Asianet Suvarna News Asianet Suvarna News

ಫುಟ್ಬಾಲ್‌ ಕ್ರೀಡಾಂಗ​ಣ​ದ​ಲ್ಲಿ ಕಾಲ್ತು​ಳಿ​ತ: 12 ಮಂದಿ ದುರಂತ ಸಾವು!

ಮತ್ತೊಮ್ಮೆ ಫುಟ್ಬಾಲ್‌ ಕ್ರೀಡಾಂಗ​ಣದ ಭೀಕರ ಕಾಲ್ತು​ಳಿ​ತದ ಅನಾ​ಹು​ತಕ್ಕೆ ಸಾಕ್ಷಿ​
ಮಧ್ಯ ಅಮೆ​ರಿ​ಕದ ದೇಶ​ವಾದ ಎಲ್‌ ಸಾಲ್ವ​ಡಾ​ರ್‌ನ ಮೈದಾ​ನ​ದಲ್ಲಿ ನಡೆದ ಕಾಲ್ತು​ಳಿ​ತ
ಸುಮಾರು 12 ಮಂದಿ ಮೃತ​ಪಟ್ಟು ಹಲ​ವರು ಗಂಭೀರ ಗಾಯ​

Several dead in stampede at El Salvador Football stadium kvn
Author
First Published May 22, 2023, 10:32 AM IST

ಸ್ಯಾನ್‌ ಸಾಲ್ವ​ಡಾ​ರ್‌​(​ಎಲ್‌ ಸಾಲ್ವ​ಡಾ​ರ್‌​): ಕ್ರೀಡಾ ಜಗತ್ತು ಮತ್ತೊಮ್ಮೆ ಫುಟ್ಬಾಲ್‌ ಕ್ರೀಡಾಂಗ​ಣದ ಭೀಕರ ಕಾಲ್ತು​ಳಿ​ತದ ಅನಾ​ಹು​ತಕ್ಕೆ ಸಾಕ್ಷಿ​ಯಾ​ಗಿದ್ದು, ಮಧ್ಯ ಅಮೆ​ರಿ​ಕದ ದೇಶ​ವಾದ ಎಲ್‌ ಸಾಲ್ವ​ಡಾ​ರ್‌ನ ಮೈದಾ​ನ​ದಲ್ಲಿ ನಡೆದ ಕಾಲ್ತು​ಳಿ​ತ​ದಲ್ಲಿ ಸುಮಾರು 12 ಮಂದಿ ಮೃತ​ಪಟ್ಟು ಹಲ​ವರು ಗಂಭೀರ ಗಾಯ​ಗೊಂಡ ಘಟನೆ ನಡೆ​ದಿ​ದೆ.

ಇಲ್ಲಿನ ಕಸ್ಕ​ಟ್ಲಾ​ನ್‌ನ ಕ್ರೀಡಾಂಗ​ಣ​ದಲ್ಲಿ ಸಾಲ್ವ​ಡೊ​ರಾನ್‌ ಲೀಗ್‌ನ ಆಲಿ​ಯಾನ್ಜ ಹಾಗೂ ಎಫ್‌​ಎಎಸ್‌ ತಂಡ​ಗಳ ನಡು​ವಿನ ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ಈ ದುರ್ಘ​ಟನೆ ನಡೆ​ದಿದೆ. ಅಪಾರ ಪ್ರಮಾ​ಣದ ಅಭಿ​ಮಾ​ನಿ​ಗಳು ಒಮ್ಮೆಲೇ ಮೈದಾ​ನಕ್ಕೆ ಪ್ರವೇ​ಶಿ​ಸುವ ವೇಳೆ ಗೇಟ್‌ ಮುರಿದು ಬಿದ್ದಿದ್ದು, ನೂಕು​ನು​ಗ್ಗಲು ಉಂಟಾ​ಗಿ​ದೆ. ಈ ವೇಳೆ ಕಾಲ್ತು​ಳಿತ ಹಾಗೂ ಉಸಿ​ರು​ಗಟ್ಟಿಹಲವರು ಸಾವ​ನ್ನ​ಪ್ಪಿ​ದ್ದಾರೆಂದು ತಿಳಿ​ದು​ಬಂದಿ​ದೆ. 

‘9 ಮಂದಿ ಕ್ರೀಡಾಂಗ​ಣ​ದಲ್ಲೇ ಮೃತ​ಪ​ಟ್ಟಿ​ದ್ದಾರೆ. ಮೂವರು ವಿವಿಧ ಆಸ್ಪ​ತ್ರೆ​ಗ​ಳಲ್ಲಿ ಚಿಕಿತ್ಸೆ ಫಲಿ​ಸ​ದೆ ಸಾವ​ನ್ನ​ಪ್ಪಿ​ದ್ದಾರೆ. ನೂರಾರು ಮಂದಿ ಆಸ್ಪ​ತ್ರೆಗೆ ದಾಖ​ಲಾ​ಗಿ​ದ್ದಾರೆ’ ಎಂದು ಪೊಲೀ​ಸರು ತಿಳಿಸಿ​ದ್ದಾರೆ. ಕಳೆದ ಅಕ್ಟೋ​ಬ​ರ್‌​ನಲ್ಲಿ ಇಂಡೋ​ನೇ​ಷ್ಯಾದ ಫುಟ್ಬಾಲ್‌ ಕ್ರೀಡಾಂಗ​ಣ​ದಲ್ಲಿ ಕಾಲ್ತು​ಳಿತ, ಘರ್ಷ​ಣೆ​ಯಿಂದ 135 ಮಂದಿ ಸಾವ​ನ್ನ​ಪ್ಪಿ​ದ್ದರು.

