ಫುಟ್ಬಾಲಿಗೆ ಕೈಲಿಯನ್ ಎಂಬಾಪೆ ಮೌಲ್ಯ 1700 ಕೋಟಿ ರುಪಾಯಿ..!
* ಅತ್ಯಂತ ಮೌಲ್ಯಯುತ ಫುಟ್ಬಾಲ್ ಆಟಗಾರನಾಗಿ ಹೊರಹೊಮ್ಮಿದ ಕೈಲಿಯನ್ ಎಂಬಾಪೆ
* ಎಂಬಾಪೆ ಟ್ರಾನ್ಸ್‌ಫರ್ ಮೂಲಕ 205.6 ಮಿಲಿಯನ್ ಯೂರೋ(1,700) ಪಡೆಯಲಿದ್ದಾರೆ
* ಪ್ಯಾರಿಸ್ ಜೈಂಟ್ಸ್ ಫುಟ್ಬಾಲ್ ಕ್ಲಬ್ ಆಟಗಾರ ಕೈಲಿಯನ್ ಎಂಬಾಪೆ
ಮ್ಯಾಡ್ರಿಡ್(ಜೂ.08): ಪ್ಯಾರಿಸ್ ಜೈಂಟ್ಸ್ ಫುಟ್ಬಾಲ್ ಕ್ಲಬ್ ಆಟಗಾರ ಕೈಲಿಯನ್ ಎಂಬಾಪೆ (Kylian Mbappe) ಅತ್ಯಂತ ಮೌಲ್ಯಯುತ ಫುಟ್ಬಾಲ್ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಸ್ವಿಸ್ ಸಂಶೋಧನಾ ತಂಡವಾದ ಸಿಐಸಿಎಸ್ ನಡೆಸಿದ ಸಮೀಕ್ಷೆಯಲ್ಲಿ ಎಂಬಾಪೆ ಟ್ರಾನ್ಸ್‌ಫರ್ ಮೂಲಕ 205.6 ಮಿಲಿಯನ್ ಯೂರೋ(1,700) ಪಡೆಯಲಿದ್ದಾರೆ ಎಂದು ತಿಳಿಸಿದೆ. ಇನ್ನು ರಿಯಲ್ ಮ್ಯಾಡ್ರಿಡ್‌ನ ವಿನೀಶಿಯಸ್ 1,530 ಕೋಟಿ ರುಪಾಯಿ, ಮ್ಯಾಂಚೆಸ್ಟರ್ ಸಿಟಿ ಸೇರಲಿರುವ ಹಾಲಂಡ್ 1,260 ಕೋಟಿ ರುಪಾಯಿ ಪಡೆಯಲಿದ್ದಾರೆ ಎಂದು ತಿಳಿಸಿದೆ.
ಬ್ಯಾಡ್ಮಿಂಟನ್: ಅಶ್ವಿನಿ ಪೊನ್ನಪ್ಪ ಜೋಡಿ ಹೊರಕ್ಕೆ
ಜಕಾರ್ತ: ಭಾರತದ ತಾರಾ ಶಟ್ಲರ್‌ಗಳಾದ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ, ಮನು-ಸುಮಿತ್ ರೆಡ್ಡಿ ಜೋಡಿ ಮಂಗಳವಾರ ಆರಂಭವಾದ ಇಂಡೋನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದೆ. ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸಿಕ್ಕಿ ರೆಡ್ಡಿ ಜೋಡಿ ಇಂಡೋನೇಷ್ಯಾ ವಿರುದ್ದ ಸೋತರೆ, ಪುರುಷರ ಡಬಲ್ಸ್‌ನಲ್ಲಿ ಸುಮೀತ್-ಮನು ಕೂಡಾ ಇಂಡೋನೇಷ್ಯಾ ಜೋಡಿಯ ಎದುರು ಮುಗ್ಗರಿಸಿತು. ಇನ್ನು ಆಕರ್ಷಿ-ಕಶ್ಯಪ್ ಹಾಗೂ ಸುಮೀತ್-ಅಶ್ವಿನಿ ಜೋಡಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದುಕೊಂಡಿತು.
