ISL 7: ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿ ಮೋಹನ್ ಬಾಗನ್!

ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಎಟಿಕೆ ಮೋಹನ್ ಬಾಗನ್ ಹಾಗೂ ಕೊನೆಯ(10ನೇ ಸ್ಥಾನ)ದಲ್ಲಿರುವ ಒಡಿಶಾ ಎಫ್‌ಸಿ ಹೋರಾಟಕ್ಕೆ ಸಜ್ಜಾಗಿದೆ. ಎಟಿಕೆ ಎರಡೂ ಪಂದ್ಯದಲ್ಲಿ ಗೆಲುವು ಕಂಡಿದ್ದರೆ, ಒಡಿಶಾ ಎರಡಲ್ಲೂ ಸೋಲು ಕಂಡಿದೆ. ಇದೀಗ ಉಭಯ ತಂಡಗಳು ಮಹತ್ವದ ಅಗ್ನಿಪರೀಕ್ಷೆಗೆ ಸಜ್ಜಾಗಿದೆ

Odisha FC have a tough game on their hands as they take on ATK Mohun Bagan in Match 15 ckm

ಗೋವಾ(ಡಿ.03): ಏಳನೇ ಆವೃತ್ತಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಶುಭಾರಂಭ ಮಾಡಿರುವ ಎಟಿಕೆ ಮೋಹನ್ ಬಾಗನ್ ತಂಡ ಇದೀಗ 2ನೇ ಗೆಲವಿಗೆ ತಯಾರಿ ನಡೆಸಿದೆ.  ಫಟೋರ್ಡಾ ಅಂಗಣದಲ್ಲಿ ಒಡಿಶಾ ಎಫ್ ಸಿ ವಿರುದ್ಧ ಹೋರಾಟಕ್ಕೆ ಸಜ್ಜಾಗಿರುವ ಎಟಿಕೆ ಮೋಹನ್ ಬಾಗನ್ ತಂಡ ಇಂಡಿಯನ್ ಸೂಪರ್ ಲೀಗ್ ನಲ್ಲಿ ಗೆಲುವಿನ ವಿಶ್ವಾಸ ಹೊಂದಿದೆ.

ಹೈದ್ರಾಬಾದ್-ಜೆಮ್ಯೆಡ್‌ಪುರ ಐಎಸ್‌ಎಲ್‌ ಪಂದ್ಯ1-1 ಡ್ರಾ

ಇದುವರೆಗೂ ಎರಡೂ ತಂಡಗಳು ಈ ಋತುವಿನಲ್ಲಿ ವಿಭಿನ್ನ  ರೀತಿಯ ಅದೃಷ್ಟ ಕಂಡಿವೆ. ಜಯ ಕಾಣದೆ ಕಂಗಾಲಾಗಿರುವ ಒಡಿಶಾ ಅಂಕಪಟ್ಟಿಯಲ್ಲಿ ಕೆಳ ಹಂತದಲ್ಲಿದೆ.  ಮೊದಲ ಎರಡು ಪಂದ್ಯಗಳಲ್ಲಿ ಕೇವಲ 1 ಅಂಕ ಗಳಿಸುವಲ್ಲಿ ಸಫಲವಾಗಿದೆ. ಸತತ ಮೂರನೇ ಜಯ ಗಳಿಸಿದರೆ ಎಟಿಕೆಎಂಬಿ ಅಗ್ರ ಸ್ಥಾನ ತಲುಪಲಿದೆ.

ಜೆಮ್ಷೆಡ್ಪುರ ಎಫ್ ಸಿ ವಿರುದ್ಧ ಮೊದಲ ಅಂಕ ಗಳಿಸುವ ಮೂಲಕ ಒಡಿಶಾ ಎಫ್ ಸಿ ತನ್ನ ಯಶಸ್ಸಿನ ಹಾದಿ ಆರಂಭಿಸಿತ್ತು, ಆದರೆ ತಂಡದ ಬ್ಯಾಕ್ ಲೈನ್ ವಿಭಾಗ ಅತಂತ್ರದಲ್ಲಿರುವುದು ಗಂಭೀರಸ ಸಮಸ್ಯೆಯಾಆಗಿದೆ.  ಸ್ಟುವರ್ಟ್ ಬಾಕ್ಸ್ಟರ್ ಪಡೆ ಇದುವರೆಗೂ  29 ಶಾಟ್ ಗಳನ್ನು ಎದುರಾಳಿ ತಂಡದ ಆಟಗಾರರಿಗೆ ಅನುವುಮಾಡಿಕೊಟ್ಟಿದೆ.

