Asianet Suvarna News Asianet Suvarna News

ಅಮೆ​ರಿ​ಕದ ಮಿಯಾಮಿ ಕ್ಲಬ್‌ ಸೇರಲಿರುವ ಫುಟ್ಬಾಲಿಗ ಲಿಯೋನೆಲ್ ಮೆಸ್ಸಿ!

ಪ್ಯಾರಿಸ್ ಸೈಂಟ್ ಜರ್ಮೈನ್ ತಂಡ ತೊರೆದ ಲಿಯೋನೆಲ್ ಮೆಸ್ಸಿ
ಅಮೆ​ರಿ​ಕದ ಮೇಜರ್‌ ಲೀಗ್‌ ಸಾಕ​ರ್‌ನ ಇಂಟರ್‌ ಮಿಯಾಮಿ ತಂಡ ಸೇರಲು ನಿರ್ಧಾರ
ಇಂಟರ್‌ ಮಿಯಾಮಿಯ ಇನ್‌ಸ್ಟಾಗ್ರಾಂ ಖಾತೆಗೆ 24 ಗಂಟೆಯಲ್ಲಿ 42 ಲಕ್ಷ ಹೊಸ ಹಿಂಬಾಲಕರು ಸೇರ್ಪಡೆ

Lionel Messi To Join MLS Side Inter Miami After PSG Exit kvn
Author
First Published Jun 9, 2023, 9:39 AM IST

ಮಿಯಾ​ಮಿ(ಜೂ.09): ಅರ್ಜೆಂಟೀ​ನಾದ ಪುಟ್ಬಾಲ್‌ ಮಾಂತ್ರಿಕ ಲಿಯೋ​ನೆಲ್‌ ಮೆಸ್ಸಿ ಅಮೆ​ರಿ​ಕದ ಮೇಜರ್‌ ಲೀಗ್‌ ಸಾಕ​ರ್‌ನ ಇಂಟರ್‌ ಮಿಯಾಮಿ ತಂಡ ಸೇರಲು ನಿರ್ಧ​ರಿ​ಸಿದ್ದಾರೆ. ಇದನ್ನು ಸ್ವತಃ ಮೆಸ್ಸಿ ಖಚಿ​ತ​ಪ​ಡಿ​ಸಿ​ದ್ದಾರೆ. ಆದರೆ ಒಪ್ಪಂದ ಅವಧಿ ಮತ್ತು ಮೊತ್ತ ಇನ್ನಷ್ಟೇ ಬಹಿ​ರಂಗ​ಗೊ​ಳ್ಳ​ಬೇ​ಕಿದೆ. 

ಬರೋ​ಬ್ಬರಿ 17 ವರ್ಷ​ಗಳ ಕಾಲ ಬಾರ್ಸಿ​ಲೋನಾ ಪರ ಆಡಿದ್ದ ಮೆಸ್ಸಿ 2021ರಲ್ಲಿ ಫ್ರಾನ್ಸ್‌ನ ಪಿಎ​ಸ್‌ಜಿ ಕ್ಲಬ್‌ ಸೇರಿ​ದ್ದರು. ದಿನ​ಗಳ ಹಿಂದಷ್ಟೇ ಅವರು ಪಿಎ​ಸ್‌ಜಿ ತೊರೆ​ದಿದ್ದು, ಸ್ಪೇನ್‌ನ ಬಾರ್ಸಿ​ಲೋನಾ ಅಥವಾ ಸೌದಿ ಅರೇ​ಬಿ​ಯಾದ ಅಲ್‌-ಹಿಲಾಲ್‌ ಕ್ಲಬ್‌ ಸೇರ್ಪ​ಡೆ​ಗೊ​ಳ್ಳುವ ಸಾಧ್ಯತೆ ಇದೆ ಎಂದು ಮಾಧ್ಯ​ಮ​ಗ​ಳಲ್ಲಿ ವರ​ದಿ​ಯಾ​ಗಿತ್ತು. ಮೆಸ್ಸಿ ತಂಡ ಸೇರಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಇಂಟರ್‌ ಮಿಯಾಮಿಯ ಇನ್‌ಸ್ಟಾಗ್ರಾಂ ಖಾತೆಗೆ 24 ಗಂಟೆಯಲ್ಲಿ 42 ಲಕ್ಷ ಹೊಸ ಹಿಂಬಾಲಕರು ಸೇರ್ಪಡೆಗೊಂಡಿದ್ದಾರೆ.

