ಮಗಳ ಹೆಸರಲ್ಲಿ ನಿರ್ಮಾಣವಾಗ್ತಿರೋ ರಸ್ತೆಗೆ, ಆಕೆಯ ತಾಯಿಯೇ ದಿನಗೂಲಿ ವರ್ಕರ್‌!

ಇಂದಿನಿಂದ ಭಾರತದಲ್ಲಿ 17 ವಯೋಮಿತಿ ಮಹಿಳಾ ಫಿಫಾ ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಅಷ್ಟಮ್‌ ಒರಾನ್‌ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈಕೆ ಜಾರ್ಖಂಡ್‌ಗ ಗುಮ್ಲಾದ ಹಳ್ಳಿಯವರು. ಇವರ ತಂದೆ-ತಾಯಿ ಹಾಗೂ ಸಹೋದರ ದಿನಗೂಲಿ ಕಾರ್ಮಿಕರು. ಇನ್ನೂ ವಿಶೇಷವೆಂದರೆ, ಅಷ್ಟಮ್‌ ಒರಾನ್‌ ಹೆಸರಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ಕಾರ್ಯದಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ.
 

Road is being built in the name of footballer Ashtam Oraon parents and laborers work there san

ನವದೆಹಲಿ (ಅ.11): 17 ವಯೋಮಿತಿ ಮಹಿಳಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿ ಇಂದಿನಿಂದ ಭಾರತದಲ್ಲಿ ಆರಂಭವಾಗಲಿದೆ. ಜಾರ್ಖಂಡ್‌ನ ಗುಮ್ಲಾದ ಹಳ್ಳಿಯ ಅಷ್ಟಮ್‌ ಒರಾನ್‌ ಭಾರತ ತಂಡವನ್ನು ಈ ಟೂರ್ನಿಯಲ್ಲಿ ಮುನ್ನಡೆಸಲಿದ್ದಾರೆ. ಆದರೆ, ಇದಕ್ಕಿಂತ ಹೆಮ್ಮೆಯ ವಿಚಾರ ಆಕೆಯ ವಿಚಾರದಲ್ಲಿದೆ. ಜಾರ್ಖಂಡ್‌ ಸರ್ಕಾರ ಅಷ್ಟಮ್‌ ಒರಾನ್‌ ಹೆಸರಲ್ಲಿ ನೂತನ ರಸ್ತೆಯನ್ನು ಅವರ ಹಳ್ಳಿಯಲ್ಲಿ ನಿರ್ಮಾಣ ಮಾಡುತ್ತಿದೆ. ಆದರೆ, ವಿಪರ್ಯಾಸದ ಸಂಗತಿ ಏನೆಂದರೆ, ಈ ರಸ್ತೆ ನಿರ್ಮಾಣದಲ್ಲಿ ದಿನಗೂಲಿ ನೌಕರರಾಗಿ ಅಷ್ಟಮ್‌ ಅವರ ತಂದೆ, ತಾಯಿ ಹಾಗೂ ಸಹೋದರ ದುಡಿಯುತ್ತಿದ್ದಾರೆ. ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗಾ ಸ್ಟೇಡಿಯಂನಲ್ಲಿ ಇಂದು ಮೊದಲ ಮುಖಾಮುಖಿ ನಡೆಯಲಿದ್ದು. ಭಾರತ ಮಹಿಳಾ ತಂಡ ಅಷ್ಟಮ್‌ ಒರಾನ್‌ ನೇತೃತ್ವದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ. ಅಷ್ಟಮ್‌ ಒರಾನ್‌ ಎಷ್ಟು ಬಡ ಕುಟುಂಬವೆಂದರೆ, ಆಕೆಯ ಆಟವನ್ನು ನೋಡಲು ಅವರ ಪಾಲಕರಿಗೆ ಸಾಧ್ಯವಾಗುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಜಿಲ್ಲಾಡಳಿತದ ವತಿಯಿಂದ ಅವರ ಮನೆಗೆ ಟಿವಿ ಹಾಗೂ ಇನ್ವರ್ಟರ್‌ ವ್ಯವಸ್ಥೆ ಮಾಡಲಾಗಿದೆ. ಇಡೀ ಹಳ್ಳಿಯಲ್ಲಿ ಟಿವಿಯನ್ನು ಹೊಂದಿರುವ ಮೊದಲ ಮನೆ ಇವರದಾಗಿದೆ.