Ironman Triathlon: ಟ್ರಯಾಥ್ಲಾನ್ ಸಾಧಿಸಿದ ಕನ್ನಡಿಗ ಶ್ರೇಯಸ್ ಹೊಸೂರು
ಕಾಮನ್‌ವೆಲ್ತ್: ಟಿಟಿ ತಂಡಕ್ಕೆ ದಿಯಾ ಸೇರ್ಪಡೆ
ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್‌ನ ಭಾರತ ಟೇಬಲ್ ಟೆನಿಸ್ ತಂಡದಲ್ಲಿ ತಾರಾ ಆಟಗಾರ್ತಿ ದಿಯಾ ಚಿತಾಳೆ ಅವರಿಗೆ ಮತ್ತೆ ಸ್ಥಾನ ನೀಡಲಾಗಿದೆ. ತಮ್ಮನ್ನು ತಂಡದಿಂದ ಕೈಬಿಟ್ಟಕ್ರಮವನ್ನು ಪ್ರಶ್ನಿಸಿ ದಿಯಾ ಹೈಕೋರ್ಚ್ ಮೆಟ್ಟಿಲೇರಿದ ಬಳಿಕ ಪರಿಷ್ಕೃತ ಪಟ್ಟಿಪ್ರಕಟಿಸಿದ ಭಾರತ ಟೇಬಲ್ ಟೆನಿಸ್ ಒಕ್ಕೂಟ(ಟಿಟಿಎಫ್‌ಐ)ದ ಆಡಳಿತ ಸಮಿತಿಯು, ದಿಯಾರನ್ನು ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ಕಳೆದ ವಾರ ಪ್ರಕಟಿಸಿದ್ದ ತಂಡದಲ್ಲಿದ್ದ ಅರ್ಚನಾ ಕಾಮತ್‌ರನ್ನು ಕೈಬಿಡಲಾಗಿದೆ. ಮಹಿಳೆಯರ ಡಬಲ್ಸ್‌ನಲ್ಲಿ ಮಣಿಕಾ ಬಾತ್ರಾಗೆ ಜೋಡಿಯಾಗಿರಲು ಅರ್ಚನಾಗೆ ಅವಕಾಶ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ದಿಯಾ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇನ್ನು, ಪುರುಷರ ತಂಡದಲ್ಲಿ ತಮಗೆ ಸ್ಥಾನ ಸಿಕ್ಕಿಲ್ಲ ಎಂದು ಮನುಷ್ ಶಾ ಹೈಕೋರ್ಚ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಮೀಸಲು ಆಟಗಾರರಾಗಿಯೇ ಮುಂದುವರಿಯಲಿದ್ದಾರೆ.
ಖೊ ಖೊ ಲೀಗ್: ತಂಡ ಖರೀದಿಸಿದ ಅದಾನಿ, ಜಿಎಂಆರ್
ಬೆಂಗಳೂರು: ಭಾರತೀಯ ಖೊ ಖೊ ಫೆಡರೇಶನ್(ಕೆಕೆಎಫ್‌ಐ) ಸಹಯೋಗದೊಂದಿಗೆ ಆರಂಭವಾಗಲಿರುವ ಡಾಬರ್ ಗ್ರೂಪ್‌ನ ಚೊಚ್ಚಲ ಆವೃತ್ತಿಯ ಅಲ್ಟಿಮೇಟ್ ಖೊ ಖೊ ಲೀಗ್‌ನಲ್ಲಿ ಅದಾನಿ ಸ್ಪೋಟ್ಸ್‌ರ್ ಲೈನ್ ಹಾಗೂ ಜಿಎಂಆರ್ ಸ್ಪೋಟ್ಸ್‌ರ್ ಸಂಸ್ಥೆ ಎರಡು ತಂಡಗಳನ್ನು ಖರೀಸಿದೆ. ಈ ಬಗ್ಗೆ ಖೊ ಖೊ ಲೀಗ್‌ನ ಸಿಇಒ ತೇನ್‌ಸಿಂಗ್ ಅವರು ಮಾಹಿತಿ ಹಂಚಿಕೊಂಡಿದ್ದು, ಅದಾನಿ ಸಂಸ್ಥೆಯು ಗುಜರಾತ್ ತಂಡವನ್ನು ಮತ್ತು ಜಿಎಂಆರ್ ತೆಲಂಗಾಣ ತಂಡದ ಮಾಲಿಕತ್ವ ಪಡೆದಿದೆ. ಲೀಗ್ ಶೀಘ್ರದಲ್ಲೇ ಆರಂಭವಾಗಲಿದ್ದು, ದೇಶದ ಖೊ ಖೊ ವಿಭಾಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿದೆ ಎಂದಿದ್ದಾರೆ.