Asianet Suvarna News Asianet Suvarna News

ISL 7: ಗೆಲ್ಲಲೇಬೇಕಾದ ಪಂದ್ಯದಲ್ಲಿ ಬೆಂಗಾಲ್ ಗೆಲ್ಲಲಿಲ್ಲ, ಆದರೆ ಮೊದಲ ಅಂಕ ಪಡೆದ ಸಂಭ್ರಮ!

ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವ ಈಸ್ಟ್ ಬೆಂಗಾಲ್ ತಂಡ ತಿಲಕ್ ಮೈದಾನದಲ್ಲಿ ಜೆಮ್ಷೆಡ್ಪುರ ತಂಡದ ವಿರುದ್ಧ ಗೆಲ್ಲಲೇಕಾದ ಅನಿವಾರ್ಯತೆಯೊಂದಿಗೆ ಅಂಗಣಕ್ಕಿಳಿಯಿತು. ಆದರೆ ಗೆಲುವು ಸಿಗದಿದ್ದರೂ, ಅಂಕ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ.. 

SC East Bengal picked up their first points in ISL draw with Jamshedpur FC ckm
Author
Bengaluru, First Published Dec 10, 2020, 11:08 PM IST

ಗೋವಾ(ಡಿ.10):  ಜೆಮ್ಷೆಡ್ಪುರ ವಿರುದ್ಧ ಪಂದ್ಯದಲ್ಲಿ ಈಸ್ಟ್ ಬೆಂಗಾಲ್ ತಂಡ ಡ್ರಾ ಸಾಧನೆ ಮಾಡುವುದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮೊದಲ ಅಂಕ ಗಳಿಸಿತು. ಪಂದ್ಯದ ಹೆಚ್ಚಿನ ಅವಧಿಯನ್ನು ಕೇವಲ 10 ಮಂದಿ ಆಟಗಾರರನ್ನೇ ಹೊಂದಿದ್ದ ಈಸ್ಟ್ ಬೆಂಗಾಲ್ ಜೆಮ್ಷೆಡ್ಪುರಕ್ಕೆ ಗೋಲು ಗಳಿಸಲು ಅನುವು ಮಾಡಿಕೊಡಲಿಲ್ಲ. ದ್ವಿತಿಯಾರ್ಧದ ಕೊನೆಯ ಕ್ಷಣದಲ್ಲಿ ಲಾಲ್ ದಿನ್ಲಿಯಾನ ರೆಂಥ್ಲೆ ಎರಡನೇ ಹಳದಿ ಕಾರ್ಡ್ ಗೆ ಗುರಿಯಾಗಿ ರೆಡ್ ಕಾರ್ಡ್ ಮೂಲಕ ಪಂದ್ಯದಿಂದ ಹೊರನಡೆದರು. ಇದೇ ಮೊದಲ ಬಾರಿಗೆ ಪ್ರಸಕ್ತ ಲೀಗ್ ನಲ್ಲಿ ಇಬ್ಬರು ಆಟಗಾರರು ರೆಡ್ ಕಾರ್ಡ್ ಗೆ ಗುರಿಯಾದರು.

ಐಎಸ್ಎಲ್‌ 7: ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಬಿಎಫ್‌ಸಿ.

ಗೋಲಿಲ್ಲದ ಪ್ರಥಮಾರ್ಧ: ಎಸ್ ಸಿ ಈಸ್ಟ್ ಬೆಂಗಾಲ್ ಹಾಗೂ ಜೆಮ್ಷೆಡ್ಪುರ ಎಫ್ ಸಿ ತಂಡಗಳ ನಡುವಿನ ಪ್ರಥಮಾರ್ಧದ ಪಂದ್ಯ ಗೋಲಿಲ್ಲದೆ ಕೊನೆಗೊಂಡಿತು. ಎರಡು ಬಾರಿ ಹಳದಿ ಕಾರ್ಡ್ ಪಡೆದ ಈಸ್ಟ್ ಬೆಂಗಾಲ್ ನ ಯುಗೆನ್ಸನ್ ಲಿಂಗ್ಡೊ ರೆಡ್ ಕಾರ್ಡ್ ಮೂಲಕ ಹೊರನಡೆಯಬೇಕಾಯಿತು, ಇದರಿಂದ ತಂಡ ಕೇವಲ 10 ಆಟಗಾರರಲ್ಲೇ ಪಂದ್ಯವನ್ನು ಮುಂದುವರೆಸಬೇಕಾಯಿತು. 

ಪಂದ್ಯ ಆರಂಭಗೊಂಡ 11ನೇ ನಿಮಿಷದಲ್ಲಿ ಈಸ್ಟ್ ಬೆಂಗಾಲ್ ತಂಡಕ್ಕೆ ಫ್ರೀ ಕಿಕ್ ದೊರೆತರೂ ಅದರ ಲಾಭ ಪಡೆಯುವಲ್ಲಿ ತಂಡ ವಿಫಲವಾಯಿತು. ಆಂಟೋನಿಯೋ ಪಿಲ್ಕಿಂಗ್ಟನ್ ತುಳಿದ ಚೆಂಡನ್ನು ಪೀಟರ್ ಹಾರ್ಟ್ಲೀ ಸುಲಭವಾಗಿ ಹೆಡರ್ ಮೂಲಕ ಹೊರದಬ್ಬಿದರು. ಗೋಲ್ ಕೀಪಿಂಗ್ ನಲ್ಲಿ ರೆಹನೇಶ್ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ತಂಡಕ್ಕೆ ನೆರವಾದರು. ಜೆಮ್ಷೆಡ್ಪುರಕ್ಕೆ ಕೆಲವು ಅವಕಾಶಗಳು ಕೂಡಿ ಬಂದರೂ ಅದು ಗೋಲಾಗಿ ಪರಿವರ್ತನೆಗೊಂಡಿಲ್ಲ.
 

Follow Us:
Download App:
  • android
  • ios