ವಿಶ್ವ ಟಿಟಿ: 2ನೇ ಸುತ್ತಿ​ಗೆ ಸತ್ಯ​ನ್‌, ಶರ​ತ್‌ ಪ್ರವೇ​ಶ

ಡರ್ಬ​ನ್‌: ಭಾರ​ತದ ಹಿರಿಯ ಟೇಬಲ್‌ ಟೆನಿಸ್‌ ಪಟು ಶರತ್‌ ಕಮಲ್‌ ಹಾಗೂ ಜಿ.ಸ​ತ್ಯನ್‌ ವಿಶ್ವ ಟಿಟಿ ಚಾಂಪಿ​ಯ​ನ್‌​ಶಿ​ಪ್‌​ನಲ್ಲಿ ಶುಭಾ​ರಂಭ ಮಾಡಿ​ದ್ದಾರೆ. ಭಾನು​ವಾರ ಪುರು​ಷರ ಸಿಂಗ​ಲ್ಸ್‌​ನ ಮೊದಲ ಸುತ್ತಿ​ನಲ್ಲಿ 56ನೇ ರಾರ‍ಯಂಕಿಂಗ್‌ನ ಶರತ್‌ ಆಸ್ಟ್ರಿ​ಯಾದ ಡೇವಿಡ್‌ ವಿರುದ್ಧ 11-8, 9-11, 11-9, 11-6ರಲ್ಲಿ ಗೆಲುವು ಸಾಧಿ​ಸಿ​ದರು. ಸತ್ಯನ್‌ ಇಂಗ್ಲೆಂಡ್‌ನ ಟಾಮ್‌ ಜಾರ್ವಿಸ್‌ರನ್ನು 4-3 ಅಂತ​ರ​ದಲ್ಲಿ ರೋಚ​ಕ​ವಾಗಿ ಮಣಿಸಿ 2ನೇ ಸುತ್ತು ತಲು​ಪಿ​ದರು. ಆದರೆ ಮನುಶ್‌ ಶಾ ಹಾಗೂ ಹರ್ಮೀತ್‌ ದೇಸಾಯಿ ಮೊದಲ ಸುತ್ತಿ​ನಲ್ಲೇ ಸೋತು ಹೊರ​ಬಿ​ದ್ದರು.

Wrestlers Protest ಮಂಪರು ಪರೀಕ್ಷೆಗೆ ಸಿದ್ದ ಆದರೆ ಒಂದು ಕಂಡೀಷನ್‌: ಬ್ರಿಜ್‌ಭೂಷಣ್ ಸಿಂಗ್

ಫ್ರೆಂಚ್‌ ಓಪ​ನ್‌​ಗೆ ಆ್ಯಂಡಿ ಮರ್ರೆ ಕೂಡಾ ಗೈರು

ಪ್ಯಾರಿ​ಸ್‌: ರಾಫೆಲ್‌ ನಡಾಲ್‌ ಬಳಿಕ 3 ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ವಿಜೇತ, ಬ್ರಿಟ​ನ್‌ನ ಆ್ಯಂಡಿ ಮರ್ರೆ ಕೂಡಾ ಈ ಬಾರಿ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿ​ಯಿಂದ ಹೊರ​ಗು​ಳಿ​ಯ​ಲಿ​ದ್ದಾರೆ. ಇದನ್ನು ಭಾನು​ವಾರ ಆಯೋ​ಜ​ಕರು ಪ್ರಕ​ಟಿ​ಸಿದ್ದಾರೆ. ವಿಂಬ​ಲ್ಡನ್‌ ಟೂರ್ನಿ​ಯತ್ತ ಹೆಚ್ಚಿನ ಗಮನ ಹರಿ​ಸುವ ನಿಟ್ಟಿ​ನಲ್ಲಿ ಮರ್ರೆ ಫ್ರೆಂಚ್‌ ಓಪ​ನ್‌​ ಆಡು​ವು​ದಿಲ್ಲ ಎಂದು ಈ ಮೊದಲು ಕೆಲ ವಿದೇಶಿ ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿತ್ತು. 2 ಬಾರಿ ವಿಂಬ​ಲ್ಡನ್‌, 1 ಬಾರಿ ಯುಎಸ್‌ ಓಪನ್‌ ಗೆದ್ದಿ​ರುವ 36 ವರ್ಷದ ಮರ್ರೆ 2016ರಲ್ಲಿ ಫ್ರೆಂಚ್‌ ಓಪನ್‌ ಫೈನ​ಲ್‌​ಗೇ​ರಿ​ದ್ದರು. ಆದರೆ ನೋವಾಕ್‌ ಜೋಕೋ​ವಿಚ್‌ ವಿರುದ್ಧ ಸೋತು ಪ್ರಶಸ್ತಿ ಗೆಲ್ಲಲು ವಿಫ​ಲ​ರಾ​ಗಿ​ದ್ದರು.

