ಕ್ಯಾನ್ಸರ್‌ನಿಂದ ಕೊನೆಯುಸಿರೆಳೆದ ಡೇವಿಡ್ ಮಿಲ್ಲರ್ ಅಪ್ಪಟ ಅಭಿಮಾನಿಸಾಮಾಜಿಕ ಜಾಲತಾಣಗಳಲ್ಲಿ ನುಡಿನಮನ ಸಲ್ಲಿಸಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ10 ವರ್ಷದ ಆ್ಯನೆ ಡೇವಿಡ್ ಮಿಲ್ಲರ್ ಅಪ್ಪಟ ಅಭಿಮಾನಿ

ರಾಂಚಿ(ಅ.09): ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್‌ ಶನಿವಾರ ರಾತ್ರಿ ತಮ್ಮ ವಿಶೇಷ ಅಭಿಮಾನಿಯೊಬ್ಬರು ಕೊನೆಯುಸಿರೆಳೆದ ಆಘಾತಕಾರಿ ವಿಚಾರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಡೇವಿಡ್ ಮಿಲ್ಲರ್ ಅಭಿಮಾನಿ ಆ್ಯನೆ ಕ್ಯಾನ್ಸರ್ ವಿರುದ್ದ ಹೋರಾಡುತ್ತಿದ್ದರು. ಇದೀಗ ಮಿಲ್ಲರ್ ಆ್ಯನೆ ಸಾವಿನ ಬಗ್ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ್ದಾರೆ. ಮಿಲ್ಲರ್‌ ಮೊದಲಿಗೆ ಹಂಚಿಕೊಂಡ ಸುದ್ದಿ ನೋಡಿದ ಫ್ಯಾನ್ಸ್‌, ಮಿಲ್ಲರ್ ಪುತ್ರಿಯೇ ಕೊನೆಯುಸಿರೆಳೆದಿದ್ದರು ಎಂದು ಭಾವಿಸಿದ್ದರು.

RIP ನನ್ನ ಲಿಟ್ಲ್‌ ರಾಕ್‌ಸ್ಟಾರ್, ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಕಿರಿಯ ಅಭಿಯೊಂದಿಗಿನ ಫೋಟೋವನ್ನು ಡೇವಿಡ್ ಮಿಲ್ಲರ್ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಡೇವಿಡ್ ಮಿಲ್ಲರ್, ನಾನು ನಿನ್ನನ್ನು ತುಂಬಾ ಮಿಸ್‌ ಮಾಡಿಕೊಳ್ಳಲಿದ್ದೇನೆ. ನಾನು ಕಂಡ ತುಂಬಾ ಹೃದಯವೈಶಾಲ್ಯವಿರುವ ವ್ಯಕ್ತಿ ನೀನು. ನೀನು ಬೇರೆಯದ್ದೇ ಹಂತದ ಹೋರಾಟ ನಡೆಸಿದೆ. ನೀನು ಯಾವಾಗಲೂ ಮುಖದಲ್ಲಿ ನಗುವನ್ನು ತುಂಬಿಕೊಂಡೇ ಇರುತ್ತಿದೆ. ಜೀವನದ ಪ್ರತಿಕ್ಷಣವನ್ನು ಎಂಜಾಯ್ ಮಾಡಬೇಕು ಎನ್ನುವುದನ್ನು ನೀನು ನನಗೆ ಕಲಿಸಿಕೊಟ್ಟಿದ್ದೀಯ. ಐ ಲವ್ ಯೂ ಸೋ ಮಚ್ ಎಂದು ಬರೆದುಕೊಂಡಿದ್ದಾರೆ. 

View post on Instagram

ಡೇವಿಡ್ ಮಿಲ್ಲರ್ ಸದ್ಯ ದಕ್ಷಿಣ ಆಫ್ರಿಕಾ ತಂಡದ ಜತೆ ಸೀಮಿತ ಓವರ್‌ಗಳ ಸರಣಿಯನ್ನಾಡಲು ಭಾರತದಲ್ಲಿದ್ದಾರೆ. ಭಾರತ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಅಜೇಯ 75 ರನ್ ಬಾರಿಸುವ ಮೂಲಕ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು 1-0 ಮುನ್ನಡೆ ಸಾಧಿಸಿದೆ.

Ind vs SA: ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆಯ್ಕೆ; 2 ಮಹತ್ವದ ಬದಲಾವಣೆ

ಭಾರತ ಎದುರಿನ ಏಕದಿನ ಸರಣಿಯನ್ನು ಮುಗಿಸಿಕೊಂಡು ದಕ್ಷಿಣ ಆಫ್ರಿಕಾ ತಂಡವು, ಆಸ್ಟ್ರೇಲಿಯಾಗೆ ಟಿ20 ಟೂರ್ನಿಯನ್ನಾಡಲು ಪ್ರಯಾಣ ಬೆಳೆಸಲಿದೆ. ಡೇವಿಡ್ ಮಿಲ್ಲರ್, ದಕ್ಷಿಣ ಆಫ್ರಿಕಾ ಸೀಮಿತ ಓವರ್‌ಗಳ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.