ಅಷ್ಟಮ್‌ (Ashtam Oraon) ಅವರನ್ನು ಕ್ಯಾಪ್ಟನ್‌ ಆಗಿ ಎಐಎಫ್‌ಎಫ್‌ (AIFF) ಘೋಷಣೆ ಮಾಡಿದ ಬಳಿಕ, ಜಾರ್ಖಂಡ್‌ ಸರ್ಕಾರ (Jharkhand Governament) ಆಕೆಯ ಹೆಸರಲ್ಲಿ ರಸ್ತೆಯನ್ನು ಅವರ ಹಳ್ಳಿಗೆ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿತ್ತು. ಇಲ್ಲಿಯವರೆಗೂ ಅಷ್ಟಮ್‌ ಒರಾನ್‌ ಅವರ ನಿವಾಸಕ್ಕೆ ರಸ್ತೆ ಇದ್ದಿರಲಿಲ್ಲ. ಇದೇ ವೇಳೆ ಜಾರ್ಖಂಡ್‌ ಸರ್ಕಾರದ ಘೋಷಣೆಗೂ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ತಕ್ಷಣವೇ ಇದರ ಕೆಲಸಗಳು ಆರಂಭವಾದಾಗ ಗ್ರಾಮಸ್ಥರು ಕೂಡ ಸಂಭ್ರಮ (FIFA U-17 Women World Cup-2022) ಪಟ್ಟಿದ್ದರು.

ಆದರೆ, ವಿಪರ್ಯಾಸವೆಂದರೆ, ಅಷ್ಟಮ್‌ ಅವರ ಕುಟುಂಬದವರೇ ಈ ರಸ್ತೆಗೆ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ. ಆ ಮೂಲಕ ದಿನದ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈ ಕುರಿತಾಗಿ ಅಷ್ಟಮ್‌ ಒರಾನ್‌ ಅವರ ತಂದೆ ಹೀರಾ ಒರಾನ್‌(Heera Oraon)ಅವರನ್ನು ಮಾತನಾಡಿಸಿದಾಗ, "ನಾವು ನೌಕರರಾಗಿ ಕೆಲಸ ಮಾಡದೇ ಇದ್ದಲ್ಲಿ, ಊಟ ಮಾಡುವುದು ಹೇಗೆ' ಎಂದು ಪ್ರಶ್ನಿಸುತ್ತಾರೆ. ಈ ವಿಷಯ ಬೆಳಕಿಗೆ ಬಂದಾಗ ಆಡಳಿತ ಮಂಡಳಿಯೂ ಅಚ್ಚರಿ ವ್ಯಕ್ತಪಡಿಸಿದೆ. ಈ ವಿಷಯ ನನಗೆ ತಿಳಿದಿಲ್ಲ ಎಂದು ಗುಮ್ಲಾ ಜಿಲ್ಲಾಧಿಕಾರಿ ಸುಶಾಂತ್ ಗೌರವ್ ಹೇಳಿದ್ದಾರೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುತ್ತಿರುವ ಅಷ್ಟಮ್‌ನನ್ನು ನೋಡಲು ಪೋಷಕರು ಮತ್ತು ಗ್ರಾಮಸ್ಥರಿಗೆ ಆಡಳಿತ ವ್ಯವಸ್ಥೆ ಮಾಡಿದೆ. ಅಷ್ಟಮ್‌ ಮನೆಯಲ್ಲೂ ಟಿವಿ ಅಳವಡಿಸಲಾಗಿದೆ. ಅವರ ಸಾಧನೆಗಾಗಿ ಕ್ರೀಡಾಂಗಣವೊಂದಕ್ಕೆ ಆಕೆಯ ಹೆಸರನ್ನು ಇಡಲಾಗುತ್ತಿದೆ.

