಕೆ ಆತಿಥ್ಯ ವಹಿಸಲಿದೆ. 2016ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಭಾರತ, ಹಾಲಿ ಚಾಂಪಿಯನ್ ಜಪಾನ್, ಕೊರಿಯಾ, ಚೀನಾ, ಮಲೇಷ್ಯಾ ಹಾಗೂ ಥಾಯ್ಲೆಂಡ್ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಭಾರತ ಈವರೆಗೆ 3 ಬಾರಿ ಫೈನಲ್‌ಗೇರಿದ್ದು, 2013 ಹಾಗೂ 2018ರಲ್ಲಿ ರನ್ನರ್-ಅಪ್ ಆಗಿತ್ತು.
Chess World Cup: ಫೈನಲ್ ಮೊದಲ ಸುತ್ತಿನಲ್ಲಿ ಡ್ರಾ ಸಾಧಿಸಿದ ಪ್ರಜ್ಞಾನಂದ..!
ಯುಎಸ್ ಓಪನ್‌ಗೂ ಮುನ್ನ ಜೋಕೋಗೆ ಸಿನ್ಸಿನಾಟಿ ಪ್ರಶಸ್ತಿ
ಒಹಾಯೊ(ಅಮೆರಿಕ): ಅಮೆರಿಕದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಟೆನಿಸ್ ಟೂರ್ನಿಗಳಲ್ಲಿ ಒಂದಾಗಿರುವ ಸಿನ್ಸಿನಾಟಿ ಓಪನ್‌ನಲ್ಲಿ ಸರ್ಬಿಯಾದ ನೋವಾಕ್ ಜೋಕೋವಿಚ್ 3ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಆ.28ರಿಂದ ಆರಂಭಗೊಳ್ಳಲಿರುವ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂಗೆ ಸಿದ್ಧತೆಯನ್ನು ಭರ್ಜರಿಯಾಗಿಯೇ ಮಾಡಿಕೊಂಡಿದ್ದಾರೆ.
ಭಾನುವಾರ ರಾತ್ರಿ ಸುಮಾರು 4 ಗಂಟೆಗಳ ಕಾಲ ನಡೆದ ನಡೆದ ಫೈನಲ್‌ನಲ್ಲಿ ವಿಶ್ವ ನಂ.1, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ವಿರುದ್ಧ ಜೋಕೋ 5-7,7-6(9/7), 7-6(7/4) ಅಂತರದಲ್ಲಿ ಗೆದ್ದರು. ಇತ್ತೀಚೆಗಷ್ಟೇ ವಿಂಬಲ್ಡನ್ ಫೈನಲ್‌ನಲ್ಲಿ ಎದುರಾಗಿದ್ದ ಸೋಲಿಗೆ ಈ ಮೂಲಕ ಸೇಡು ತೀರಿಸಿಕೊಂಡರು. ಪಂದ್ಯದ ಬಳಿಕ ಜೋಕೋ ತಮ್ಮ ಟೀ-ಶರ್ಟ್ ಹರಿದು ಸಂಭ್ರಮಿಸಿದರೆ, ಆಲ್ಕರಜ್ ನಿರಾಸೆಯಿಂದ ಕಣ್ಣೀರು ಹಾಕಿದರು.
Asia Cup 2023: ಏಷ್ಯಾಕಪ್ ಗೆಲ್ಲಲು ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ..! ವಿಶ್ವಕಪ್‌ಗೂ ತಂಡ ಸಿದ್ದ..!
39ನೇ ಎಟಿಪಿ 1000 ಪ್ರಶಸ್ತಿ
ಜೋಕೋ ಎಟಿಪಿ 1000 ಮಾಸ್ಟರ್ಸ್‌ಗಳ ಪ್ರಶಸ್ತಿಗಳ ಸಂಖ್ಯೆಯನ್ನು 39ಕ್ಕೆ ಏರಿಸಿದರು. ಇದು ದಾಖಲೆ ಎನಿಸಿದ್ದು, ರೋಜರ್ ಫೆಡಡರ್(36) 2ನೇ ಸ್ಥಾನದಲ್ಲಿದ್ದಾರೆ. ಇದು ಜೋಕೋ ವೃತ್ತಿ ಬದುಕಿನಲ್ಲಿ ಗೆದ್ದ 95ನೇ ಸಿಂಗಲ್ಸ್ ಪ್ರಶಸ್ತಿ.