IPL 2023 ಟೂರ್ನಿ ಆರಂಭಕ್ಕೆ ಕೆಲ ದಿನಗಳು ಮಾತ್ರ ಬಾಕಿ. ಈಗಾಗಲೇ ವೇಳಾಪಟ್ಟಿಯೂ ಬಿಡುಗಡೆಯಾಗಿದೆ. ತಯಾರಿಗಳು ಆರಂಭಗೊಂಡಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ವೇಗಿ ಜಸ್ಪ್ರೀತ್ ಬುಮ್ರಾ ಸರಣಿಯಿಂದ ಹೊರಬಿದ್ದಿದ್ದಾರೆ 

ಮುಂಬೈ(ಫೆ.28): ಕಳೆದ ಒಂದು ವರ್ಷದಿಂದ ಕ್ರಿಕೆಟ್‌ನಿಂದ ದೂರ ಉಳಿದಿರುವ ವೇಗಿ ಜಸ್ಪ್ರೀತ್ ಬುಮ್ರಾ 2023ರ ಐಪಿಎಲ್ ಟೂರ್ನಿ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ಈ ಮಾತು ಸುಳ್ಳಾಗಿದೆ. ವೇಗಿ ಜಸ್ಪ್ರೀತ್ ಬುಮ್ರಾ IPL 2023 ಟೂರ್ನಿಯಿಂದ ಹೊರಬಿದ್ದಿದ್ದಾರೆ. ಬೆನ್ನು ನೋವಿನ ಗಾಯದಿಂದ ಸಂಪೂರ್ಣ ಚೇತರಿಸಿಕೊಳ್ಳದು ಬುಮ್ರಾ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಪಡುವ ಸಾಧ್ಯತೆ ಇದೆ. ಜಸ್ಪ್ರೀತ್ ಬುಮ್ರಾ ಅಲಭ್ಯತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ. ಒಂದು ವೇಳೆ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದರೆ, ಜೂನ್‌ನಲ್ಲಿ ನಡೆಯಲಿರುವ ಈ ಪಂದ್ಯದಿಂದಲೂ ಬುಮ್ರಾ ಹೊರಗುಳಿಯುವ ಸಾಧ್ಯತೆ ಇದೆ. 

ಸುದೀರ್ಘ ದಿನಗಳಿಂದ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ನೋವು ಕಡಿಮೆಯಾಗಿಲ್ಲ. ಇತ್ತ ಬುಮ್ರಾ ಕೂಡ ಚೇತರಿಸಿಕೊಂಡಿಲ್ಲ. ಬಿಸಿಸಿಐ ವೈದ್ಯಕೀಯ ತಂಡ ಬುಮ್ರಾ ತಪಾಸಣೆ ನಡೆಸಿ ಬಿಸಿಸಿಐಗೆ ವರದಿ ನೀಡಿದೆ. ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನಿಂದ ಹೊರಬರಲು ಶಸ್ತ್ರಚಿಕಿತ್ಸೆ ಹಾಗೂ ವಿಶ್ರಾಂತಿಯ ಅಗತ್ಯವಿದೆ ಎಂದು ವರದಿ ನೀಡಿದೆ. ಹೀಗಾಗಿ ಬುಮ್ರಾ ಐಪಿಎಲ್ 2023 ಟೂರ್ನಿಯಿಂದ ಹೊರಬಿದ್ದಿದ್ದಾರೆ.ಅಧಿಕೃತ ಪ್ರಕಟಣೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಹೊರಬೀಳಲಿದೆ.

ಪತ್ನಿ ಪ್ರಜ್ಞಾಹೀನಳಾಗಿದ್ಳು, ನಾನು ಅಳ್ತಿದ್ದೆ; ಆಗ ಕಾಪಾಡಿದ್ದು ಇಲ್ಲಿಯವ್ರು: ಭಾರತೀಯರ ಕೃತಜ್ಞತೆ ನೆನೆದ ವಾಸಿಂ ಅಕ್ರಮ್