ಎಟಿಕೆಎಂಬಿ ತಂಡದ ರಾಯ್ ಕೃಷ್ಣ ಇದುವರೆಗೂ ಆಡಿರುವ ಎರಡು ಪಂದ್ಯಗಳಲ್ಲಿ ಎರಡು ಗೋಲುಗಳನ್ನು ಗಳಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಹಬ್ಬಾಸ್ ಪಡೆಯ ಎಲ್ಲ ಗೋಲುಗಳು ದಾಖಲಾಗಿರುವುದು ಓಪನ್ ಪ್ಲೇ ಮೂಲಕ. ಅದೇ ರೀತಿ ಎದುರಾಳಿ ಮೇಲೆ ಪ್ರತಿ ದಾಳಿಯನ್ನು ನಡೆಸಿ ಗೋಲು ಗಳಿಸುವ ಗುರಿ ಹೊಂದಿದೆ.

“ಅವರುನ್ನು ಗೌರವಿಸಬೇಕು ಏಕೆಂದರೆ ಅವರಲ್ಲಿ ಉತ್ತಮ ಮತ್ತು ಅನುಭವಿ ಆಟಗಾರರಿದ್ದಾರೆ.” ಎಂದು ಹೇಳಿರುವ ಬಾಕ್ಸ್ಟರ್,, “ಫಾರ್ವರ್ಡ್ ವಿಭಾಗದಲ್ಲಿ ಆಟಗಾರರನ್ನು ಸಂಯೋಜಿಸುವಾಗ ಎಚ್ಚರಿಕೆಯಿಂದ ಇರಬೇಕು. ನಾವು ಚದುರಿರುವಾಗ ಅವರು ಅತ್ಯಂತ ವೇಗದಲ್ಲಿ ಹೊಂದಿಕೊಳ್ಳುತ್ತಾರೆ. ಆ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಅವರ ಹಾದಿಯನ್ನು ಕಠಿಣ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಬಯಸುವ ಸ್ಥಳವನ್ನು ನಾಯ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು, ಜತೆಯಲ್ಲಿ ನಿಯಂತ್ರಣ ನಮ್ಮದಾಗಬೇಕು,” ಎಂದರು.

ಫಾರ್ವರ್ಡ್ ವಿಭಾಗದಲ್ಲೂ ಒಡಿಶಾ ತಂಡ ಅತ್ಯಂತ ಎಚ್ಚರಿಕೆಯಿಂದ ಇರಬೇಕು. ಇದುವರೆಗೂ ಎದುರಾಳಿ ತಂಡಕ್ಕೆ ಗೋಲು ನೀಡದ ತಂಡದ ವಿರುದ್ಧ ಆಡಬೇಕಾಗಿದೆ. ಎಟಿಕೆಎಂಬಿ ಹೊರತುಪಡಿಸಿದರೆ ಹೈದರಾಬಾದ್ ತಂಡ ಪ್ರಸಕ್ತ ಋತುವಿನಲ್ಲಿ ಇದುವರೆಗೂ ಗೋಲು ನೀಡಿರಲಿ್ಲ. ಹಬ್ಬಾಸ್ ಅವರು ತಮ್ಮ ತಂಡ ಪಿಚ್ ನ ಎರಡೂ ತುದಿಗಳಲ್ಲಿ ಉತ್ತಮ ರೀತಿಯಲ್ಲಿ ಆಡಬೇಕೆಂಬುದನ್ನು ನಿರೀಕ್ಷಿಸಿದ್ದಾರೆ.

“ದಾಳಿ ಮಾಡುವುದು ಮತ್ತು ರಕ್ಷಣೆ ಇಷ್ಟೇ ರಣತಂತ್ರ,”  ಎಂದು ಡರ್ಬಿ ಗೆದ್ದ ನಂತರ ಹೇಳಿರುವ ಹಬ್ಬಾಸ್, “ಇದು ಫುಟ್ಬಾಲ್ ಪರತಿಯೊಂದು ಹಂತದಲ್ಲೂ ದಾಳಿ ಮತ್ತು ರಕ್ಷಣೆ ಪ್ರಮುಖವಾಗಿರುತ್ತದೆ, ಇದು ನಮ್ಮ ಯೋಜನೆಯಾಗಿರುತ್ತದೆ. ಕೇವಲ ಫುಟ್ಬಾಲ್ ಅಥವಾ ಕೇವಲ ರಕ್ಷಣೆಯಿಂದ ಕೂಡಿರುವ ಫುಟ್ಬಾಲ್ ನನಗೆ ಅರ್ಥವಾಗುವುದಿಲ್ಲ,’’ ಎಂದರು.

Latest Videos
Follow Us:
Download App:
  • android
  • ios