ಹಾಕಿ: ಭಾರ​ತ-ಆಸೀ​ಸ್‌ 3ನೇ ಪಂದ್ಯ 1-1 ಡ್ರಾ

ಅಡಿಲೇಡ್‌: ಭಾರತ ಮಹಿಳಾ ಹಾಕಿ ತಂಡ ಆಸ್ಪ್ರೇ​ಲಿಯಾ ವಿರು​ದ್ಧದ 3ನೇ ಪಂದ್ಯ​ದಲ್ಲಿ 1-1 ಗೋಲು​ಗ​ಳ ಡ್ರಾ ಸಾಧಿ​ಸಿದೆ. ಮೊದ​ಲೆ​ರಡು ಪಂದ್ಯ​ಗ​ಳನ್ನು ಗೆದ್ದಿದ್ದ ಆಸೀಸ್‌ ವನಿ​ತೆ​ಯರು 3 ಪಂದ್ಯ​ಗಳ ಸರ​ಣಿ​ಯನ್ನು 2-0 ಅಂತ​ರ​ದಲ್ಲಿ ಕೈ ವ​ಶ​ಪ​ಡಿ​ಸಿ​ಕೊಂಡರು. ಮ್ಯಾಡಿ​ಸನ್‌ ಬ್ರೂಕ್ಸ್‌ 25ನೇ ನಿಮಿ​ಷ​ದಲ್ಲಿ ಆಸೀಸ್‌ ಪರ ಗೋಲು ಹೊಡೆ​ದರೆ, ದೀಪ್‌ ಗ್ರೇಸ್‌ 42ನೇ ನಿಮಿ​ಷ​ದಲ್ಲಿ ಬಾರಿ​ಸಿದ ಗೋಲು ಭಾರತ ಸಮ​ಬಲ ಸಾಧಿ​ಸಲು ನೆರ​ವಾ​ಯಿತು. ಭಾರತ ಇನ್ನು ಆಸ್ಪ್ರೇಲಿಯಾ ‘ಎ’ ವಿರುದ್ಧ 2 ಪಂದ್ಯ ಆಡಲಿದ್ದು, ಮೊದಲ ಪಂದ್ಯ ಗುರು​ವಾರ ನಡೆ​ಯ​ಲಿದೆ.

ಆರ್ಚರಿ ವಿಶ್ವ​ಕ​ಪ್‌: 2ನೇ ಸ್ಥಾನ ಪಡೆದ ಭಾರ​ತ

ಶಾಂಘೈ: ಇಲ್ಲಿ ನಡೆದ ಆರ್ಚರಿ ವಿಶ್ವಕಪ್‌ 2ನೇ ಹಂತದಲ್ಲಿ ಭಾರತ 3 ಪದ​ಕ​ದೊಂದಿಗೆ ಅಭಿ​ಯಾನ ಕೊನೆ​ಗೊ​ಳಿ​ಸಿದೆ. ಕೊನೆ ದಿನ​ವಾದ ಭಾನು​ವಾರ ಭಾರತೀಯರು ಯಾವುದೇ ಪದಕ ಗೆಲ್ಲ​ಲಿಲ್ಲ. ರೀಕವ್‌ರ್‍ ವಿಭಾ​ಗ​ದಲ್ಲಿ ಶೂನ್ಯ ಸಾಧನೆ ಮಾಡಿತು. ಭಾರ​ತಕ್ಕೆ ಎಲ್ಲಾ ಮೂರು ಪದ​ಕ​ಗಳೂ ಕಾಂಪೌಂಡ್‌ ವಿಭಾ​ಗ​ದಲ್ಲಿ ಲಭಿ​ಸಿತು. ಮಿಶ್ರ ತಂಡ ವಿಭಾ​ಗ​ದಲ್ಲಿ ಓಜಸ್‌, ಜ್ಯೋತಿ ಸುರೇಖಾ ಚಿನ್ನ, ವೈಯ​ಕ್ತಿಕ ವಿಭಾ​ಗ​ದಲ್ಲಿ ಪ್ರಥ​ಮೇಶ್‌, ಅವ್‌​ನೀತ್‌ ಕೌರ್‌ ಕ್ರಮ​ವಾಗಿ ಚಿನ್ನ, ಕಂಚು ಗೆದ್ದರು. 11 ಪದ​ಕ​ದೊಂದಿಗೆ ಕೊರಿಯಾ ಅಗ್ರ​ಸ್ಥಾನ ಪಡೆ​ಯಿ​ತು.

Follow Us:
Download App:
  • android
  • ios