Asianet Suvarna News Asianet Suvarna News

Santosh Trophy ಗೆದ್ದ ಕರ್ನಾಟಕ ಫುಟ್ಬಾಲ್ ತಂಡಕ್ಕೆ 25 ಲಕ್ಷ ರುಪಾಯಿ ಬಹುಮಾನ..!

5 ದಶಕಗಳ ಬಳಿಕ ಸಂತೋಷ್ ಟ್ರೋಫಿ ಗೆದ್ದು ಬೀಗಿರುವ ಕರ್ನಾಟಕ ಫುಟ್ಬಾಲ್ ತಂಡ
ಚಾಂಪಿಯನ್ ತಂಡಕ್ಕೆ ಕೆಎಸ್‌ಎಫ್‌ಎ ವತಿಯಿಂದ 25 ಲಕ್ಷ ರುಪಾಯಿ ನಗದು ಬಹುಮಾನ ಘೋಷಣೆ
ಕೆಎ​ಸ್‌​ಎ​ಫ್‌ಎ ಫುಟ್ಬಾಲ್‌ ಕ್ರೀಡಾಂಗ​ಣ​ದಲ್ಲಿ ಆಟಗಾರರಿಗೆ ಸನ್ಮಾನ, ನಗದು ಬಹುಮಾನ ಘೋಷಣೆ

Karnataka Government rewarded Santosh Trophy Winner Karnataka Squad with 25 lakh kvn
Author
First Published Mar 7, 2023, 8:29 AM IST

ಬೆಂಗಳೂರು(ಮಾ.07) 54 ವರ್ಷ​ಗಳ ಬಳಿ​ಕ ಪ್ರತಿ​ಷ್ಠಿತ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಕರ್ನಾಟಕ ತಂಡಕ್ಕೆ ಕರ್ನಾ​ಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆ​ಎ​ಸ್‌​ಎ​ಫ್‌​ಎ) 25 ಲಕ್ಷ ರು. ನಗದು ಬಹು​ಮಾನ ಘೋಷಿ​ಸಿದೆ.

ಸೋಮ​ವಾರ ಕೆಎ​ಸ್‌​ಎ​ಫ್‌ಎ ಫುಟ್ಬಾಲ್‌ ಕ್ರೀಡಾಂಗ​ಣ​ದಲ್ಲಿ ನಡೆದ ಆಟ​ಗಾ​ರ​ರಿಗೆ ಸನ್ಮಾನ, ಟ್ರೋಫಿ ಪರೇಡ್‌ ಕಾರ‍್ಯ​ಕ್ರಮ​ದಲ್ಲಿ ಮಾತ​ನಾ​ಡಿದ ಕೆಎ​ಸ್‌​ಎಫ್‌ಎ ಅಧ್ಯಕ್ಷ ಎನ್‌.​ಎ.​ಹ್ಯಾ​ರಿಸ್‌, ‘ರಾಜ್ಯದ ಆಟ​ಗಾ​ರರು ಈ ಬಾರಿ ಐತಿ​ಹಾ​ಸಿಕ ಸಾಧನೆ ಮಾಡಿ​ದ್ದಾರೆ. ದೇಶದ ಫುಟ್ಬಾ​ಲ್‌​ನಲ್ಲಿ ನಮ್ಮ ತಂಡ ಹೊಸ ಚರಿತ್ರೆ ಸೃಷ್ಟಿ​ಸಿದೆ. ಹೀಗಾಗಿ ತಂಡಕ್ಕೆ 25 ಲಕ್ಷ ರು. ಬಹು​ಮಾನ ಘೋಷಿ​ಸು​ತ್ತಿ​ದ್ದೇವೆ. ಮುಖ್ಯ​ಮಂತ್ರಿ​ ಅವರನ್ನು ಭೇಟಿ​ಯಾಗಿ ಸರ್ಕಾ​ರದ ಕಡೆ​ಯಿಂದಲೂ ಬಹು​ಮಾನ ಘೋಷಿ​ಸಲು ಮನವಿ ಮಾಡು​ತ್ತೇ​ನೆ’ ಎಂದರು. 

ಕಾರ‍್ಯ​ಕ್ರ​ಮ​ದಲ್ಲಿ ಭಾರ​ತೀಯ ಫುಟ್ಬಾಲ್‌ ಫೆಡ​ರೇ​ಶನ್‌ ಅಧ್ಯಕ್ಷ ಕಲ್ಯಾಣ್‌ ಚೌಬೆ, ಕೆಎ​ಸ್‌​ಎ​ಫ್‌ಎ ಕಾರ‍್ಯ​ದರ್ಶಿ ಸತ್ಯನಾ​ರಾ​ಯ​ಣ ಸೇರಿ​ ಪ್ರಮು​ಖರು ಉಪ​ಸ್ಥಿ​ತ​ರಿ​ದ್ದರು. ಕಾರ‍್ಯ​ಕ್ರ​ಮದ ಬಳಿಕ ತೆರೆದ ವಾಹನದಲ್ಲಿ ನಗರದ ಕೆಲ ಸ್ಥಳಗಳಲ್ಲಿ ಆಟಗಾರರ ಮೆರವಣಿಗೆ ನಡೆ​ಯಿ​ತು.

ಮಾ.25ರಿಂದ ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಟೂರ್ನಿ

ನವದೆಹಲಿ: ರಾಷ್ಟ್ರೀಯ ಮಹಿಳಾ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತು ಮಾರ್ಚ್‌ 25ರಿಂದ ಆರಂಭಗೊಳ್ಳಲಿದ್ದು, 31 ತಂಡಗಳು ಸ್ಪರ್ಧಿಸಲಿವೆ. 6 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ತಂಡಗಳನ್ನು 6 ಗುಂಪುಗಳಾಗಿ ವಿಂಗಡಿಸಲಾಗಿದೆ. ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು, ರನ್ನರ್‌-ಅಪ್‌ ಸ್ಥಾನ ಪಡೆದ 5 ಉತ್ತಮ ತಂಡಗಳು ಪ್ರಧಾನ ಸುತ್ತಿಗೇರಲಿವೆ. 

Santosh Trophy: 54 ವರ್ಷಗಳ ಬಳಿಕ ಕರ್ನಾಟಕ ಫುಟ್ಬಾಲ್ ಚಾಂಪಿಯನ್‌..!

ರೈಲ್ವೇಸ್‌ಗೆ ಪ್ರಧಾನ ಸುತ್ತಿಗೆ ನೇರ ಪ್ರವೇಶ ನೀಡಲಾಗಿದೆ. ಕರ್ನಾಟಕ ತಂಡ 6ನೇ ಗುಂಪಿನಲ್ಲಿದ್ದು, ತನ್ನ ಪಂದ್ಯಗಳನ್ನು ಬೆಂಗಳೂರಲ್ಲಿ ಆಡಲಿದೆ. ಬಿಹಾರ, ಮಣಿಪುರ, ಗುಜರಾತ್‌ ಹಾಗೂ ಅಸ್ಸಾಂ ವಿರುದ್ಧ ಸೆಣಸಲಿದೆ.

ವಿಶ್ವ ಕೂಟಕ್ಕಿಲ್ಲ ಆಯ್ಕೆ: ಕೋರ್ಚ್‌ ಮೆಟ್ಟಿಲೇರಿದ ಭಾರತದ 3 ಬಾಕ್ಸರ್‌ಗಳು!

ನವದೆಹಲಿ: ಮುಂಬರುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ಗೆ ಭಾರತ ತಂಡಕ್ಕೆ ಆಯ್ಕೆ ಮಾಡದ ಕಾರಣ, ರಾಷ್ಟ್ರೀಯ ಚಾಂಪಿಯನ್ನರಾದ ಮಂಜು ರಾಣಿ, ಶಿಕ್ಷಾ ನರ್ವಾಲ್‌ ಹಾಗೂ ಪೂನಮ್‌ ಪೂನಿಯಾ ಭಾರತೀಯ ಬಾಕ್ಸಿಂಗ್‌ ಫೆಡರೇಷನ್‌ ವಿರುದ್ಧ ದೆಹಲಿ ಹೈಕೋರ್ಚ್‌ ಮೆಟ್ಟಿಲೇರಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಮೂವರನ್ನು ಹೊರತುಪಡಿಸಿ ಚಿನ್ನ ಗೆದ್ದ ಇನ್ನುಳಿದ ಎಲ್ಲಾ ಬಾಕ್ಸರ್‌ಗಳಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ತಮ್ಮನ್ನು ಕಡೆಗಣಿಸಿ ಅನ್ಯಾಯ ಮಾಡಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಮಂಗಳವಾರ ಹೈಕೋರ್ಚ್‌ನಲ್ಲಿ ಬಾಕ್ಸರ್‌ಗಳ ಅರ್ಜಿ ವಿಚಾರಣೆಗೆ ಬರಲಿದೆ.

ಇಂದಿನಿಂದ ಜರ್ಮನ್‌ ಓಪನ್‌ ಬ್ಯಾಡ್ಮಿಂಟನ್‌

ಮುಲ್ಹೀಮ್‌: ಜರ್ಮನ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು ಮಾಜಿ ವಿಶ್ವ ನಂ.1, ಭಾರತದ ಕಿದಂಬಿ ಶ್ರೀಕಾಂತ್‌ ಟೂರ್ನಿಗೆ ಗೈರಾಗಲು ನಿರ್ಧರಿಸಿದ್ದಾರೆ. ಲಕ್ಷ್ಯ ಸೇನ್‌ ಭಾರತದ ಸವಾಲು ಮುನ್ನಡೆಸಲಿದ್ದು, ಇತ್ತೀಚೆಗೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆದ್ದ ಕರ್ನಾಟಕದ ಮಿಥುನ್‌ ಮಂಜುನಾಥ್‌ ಮೇಲೂ ನಿರೀಕ್ಷೆ ಇದೆ. ಮಹಿಳಾ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್‌, ಮಾಳ್ವಿಕಾ ಬನ್ಸೋದ್‌ ಕಣಕ್ಕಿಳಿಯಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ-ಸುಮಿತ್‌ ರೆಡ್ಡಿ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.

Follow Us:
Download App:
  • android
  • ios