ಕೊನೆಯುಸಿರೆಳೆದ ಪುಟ್ಟ ಅಭಿಮಾನಿಯ ಬಗ್ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ ಡೇವಿಡ್ ಮಿಲ್ಲರ್..!

ಗಂಜಿ ಊಟ ಮಾಡಿ ಬೆಳೆದಿದ್ದಳು: ಆಕೆಯ ಬಗ್ಗೆ ಮಾತನಾಡುವ ತಾಯಿ ತಾರಾದೇವಿ (Taradevi),'ಆಕೆ ಭಾರತ ತಂಡದ ನಾಯಕಿಯಾಗಿರುವುದಕ್ಕೆ ಹೆಮ್ಮೆ ಇದೆ. ಚಿಕ್ಕಂದಿನಿಂದಲೂ ಆಕೆಗೆ ಫುಟ್‌ಬಾಲ್‌ (Football) ಇಷ್ಟ. ಅವಳಿಗೆ ಫುಟ್‌ಬಾಲ್‌ ಆಟಗಾರ್ತಿಯಾಗುವ ಆಸೆ ಇತ್ತು. ಅದರಂತೆ ಆಗಿದ್ದಾರೆ. ಚಿಕ್ಕಂದಿನಲ್ಲಿ ಆಕೆಗೆ ಹಾಲು ಕುಡಿದಿಲ್ಲ. ನೀರು, ಅಕ್ಕಿ ಗಂಜಿ ಕುಡಿದು ಬೆಳೆದಿದ್ದಾರೆ. ಒಮ್ಮೆ ಆಕೆ ಕೆಲಸ ಮಾಡಲು ಆರಂಭಿಸಿದ ಬಳಿಕ ನಾನು ಕೆಲಸಕ್ಕೆ ಹೋಗುವುದನ್ನು ಬಿಡುತ್ತೇನೆ ಎಂದು ಹೇಳಿದ್ದಾಗಿ ತಾರಾದೇವಿ ಹೇಳಿದ್ದಾರೆ.

National gamesನಲ್ಲಿ ಚಿನ್ನ ಗೆದ್ದ ಕನ್ನಡಿಗ ಮನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೀರಜ್!

ಇನ್ನು ಅಷ್ಟಮ್‌ ಒರಾನ್‌ ಅವರ ತಂದೆ ಹೀರಾ ಕೂಡ ಪ್ರಸಿದ್ಧ ಫುಟ್‌ಬಾಲ್‌ ಆಟಗಾರರು. ಬನಾರಿ ಪಂಚಾಯಿತಿ ಮುಖ್ಯಸ್ಥ ಬಸಾನು ಓರಾನ್ ಮಾತನಾಡಿ, ಕಾಡು-ಮಲೆಗಳ ನಡುವೆ ಇರುವ ಗ್ರಾಮದಲ್ಲಿ ವಾಸಿಸುವ ಹೀರಾ ಅವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಮನೆಯೂ ಕೆಸರಿನಿಂದ ಕೂಡಿದ್ದು, ಶಿಥಿಲಾವಸ್ಥೆಯಲ್ಲಿದೆ. ಅವರಿಗೆ ಪ್ರಧಾನ್‌ ಮಂತ್ರಿ ಆವಾಸ್‌ ಯೋಜನೆಯಡಿ ಮನೆಯನ್ನು ನೀಡುವಂತೆ ಆಡಳಿತವನ್ನು ಕೋರಿದ್ದೇವೆ. ನಮ್ಮ ಹೆಣ್ಣು ಮಗು ಅಂತರಾಷ್ಟ್ರೀಯ ಫುಟ್ಬಾಲ್ ತಂಡದ ನಾಯಕಿಯಾದಳು, ಇದು ನಮಗೆ ದೊಡ್ಡ ವಿಷಯವಾಗಿದೆ. ಅಷ್ಟಮ ಗ್ರಾಮಕ್ಕೆ ಮರಳಿದ ಮೇಲೆ ಅದ್ಧೂರಿ ಸ್ವಾಗತ ನೀಡಲಾಗುವುದು ಎಂದಿದ್ದಾರೆ

Latest Videos
Follow Us:
Download App:
  • android
  • ios