ಗೋವಾ(ಡಿ.05): 7ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡ ಮೊದಲ ಗೆಲುವು ಸಾಧಿಸಿದೆ. ಕಳೆದೆರಡು ಪಂದ್ಯಗಳಲ್ಲಿ ಡ್ರಾಗೆ ತೃಪ್ತಿಪಟ್ಟಿದ್ದ ಬಿಎಫ್‌ಸಿ, ಶುಕ್ರವಾರ ನಡೆದ ಚೆನ್ನೈಯಿನ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 1-0 ಗೋಲಿನಿಂದ ಜಯಿಸಿ ಬೀಗಿತು.

ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ತೀವ್ರ ಪೈಪೋಟಿ ನಡೆಸಿದವು. ಆದರೂ 45 ನಿಮಿಷಗಳ ಆಟದ ಮುಕ್ತಾಯಕ್ಕೆ 0-0ಯಲ್ಲಿ ಸಮಬಲ ಸಾಧಿಸಿದವು. 56ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ನಾಯಕ ಸುನಿಲ್‌ ಚೆಟ್ರಿ ಗೋಲು ಬಾರಿಸಿ ತಂಡದ ಖಾತೆ ತೆರೆದರು. ಬಳಿಕ ಸಮಬಲ ಸಾಧಿಸಲು ಚೆನ್ನೈ ತಂಡ ಎಷ್ಟೇ ಹೋರಾಟ ನಡೆಸಿದರೂ ಬಿಎಫ್‌ಸಿ ರಕ್ಷಣಾ ಪಡೆಯನ್ನು ದಾಟಲು ಸಾಧ್ಯವಾಗಲಿಲ್ಲ.

ಐಎಸ್‌ಎಲ್ 2020: ಮೊದಲ ಗೆಲುವಿನ ಕನವರಿಕೆಯಲ್ಲಿ ಬೆಂಗಳೂರು ಎಫ್‌ಸಿ

3 ಪಂದ್ಯಗಳನ್ನು ಆಡಿರುವ ಬಿಎಫ್‌ಸಿ 1 ಗೆಲುವು, 2 ಡ್ರಾಗಳೊಂದಿಗೆ ಒಟ್ಟು 5 ಅಂಕ ಸಾಧಿಸಿದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಮುಂದಿನ ಪಂದ್ಯವನ್ನು ಡಿ.8ರಂದು ನಾರ್ಥ್ ಈಸ್ಟ್‌ ಯುನೈಟೆಡ್‌ ವಿರುದ್ಧ ಆಡಲಿದೆ.

ಇಂದಿನ ಪಂದ್ಯ: ನಾರ್ಥ್ಈಸ್ಟ್‌ ಯುನೈಟೆಡ್‌-ಈಸ್ಟ್‌ ಬೆಂಗಾಲ್‌ 

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್