ಮಾಸ್ಕೋ(ಜು.08): ಈಗ ಮಾನ್ಸೂನ್ ಆರಂಭವಾಗಿದೆ. ನಮಗೆಲ್ಲರಿಗೂ ಗುಡುಗು, ಸಿಡಿಲು, ಮಿಂಚು ಮಳೆ ಸರ್ವೇ ಸಾಮಾನ್ಯ. ಹೆಚ್ಚೆಂದರೆ ಮಿಂಚು-ಗುಡುಗಿಗೆ ಒಮ್ಮೊಮ್ಮೆ ಬೆಚ್ಚಿ ಬಿದ್ದಿದಿದೆ. ಇನ್ನೂ ಕೆಲವರು ಬಾಲ್ಯದಲ್ಲಿದ್ದಾಗ ಹೆದರಿಕೆಯಿಂದ ಮನೆಯೊಳಗೆ ಅವಿತುಕೊಂಡಿರಬಹುದು. ಆದರೆ ರಷ್ಯಾದ ಯುವ ಫುಟ್ಬಾಲ್ ಆಟಗಾರನೊಬ್ಬ ಮಿಂಚಿನ ಶಾಕ್‌ಗೆ ಕೋಮಾ ಸ್ಥಿತಿಗೆ ಜಾರಿದ್ದಾನೆ.

ಹೌದು, ಇವಾನ್ ಜೋಬರ್‌ವಸ್ಕಿ ಎನ್ನುವ 16 ವರ್ಷದ ಫುಟ್ಬಾಲ್ ಗೋಲ್‌ ಕೀಪರ್ ಕೋಮಾಗೆ ಜಾರಿರುವ ದುರ್ದೈವಿ. ಮಾಸ್ಕೋದ ನೆಮಿಯಾ ಟ್ರಡಾ ಕ್ಲಬ್‌ ಪರ ಸಹ ಆಟಗಾರರೊಂದಿಗೆ ಅಭ್ಯಾಸ ಮಾಡುತ್ತಿರುವಾಗ ಮಿಂಚಿನ ಶಾಕ್ ನೇರವಾಗಿ ಇವಾನ್ ಜೋಬರ್‌ವಸ್ಕಿ ತಗುಲಿದೆ. ಮಿಂಚಿನ ಶಾಕ್‌ಗೆ ಆಟಗಾರ ಸ್ಥಳದಲ್ಲಿ ಕೋಮಾ ಸ್ಥಿತಿ ತಲುಪಿದ್ದಾನೆ.

2 ಬಾರಿ ಮದುವೆಯಾದ ಸೌರವ್ ಗಂಗೂಲಿ - ಇದು ದಾದಾನ ಲವ್‌ ಸ್ಟೋರಿ

ಸದ್ಯ ಆಟಗಾರ ಈ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದು, ಮತ್ತೊಮ್ಮೆ ಆಟ ಫುಟ್ಬಾಲ್ ಮೈದಾನಕ್ಕಿಳಿಯಲಿದ್ದಾನೆ ಎಂದು ತಂಡದ ಡೈರೆಕ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಿಂಚಿನ ಶಾಕ್‌ ಹೊಡೆದ ಬೆಚ್ಚಿ ಬೀಳಿಸುವ ಕ್ಷಣ ಹೀಗಿತ್ತು ನೋಡಿ..

ಮಿಂಚಿನ ಶಾಕ್ ಹೊಡೆಯುತ್ತಿದ್ದಂತೆ ಇವಾನ್ ಜೋಬರ್‌ವಸ್ಕಿ ಪ್ಯಾರಾ ಮೆಡಿಕಲ್ ಸಿಬ್ಬಂದಿ ತಕ್ಷಣವೇ ಮೈದಾನಕ್ಕಾಗಮಿಸಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಆ ಬಳಿಕ ಇವಾನ್ ಜೋಬರ್‌ವಸ್ಕಿ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ತುರ್ತು ನಿಗಾ ಘಟಕದಲ್ಲಿಡಲಾಗಿದೆ.