ಬ್ರೆಸಿಲಿಯಾ (ನ.02): ತಮ್ಮ ಪ್ರೀತಿಪಾತ್ರರೊಂದಿಗೆ ಸೆಲ್ಫಿ ಪಡೆಯಲು ಹಲವರು ನಾನಾ ರೀತಿಯ ಕಸರತ್ತು ನಡೆಸುತ್ತಾರೆ. ಆದರೆ ಫುಟ್ಬಾಲ್ ಮೈದಾನದಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಬ್ರೆಜಿಲ್‌ನ ದಿಗ್ಗಜ ಫುಟ್ಬಾಲಿಗ ಕಾಕ ಜತೆ ಸೆಲ್ಫಿಗಾಗಿ ಮಹಿಳಾ ರೆಫ್ರಿಯೊಬ್ಬರು ಪಂದ್ಯದ ಮಧ್ಯೆ ಕಾರಣವಿಲ್ಲದೆ ಹಳದಿ ಕಾರ್ಡ್ ನೀಡಿದ ಪ್ರಸಂಗ ಇತ್ತೀಚೆಗೆ ನಡೆದಿದೆ.

ISL 2019: ನಾರ್ತ್ ಈಸ್ಟ್ ಹಾಗೂ ಗೋವಾ ಪಂದ್ಯ ಡ್ರಾನಲ್ಲಿ ಅಂತ್ಯ!

ಇಲ್ಲಿ ನಡೆದ ಬ್ರೆಜಿಲ್ ಹಾಗೂ ಇಸ್ರೇಲ್ ನಡುವಿನ ಸೌಹಾರ್ಧ ಪಂದ್ಯದ ವೇಳೆ ರೆಫ್ರಿ, ಕಾಕಗೆ ಹಳದಿ ಕಾರ್ಡ್ ತೋರಿಸಿದಾಗ ಉಳಿದ ಆಟಗಾರರಿಗೆ ಅಚ್ಚರಿಯಾಯಿತು. ನಿರ್ಧಾರ ಪ್ರಶ್ನಿಸಲು ಕಾಕ ಮುಂದಾಗುತ್ತಿದ್ದಂತೆ ರೆಫ್ರಿ ತಮ್ಮ ಕಿಸೆಯಿಂದ ಮೊಬೈಲ್ ತೆಗೆದು ಸೆಲ್ಫಿಗೆ ಮನವಿ ಮಾಡಿದರು. ರೆಫ್ರಿ ಮನವಿಗೆ ಸ್ಪಂದಿಸಿದ ಕಾಕ, ಫೋಟೋಗೆ ಪೋಸ್ ಕೊಟ್ಟರು. ಈ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಬ್ರೆಜಿಲ್ ಪರ ಹಲವು ವರ್ಷಗಳ ಕಾಲ ಆಡಿದ್ದ ಕಾಕ, 2007ರಲ್ಲಿ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿಗೆ ಭಾಜನರಾಗಿದ್ದರು

ನವೆಂಬರ್ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: