Asianet Suvarna News Asianet Suvarna News

4 ಕೋಟಿ ರುಪಾಯಿ ದಂಡ ಕಟ್ಟ​ಲು ತನ್ನ ಮಹಿ​ಳಾ ತಂಡ​ವನ್ನೇ ಸ್ಥಗಿ​ತ​ಗೊ​ಳಿ​ಸಿ​ದ ಕೇರಳ ಬ್ಲಾಸ್ಟ​ರ್ಸ್‌!

ಕೇರಳ ಬ್ಲಾಸ್ಟರ್ಸ್‌ ತಂಡಕ್ಕೆ ಬಿಗ್‌ ಶಾಕ್‌
ಮಹಿಳಾ ತಂಡದ ಚಟು​ವ​ಟಿ​ಕೆ​ಗ​ಳನ್ನು ತಾತ್ಕಾ​ಲಿ​ಕ​ವಾಗಿ ಸ್ಥಗಿ​ತ​ಗೊಳಿಸಿದ ಕೇರಳ ಬ್ಲಾಸ್ಟರ್ಸ್
ಸುನಿಲ್‌ ಚೆಟ್ರಿಯ ವಿವಾ​ದಿತ ಗೋಲು ಪ್ರಶ್ನಿಸಿ ಪ್ಲೇ-ಆಫ್‌ ಪಂದ್ಯ​ದಲ್ಲಿ ಮೈದಾ​ನ​ದಿಂದ ಹೊರ​ನ​ಡೆ​ದಿ​ದ್ದ ಕೇರಳ ತಂಡ

Kerala Blasters womens team temporarily suspended due to financial constraint kvn
Author
First Published Jun 8, 2023, 8:59 AM IST

ಕಲ್ಲಿ​ಕೋ​ಟೆ(ಜೂ.08): ಬೆಂಗ​ಳೂರು ಎಫ್‌ಸಿ ವಿರುದ್ಧದ ಐಎ​ಸ್‌​ಎಲ್‌ ಪ್ಲೇ-ಆಫ್‌ ಪಂದ್ಯದಲ್ಲಿ ಮೈದಾನ ತೊರೆ​ದಿ​ದ್ದಕ್ಕೆ ಬರೋ​ಬ್ಬರಿ 4 ಕೋಟಿ ರುಪಾಯಿ ದಂಡಕ್ಕೆ ಗುರಿ​ಯಾ​ಗಿ​ರು​ವ ಕೇರಳ ಬ್ಲಾಸ್ಟ​ರ್ಸ್‌ ಕ್ಲಬ್‌, ಆರ್ಥಿಕ ಸಮಸ್ಯೆ ಸರಿ​ದೂ​ಗಿ​ಸಲು ತನ್ನ ಮಹಿಳಾ ತಂಡದ ಚಟು​ವ​ಟಿ​ಕೆ​ಗ​ಳನ್ನು ತಾತ್ಕಾ​ಲಿ​ಕ​ವಾಗಿ ಸ್ಥಗಿ​ತ​ಗೊ​ಳಿ​ಸಿದೆ. 

ಸುನಿಲ್‌ ಚೆಟ್ರಿಯ ವಿವಾ​ದಿತ ಗೋಲು ಪ್ರಶ್ನಿಸಿ ಪ್ಲೇ-ಆಫ್‌ ಪಂದ್ಯ​ದಲ್ಲಿ ಮೈದಾ​ನ​ದಿಂದ ಹೊರ​ನ​ಡೆ​ದಿ​ದ್ದ​ಕ್ಕೆ ಬ್ಲಾಸ್ಟ​​ರ್ಸ್‌ಗೆ ಭಾರ​ತೀಯ ಫುಟ್ಬಾಲ್‌ ಫೆಡ​ರೇ​ಶ​ನ್‌​(​ಎ​ಐ​ಎ​ಫ್‌​ಎ​ಫ್‌) ಭಾರೀ ದಂಡ ವಿಧಿ​ಸಿತ್ತು. ಈ ಬಗ್ಗೆ ಕ್ಲಬ್‌ ಮೇಲ್ಮ​ನವಿ ಸಲ್ಲಿ​ಸಿ​ದ್ದರೂ ಎಐ​ಎ​ಫ್‌​ಎಫ್‌ ಅದನ್ನು ತಿರ​ಸ್ಕ​ರಿ​ಸಿತ್ತು. ಹೀಗಾಗಿ ತಂಡ 4 ಕೋಟಿ ರು. ದಂಡ ಪಾವ​ತಿ​ಸ​ಬೇ​ಕಾ​ಗಿದ್ದು, ಅನಿ​ವಾ​ರ‍್ಯ​ವಾಗಿ ಮಹಿಳಾ ತಂಡ​ವನ್ನು ಕೆಲ ಕಾಲ ಸ್ಥಗಿ​ತ​ಗೊ​ಳಿ​ಸಿದೆ. ಪುರು​ಷರ ತಂಡದ ತಪ್ಪಿಗೆ ಮಹಿಳಾ ತಂಡ ಬೆಲೆ ತೆರ​ಬೇ​ಕಾಗಿ ಬಂದಿ​ದ್ದಕ್ಕೆ ಕ್ರೀಡಾ​ಭಿ​ಮಾ​ನಿ​ಗ​ಳಿಂದ ಭಾರೀ ಆಕ್ರೋಶ ವ್ಯಕ್ತ​ವಾ​ಗಿ​ದೆ.

ಕಿರಿಯರ ಅಥ್ಲೆಟಿಕ್ಸ್‌: ಕೊನೆ ದಿನ ಭಾರತಕ್ಕೆ 5 ಪದಕ!

ಯೆಚಿಯೊನ್‌: ಅಂಡರ್‌-20 ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನ ಕೊನೆಯ ದಿನವಾದ ಬುಧವಾರ ಭಾರತ 2 ಚಿನ್ನ ಸೇರಿ 5 ಪದಕ ಜಯಿಸಿತು. ಕೂಟದಲ್ಲಿ 6 ಚಿನ್ನ, 7 ಬೆಳ್ಳಿ, 6 ಕಂಚಿನೊಂದಿಗೆ ಒಟ್ಟು 19 ಪದಕ ಗೆದ್ದ ಭಾರತ, ಪದಕ ಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಿತು. ಇದು ಕೂಟದ ಇತಿಹಾಸದಲ್ಲೇ ಭಾರತದ ಶ್ರೇಷ್ಠ ಪ್ರದರ್ಶನ ಎನಿಸಿದೆ. 

French Open 2023: ಆಲ್ಕರಜ್‌, ಇಗಾ ಸ್ವಿಯಾಟೆಕ್‌ ಸೆಮೀಸ್‌ಗೆ ಲಗ್ಗೆ

ಬುಧವಾರ ಮಹಿಳೆಯರ 1500 ಮೀ. ಓಟದಲ್ಲಿ ಲಕ್ಷಿತಾ, ಮಹಿಳೆಯರ 4*400 ಮೀ. ರಿಲೇ ತಂಡ ಚಿನ್ನ ಜಯಿಸಿತು. ಪುರುಷರ 5000 ಮೀ. ಓಟದಲ್ಲಿ ಕರ್ನಾಟಕದ ಶಿವಾಜಿ ಮಾದಪ್ಪಗೌಡ್ರ ಬೆಳ್ಳಿ ಗೆದ್ದರೆ, ಪುರುಷರ 4*400 ಮೀ. ರಿಲೇ ತಂಡ ಸಹ ರಜತ ಪದಕ ಜಯಿಸಿತು. ಪುರುಷರ 1500 ಮೀ. ಓಟದಲ್ಲಿ ಮೆಹಿದಿ ಹಸನ್‌ ಕಂಚಿಗೆ ಮುತ್ತಿಟ್ಟರು. ಮಹಿಳೆಯರ 200 ಮೀ. ಓಟದ ಫೈನಲ್‌ನಲ್ಲಿ ರಾಜ್ಯದ ನಯಾನ 4ನೇ, ಉನ್ನತಿ 8ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಮಹಿಳಾ ಹಾಕಿ: ಭಾರ​ತ​ಕ್ಕೆ ಚೈನೀಸ್‌ ತೈಪೆ ಸವಾ​ಲು

ಕಾಕಮಿಗಹರಾ(ಜಪಾನ್‌): 7ನೇ ಬಾರಿ ಸೆಮಿ​ಫೈ​ನಲ್‌ ಪ್ರವೇ​ಶಿ​ಸುವ ನಿರೀ​ಕ್ಷೆ​ಯ​ಲ್ಲಿ​ರುವ ಭಾರತ ಮಹಿಳಾ ತಂಡ 8ನೇ ಆವೃ​ತ್ತಿ​ಯ ಕಿರಿ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯ ‘ಎ’ ಗುಂಪಿನ ಕೊನೆ ಪಂದ್ಯ​ದಲ್ಲಿ ಗುರು​ವಾರ ಚೈನೀಸ್‌ ತೈಪೆ ವಿರುದ್ಧ ಸೆಣ​ಸಲಿದೆ. ಭಾರತ ಟೂರ್ನಿ​ಯಲ್ಲಿ 3 ಪಂದ್ಯ​ಗ​ಳಲ್ಲಿ 2ರಲ್ಲಿ ಗೆದ್ದಿದ್ದು, 7 ಅಂಕ​ದೊಂದಿಗೆ ಅಗ್ರ​ಸ್ಥಾ​ನ​ದ​ಲ್ಲಿ​ದೆ. 

ಈ ಪಂದ್ಯ​ದಲ್ಲಿ ಗೆದ್ದರೆ ಅಥವಾ ಡ್ರಾ ಸಾಧಿ​ಸಿ​ದರೆ ಸೆಮೀ​ಸ್‌​ಗೇ​ರ​ಲಿದ್ದು, ಸೋತರೆ ದ.ಕೊ​ರಿ​ಯಾ​(7 ಅಂಕ) ಹಾಗೂ ಮಲೇ​ಷ್ಯಾ​(6 ಅಂಕ) ನಡು​ವಿನ ಪಂದ್ಯದ ಫಲಿ​ತಾಂಶದ ಮೇಲೆ ಭಾರ​ತದ ಸೆಮೀಸ್‌ ಭವಿಷ್ಯ ನಿರ್ಧಾ​ರ​ವಾ​ಗ​ಲಿದೆ. ಚೈನಿಸ್‌ ತೈಪೆ 3 ಅಂಕ​ದೊಂದಿಗೆ 4ನೇ ಸ್ಥಾನ​ದ​ಲ್ಲಿ​ದ್ದು, ಸೆಮೀ​ಸ್‌ ರೇಸ್‌​ನಿಂದ ಹೊರ​ಬಿ​ದ್ದಿ​ದೆ.

Follow Us:
Download App:
  • android
  • ios