ಫಿನ್‌​ಲ್ಯಾಂಡ್‌ ಅಥ್ಲೆ​ಟಿ​ಕ್ಸ್‌: ಜ್ಯೋತಿ ಯರ್ರಾ​ಜಿಗೆ ಬೆಳ್ಳಿ

ಹೆಲ್ಸಿಂಕಿ​(​ಫಿ​ನ್‌​ಲ್ಯಾಂಡ್‌​): ಭಾರ​ತದ ತಾರಾ ಅಥ್ಲೀಟ್‌ ಜ್ಯೋತಿ ಯರ್ರಾಜಿ ಫಿನ್‌ಲ್ಯಾಂಡ್‌ನಲ್ಲಿ ನಡೆದ ಅಥ್ಲೆಟಿಕ್ಸ್‌ ಚಾಂಪಿ​ಯ​ನ್‌​ಶಿ​ಪ್‌​ನ 100 ಮೀ. ಹರ್ಡ​ಲ್ಸ್‌​ನಲ್ಲಿ ಬೆಳ್ಳಿ ಪದಕ ಗೆದ್ದಿ​ದ್ದಾರೆ. ಬುಧ​ವಾರ ಮಹಿಳಾ ವಿಭಾ​ಗ​ದಲ್ಲಿ 23 ವರ್ಷದ ಜ್ಯೋತಿ 12.95 ಸೆಕೆಂಡ್‌​ಗ​ಳಲ್ಲಿ ಗುರಿ ತಲುಪಿ 2ನೇ ಸ್ಥಾನ ಪಡೆ​ದರೆ, ಫಿನ್‌​ಲ್ಯಾಂಡ್‌ನ ರೀಟಾ ಹರ್ಸ್‌​ಕೆ​(12.84 ಸೆ.) ಚಿನ್ನ ತಮ್ಮ​ದಾ​ಗಿ​ಸಿ​ಕೊಂಡರು. ಇದೇ ವೇಳೆ ಪುರು​ಷರ 100 ಮೀ. ಓಟ​ದಲ್ಲಿ ಭಾರತ ಅಮ್ಲನ್‌ ಬೊರ್ಗೊ​ಹೈನ್‌ 10.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು.

ಕಿರಿ​ಯರ ಏಷ್ಯಾ​ಕಪ್‌ ಹಾಕಿ: ಭಾರತ ಸೆಮೀಸ್‌ ಪ್ರವೇ​ಶ

ಕಾಕಮಿಗಹರಾ(ಜಪಾನ್‌): ನಿರ್ಣಾ​ಯಕ ಪಂದ್ಯ​ದಲ್ಲಿ ಚೈನೀಸ್‌ ತೈಪೆ ವಿರುದ್ಧ 11-0 ಗೋಲು​ಗಳ ಅಂತ​ರ​ದಲ್ಲಿ ಗೆಲುವು ಸಾಧಿ​ಸಿದ ಭಾರತ ಮಹಿಳಾ ತಂಡ 8ನೇ ಆವೃ​ತ್ತಿ​ಯ ಕಿರಿ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯಲ್ಲಿ ಸೆಮಿ​ಫೈ​ನ​ಲ್‌ಗೆ ಲಗ್ಗೆ ಇಟ್ಟಿ​ದೆ. ಈ ಗೆಲು​ವಿ​ನೊಂದಿಗೆ ಭಾರತ ‘ಎ’ ಗುಂಪಿ​ನಲ್ಲಿ 10 ಅಂಕ​ಗಳೊಂದಿಗೆ ಅಗ್ರ​ಸ್ಥಾನ ಪಡೆ​ದರೆ, ತೈಪೆ(3 ಅಂಕ) 4ನೇ ಸ್ಥಾನಿ​ಯಾಗಿ ಟೂರ್ನಿ​ಯಿಂದ ಹೊರ​ಬಿತ್ತು.

French Open 2023: ಫೈನಲ್‌ಗೆ ಸ್ವಿಯಾಟೆಕ್‌, ಮುಕೋವಾ ಲಗ್ಗೆ..!

ಭಾರ​ತದ ಪರ ಅನ್ನು, ಸುನೆ​ಲಿತಾ ತಲಾ 2 ಗೋಲು ಬಾರಿ​ಸಿ​ದರೆ, ವೈಷ್ಣವಿ ಪಾಲ್ಕೆ, ದೀಪಿಕಾ, ಋುತುಜಾ, ನೀಲಂ, ಮಂಜು, ದೀಪಿಕಾ ಸೊರೆಂಗ್‌ ಹಾಗೂ ಮುಮ್ತಾಜ್‌ ಖಾನ್‌ ತಲಾ 1 ಗೋಲು ಹೊಡೆ​ದರು. ಟೂರ್ನಿಯ ಇತಿ​ಹಾ​ಸ​ದಲ್ಲಿ 7ನೇ ಬಾರಿ ಸೆಮೀಸ್‌ ತಲು​ಪಿ​ರುವ ಭಾರತ, ‘ಬಿ’ ಗುಂಪಿನ 2ನೇ ಸ್ಥಾನಿ ಜಪಾನ್‌ ವಿರುದ್ಧ ಶನಿ​ವಾರ ಸೆಣ​ಸಲಿದೆ.