ಬೆನ್ನು ನೋವು ಉಲ್ಬಣಿಸಿದ ಕಾರಣ ಕಳೆದ ವರ್ಷ ಏಷ್ಯಾಕಪ್ ಟೂರ್ನಿಯಿಂದ ಜಸ್ಪ್ರೀತ್ ಬುಮ್ರಾ ಹೊರಬಿದ್ದಿದ್ದರು. ಸೆಪ್ಟೆಂಬರ್ ತಿಂಗಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ದದ ಟಿ20 ಸರಣಿ ಮೂಲಕ ಬುಮ್ರಾ ಕಮ್ ಬ್ಯಾಕ್ ಪ್ರಯತ್ನ ಮಾಡಿದ್ದರು. ಆದರೆ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಮತ್ತೆ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶದ ಸರಣಿಯಿಂದಲೂ ಹೊರಬಿದ್ದರು. ಸರಿಸುಮಾರು ಒಂದು ವರ್ಷದಿಂದ ಬುಮ್ರಾ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ.

Eng vs NZ: ಕಿವೀಸ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕೇನ್‌ ವಿಲಿಯಮ್ಸನ್‌..!

ಜನವರಿ ತಿಂಗಳಲ್ಲಿ ನಡೆದ ಶ್ರೀಲಂಕಾ ವಿರುದ್ದದ ಸರಣಿಗೆ ಅಂತಿಮ ಹಂತದಲ್ಲಿ ಬುಮ್ರಾ ಹೆಸರನ್ನು ತಂಡಕ್ಕೆ ಸೇರಿಸಲಾಗಿತ್ತು. ಆದರೆ ಬುಮ್ರಾ ಲಭ್ಯರಾಗಲಿಲ್ಲ. ಮುಂಬರವು ವಿಶ್ವಕಪ್ ಟೂರ್ನಿ ದೃಷ್ಟಿಯಲ್ಲಿಟ್ಟುಕೊಂಡು ಬುಮ್ರಾಗೆ ಹೆಚ್ಚಿನ ಸಮಯ ನೀಡಲು ಬಿಸಿಸಿಐ ಮುಂದಾಗಿದೆ. ಅಕ್ಟೋ​ಬ​ರ್‌-ನವೆಂಬ​ರ್‌​ನಲ್ಲಿ ನಡೆ​ಯ​ಲಿ​ರುವ ಏಕ​ದಿನ ವಿಶ್ವ​ಕ​ಪ್‌ಗೂ ಬುಮ್ರಾ ಸಂಪೂರ್ಣ ಫಿಟ್ ಆಗಿ ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ.

ಐಸಿಸಿ ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ ಬಲಿಷ್ಠ ತಂಡ ಸಜ್ಜುಗೊಳಿಸಲು ತಯಾರಿ ನಡೆಸುತ್ತಿದೆ. ಟೀಂ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಆತುರವಾಗಿ ತಂಡಕ್ಕೆ ಸೇರಿಸಿ ವಿಶ್ವಕಪ್ ಟೂರ್ನಿ ವೇಳೆ ಸಂಕಷ್ಟ ಸಿಲುಕುವುದು ಬೇಡ ಅನ್ನೋದು ಬಿಸಿಸಿಐ ನಿರ್ಧಾರ. ಹೀಗಾಗಿ ಬುಮ್ರಾ ಸಂಪೂರ್ಣ ಫಿಟ್ನೆಸ್ ಖಾತ್ರಿ ಪಡಿಸಿಕೊಳ್ಳಲು ಬಿಸಿಸಿಐ ವೈದ್ಯಕೀಯ ತಂಡಕ್ಕ ಸೂಚಿಸಿದೆ. ಇಷ್ಟೇ ಅಲ್ಲ ಬುಮ್ರಾ ಚೇತರಿಕೆಗೆ ಎಲ್ಲಾ ಕ್ರಮ ಕೈಗೊಳ್ಳಲು ಸೂಚಿಸಿದೆ. ಇದೀಗ ಬುಮ್ರಾಗೆ ಮತ್ತೆ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದೆ. ಬಳಿಕ ವಿಶ್ಪಾಂತಿ ಪಡೆದು ಅಕ್ಟೋಬರ್ ತಿಂಗಳಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್ ಟೂರ್ನಿಗೆ ಸಂಪೂರ್ಣವಾಗಿ ಸಜ್ಜುಗೊಳಿಸಲು ಬಿಸಿಸಿಐ ಮುಂದಾಗಿದೆ.