ಪ್ರೊ ಲೀಗ್‌ ಹಾಕಿ: ಭಾರ​ತಕ್ಕೆ ಜಯ

ಐಂಡ್‌​ಹೊ​ವೆ​ನ್‌​(​ನೆ​ದ​ರ್‌​ಲೆಂಡ್ಸ್​): ಪ್ರೊ ಲೀಗ್‌ ಹಾಕಿ ಟೂರ್ನಿ​ಯಲ್ಲಿ ಭಾರತ ತಂಡ ಗುರು​ವಾರ ಅರ್ಜೆಂಟೀನಾ ವಿರು​ದ್ಧ 3-0 ಗೋಲು​ಗಳ ಗೆಲುವು ಸಾಧಿ​ಸಿದ್ದು, ಅಂಕ​ಪ​ಟ್ಟಿ​ಯಲ್ಲಿ ಅಗ್ರ​ಸ್ಥಾ​ನ​ಕ್ಕೇ​ರಿದೆ. ಬುಧ​ವಾರ ನೆದ​ರ್‌​ಲೆಂಡ್ಸ್‌ ವಿರುದ್ಧ 1-4 ಗೋಲು​ಗ​ಳಿಂದ ಪರಾ​ಭ​ವ​ಗೊಂಡಿದ್ದ ಭಾರತ ಮತ್ತೆ ಗೆಲು​ವಿನ ಲಯಕ್ಕೆ ಮರ​ಳಿತು. 

ಇದ​ರೊಂದಿಗೆ 14 ಪಂದ್ಯ​ಗ​ಳಲ್ಲಿ 27 ಅಂಕ ಸಂಪಾ​ದಿ​ಸಿದ ಭಾರತ, ಬ್ರಿಟ​ನ್‌​(26 ಅಂಕ) ತಂಡ​ವನ್ನು ಹಿಂದಿಕ್ಕಿ ಅಗ್ರ​ಸ್ಥಾನ ಪಡೆ​ಯಿತು. ಪಂದ್ಯ​ದಲ್ಲಿ ಭಾರ​ತದ ಪರ ಹರ್ಮ​ನ್‌​ಪ್ರೀತ್‌ ಸಿಂಗ್‌, ಅಮಿತ್‌, ಅಭಿ​ಷೇಕ್‌ ಗೋಲು ಬಾರಿ​ಸಿ​ದರು. ಭಾರತ ಮುಂದಿನ ಪಂದ್ಯ​ದಲ್ಲಿ ಶನಿ​ವಾರ ನೆದ​ರ್‌​ಲೆಂಡ್‌್ಸ ವಿರುದ್ಧ ಆಡ​ಲಿದೆ.

ಸಿಂಗಾ​ಪುರ ಓಪ​ನ್‌​ನ​ಲ್ಲಿ ಭಾರ​ತದ ಸವಾಲು ಅಂತ್ಯ!

ಸಿಂಗಾಪುರ: ಕಳೆದ ವರ್ಷ ಅಭೂ​ತ​ಪೂರ್ವ ಪ್ರದ​ರ್ಶನ ನೀಡಿದ್ದ ಭಾರ​ತೀಯ ಶಟ್ಲ​ರ್‌​ಗಳು ಈ ಋುತು​ವಿ​ನಲ್ಲಿ ತಮ್ಮ ನೀರಸ ಆಟ ಮುಂದು​ವ​ರಿ​ಸಿದ್ದು, ಸಿಂಗಾ​ಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ​ಯಲ್ಲಿ 2ನೇ ಸುತ್ತಲ್ಲೇ ಅಭಿಯಾನ ಕೊನೆ​ಗೊ​ಳಿ​ಸಿ​ದ್ದಾರೆ. 

ಗುರು​ವಾರ ಪುರು​ಷರ ಸಿಂಗ​ಲ್ಸ್‌​ ಅಂತಿಮ 16ರ ಸುತ್ತಿನಲ್ಲಿ ಮಾಜಿ ವಿಶ್ವ ನಂ.1 ಕಿದಂಬಿ ಶ್ರೀಕಾಂತ್‌ ಚೈನೀಸ್‌ ತೈಪೆಯ ಚಿಯಾ ಹೊ ಲೀ ವಿರುದ್ಧ 15-21, 19-21 ಅಂತ​ರ​ದಲ್ಲಿ ಪರಾ​ಭ​ವ​ಗೊಂಡರೆ, ಇತ್ತೀ​ಚೆ​ಗಷ್ಟೇ ಆರ್ಲಿ​ಯಾನ್ಸ್‌ ಮಾಸ್ಟ​ರ್ಸ್‌ ಗೆದ್ದಿದ್ದ ಪ್ರಿಯಾನ್ಶು ರಾಜಾ​ವತ್‌ ವಿಶ್ವ ನಂ.4 ಜಪಾ​ನ್‌ನ ಕೊಡಾಯಿ ನರವೊಕಾ ವಿರು​ದ್ಧ 17-21, 16-21ರಲ್ಲಿ ಸೋಲ​ನು​ಭ​ವಿ​ಸಿ​ದರು. ಪುರು​ಷರ ಡಬ​ಲ್ಸ್‌​ನಲ್ಲಿ ಅರ್ಜುನ್‌-ಧೃವ್‌ ಇಂಗ್ಲೆಂಡ್‌ನ ಬೆನ್‌ ಲೇನ್‌-ಸೀನ್‌ ವೆಂಡಿ ವಿರುದ್ಧ 15-21, 19-21 ಅಂತ​ರ​ದಲ್ಲಿ ಸೋತು ಹೊರ​ಬಿ​ದ್ದರು.

Follow Us:
Download App:
  • android
  • ios